AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಮುಷ್ಠಿ ಅಕ್ರೋಟ್‌ನಿಂದ ದಿನ ಆರಂಭಿಸಿ; ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ನೋಡಿ

ವಾಲ್ನಟ್ಸ್ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಡ್ರೈಫ್ರೂಟ್. ಅವು ದೇಹದ ಸಾಮಾನ್ಯ ಕಾರ್ಯಗಳನ್ನು ಉತ್ತಮವಾಗಿಡಲು ಸಹಾಯ ಮಾಡುತ್ತವೆ. ಹಾಗಾಗಿ ಪ್ರತಿದಿನ ಒಂದು ಹಿಡಿ ವಾಲ್ನಟ್ಸ್ ತಿನ್ನುವುದರಿಂದ ನೀವು ಊಹಿಸಲೂ ಸಾಧ್ಯವಾಗದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದು ಯಾಕೆ ಒಳ್ಳೆಯದು ಮತ್ತು ಯಾವ ಸಮಯದಲ್ಲಿ ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ಇದರಿಂದ ಸಿಗುವ ಪೂರ್ತಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಒಂದು ಮುಷ್ಠಿ ಅಕ್ರೋಟ್‌ನಿಂದ ದಿನ ಆರಂಭಿಸಿ; ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ನೋಡಿ
ಅಖರೋಟ್ ಪ್ರಯೋಜನಗಳುImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 08, 2026 | 4:38 PM

Share

ಮುಖ್ಯಾಂಶಗಳು

  • ಪ್ರತಿದಿನ ಅಕ್ರೋಟ್‌ ಸೇವಿಸಿದರೆ ದೇಹಕ್ಕೆ ಸಿಗುವ 5 ಪ್ರಯೋಜನಗಳು
  • ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗೆ ಅಕ್ರೋಟ್‌ ತಿನ್ನುವುದು ಏಕೆ ಉತ್ತಮ?
  • ಹೃದಯ, ಮೆದುಳು, ಜೀರ್ಣಶಕ್ತಿಗೆ ಅಕ್ರೋಟ್‌ ಏಕೆ ಅಗತ್ಯ?

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅಂತಹ ಆಹಾರಗಳಲ್ಲಿ ವಾಲ್ನಟ್ ಅಥವಾ ಅಕ್ರೋಟು (Akrodu) ಅಥವಾ ಅಖ್ರೋಟ್೦ ಪ್ರಮುಖವಾದ ಡ್ರೈಫ್ರೂಟ್ ಆಗಿದ್ದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬು, ವಿಟಮಿನ್ ಬಿ6, ವಿಟಮಿನ್ ಇ, ಮ್ಯಾಗ್ನೀಷಿಯಂ, ಫಾಸ್ಫರಸ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ಸಮಗ್ರ ಆರೋಗ್ಯಕ್ಕೆ ನೆರವಾಗುತ್ತವೆ. ಹಾಗಾದರೆ ಬೆಳಿಗ್ಗೆ ಎದ್ದು ಒಂದು ಮುಷ್ಠಿ ಅಕ್ರೋಟ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಯಾಕೆ ಇದು ನಮ್ಮ ದೇಹಕ್ಕೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಕ್ರೋಟ್ ಸೇವಿಸಿದರೆ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಅಕ್ರೋಟ್‌ನಲ್ಲಿರುವ ಒಮೆಗಾ–3 ಕೊಬ್ಬಿನಾಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೃದಯದ ಸಾಮಾನ್ಯ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡಬಹುದು.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು: ನಿಯಮಿತ ಪ್ರಮಾಣದಲ್ಲಿ ಅಕ್ರೋಟ್ ಸೇವಿಸುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಬಹುದು.

ಜೀರ್ಣಕ್ರಿಯೆ ಸುಧಾರಣೆ: ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಗಮವಾಗಲು ನೆರವಾಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ತೂಕ ನಿಯಂತ್ರಣಕ್ಕೆ ಸಹಕಾರಿ: ಪ್ರೋಟೀನ್ ಮತ್ತು ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯ ಹಸಿವು ಕಡಿಮೆಯಾಗುತ್ತದೆ ಇದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.

ಅಗತ್ಯ ಪೋಷಕಾಂಶಗಳ ಪೂರೈಕೆ: ಮ್ಯಾಗ್ನೀಷಿಯಂ, ಫಾಸ್ಫರಸ್, ಕಾಪರ್ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವು ಪೋಷಕಾಂಶಗಳು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುತ್ತವೆ.

ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ 5 ಆಹಾರಗಳನ್ನು ಸೇವನೆ ಮಾಡಿ

ಅಕ್ರೋಟ್ ತಿನ್ನುವ ಸರಿಯಾದ ವಿಧಾನ

ಸಾಮಾನ್ಯವಾಗಿ ಅಕ್ರೋಟ್ ಅನ್ನು ಬೆಳಿಗ್ಗೆ ಸೇವಿಸುವುದು ಬಹಳ ಉತ್ತಮ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಬಹುದು ಅಥವಾ ಅದನ್ನು ನೇರವಾಗಿ ಸೇವಿಸಬಹುದು. ಮೊಸರು, ಓಟ್ಸ್, ಸ್ಮೂದಿ ಅಥವಾ ಸಲಾಡ್ ಜೊತೆಯಲ್ಲಿಯೂ ತಿನ್ನಬಹುದು. ಸಾಮಾನ್ಯವಾಗಿ ದಿನಕ್ಕೆ ಒಂದು ಮುಷ್ಠಿ (ಸುಮಾರು 25–30 ಗ್ರಾಂ) ತಿನ್ನಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಅಖರೋಟ್ ಸೇವಿಸುವಾಗ ಗಮನಿಸಬೇಕಾದ ಸಂಗತಿಗಳು:

  • ಅತಿಯಾಗಿ ಸೇವಿಸಬೇಡಿ, ಏಕೆಂದರೆ ಇದರಲ್ಲಿ ಕ್ಯಾಲೊರಿ ಪ್ರಮಾಣ ಹೆಚ್ಚು.
  • ಹಳೆಯದು ಅಥವಾ ವಾಸನೆ ಬರುವ ಅಖರೋಟ್ ಬಳಸಬೇಡಿ.
  • ಡ್ರೈಫ್ರೂಟ್ ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆದು ಮಾತ್ರ ಸೇವಿಸಬೇಕು.
  • ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆ ಇದ್ದರೆ ತಜ್ಞರ ಸಲಹೆಯಂತೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಸೂಚನೆ: ಅಖರೋಟ್ ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸೇವಿಸಿದಾಗ ಉತ್ತಮ ಪ್ರಯೋಜನ ದೊರೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ