Horoscope: ದಿನಭವಿಷ್ಯ: ನಿಷ್ಠುರದ ಮಾತನಾಡಿ ಅನಂತರ ಪಶ್ಚಾತ್ತಾಪಗೊಳ್ಳುವಿರಿ
ತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಏಪ್ರಿಲ್ 18 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದಶಮೀ, ನಿತ್ಯನಕ್ಷತ್ರ: ಮಘಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:18 ರಿಂದ 07:52 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:25 ರಿಂದ ಮಧ್ಯಾಹ್ನ 10:59ರ ವರೆಗೆ.
ಧನು ರಾಶಿ : ಎಲ್ಲರಿಗೂ ಸಹಾಯ ಮಾಡುವ ನಿಮ್ಮ ನಿರಂತರ ಇಚ್ಛೆಯು ನಿಮಗೆ ದಣಿವನ್ನು ತರಬಹುದು. ದುರಭ್ಯಾಸದ ಜನರ ಸಹವಾಸ ಇರುವುದು. ವಿಶೇಷವಾದುದನ್ನು ಮಾಡಬೇಕೆಂಬ ನಿಮ್ಮ ಬಯಕೆ ಬಲವಾಗಿರುತ್ತದೆ. ಅಪರಿಚಿತರ ಮಾತುಗಳಿಂದ ದೂರವಿರಬೇಕು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಏನೂ ಮಾಡಿದರೂ ಆಗುತ್ತದೆ ಎಂದು ಏನನ್ನಾದರೂ ಮಾಡಲು ಹೋಗುವುದು ಬೇಡ. ಮಿಂಚಿದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ. ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು.
ಮಕರ ರಾಶಿ : ನೀವು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಯಾವುದೂ ಮಾಯಾಜಾಲದಂತೆ ಆಗದು. ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬದ ವಾತಾವರಣವು ನಿರ್ಮಾಣ ಮಾಡುವಿರಿ. ನೀವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ನಿಮ್ಮ ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ. ದೈವಭಕ್ತಿಯು ನಿಮ್ಮನ್ನು ಬಲ ಮಾಡುವುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾದೀತು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ.
ಕುಂಭ ರಾಶಿ : ಇಂದು ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಮನೆಗೆ ಅತಿಥಿಗಳ ಆಗಮನವು ಹೊಸ ಮೆರುಗನ್ನು ಕೊಡುವುದು. ವೈಯಕ್ತಿಕ ಸಂತೋಷಗಳ ಮೇಲೆ ನಿಮ್ಮ ಗಮನವು ತಾತ್ಕಾಲಿಕವಾಗಿ ನಿಮ್ಮ ಗಮನವನ್ನು ಕೆಲಸದಿಂದ ಬದಲಾಯಿಸಬಹುದು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಕೆಲವು ಅಪವಾದವನ್ನು ಕೇಳಬೇಕಾದೀತು. ನೀವು ಕೆಲವು ಹಳೆಯ ತಪ್ಪುಗಳಿಂದ ಕಲಿಯಬೇಕು. ಇಂದು ಹೆಚ್ಚಿನ ಸಮಯವನ್ನು ತಂದೆ-ತಾಯಿಯರ ಸೇವೆಯಲ್ಲಿ ಕಳೆಯಬೇಕು ಎನಿಸಬಹುದು. ಬಹಳ ದಿನಗಳಿಂದ ಒಂದೇ ತರದ ಕೆಲಸಗಳಿಂದ ಬೇಸರವಾಗುವುದು. ಇಂದು ನಡೆದ ಅಹಿತಕರ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಮೊದಲು ನಿಷ್ಠುರದ ಮಾತಿನಾಡಿ ಅನಂತರ ಪಶ್ಚಾತ್ತಾಪಗೊಳ್ಳುವಿರಿ.
ಮೀನ ರಾಶಿ : ಇಂದು ಸಂತೋಷದ ಕ್ಷಣಗಳನ್ನು ನೀವೆ ಸೃಷ್ಟಿಸಿಕೊಳ್ಳುವಿರಿ. ಮನೋರಂಜನೆಗೆ ಹಣವು ಖರ್ಚಾಗುವುದು. ಮನೆಯಲ್ಲಿ, ನಿಮ್ಮ ಮಕ್ಕಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರರು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಾನೂನಿನ ಕ್ರಮದಲ್ಲಿ ಮುಂದುವರಿದರೆ, ನೀವು ಅದರಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಹುದ್ದೆಗಳು ಸಿಗುತ್ತವೆ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಪರ ಊರಿನಲ್ಲಿ ಇಂದು ವಾಸವಾಗುವುದು.
-ಲೋಹಿತ ಹೆಬ್ಬಾರ್ – 8762924271 (what’s app only)