ಚರ್ಮದಲ್ಲಿ ಈ ಕೆಲವು ಬದಲಾವಣೆಗಳು ಕಂಡುಬಂದರೆ ಜಾಗರೂಕರಾಗಿರಿ!

ಆರೋಗ್ಯದಲ್ಲಿ ಏನೇ ವ್ಯತ್ಸಾಸವಾದರೂ ಕೂಡಾ ಹತ್ತಿರದ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳಿ. ಕೆಲವು ಸಮಸ್ಯೆಗಳು ನಿರ್ಲಕ್ಷ್ಯದಿಂದಲೇ ದೊಡ್ಡ ತಲೆನೋವಾಗಿ ಬಿಡುತ್ತವೆ.

ಚರ್ಮದಲ್ಲಿ ಈ ಕೆಲವು ಬದಲಾವಣೆಗಳು ಕಂಡುಬಂದರೆ ಜಾಗರೂಕರಾಗಿರಿ!
ಸಾಂದರ್ಭಿಕ ಚಿತ್ರ
TV9kannada Web Team

| Edited By: Ayesha Banu

Jun 23, 2021 | 10:02 AM

ಚರ್ಮದಲ್ಲಿ ತುರಿಕೆ, ಕಜ್ಜಿಗಳು ಕಂಡು ಬಂದರೆ ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಕೆಲವೊಮ್ಮೆ ಇವುಗಳು ರೋಗಗಳ ಲಕ್ಷಣಗಳಾಗಿರಬಹುದು. ಹಾಗಿರುವಾಗ ನೀವು ಆರೋಗ್ಯದ ಕುರಿತಾಗಿ ಕಾಳಜಿ ತೋರದೆ ನಿರ್ಲಕ್ಷಿಸಿದರೆ ಅದರು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಪಿತ್ತಜನಕಾಂಗ ಹಾನಿಯ ಲಕ್ಷಣವೆಂದರೆ ರಕ್ತದಲ್ಲಿ ಪಿತ್ತರಸ ಉತ್ಪತ್ತಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ. ವಾಸ್ತವಿಕವಾಗಿ ಪಿತ್ತಜನಕಾಂಗವು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಪಿತ್ತರಸವು ರಕ್ತದಲ್ಲಿ ಬೆರೆಯಲು ಪ್ರಾರಂಭಿಸುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ.

ಕಣ್ಣುಗಳು, ಚರ್ಮ ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು ಯಕೃತ್ತು​ ಸಮಸ್ಯೆಯ ಲಕ್ಷಣಗಳಾಗಿವೆ. ಕೆಲವು ಬಾರಿ ಮೂತ್ರದಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುವುದು ಯಕೃತ್ತು​ ಸಮಸ್ಯೆಯಿಂದಾಗಿದೆ. ಯಕೃತ್ತು ಸರಿಯಾಗಿ ಕೆಲಸ ನಿರ್ವಹಿಸದಿದ್ದಾಗ ಅದರಲ್ಲಿರುವ ಈಸ್ಟ್ರೊಜೆನ್​ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಚರ್ಮದ ಮೇಲೆ ಕಂದು ಮತ್ತು ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಿದ್ದಾಗ ಚರ್ಮದ ಮೇಲೆ ಇಂತಹ ಕಲೆಗಳು ಗೋಚರಿಸಿದಾಗ ನಿರ್ಲಕ್ಷ್ಯಬೇಡ.

ನೀಲಿ ಬಣ್ಣದ ಕಜ್ಜಿ ಸಾಮಾನ್ಯವಾಗಿ ಚರ್ಮದ ಮೇಲೆ ಏಳುತ್ತವೆ. ಇದು ನಿಮ್ಮ ದೇಹದಲ್ಲಿ ಯಕೃತ್ತಿನ ಅಸಮರ್ಪಕ ಕಾರ್ಯದ ಸಂಕೇತವಾಗಿರಬಹುದು. ನಿಮ್ಮ ದೇಹದಲ್ಲಿ ಯಕೃತ್ತು ಸರಿಯಾದ ಪ್ರಮಾಣದ ಪ್ರೋಟೀನ್​ಗಳನ್ನು ಉತ್ಪಾದಿಸುತ್ತಿಲ್ಲ ಎಂದೂ ಆಗಿರಬಹುದು. ಆಗಾಗ ಅಂಗೈ ತುರಿಕೆ ಅಥವಾ ಕೆಂಪು ಬಣ್ಣವಾಗುವುದು ಗೋಚರವಾಗಬಹುದು. ಇದರಿಂದ ನಿಮ್ಮ ದೇಹದಲ್ಲಿ ಹಾರ್ಮೋನುಗಳು ಅಸಮತೋಲನಗೊಳ್ಳುತ್ತಿದೆ. ಜತೆಗೆ ಇದು ಯಕೃತ್ತಿನ ಅಸತೋಲನಗೊಳ್ಳಲುವಿಕೆಯನ್ನು ಸೂಚಿಸುತ್ತವೆ.

ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಯಕೃತ್ತಿನ ವೈಫಲ್ಯದ ಸಂಕೇತವಾಗಿರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಈ ಲಕ್ಷಣಗಳು ಕಂಡುಬರುತ್ತಿದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

ಸೂಚನೆ: ಆರೋಗ್ಯದಲ್ಲಿ ಏನೇ ವ್ಯತ್ಸಾಸವಾದರೂ ಕೂಡಾ ಹತ್ತಿರದ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳಿ. ಕೆಲವು ಸಮಸ್ಯೆಗಳು ನಿರ್ಲಕ್ಷ್ಯದಿಂದಲೇ ದೊಡ್ಡ ತಲೆನೋವಾಗಿ ಬಿಡುತ್ತವೆ. ಸಮಸ್ಯೆಗಳು ಚಿಕ್ಕದಾಗಿದ್ದಾಗಲೇ ಬೇರು ಸಮೇತ ಕಿತ್ತು ಬಿಸಾಡಬೇಕು. ಸಮಸ್ಯೆ ಅತಿರೇಕಕ್ಕೆ ತಲುಪಿದಾಗ ರೋಗ ನಿವಾರಣೆ ವೈದ್ಯರಿಗೂ ಕಷ್ಟವಾಗಿಬಿಡುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಕಾಳಜಿ ಇರಲಿ. ನಿಮ್ಮ ಆರೋಗ್ಯವನ್ನು ಆರೈಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನವಿರಲಿ.

ಇದನ್ನೂ ಓದಿ:

ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?

ದೇಹದ ಒತ್ತಡ, ಆತಂಕವನ್ನು ನಿವಾರಿಸಲು ಶಿಲ್ಪಾ ಶೆಟ್ಟಿ ಮಾಡುವ ಯೋಗ ಭಂಗಿ ಯಾವುದು ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada