AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Fungus: ನಿಮಗೂ ಉಗುರು ಸುತ್ತಿನ ಸಮಸ್ಯೆ ಬಾಧಿಸುತ್ತಿದೆಯೇ? ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದುಗಳು

ಬೆರಳಿನ ತುದಿಯಲ್ಲಿ ನಂಜು ಕಾಣಿಸಿಕೊಂಡು, ಗಾಯವಾಗುವುದು, ಒಡೆಯುವುದು ಹಾಗೂ ಉಗುರಿನ ಬಳಿ ಸಹಿಸಲಾಗದ ನೋವು ಉಂಟಾಗುವುದು ಉಗುರು ಸುತ್ತಿನ ಪ್ರಮುಖ ಲಕ್ಷಣಗಳಾಗಿವೆ.

Nail Fungus: ನಿಮಗೂ ಉಗುರು ಸುತ್ತಿನ ಸಮಸ್ಯೆ ಬಾಧಿಸುತ್ತಿದೆಯೇ? ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದುಗಳು
Nail Fungus
TV9 Web
| Updated By: ನಯನಾ ರಾಜೀವ್|

Updated on: Sep 22, 2022 | 10:12 AM

Share

ಬೆರಳಿನ ತುದಿಯಲ್ಲಿ ನಂಜು ಕಾಣಿಸಿಕೊಂಡು, ಗಾಯವಾಗುವುದು, ಒಡೆಯುವುದು ಹಾಗೂ ಉಗುರಿನ ಬಳಿ ಸಹಿಸಲಾಗದ ನೋವು ಉಂಟಾಗುವುದು ಉಗುರು ಸುತ್ತಿನ ಪ್ರಮುಖ ಲಕ್ಷಣಗಳಾಗಿವೆ. ಉಗುರು ಸುತ್ತು ಸಮಸ್ಯೆ ಉಗುರಿನ ಅಂದವನ್ನು ಕೆಡಿಸುವುದು ಮಾತ್ರವಲ್ಲದೇ, ಸಹಿಸಲಾಗದ ನೋವು ಹಾಗೂ ಸೆಳೆತದಿಂದ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಉಗುರು ಸುತ್ತಿನ ಸಮಸ್ಯೆಯೂ ನಿಮ್ಮನ್ನು ಬಾಧಿಸುತ್ತಿದ್ದರೆ ಈ ಸುಲಭ ಮನೆಮದ್ದುಗಳನ್ನು ನೀವು ಟ್ರೈ ಮಾಡಬಹುದು.

-ಉಗುರು ಸುತ್ತು ಆಗಿರುವಲ್ಲಿಗೆ ಮೆಣಸಿನಕಾಳುಗಳನ್ನು ಎಮ್ಮೆಯ ಹಾಲಿನಲ್ಲಿ ಅರೆದು ಉಗುರಿಗೆ ಹಚ್ಚಿ ಬಟ್ಟೆಯಿಂದ ಕಟ್ಟುವುದರಿಂದ ನಿಧಾನವಾಗಿ ಉಗುರು ಸುತ್ತು ಕಡಿಮೆಯಾಗುತ್ತದೆ.

-ನಿಂಬೆ ಹಣ್ಣು, ಉಗುರು ಸುತ್ತಿಗೆ ಪುಡಿ ಮಾಡಿದ ಏಲಕ್ಕಿ, ಅರಶಿನ ಪುಡಿ, ಕಾಳು ಮೆಣಸಿನ ಹುಡಿ, ನಿಂಬೆಹಣ್ಣಿನಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಪುಡಿ ಮಾಡಿದ ಇವು ಮೂರು ಮಿಶ್ರಣವನ್ನು ನಿಂಬೆಹಣ್ಣಿನಲ್ಲಿ ಮಾಡಿದ ರಂಧ್ರಕ್ಕೆ ಹಾಕಿಕೊಳ್ಳಿ. ಈ ನಿಂಬೆಹಣ್ಣಿನ್ನು ಉಗುರುಸುತ್ತಿನ ಬೆರಳಿಗೆ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಎರಡು ಮೂರು ದಿನಗಳಲ್ಲಿ ಉಗುರು ಸುತ್ತು ಕಡಿಮೆಯಾಗುತ್ತದೆ.

– ಎಕ್ಕದ ಎಲೆಯ ಹಾಲನ್ನು ಉಗುರುಸುತ್ತಿಗೆ ಹಚ್ಚುತ್ತಿದ್ದರೆ ಈ ಸಮಸ್ಯೆಯು ಕಡಿಮೆಯಾಗುತ್ತದೆ.

– ಕೈಬೆರಳಿಗೆ ಉಗುರುಸುತ್ತು ಆಗಿದ್ದರೆ ಬೆಳ್ಳುಳ್ಳಿ, ಕಾಳುಮೆಣಸು, ಮದರಂಗಿ ಸೊಪ್ಪು, ಲಿಂಬೆರಸ ಇವುಗಳನ್ನು ಸೇರಿಸಿ ಗಟ್ಟಿಯಾಗಿ ಅರದು ಉಗುರಿಗೆ ಹಚ್ಚಿ ಕಟ್ಟುವುದರಿಂದ ಉಗುರುಸುತ್ತು ಕಡಿಮೆಯಾಗುತ್ತದೆ.

-ಕಪ್ಪು ಎಳ್ಳು ಪುಡಿ ಮಾಡಿ, ಪುಡಿ ಮಾಡಿದ ಕಲ್ಲು ಉಪ್ಪು, ಸೈಂಧವ ಲವಣ, ಅರಶಿಣ, ಈ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ರಂಧ್ರ ಮಾಡಿದ ನಿಂಬೆಹಣ್ಣಿನ ಒಳಗೆ ಸಣ್ಣಗೆ ರಂಧ್ರ ಮಾಡಿ, ರಂಧ್ರದೊಳಗೆ ಈ ಮಿಶ್ರಣವನ್ನು ಹಾಕಿ. ಉಗುರು ಸುತ್ತಾದ ಕಾಲಿನ ಅಥವಾ ಕೈಯ ಬೆರಳಿಗೆ ಟೋಪಿಯಂತೆ ಹಾಕಿಕೊಳ್ಳಿ. ಈ ರೀತಿಯಾಗಿ ಮಾಡಿದರೆ ಉಗುರು ಸುತ್ತಿನ ಸಮಸ್ಯೆಯು ಕಡಿಮೆಯಾಗುತ್ತದೆ.

– ಒಂದು ಚಮಚ ತೆಂಗಿನೆಣ್ಣೆ, ಒಂದು ಚಮಚ ಅರಶಿನ ಪುಡಿ ಈ ಎರಡರ ಮಿಶ್ರಣವನ್ನು ಬಿಸಿ ಮಾಡಿ ಉಗುರು ಸುತ್ತಾದ ಬೆರಳಿಗೆ ಲೇಪಿಸಿದರೆ ಕಡಿಮೆಯಾಗುತ್ತದೆ.

-ಬಿಳಿ ಹೂಲಿ ಸೊಪ್ಪು, ಬೆಳ್ಳುಳ್ಳಿ ಮತ್ತು ಕಾಳು ಮೆಣಸನ್ನು ಚೆನ್ನಾಗಿಅರೆದು ಬೆಣ್ಣೆಯಲ್ಲಿ ಕಲಸಿ ಉಗುರಿಗೆ ಹಚ್ಚಬೇಕು. ನಂತರ ಅಮೃತ ಬಳ್ಳಿ ಎಲೆಯನ್ನು ಸುತ್ತಿ ಕಟ್ಟಬೇಕು. ಯಾವುದೇ ಕಾರಣಕ್ಕೂ ಉಗುರಿಗೆ ನೀರು ತಾಕಿಸಬಾರದೂ. ಹೀಗೆ ಮಾಡಿದ್ದಲ್ಲಿ ಉಗುರು ಸುತ್ತಿನ ಸಮಸ್ಯೆಯೂ ಉಪಶಮನವಾಗುತ್ತದೆ.

-ಉಗುರು ಸುತ್ತು ಸಮಸ್ಯೆಯಿಂದ ಬಳಲುತ್ತಿರುವವರು ಅಪರಂಜಿ ಸೊಪ್ಪನ್ನು ನಿಂಬೆರಸದಲ್ಲಿ ಅರೆದು ಬೆರಳಿಗೆ ಕಟ್ಟಿ ಅಥವಾ ನಿಂಬೆಹಣ್ಣಿಗೆ ಒಂದು ಕೈ ಬೆರಳು ಆಡಿಸುವಷ್ಟು ರಂಧ್ರ ಮಾಡಿ ಆ ರಂಧ್ರಕ್ಕೆ ಅಪರಂಜಿ ಸೊಪ್ಪಿನ ರಸ ಹಾಕಿ, ಉಗುರು ಸುತ್ತಿನ ಬೆರಳಿಗೆ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಒಂದೆರಡು ದಿನಗಳಲ್ಲಿ ಉಗುರು ಸುತ್ತಿನ ಸಮಸ್ಯೆಯು ನಿವಾರಣೆಯಾಗುತ್ತದೆ.

-ಅರ್ಧ ಕತ್ತರಿಸಿದ ನಿಂಬೆಹಣ್ಣನ್ನು ಉಗುರು ಸುತ್ತಾದ ಬೆರಳಿಗೆ ಟೋಪಿಯಂತೆ ಹಾಕಿಕೊಂಡು ಕಾಟನ್ ಬಟ್ಟೆಯನ್ನು ಸುತ್ತಿಕೊಳ್ಳುವುದರಿಂದ ನಿಂಬೆಹಣ್ಣಿನ ರಸವೂ ಉಗುರು ಸುತ್ತಾ ಬೆರಳಿನ ಒಳಗೆ ಹೋಗುತ್ತದೆ. ಹೀಗೆ ಆದಾಗ ಉಗುರು ಸುತ್ತಿನ ಸಮಸ್ಯೆಯು ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?