AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Alert: ಮಕ್ಕಳಿಗೆ ಜಂಕ್ ಫುಡ್ ತಿನ್ನಲು ಉತ್ತೇಜಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು ಉತ್ತಮ: ವೈದ್ಯರ ಸಲಹೆ

ಅನಾರೋಗ್ಯಕರ ಆಹಾರಗಳಾದ ಚಿಪ್ಸ್ ಗಳು, ಪ್ಯಾಕ್ ಮಾಡಿದ ತಿನಿಸುಗಳು, ಆಲ್ಕೋಹಾಲ್​ಯುಕ್ತ ಪಾನೀಯಗಳು ಹಾಗೂ ಇನ್ನಿತರ ಜಂಕ್ ಆಹಾರಗಳ ಜಾಹಿರಾತುಗಳಿಗೆ ಮರುಳಾಗಿ ಮಕ್ಕಳು ಅಂತಹ ತಿನಿಸುಗಳನ್ನು ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುವುದರಿಂದ ಬೆಂಗಳೂರಿನ ವೈದರ ತಂಡವೊಂದು ಮಕ್ಕಳು ಹೆಚ್ಚಾಗಿ ಟಿವಿ ನೋಡುವ ಸಮಯದಲ್ಲಿ ಅಥವಾ ಮಕ್ಕಳಿಗೆ ಸಂಬಂಧಿಸಿದ ಕಾರ್ಟೂನ್ ಚಾನೆಲ್​​ಗಳಲ್ಲಿ ಅನಾರೋಗ್ಯಕರ ಜಂಕ್ ಫುಡ್ ಜಾಹೀರಾತುಗಳನ್ನು ನಿರ್ಬಂಧಿಸಬೇಕು ಮತ್ತು ಆ ತಿನಿಸುಗಳ ಪ್ರಚಾರದಲ್ಲಿ ಬಾಲನಟರನ್ನು ಸೇರಿಸಬಾರದು ಎಂದು ಹೇಳಿದ್ದಾರೆ.

Health Alert: ಮಕ್ಕಳಿಗೆ ಜಂಕ್ ಫುಡ್ ತಿನ್ನಲು ಉತ್ತೇಜಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು ಉತ್ತಮ: ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Jul 10, 2023 | 6:23 PM

Share

ಬಣ್ಣ ಬಣ್ಣದ ಜಾಹೀರಾತುಗಳಿಗೆ ಮರುಳಾಗಿ ಜಾಹೀರಾತಿನಲ್ಲಿ ಕಂಡ ವಸ್ತುಗಳನ್ನು ನಾವು ಖರೀದಿಸಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತೆ. ಅದರಲ್ಲೂ ಮಕ್ಕಳಂತೂ ಅನಾರೋಗ್ಯಕರ ಆಹಾರಗಳಾದ ಚಿಪ್ಸ್​ಗಳು, ಪ್ಯಾಕ್ ಮಾಡಿದ ತಿನಿಸುಗಳು, ಆಲ್ಕೋಹಾಲ್​​ಯುಕ್ತ ಪಾನೀಯಗಳು ಹಾಗೂ ಇನ್ನಿತರ ಜಂಕ್ ಆಹಾರಗಳ ಜಾಹೀರಾತುಗಳಿಗೆ ಮರುಳಾಗಿ, ಆ ತಿನಿಸುಗಳನ್ನು ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ಕೊಬ್ಬಿನಾಮ್ಲಗಳು, ಅಧಿಕ ಸಕ್ಕರೆ ಅಥವಾ, ಉಪ್ಪಿನಾಂಶಗಳಿಂದ ಅಧಿಕವಾಗಿರುವ ಅನಾರೋಗ್ಯಕರ ಆಹಾರಗಳನ್ನು ಉತ್ತೇಜಿಸುವ ಮೋಹಕ ಜಾಹೀರಾತುಗಳಿಗೆ ಇಂದು ಮಕ್ಕಳು ಬಲಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಅನಾರೋಗ್ಯಕರ ಆಹಾರ ಮತ್ತು ಆಲ್ಕೋಹಾಲ್​​ಯುಕ್ತ ಪಾನೀಯಗಳನ್ನು ಉತ್ತೇಜಿಸುವ ಉತ್ಪನ್ನಗಳಿಂದ ಮಕ್ಕಳ ಆರೋಗ್ಯವನ್ನು ರಕ್ಷಿಸಲು ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿತು. ಅದರಂತೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನ ವೈದರ ತಂಡ ಕೂಡಾ ಮಕ್ಕಳು ಹೆಚ್ಚಾಗಿ ಟಿವಿ ನೋಡುವ ಸಮಯದಲ್ಲಿ ಅಥವಾ ಮಕ್ಕಳಿಗೆ ಸಂಬಂಧಿಸಿದ ಕಾರ್ಟೂನ್ ಚಾನೆಲ್​​ಗಳಲ್ಲಿ ಅನಾರೋಗ್ಯಕರ ಜಂಕ್ ಫುಡ್ ಜಾಹೀರಾತುಗಳನ್ನು ನಿರ್ಬಂಧಿಸಬೇಕು ಮತ್ತು ಆ ತಿನಿಸುಗಳ ಪ್ರಚಾರದಲ್ಲಿ ಬಾಲನಟರನ್ನು ಸೇರಿಸಬಾರದು ಎಂದು ಸಲಹೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ, ಟಿ.ವಿಗಳಲ್ಲಿ ಮತ್ತು ಶಾಲೆಯಲ್ಲಿಯೂ ಸಹ ಇರಿಸಲಾದ ಜಂಕ್ ಫುಡ್ ಜಾಹೀರಾತುಗಳು ಮಕ್ಕಳ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರುತ್ತದೆ. ಮತ್ತು ಇದರಿಂದ ಅವರ ಆಹಾರದ ಆದ್ಯತೆಯು ಬದಲಾಗುತ್ತದೆ. “ಕಳೆದ ಮೂರು ವರ್ಷಗಳಲ್ಲಿ ಮಕ್ಕಳು ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ಆಹಾರ ತಿನಿಸುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಇದು ಸ್ಥೂಲಕಾಯತೆಗೆ ಹಾಗೂ ಮೆಟಬಾಲಿಕ್ ಸಿಂಡ್ರೋಮ್ ಗೆ ಕೂಡಾ ಕಾರಣವಾಗುತ್ತದೆ. ಅಲ್ಲದೆ ಈ ತಿನಿಸುಗಳ ಸೇವನೆಯಿಂದ ಮಕ್ಕಳಲ್ಲಿ ಕೊಲೆಸ್ಟ್ರಾಲ್, ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ” ಎಂದು ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಬಸವರಾಜ್ ಜಿ.ವಿ ಹೇಳಿದ್ದಾರೆ.

ಜಂಕ್ ಆಹಾರಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ 10 ವರ್ಷಗಳ ನಂತರವೂ ಸಕ್ಕರೆ, ಕೊಬ್ಬಿನಾಮ್ಲ ಮತ್ತು ಉಪ್ಪಿನಿಂದ ಅಧಿಕವಿಲ್ಲದ ಆಹಾರಗಳು ಮತ್ತು ಆಲ್ಕೋಹಾಲ್ ಯುಕ್ತವಲ್ಲದ ಪಾನೀಯಗಳು ಮಾರುಕಟ್ಟೆಗೆ ಬಂದಿವೆಯಾದರೂ, ಇದರ ಸೇವನೆಯೂ ಕೂಡಾ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ

ಜಂಕ್ ಫುಡ್ ನ್ನು ನಿಷೇಧಿಸಲು ಕರ್ನಾಟಕದಾದ್ಯಂತ ಶಾಲೆಗಳಿಗೆ ಸರ್ಕಾರವು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪೀಡಿಯಾಟ್ರಿಕ್ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಶಿವಪ್ರಕಾಶ ಸೋಸಲೆ ಮಾತನಾಡಿ, ‘ಶಾಲಾ ಪರಿಸರವೇ ಮಕ್ಕಳನ್ನು ಆಕರ್ಷಿಸುವ ಎಲ್ಲಾ ರೀತಿಯ ಜಂಕ್ ಮತ್ತು ಪ್ಯಾಕ್ ಮಾಡಿದ ತಿಂಡಿ ತಿನಿಸುಗಳಿಗೆ ಅವಕಾಶ ಕಲ್ಪಿಸುತ್ತದೆ. ಸಮೋಸಾ ಮತ್ತು ವಡೆಗಳಂತಹ ಕರಿದ ಆಹಾರಗಳಿಗೆ ಬದಲಿಗೆ ಆರೋಗ್ಯಕರ ಪರ್ಯಾಯವನ್ನು ನೀಡಬಹುದು. ಹೀಗಿದ್ದರೂ ಈ ಬಗ್ಗೆ ಬಹಳ ಕಡಿಮೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

ನಗರದಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳು ಆರೋಗ್ಯಕರ ಆಹಾರವನ್ನು ತಿನ್ನಬೇಕೆಂದು ಬಯಸುತ್ತಾರೆ. ಹೀಗಿದ್ದರೂ ಚಿಪ್ಸ್, ಆರೋಗ್ಯಕರವಲ್ಲದ ಪಾನೀಯಗಳು, ಕರಿ ಆಹಾರಗಳು ಸೇರಿದಂತೆ ಇನ್ನಿತರ ಜಂಕ್ ಫುಡ್ ಗಳ ಜಾಹೀರಾತುಗಳು ಮಕ್ಕಳನ್ನು ಆಕರ್ಷಿಸಿ, ಆ ಮಕ್ಕಳು ಆರೋಗ್ಯಕರವಲ್ಲದ ಇಂತಹ ಆಹಾರಗಳನ್ನು ತಿನ್ನಲು ನೀಡಬೇಕೆಂದು ಪೋಷಕರ ಬಳಿ ಹಠ ಮಾಡುತ್ತಾರೆ. ಈ ಅನಾರೋಗ್ಯಕರ ಆಹಾರಗಳನ್ನು ಖರೀದಿಸುವಲ್ಲಿ ಪೋಷಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಮತ್ತು ಅವರು ಮಕ್ಕಳ ಈ ರೀತಿಯ ಬೇಡಿಕೆಗಳನ್ನು ಈಡೇರಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ