ದರ್ಶನ್​​ಗೆ ಕಾಡಿದ ಆರೋಗ್ಯ ಸಮಸ್ಯೆ ಯಾವುದು? ಇದು ಕಂಡು ಬರಲು ಕಾರಣವೇನು?

ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಅವರು ಜಾಮೀನು ಪಡೆದಿದ್ದು, ಕರ್ನಾಟಕ ಹೈಕೋರ್ಟ್ ಅವರಿಗೆ 6 ವಾರಗಳ ಮಧ್ಯಂತ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ದಿನದಿಂದ ದಿನಕ್ಕೆ ಬೆನ್ನು ನೋವು ಜಾಸ್ತಿ ಆಗಿದ್ದರಿಂದ ಅದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬೆನ್ನು ನೋವು ಬರಲು ಕಾರಣವೇನು? ಯಾವ ಕಾರಣಗಳಿಗೆ ಬೆನ್ನು ನೋವು ಬಂದಿರಬಹುದು? ಈ ರೀತಿ ಸಮಸ್ಯೆ ಕಂಡು ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.

ದರ್ಶನ್​​ಗೆ ಕಾಡಿದ ಆರೋಗ್ಯ ಸಮಸ್ಯೆ ಯಾವುದು? ಇದು ಕಂಡು ಬರಲು ಕಾರಣವೇನು?
ದರ್ಶನ್
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2024 | 1:02 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಅವರು ಜಾಮೀನು ಪಡೆದಿದ್ದು, ಕರ್ನಾಟಕ ಹೈಕೋರ್ಟ್ ಅವರಿಗೆ 6 ವಾರಗಳ ಮಧ್ಯಂತ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ದಿನದಿಂದ ದಿನಕ್ಕೆ ಬೆನ್ನು ನೋವು ಜಾಸ್ತಿ ಆಗಿದ್ದರಿಂದ ಅದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬೆನ್ನು ನೋವು ಬರಲು ಕಾರಣವೇನು? ಯಾವ ಕಾರಣಗಳಿಗೆ ಬೆನ್ನು ನೋವು ಬಂದಿರಬಹುದು? ಈ ರೀತಿ ಸಮಸ್ಯೆ ಕಂಡು ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.

ಬೆನ್ನು ನೋವಿಗೆ ಕಾರಣವೇನು?

ದರ್ಶನ್ ಅವರಿಗೆ ಬೆನ್ನು ನೋವು ಕಂಡು ಬಂದಿರಲು ಹಲವಾರು ಕಾರಣಗಳಿರಬಹುದು. ಅಥವಾ ಯಾವುದಾದರೂ ಕಾಯಿಲೆಯ ಮುನ್ಸೂಚನೆಯೂ ಆಗಿರಬಹುದು. ಸಾಮಾನ್ಯವಾಗಿ ಇಷ್ಟು ವರ್ಷಗಳು ಐಷಾರಾಮಿ ಜೀವನ ನಡೆಸಿ ಜೈಲು ವಾಸ ಮಾಡಿರುವುದು ಆರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು ಅಥವಾ ಒತ್ತಡ, ಮೂಳೆಗಳಲ್ಲಿ ಕೆಲವು ರೀತಿಯ ಸೋಂಕು, ನರಗಳಿಗೆ ಸಂಬಂಧಿಸಿದ ಸಮಸ್ಯೆ, ಉಳುಕು ಮತ್ತು ನೋವು ಹೀಗೆ ನಾನಾ ರೀತಿಯ ಕಾರಣಗಳು ಅವರ ಆರೋಗ್ಯವನ್ನು ಹಾಳು ಮಾಡಿರಬಹುದು.

ವೈದ್ಯರು ಹೇಳಿರುವುದೇನು?

ನ್ಯೂರೋ ಸರ್ಜನ್ ಅವರು ಮೂರು ಅಂಶ ಹೇಳಿದ್ದು, ಮರಗಟ್ಟುವಿಕೆ ಇದೆ. ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದ ಕಿಡ್ನಿಗೆ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ ಆಗಬಹುದು. ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್​ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರಲು ಕಾರಣವೇನು?

ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವ ಜನರ ಜೀವನಶೈಲಿ ತೀರಾ ಹದಗೆಟ್ಟಿರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ ಹಾಗಾಗಿ ಸಣ್ಣ ವಯಸ್ಸಿಗೆ ಬೆನ್ನು ನೋವಿನ ಸಮಸ್ಯೆ ಕಾಡಲಾರಂಭಿಸಿದೆ. ಅದರಲ್ಲಿಯೂ ಬೆನ್ನು ನೋವಿಗೆ ಸರಿಯಾದ ಮದ್ದನ್ನು ಬಳಕೆ ಮಾಡಿ ಅದರಿಂದ ಮುಕ್ತಿ ಪಡೆಯುವವರಿಗಿಂತ ಅದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಇದು ದೊಡ್ಡ ಸಮಸ್ಯೆ ಅಲ್ಲದಿರಬಹುದು ಆದರೆ ಇದನ್ನು ನಿರ್ಲಕ್ಷ್ಯ ಮಾಡಿದಲ್ಲಿ ಮಾರಣಾಂತಿಕವಾಗಬಹುದು. ಜೊತೆಗೆ ಬೆನ್ನು ನೋವು ಕೆಲವು ಕಾನ್ಸರ್ ಗಳ ಮುನ್ಸೂಚನೆಯೂ ಆಗಿರಬಹುದು. ಹಾಗಾಗಿ ತಡಮಾಡಿ ಅದರಿಂದ ನೋವು ತಿನ್ನುವ ಬದಲು ಅದರಿಂದ ಬಹುಬೇಗ ಮುಕ್ತಿ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಚುರುಕಾದ ನಡಿಗೆ ಎಂದರೇನು? ದಿನಕ್ಕೆ 2 ಕಿ.ಮೀ ನಡಿಗೆ ಮಾಡಿದರೆ ಏನಾಗುತ್ತದೆ?

ಬೆನ್ನು ನೋವು ಬರಲು ಕಾರಣವೇನು?

ನಿರಂತರವಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವುದು

ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು

ಕೆಲವು ಬಾರಿ ದೊಡ್ಡ ದೊಡ್ಡ ಕಾಯಿಲೆಯ ಮುನ್ಸೂಚನೆ ಆಗಿರಬಹುದು

ಅಸ್ಥಿರಜ್ಜುಗಳಲ್ಲಿ ಕೆಲವು ರೀತಿಯ ಒತ್ತಡ

ಮೂಳೆಗಳಲ್ಲಿ ಕೆಲವು ರೀತಿಯ ಸೋಂಕು

ಗೆಡ್ಡೆಯ ರಚನೆ

ನರಗಳಿಗೆ ಸಂಬಂಧಿಸಿದ ಸಮಸ್ಯೆ

ಬೆನ್ನುಮೂಳೆಯ ಕಾರ್ಡಿನಲ್ಲಿ ಉಳುಕು ಮತ್ತು ನೋವು

ದೇಹದ ತೂಕ ಹೆಚ್ಚಾದಾಗ ಹೀಗೆ ನಾನಾ ಕಾರಣಗಳಿಗೆ ಬೆನ್ನು ನೋವು ಬರಬಹುದು.

ಲಕ್ಷಣಗಳೇನು?

ಕೆಲವರಿಗೆ ನೋವಿನ ಜೊತೆಗೆ ಜ್ವರವೂ ಬರುತ್ತದೆ. ಆಯಾಸವಾಗುತ್ತದೆ, ಕತ್ತಿನಿಂದ ಕೈಕಾಲುಗಳಲ್ಲಿ ನೋವು ಕಂಡು ಬರುತ್ತದೆ, ಕುತ್ತಿಗೆ ಅಥವಾ ಬೆನ್ನುನೋವಿನಿಂದ ತೂಕ ಕಡಿಮೆಯಾಗುತ್ತದೆ, ಮಲಗಿರುವಾಗಲೂ ನೋವು, ಮರಗಟ್ಟುವಿಕೆ, ಕೈ ಕಾಲುಗಳಲ್ಲಿ ದೌರ್ಬಲ್ಯ ಇವೆಲ್ಲಾ ಬೆನ್ನು ನೋವಿನ ಲಕ್ಷಣಗಳಾಗಿವೆ.

ತಡೆಗಟ್ಟಲು ಏನು ಮಾಡಬಹುದು?

ವಾಕಿಂಗ್, ಏರೋಬಿಕ್ಸ್, ವಾಟರ್ ಏರೋಬಿಕ್ಸ್, ಯೋಗ, ಈಜು ಮುಂತಾದ ಚಟುವಟಿಕೆಯು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆನ್ನು ನೋವು ಕಾಣಿಸಿಕೊಂಡರೆ ನೋವು ನಿವಾರಕ ಮುಲಾಮುವನ್ನು ಬಳಸಬಹುದು. ಫಿಸಿಯೋಥೆರಪಿ ಮಾಡಬಹುದು. ಆದರೆ ಇದಕ್ಕಿಂತ ಮೊದಲು ಅಂದರೆ ನೋವು ಕಂಡು ಬಂದಾಗ ಮೊದಲು ವೈದ್ಯರನ್ನು ಭೇಟಿ ಮಾಡಿ. ಬೇರೆ ಬೇರೆ ಕಾರಣಗಳಿಂದ ಬೆನ್ನು ನೋವು ಬರಬಹುದು. ಕಾಯಿಲೆ ದೃಢ ಪಟ್ಟಾಗ ಮಾತ್ರ ಅದಕ್ಕೆ ಚಿಕಿತ್ಸೆ ಸಾಧ್ಯ. ಹಾಗಾಗಿ ನೋವು ಕಂಡು ಬಂದಾಗ ನಿರ್ಲಕ್ಷ್ಯ ಮಾಡದೆಯೇ ಸಾಧ್ಯವಾದಷ್ಟು ಅದನ್ನು ವಾಸಿ ಮಾಡುವತ್ತ ಗಮನಹರಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ