ವೆಗನ್ ಅಥವಾ ಸಸ್ಯ ಆಧಾರಿತ ಆಹಾರಕ್ರಮವು ತರಕಾರಿ, ಧಾನ್ಯ ಮತ್ತು ಹಣ್ಣುಗಳು ಮತ್ತು ಸಸ್ಯ ಆಧಾರಿತ ಆಹಾರಗಳನ್ನು ಒಳಗೊಂಡಿರುತ್ತದೆ. ವೆಗನ್ಆಹಾರಕ್ರಮವು ಸಾಮಾನ್ಯವಾಗಿರುವ ಸಸ್ಯಹಾರಗಳಿಂದ ಸ್ವಲ್ಪ ಭಿನ್ನವಾಗಿರುತ್ತದೆ. ಏಕೆಂದರೆ ವೆಗನ್ಆಹಾರಕ್ರಮದಲ್ಲಿ ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ ಪ್ರಾಣಿಗಳಿಂದ ಪಡೆದ ಯಾವುದೇ ಆಹಾರವನ್ನು ಒಳಗೊಂಡಿರುವುದಿಲ್ಲ. ಅಂದರೆ ಹಾಲಿನ ಉತ್ಪನ್ನಗಳನ್ನು ಬಳಸುವುದಿಲ್ಲ ಮತ್ತು ಯಾವುದೇ ಪ್ರಾಣಿ ಉತ್ಪನ್ನಗಳನ್ನು ಬಳಸುವುದಿಲ್ಲ.
ರಕ್ತದೊತ್ತಡ :
ಸಸ್ಯ ಆಧಾರಿತ ಆಹಾರವು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಹೃದಯವನ್ನು ಆರೋಗ್ಯವಾಗಿಡುತ್ತದೆ :
ಸಸ್ಯ ಆಧಾರಿತ ಆಹಾರವು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು 16 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಇದಲ್ಲದೇ ಈ ಆಹಾರಗಳು ಕೊಲೆಸ್ಟ್ರಾಲ್ ಅನ್ನು 10 ರಿಂದ 15 ಪ್ರತಿಶತದಷ್ಟು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಮಧುಮೇಹ:
ಸಸ್ಯ ಆಧಾರಿತ ಆಹಾರವನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು 34 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಈ ಆಹಾರವು ಕಡಿಮೆ ಕೊಬ್ಬಿನಂಶವನ್ನು ಹೊಂದಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಟೈಪ್ 2 ಮಧುಮೇಹದ ಅಪಾಯದಿಂದ ನಿಮ್ಮನ್ನು ಕಾಪಾಡುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಬೇಕೆಂಬ ಬಯಕೆಗೆ ಖರ್ಜೂರ ಏಕೆ ಸೂಕ್ತ?
ತೂಕ ನಷ್ಟಕ್ಕೆ ಸಹಾಯಕ:
ಸಸ್ಯ ಆಧಾರಿತ ಆಹಾರವು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಸಾಮಾನ್ಯವಾಗಿ ಸಸ್ಯ ಆಧಾರಿತ ಆಹಾರವನ್ನು ತಿನ್ನುವುದು ಸಹ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಏಕೆಂದರೆ ನೀವು ಧಾನ್ಯಗಳು ಅಥವಾ ತರಕಾರಿಗಳನ್ನು ಸೇವಿಸಿದಾಗ, ನಿಮಗೆ ಬೇಗನೆ ಹಸಿವಾಗುವುದಿಲ್ಲ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
ಸಸ್ಯ ಆಧಾರಿತ ಆಹಾರದ ಅನಾನುಕೂಲಗಳು:
ಸಸ್ಯ ಆಧಾರಿತ ಆಹಾರದಲ್ಲಿ ಟಮಿನ್ ಬಿ 12 ಕೊರತೆ ಮತ್ತು ಒಮೆಗಾ -3 ಕೊಬ್ಬಿನಾಮ್ಲದ ಕೊರತೆಯು ದೇಹದಲ್ಲಿ ರಕ್ತಹೀನತೆ, ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ವಿಟಮಿನ್ ಬಿ 12, ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಸತು ಮತ್ತು ಒಮೆಗಾ -3 ಅನ್ನು ಸೇರಿಸುವುದು ಅವಶ್ಯಕ .
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: