ಇತ್ತೀಚಿನ ದಿನದಲ್ಲಿ ಬ್ರಸ್ಟ್ ಕ್ಯಾನ್ಸರ್(Breast Cancer) ಖಾಯಿಲೆ ಮಹಿಳೆಯರನ್ನು ಕಾಡುತ್ತಿದೆ. ಮಹಿಳೆಯರು ಅತಿ ಸೂಕ್ಷ್ಮವಾದ ತಮ್ಮ ಅಂಗಗಳನ್ನು ಸ್ವಚ್ಛತೆಯೊಂದಿಗೆ ಕಾಪಾಡಿಕೊಳ್ಳಬೇಕು. ತಮ್ಮ ಆರೋಗ್ಯದ(Health) ಕುರಿತಾಗಿ ಹೆಚ್ಚು ಗಮನವಹಿಸಲೇಬೇಕಾಗಿದೆ. ಅಂದಾಗ ಮಾತ್ರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದಾಗಿದೆ. ಜತೆಗೆ ಅಪಾಯ ತರುವಂತಹ ರೋಗಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ಹಾಗಿರುವಾಗ ಸ್ತನ ಕ್ಯಾನ್ಸರ್ ಲಕ್ಷಣಗಳೇನು? ಯಾವ ರೀತಿಯ ಸಮಸ್ಯೆ ಕಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಅರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗಿ. ಏಕೆಂದರೆ ಸಣ್ಣ ಸಮಸ್ಯೆಯೂ ಸಹ ಮುಂದೊಂದು ದಿನ ದೊಡ್ಡ ಪರಿಣಾಮವನ್ನು ಬೀರಬಹುದು. ಹಾಗಾಗಿ ಬ್ರೆಸ್ಟ್ ಅಥವಾ ಸ್ತನ ಕ್ಯಾನ್ಸರ್ ಸಮಸ್ಯೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.
ಸ್ತನ ಕ್ಯಾನ್ಸರ್ ಕೆಲವು ಲಕ್ಷಣಗಳು:
*ಸ್ತನದ ಸುತ್ತ ಗಟ್ಟಿಯಾಗುತ್ತದೆ. ಗಡ್ಡೆಯ ರೀತಿಯ ಅನುಭವ ಉಂಟಾಗುತ್ತದೆ. ಹಾಗಿರುವಾಗ ಸ್ತನದ ಸುತ್ತಲೂ ಗಡ್ಡೆಯಾದಂತೆ ಗಟ್ಟಿಯಾಗಿದ್ದರೆ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ತಕ್ಷಣವೇ ಹತ್ತಿರದ ವೈದ್ಯರಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಒಳ್ಳೆಯದು.
*ಮಹಿಳೆಯರು ಫ್ಯಾಚನ್ಗಾಗಿ ಬ್ಯೂಟಿ ಪಾರ್ಲರ್ಗಳಿಗೆ ಹೋಗು್ತಾರೆ. ಅಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದಲೂ ಸ್ತನ ಕ್ಯಾನ್ಸರ್ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಹಾಗಿರುವಾಗ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಯಾವುದೇ ಕಾರಣಕ್ಕೂ ಸಣ್ಣ ಸಣ್ಣ ಸಮಸ್ಯೆಗಳ ಕುರಿತಾಗಿ ನಿರ್ಲಕ್ಷ್ಯ ತೋರಬೇಡಿ.
*ಮಹಿಳೆಯರು ಹೆಚ್ಚು ಬಿಗಿಯಾದ ಬಟ್ಟೆಯನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. ಹಾಗಿರುವಾಗ ರಾತ್ರಿ ಮಲಗುವಾಗ ಹಾಗೂ ಹೆಚ್ಚು ಆಯಾಸವಾಗುವ ಕೆಲಸದಲ್ಲಿ ತೊಡಗಿಕೊಂಡಿರುವಾಗ ಬಿಗಿಯಾದ ವಸ್ತ್ರವನ್ನು ಎಂದಿಗೂ ಧರಿಸದಿರಿ.
*ಅನುವಂಶೀಯತೆಯಿಂದಲೂ ಹೆಣ್ಣು ಮಕ್ಕಳಿಗೆ ಅಥವಾ ಹೆಂಗಸರಿಗೆ ಬ್ರಸ್ಟ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಅತಿಯಾದ ಮೊಬೈಲ್ ಬಳಕೆಯಿಂದಲೂ ಆರೋಗ್ಯಕ್ಕೆ ಕುತ್ತು ಉಂಟಾಗಬಹುದು.
*ಹಾಲುಣಿಸುವ ತಾಯಂದಿರು ಎಂದಿಗೂ ತಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಶುಭ್ರವಾದ ವಸ್ತ್ರವನ್ನೇ ಧರಿಸಿ. ಜತೆಗೆ ನಿಮ್ಮ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ಇರಲಿ.
ಇದನ್ನೂ ಓದಿ:
Women Health: ಮಹಿಳೆಯರೇ ಟೈಟ್ ಡ್ರೆಸ್ ಅಂದ್ರೆ ಇಷ್ಟಾನಾ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಚ್ಚರ!
Women Health: ಗರ್ಭಿಣಿಯರು ಪಾರ್ಲರ್ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು
Published On - 8:40 am, Thu, 29 July 21