AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Late Lunch: ತಡವಾಗಿ ಊಟ ಮಾಡುವುದರಿಂದಾಗುವ ಹೊಟ್ಟೆ ಉಬ್ಬರವನ್ನು ದೂರವಿಡಲು ಇಲ್ಲಿದೆ ತಜ್ಞರ ಸಲಹೆ!

ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಇತ್ತೀಚೆಗೆ ವಿಳಂಬವಾದ ಊಟವು ಹೊಟ್ಟೆಯ ಅಸ್ವಸ್ಥತೆಗೆ ಹೇಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಅದರ ಜೊತೆಗೆ ಸಂಭಾವ್ಯ ಪರಿಹಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Late Lunch: ತಡವಾಗಿ ಊಟ ಮಾಡುವುದರಿಂದಾಗುವ ಹೊಟ್ಟೆ ಉಬ್ಬರವನ್ನು ದೂರವಿಡಲು ಇಲ್ಲಿದೆ ತಜ್ಞರ ಸಲಹೆ!
Late Lunch
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 13, 2023 | 6:27 AM

Share

ಒತ್ತಡದ ಜೀವನಶೈಲಿ ಊಟದ ವಿರಾಮವನ್ನು ಸರಿಯಾದ ಸಮಯಕ್ಕೆ ಆನಂದಿಸಲು ಬಿಡುವುದಿಲ್ಲ. ವಿಶೇಷವಾಗಿ ಕೆಲಸದ ದಿನಗಳಲ್ಲಿ, ನಾವು ನಮ್ಮ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಅವಸರದಲ್ಲಿ ತಿನ್ನುತ್ತೇವೆ. ಕೆಲವೊಮ್ಮೆ, ನಾವು ಅವುಗಳನ್ನು ಸರಿಯಾದ ಸಮಯಕ್ಕೆ ತಿನ್ನಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಇನ್ನಾದರೂ ಸ್ವಲ್ಪ ಗಮನ ಹರಿಸಲು ಪ್ರಾರಂಭಿಸಬೇಕು. ತಡವಾಗಿ ಊಟ ಮಾಡಿದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಈ ಕುರಿತು ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಬಗ್ಗೆ ಮಾತನಾಡಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಧ್ಯಾಹ್ನದ ಊಟಕ್ಕೆ ಉತ್ತಮ ಸಮಯ ಯಾವುದು?

ರುಜುತಾ ಅವರ ಪ್ರಕಾರ, ಊಟ ಮಾಡಲು ಸೂಕ್ತ ಸಮಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ. ಆರೋಗ್ಯಕರ ದಿನಚರಿಯನ್ನು ಅನುಸರಿಸುವವರು ಸಾಮಾನ್ಯವಾಗಿ ಈ ನಿಯಮಕ್ಕೆ ಅಂಟಿಕೊಳ್ಳುತ್ತಾರೆ. ಆದರೆ ನಾವೆಲ್ಲರೂ ಅದನ್ನು ಯಾವಾಗಲೂ ಅನುಸರಿಸಲು ಸಾಧ್ಯವಿಲ್ಲ. ಪರಿಣಾಮವಾಗಿ, ನಾವು ಬೇಡದ ಅಥವಾ ಊಟ ಮಾಡಬಾರದ ಸಮಯಗಳಲ್ಲಿ ಊಟ ಮಾಡುತ್ತೇವೆ. ಇದು ದಿನದ ಕೊನೆಯಲ್ಲಿ ನಮಗೆ ಉಬ್ಬರ, ಆಮ್ಲೀಯತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪೌಷ್ಟಿಕತಜ್ಞರು ಸೂಚಿಸಿದ ನಿಯಮಗಳನ್ನು ಪಾಲನೆ ಮಾಡುವುದರಿಂದ ಅಂತಹ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಊಟ ತಡವಾಗಿ ಮಾಡುವ ಅಭ್ಯಾಸವನ್ನು ಹೊಂದಿದ್ದರೆ ಏನು ಮಾಡಬೇಕು (ಮಧ್ಯಾಹ್ನ 1 ಗಂಟೆಯ ನಂತರ):

ನೀರು ಕುಡಿಯಿರಿ: 

ನಿಮ್ಮ ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಒಂದು ಲೋಟ ನೀರು ಕುಡಿಯುವುದು ಸರಳ ಮಾರ್ಗವಾಗಿದೆ. ದೈಹಿಕ ಕಾರ್ಯಗಳು ನೈಸರ್ಗಿಕವಾಗಿ ನಡೆಯಲು ನೀರು ಸಹಕಾರಿ ಎಂಬುದನ್ನು ನೆನಪಿಡಿ. ಬೆಚ್ಚಗಿನ ನೀರು ಆಸಿಡ್ ರಿಫ್ಲಕ್ಸ್ ಮತ್ತು ಅಂತಹುದೇ ಸಮಸ್ಯೆಗಳಿಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮಧ್ಯಾಹ್ನದ ಊಟವಾಗಿ ಪೌಷ್ಟಿಕ ಭರಿತ ಹಣ್ಣುಗಳನ್ನು ಸೇವಿಸಿ:

ರುಜುತಾ ಅವರು ಹೇಳುವ ಪ್ರಕಾರ ಕಸ್ಟರ್ಡ್ ಸೇಬು (ಸೀತಾಫಲ), ಬಾಳೆಹಣ್ಣು, ಚಿಕ್ಕು (ಸಪೋಟಾ), ಪಪ್ಪಾಯಿ ಅಥವಾ ಇತರ ಯಾವುದೇ ಪೌಷ್ಟಿಕ ಭರಿತ ಹಣ್ಣನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ತಿನ್ನಲು ಶಿಫಾರಸು ಮಾಡುತ್ತಾರೆ. ಈ ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಅವು ಹಸಿವನ್ನು ನಿಗ್ರಹಿಸಿ, ಸಂತೃಪ್ತಿ ನೀಡಬಹುದು ಮತ್ತು ಕರುಳಿನ ಆರೋಗ್ಯವನ್ನು ಸಹ ಬೆಂಬಲಿಸುತ್ತದೆ. ಅನಿಯಮಿತ ಕರುಳಿನ ಚಲನೆಯನ್ನು ತಪ್ಪಿಸಲು ಸಹ ಇವು ನಿಮಗೆ ಸಹಾಯ ಮಾಡಬಹುದು. ಇದು ಸಾಮಾನ್ಯವಾಗಿ ಅನಿಯಮಿತ ಊಟದ ಸಮಯದ ಪರಿಣಾಮವಾಗಿ ಸಂಭವಿಸುತ್ತದೆ.

ಸ್ವಲ್ಪ ತುಪ್ಪ ಮತ್ತು ಬೆಲ್ಲದೊಂದಿಗೆ ನಿಮ್ಮ ಊಟ ಮುಗಿಸಿ:

ಪೌಷ್ಟಿಕ ತಜ್ಞರ ಪ್ರಕಾರ, ತುಪ್ಪ ಮತ್ತು ಬೆಲ್ಲದ ಶಕ್ತಿ ತುಂಬಿದ ಸಂಯೋಜನೆಯು ತಲೆನೋವು, ಆಮ್ಲೀಯತೆ, ಉಬ್ಬರ ಮತ್ತು ವಿಳಂಬವಾದ ಊಟದಿಂದ ಉಂಟಾಗುವ ಇತರ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಿಮ್ಮ ಮಧ್ಯಾಹ್ನದ ಊಟದ ನಂತರ ತಕ್ಷಣ ಅದನ್ನು ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಊಟದ ನಂತರ ಹೊಟ್ಟೆ ಉಬ್ಬಿಕೊಂಡರೆ ಏನು ಮಾಡಬೇಕು?

ಊಟದ ನಂತರ ಹೊಟ್ಟೆ ಉಬ್ಬರಿಸುವುದು ನಮ್ಮಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಹಲವಾರು ಅಂಶಗಳು ಕಾರಣವಾಗಬಹುದು. ಅತಿಯಾಗಿ ತಿನ್ನುವುದರಿಂದ ಹಿಡಿದು ಆಹಾರ ಅಸಹಿಷ್ಣುತೆಯವರೆಗೆ, ವಿಭಿನ್ನ ಕಾರಣಗಳಿವೆ. ಕೆಲವೊಮ್ಮೆ, ದಿನಚರಿಯ ಭಾಗವಾಗಿ ಸರಿಯಾದ ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ಮೂಲಕ ಇದನ್ನು ಸುಲಭವಾಗಿ ಪರಿಹರಿಸಬಹುದು. ಉದಾಹರಣೆಗೆ ಸೊಂಪನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ