AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರವರಿ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ದಶೆ ಉತ್ತಮ, ಮಧ್ಯಮ, ಅಧಮ?

ಶುಕ್ರ, ರವಿ, ಗುರು ದಶೆಗಳು ಉತ್ತಮ ಫಲ ನೀಡಿದರೆ, ಮಂಗಳ-ಬುಧ ದಶೆಗಳು ಮಧ್ಯಮ ಫಲಿತಾಂಶ ತರುತ್ತವೆ. ಶನಿ, ರಾಹು-ಕೇತು ದಶೆಗಳು ಎಚ್ಚರಿಕೆಯಿಂದಿರಬೇಕಾದ ಅವಧಿಗಳು. ಫೆಬ್ರವರಿ 2026ರಲ್ಲಿ ಮೇಷ ರಾಶಿಯವರಿಗೆ ಗ್ರಹ ದಶೆಗಳ ಪ್ರಭಾವ ಹೇಗಿರಲಿದೆ ಎಂಬುದನ್ನು ತಿಳಿಯಿರಿ. ಪರಿಹಾರದ ಬಗ್ಗೆ ಕೂಡ ತಿಳಿಸಲಾಗಿದೆ.

ಫೆಬ್ರವರಿ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ದಶೆ ಉತ್ತಮ, ಮಧ್ಯಮ, ಅಧಮ?
ಮೇಷ ರಾಶಿImage Credit source: AstroDunia
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 09, 2026 | 1:29 AM

Share

ಗ್ರಹಗಳ ದಶೆ ಫಲ ಕೊಡುವ ಕಾಲವೆನ್ನುವುದು ಸರ್ವವಿದಿತ. ಜನ್ಮ ದಿನಾಂಕ ಸಮಯಗಳ ಮೇಲೆ ಈಗ ಅಗುವ ದಶೆಯನ್ನು ಕಂಡುಕೊಳ್ಳುವುದು ಉತ್ತಮವಾದರೂ, ಮೇಷದವರಿಗೆ ಯಾವ ಗ್ರಹಗಳ ದಶೆ ಅನುಕೂಲ ಎನ್ನುವುದನ್ನು ಸಾಮನ್ಯವಾಗಿ ಹೇಳುವುದು. ಫೆಬ್ರವರಿ 2026ರ ವರ್ತಮಾನದ ಗ್ರಹಗತಿಗಳನ್ನು ಗಮನಿಸಿದರೆ, ಮೇಷ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲಿತಾಂಶಗಳಿವೆ. ನಿಮ್ಮ ಜನ್ಮ ಜಾತಕದಲ್ಲಿ ಈ ಕೆಳಗಿನ ಗ್ರಹಗಳ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ, ಅದರ ಪ್ರಭಾವ ಹೀಗಿರುತ್ತದೆ. ​ ಉತ್ತಮ ಫಲ ನೀಡುವ ದಶೆ: ​ಈ ಗ್ರಹಗಳ ದಶೆ ನಡೆಯುತ್ತಿದ್ದರೆ ನಿಮಗೆ ಈ ತಿಂಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು

ಶುಕ್ರ ದಶೆ: ಫೆಬ್ರವರಿಯಲ್ಲಿ ಶುಕ್ರನು ನಿಮ್ಮ ರಾಶಿಯ ಲಾಭ ಸ್ಥಾನದಲ್ಲಿ ಇರುವುದರಿಂದ, ಶುಕ್ರ ದಶೆ ಅಥವಾ ಅಂತರ್ದಶೆ ನಡೆಯುವವರಿಗೆ ಆರ್ಥಿಕ ಲಾಭ, ಹೊಸ ಗೆಳೆತನ ಮತ್ತು ಮೋಜು-ಮಸ್ತಿಯಿಂದ ಕೂಡಿದ ಸಮಯ ಇದಾಗಿರುತ್ತದೆ.

ರವಿ ದಶೆ: ಫೆಬ್ರವರಿ 15ರವರೆಗೆ ಸೂರ್ಯನು ಹತ್ತನೇ ಮನೆಯಲ್ಲಿ ಇರುವುದರಿಂದ, ಈ ಸಮಯದಲ್ಲಿ ಸೂರ್ಯನ ಅಂತರ್ದಶೆ ನಡೆಯುತ್ತಿದ್ದರೆ ಉದ್ಯೋಗದಲ್ಲಿ ಗೌರವ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಗುರು ದಶೆ: ಗುರುವು ಮೂರನೇ ರಾಶಿಯಲ್ಲಿ ಇದ್ದರೂ ನಿಮ್ಮ ರಾಶಿಯ ಮೇಲೆ ಶುಭ ದೃಷ್ಟಿ ಬೀರುವುದರಿಂದ, ಗುರುವಿನ ದಶೆ ನಡೆಯುವವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿಯಾಗಲಿದೆ.

​ಮಧ್ಯಮ ಫಲ ನೀಡುವ ದಶೆ ​ಈ ಗ್ರಹಗಳ ದಶೆಗಳು ಅತಿಯಾದ ನಿರೀಕ್ಷೆಗಿಂತ ಸಾಮಾನ್ಯ ಫಲಿತಾಂಶಗಳನ್ನು ನೀಡುತ್ತವೆ.

​ಮಂಗಳ ದಶೆ: ನಿಮ್ಮ ರಾಶ್ಯಾಧಿಪತಿಯಾದ ಮಂಗಳನು ಈ ಸಮಯದಲ್ಲಿ ಸ್ವಕ್ಷೇತ್ರ ಅಥವಾ ಉಚ್ಚ ಸ್ಥಾನದಲ್ಲಿ ಇಲ್ಲದಿದ್ದರೆ, ಸ್ವಲ್ಪ ಹಠಾತ್ ಕೋಪ ಮತ್ತು ಅವಸರದ ನಿರ್ಧಾರಗಳಿಗೆ ಕಾರಣವಾಗಬಹುದು. ಮಂಗಳ ದಶೆ ನಡೆಯುತ್ತಿದ್ದರೆ ಆರೋಗ್ಯದ ಬಗ್ಗೆ ಗಮನವಿರಲಿ.

ಬುಧ ದಶೆ: ಬುಧನು ಕುಂಭ ರಾಶಿಯಲ್ಲಿ ಶುಕ್ರನ ಜೊತೆ ಇರುವುದರಿಂದ ವ್ಯಾಪಾರಸ್ಥರಿಗೆ ಇದು ಮಧ್ಯಮದಿಂದ ಉತ್ತಮ ಫಲ ನೀಡುತ್ತದೆ. ಆದರೆ ಸಂವಹನದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು.

​ಎಚ್ಚರಿಕೆಯಿಂದ ಇರಬೇಕಾದ ದಶೆಶನಿ ದಶೆ: ಶನಿಯ ದಶೆ ಅಥವಾ ಅಷ್ಟಮ ಶನಿ/ಅರ್ಧಾಷ್ಟಮ ಶನಿಯ ಪ್ರಭಾವವಿದ್ದರೆ ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡವಿರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು.

ರಾಹು-ಕೇತು ದಶೆ: ಈ ಗ್ರಹಗಳ ದಶೆ ನಡೆಯುತ್ತಿದ್ದರೆ ಅನಿರೀಕ್ಷಿತ ಖರ್ಚುಗಳು ಮತ್ತು ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು.

ಸುಬ್ರಹ್ಮಣ್ಯ ಹಾಗೂ ಗುರುವಿನ ಉಪಾಸನೆಯಿಂದ ತೊಂದರೆಗಳಿಂದ ಮುಕ್ತರಾಗಬಹುದು.

ಲೋಹಿತ ಹೆಬ್ಬಾರ್