AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hypertension: ಬಿಪಿ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುವವರು ಈ ಸಲಹೆಯನ್ನು ಪಾಲನೆ ಮಾಡಿ

ಇತ್ತೀಚೆಗೆ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿದೆ. ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ ಬರುವ ಸಂಭವ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಕಾಲಕಾಲಕ್ಕೆ ಬಿಪಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇನ್ನು ಬಿಪಿ ನಿಯಂತ್ರಣಕ್ಕೆ ಔಷಧಿಗಳನ್ನು ಬಳಸುವವರು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಇದು ಅನೇಕ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ಬಿಪಿ ಔಷಧಿಗಳನ್ನು ತೆಗೆದುಕೊಳ್ಳುವವರು ಯಾವ ರೀತಿಯ ಸಲಹೆಗಳನ್ನು ಪಾಲನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Hypertension: ಬಿಪಿ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುವವರು ಈ ಸಲಹೆಯನ್ನು ಪಾಲನೆ ಮಾಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 14, 2024 | 3:27 PM

Share

ಇತ್ತೀಚಿನ ದಿನಗಳಲ್ಲಿ ಬಿಪಿ, ಮಧುಮೇಹ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಬಿಪಿ ನಿಯಂತ್ರಿಸಲು ಅದಕ್ಕೆ ಪೂರಕವಾದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಅಧಿಕ ರಕ್ತದೊತ್ತ ಅಥವಾ ಬಿಪಿ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುವವರಿಗೆ ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಬೇಗ ಬರುವುದಿಲ್ಲ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಈ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುವವರು ಕೆಲವು ಸಲಹೆಗಳನ್ನು ತಪ್ಪದೆ ಅನುಸರಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಲ್ಲವಾದಲ್ಲಿ ಇದು ಅನೇಕ ರೀತಿಯ ತೊಂದರೆಗೆ ಕಾರಣವಾಗಬಹುದು. ಹಾಗಾದರೆ ಬಿಪಿ ಔಷಧಿಗಳನ್ನು ತೆಗೆದುಕೊಳ್ಳುವವರು ಯಾವ ರೀತಿಯ ಸಲಹೆಗಳನ್ನು ಪಾಲನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಪಿ ಇರುವವರು ಮೊದಲು ತಿಳಿಯಬೇಕಾದದ್ದು, ಮಾತ್ರೆಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳದಿರುವುದು ಅಥವಾ ಇಷ್ಟಬಂದಂತೆ ಸೇವನೆ ಮಾಡುವುದು ಒಳ್ಳೆಯದಲ್ಲ. ನಿಮಗೆ ರಾತ್ರಿ ಬಳಸಲು ನೀಡಿದಂತಹ ಔಷಧಿಗಳನ್ನು ರಾತ್ರಿಯಲ್ಲಿಯೇ ತೆಗೆದುಕೊಳ್ಳಬೇಕು. ಕೆಲವರು ಮಾತ್ರೆ ತಿನ್ನುವುದನ್ನು ಮರೆತು ನೆನಪಾದಾಗ ಸೇವನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ದೇಹದ ವ್ಯವಸ್ಥೆಗಳು ಗೊಂದಲಕ್ಕೊಳಗಾಗುವ ಸಾಧ್ಯತೆ ಇರುತ್ತದೆ.

ಬಿಪಿ ಔಷಧಿಗಳನ್ನು ಬಳಸುವವರು ತಿಳಿದುಕೊಳ್ಳಬೇಕಾದ ಎರಡನೇ ವಿಷಯವೆಂದರೆ ಅವರು ತೀವ್ರವಾದ ಅತಿಸಾರ, ವಾಂತಿ ಅಥವಾ ತೀವ್ರ ಜ್ವರದಿಂದ ಬಳಲುತ್ತಿದ್ದರೆ, ಬಿಪಿ ಏರಿಳಿತವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅಂತಹ ದಿನಗಳಲ್ಲಿ ಮನೆಯಲ್ಲಿ ಬಿಪಿಯನ್ನು ಪರೀಕ್ಷಿಸುವ ಮೂಲಕ ಬಿಪಿ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ಮಾತ್ರ ಬಿಪಿ ಮಾತ್ರೆಗಳನ್ನು ಬಳಸಬೇಕು.

ಇದನ್ನೂ ಓದಿ: ಸುಧಾಮೂರ್ತಿ ಅವರು ತಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಸರಿಸುವ ನಿಯಮಗಳಿವು!

ನಿಮ್ಮ ಆಹಾರದಲ್ಲಿ ಒಮ್ಮೆಲೇ ತೀವ್ರ ಬದಲಾವಣೆಗಳನ್ನು ಮಾಡಿದಾಗ ಬಿಪಿಯಲ್ಲಿ ಏರಿಳಿತವಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ, ಊಟ ತಿಂಡಿಯಲ್ಲಿ ಬದಲಾವಣೆ ಮಾಡುವಾಗ ಜಾಗರೂಕರಾಗಿರಬೇಕು. ಆಹಾರದಲ್ಲಿ ಉಪ್ಪನ್ನು ಸಂಪೂರ್ಣವಾಗಿ ಕಡಿಮೆ ಮಾಡಿದರೂ ಅಥವಾ ಹೆಚ್ಚು ಉಪ್ಪು ತೆಗೆದುಕೊಂಡರೂ ಬಿಪಿಯಲ್ಲಿ ಏರಿಳಿತವಾಗುತ್ತದೆ. ಹಾಗಾಗಿ ಮನೆಯಲ್ಲಿ ನಿಯಮಿತವಾಗಿ ಬಿಪಿಯನ್ನು ಪರೀಕ್ಷಿಸಬೇಕು, ನೀವು ಯಾವುದಾದರೂ ಆಹಾರ ಸೇವನೆ ಮಾಡಿದ ಮೇಲೆ ಬಿಪಿಯಲ್ಲಿ ಬದಲಾವಣೆಗಳು ಕಂಡು ಬಂದರೆ ಮೊದಲು ಈ ಬಗ್ಗೆ ವೈದ್ಯರಿಗೆ ತಿಳಿಸಿ, ಅವರ ಸಲಹೆಯ ಪ್ರಕಾರವೇ ಬಿಪಿಗೆ ಔಷಧಿಗಳ ಪ್ರಮಾಣವನ್ನು ಸರಿಹೊಂದಿಸಬೇಕು. ಅದರ ಹೊರತಾಗಿ ನೀವು ಮಾತ್ರೆಗಳ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆ ಮಾಡಬಾರದು. ಮೇಲೆ ಹೇಳಿರುವ ಮುನ್ನೆಚ್ಚರಿಕೆಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದರಿಂದ ಬಿಪಿ ಮಾತ್ರೆಗಳಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ.

(ಸೂಚನೆ: ಈ ವಿಷಯಗಳು ನಿಮ್ಮ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಸಂದೇಹಗಳಿದ್ದರೆ, ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ