ದಿನ ಭವಿಷ್ಯ: ಈ ರಾಶಿಯವರು ತಾವು ಮಾಡಿದ ದಾನದಿಂದ ಅಧಿಕ ಯಶಸ್ಸು ಗಳಿಸುವರು
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಮಂಗಳವಾರದಂದು ತಿದ್ದುಪಡಿಗೆ ಅವಕಾಶ, ಬಿಡುಗಡೆ, ಹಿರಿಯರ ಜೊತೆ ಮನಸ್ತಾಪ, ಸೋಲಿನ ಪಾಠ, ಮಾನಸಿಕ ದ್ವಂದ್ವ, ಅರ್ಹತೆ, ಉಪಾಸನೆ, ಹಿರಿಯರ ಜೊತೆ ಕಲಹ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:59 – 16:26, ಯಮಗಂಡ ಕಾಲ 09:08 – 10:36, ಗುಳಿಕ ಕಾಲ 12:03 – 13:31.
ಮೇಷ ರಾಶಿ: ನಿಮ್ಮ ಕೈಯ್ಯಲ್ಲಿ ಒಗ್ಗೂಡಿಸುವಿಕೆ ಇರಲಿದೆ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಮಾತನಾಡುವಿರಿ. ಕುಕ್ಕಿ ಮಾತನಾಡುವುದು ನಿಮಗೆ ಸಹಿಸಲಾಗದು. ವ್ಯವಹಾರದಲ್ಲಿ ಬಿಗುಮಾನವನ್ನು ಸಡಿಲಮಾಡಿಕೊಳ್ಳಬೇಕು. ಮನಸ್ಸು ಹಗುರರಾಗಿದ್ದು ಉತ್ಸಾಹವು ನಿಮ್ಮ ಮುಖದಲ್ಲಿ ಕಾಣುವುದು. ಸಮಾರಂಭಕ್ಕೆ ಆಪ್ತರು ಒತ್ತಾಯ ಮಾಡಬಹುದು. ಸಹೋದರನಿಂದ ಉದ್ಯಮಕ್ಕೆ ನಿಮಗೆ ಸಲಹೆಗಳು ಸಿಗಬಹುದು. ಸಮೀಪವರ್ತಿತ್ವವೂ ಅಪಾಯ ಕೊಡುವುದು.
ವೃಷಭ ರಾಶಿ: ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ದಿನವನ್ನು ಕಳೆಯುವಿರಿ. ಮನೆಯ ಕಾರ್ಯಕ್ಕಾಗಿ ನೀವು ಓಡಾಟ ಮಾಡಬೇಕಾಗುವುದು. ಹೆಚ್ಚಿನ ಶ್ರಮವು ವಿದ್ಯಾರ್ಥಿಗಳಿಗೆ ಅವಶ್ಯಕ. ಕೆಟ್ಟವರನ್ನೇ ಮತ್ತು ನಂಬುವ ಸ್ಥಿತಿ ಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರದವಿರುವ ಬೇರೆ ಸ್ಥಳದಲ್ಲಿ ವಾಸಮಾಡಬೇಕಾಗುವುದು. ತೆರೆಯಲ್ಲಿರುವುದನ್ನು ಕಾಣಲು ಪರದೆ ಸರಿಯಬೇಕು.
ಮಿಥುನ ರಾಶಿ: ಇನ್ನೊಬ್ಬರ ವೈಯಕ್ತಿಕ ಬದುಕನ್ನು ಆಡಿಕೊಳ್ಳುವಿರಿ. ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಸಂಗಾತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಲಿದೆ. ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ನೀವು ಮಗ್ನರಾಗುವಿರಿ. ಅಂದುಕೊಂಡಿದ್ದು ಹಾಗೆಯೇ ಆಗಿದ್ದು ನಿಮಗೂ ಅಚ್ಚರಿಯಾಗಲಿದೆ. ಯಾರನ್ನೂ ಮೆಚ್ಚಿಸುವುದು ನಿಮಗೆ ಇಷ್ಟವಾಗದು. ದುಷ್ಕೃತ್ಯಕ್ಕೆ ಅಪ್ರತ್ಯಕ್ಷವಾಗಿ ಅನುಮೋದನೆ ಸಿಗಲಿದೆ.
ಕರ್ಕಾಟಕ ರಾಶಿ: ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬರಲಿದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಂದು ನಿಮಗೆ ಇಷ್ಟವಾಗದು. ಶರೀರವು ದುರ್ಬಲವಾಗಲು ಬಿಡದೇ ಬೇಕಾದ ಆಹಾರವನ್ನು ಕೊಡಿ. ಮನಸ್ಸು ಭಾರವಾಗಿದ್ದು ಎಲ್ಲರಿಂದ ದೂರವಿರಲು ಇಷ್ಟಪಡುವಿರಿ. ಹೊಸ ಮನೆಯ ಖರೀದಿಗೆ ಸಣ್ಣ ಹೆಜ್ಜೆಯನ್ನು ಇಡುವಿರಿ. ಆದಾಯವು ಮತ್ತಷ್ಟು ಬೇಕೆನಿಸುವುದು. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ.
ಸಿಂಹ ರಾಶಿ: ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಆಕಸ್ಮಿಕ ಓಡಾಟದಿಂದ ಆಯಾಸವಾಗುವುದು.
ಕನ್ಯಾ ರಾಶಿ: ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಹಣದ ಹೂಡಿಕೆಯನ್ನು ಮಾಡುವ ಆಲೋಚನೆಯು ಇರಲಿದೆ. ಪ್ರೇಮದಲ್ಲಿ ನೀವು ಬೀಳಲಿದ್ದೀರಿ. ಸರಿಯಾದ ತಜ್ಞರ ಜೊತೆ ಆರೋಗ್ಯವನ್ನು ತೋರಿಸಿ. ಹಳೆಯ ಖಾಯಿಲೆಯು ಕಾಣಿಸಿಕೊಳ್ಳಬಹುದು. ವೆಚ್ಚಕ್ಕೆ ನೀವು ಕಡಿವಾಣ ಹಾಕಲಿದ್ದೀರಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ಉತ್ತಮ ಆಹಾರವನ್ನು ಸ್ವೀಕರಿಸುವಿರಿ. ನಿಮ್ಮ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಿಸಬಹುದು.
ತುಲಾ ರಾಶಿ: ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ದಾನವಾಗಿ ಕೊಟ್ಟಿದ್ದನ್ನು ಎಲ್ಲಿಯೂ ಹೇಳಲಾರಿರಿ. ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಇಂದಿನ ಸುತ್ತಾಟವು ನಿಮಗೆ ಆಯಾಸವನ್ನು ಕೊಡಲಿದೆ. ಔಷಧ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಹೆಚ್ಚಿನ ಮೌಲ್ಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವಿರಾದರೂ ಕೇಳುವ ಮನಃಸ್ಥಿತಿಯು ಯಾರಲ್ಲಿಯೂ ಇರದು.
ವೃಶ್ಚಿಕ ರಾಶಿ: ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯುವಿರಿ. ಅನವರತ ಕಾರ್ಯಗಳಿಂದ ದೇಹವು ಆಯಾಸಗೊಳ್ಳಬಹುದು. ಸುಂದರ ದಿನದ ನಿರೀಕ್ಷೆಯಲ್ಲಿ ಇರುವಿರಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ತೆಗೆದುಕೊಳ್ಳಿ. ನೀವೇ ಸಂಗಾತಿಯ ಮನಸ್ಸನ್ನು ನೋಯಿಸಿ ಸರಿಪಡಿಸುವಿರಿ. ತಂದೆಯನ್ನು ನೋಡುವ ಬಯಕೆಯಾಗಬಹುದು. ಮರಗೆಲಸದವರಿಗೆ ಲಾಭ ಕಾಣಿಸುವುದು.
ಧನು ರಾಶಿ: ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಹಣಕಾಸಿನ ವಿಚಾರದಲ್ಲಿ ನೀವು ಹತಾಶಭಾವದಿಂದ ಇರುವಿರಿ. ಭೂಮಿಯ ಖರೀದಿಗೆ ಹುಡುಕಾಟ ಮಾಡುವಿರಿ. ನಿಮಗೆ ಸ್ಥಿರ ಬುದ್ಧಿಯನ್ನು ತಂದುಕೊಳ್ಳಲು ಆಗದು. ಸಾಹಸಮಯವಾದ ಕೆಲಸಕ್ಕೆ ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳುವಿರಿ. ನಿಮ್ಮ ಕೌಶಲವನ್ನು ಕೆಲಸದಲ್ಲಿ ತೋರಿಸಿ.
ಮಕರ ರಾಶಿ: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಉದ್ಯೋಗವನ್ನು ಪ್ರಾಮಾಣಿಕತೆಯಿಂದ ಮಾಡುವಿರಿ. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ಆಸ್ತಿಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯ ಕೊರತೆ ಇರಲಿದೆ. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ಉಂಟಾದ ಪ್ರೀತಿಯನ್ನು ಹಾಗೆಯೇ ಇರಿಸಿಕೊಂಡು ನೋಡಿ, ಸತ್ಯವೇ ಸುಳ್ಳೆ ಎಂದು.
ಕುಂಭ ರಾಶಿ: ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಹೋಗುವಿರಿ. ವಿದ್ಯಾರ್ಥಿಗಳು ಕೌಶಲವನ್ನು ಪ್ರದರ್ಶಿಸುವರು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸುವಿರಿ. ವೈವಾಹಿಕ ಮಾತುಕತೆಗೆ ನಿಮ್ಮನ್ನು ಯಾರಾದರೂ ಕೇಳಿಕೊಂಡುಬರಬಹುದು. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ನಿಮ್ಮ ತಪ್ಪನ್ನೂ ನೀವೇ ಸಮರ್ಥಿಸಿಕೊಳ್ಳುವಿರಿ.
ಮೀನ ರಾಶಿ: ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ಹೆಚ್ಚು ಖುಷಿಯಾಗಿ ಇಂದು ಇರಲಿದ್ದೀರಿ. ಒಬ್ಬರೇ ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಜಾಗರೂಕತೆ ಇರಲಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಎಲ್ಲ ಗೊತ್ತಿದೆ ಎಂದು ಹುಂಬುತನವನ್ನು ಮಾಡುವುದು ಬೇಡ.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:05 am, Tue, 27 October 26




