AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ತಿಂಗಳು ಈ ರಾಶಿಯವರು ಮಹಾತ್ಮರ ಅಥವಾ ದೊಡ್ಡವರ ವಿರೋಧವನ್ನು ಎದುರಿಸಬೇಕಾದೀತು

ಮೇ 2026 ಮಕರ ರಾಶಿ ಭವಿಷ್ಯ: ಈ ತಿಂಗಳು ಮಕರ ರಾಶಿಯವರಿಗೆ ಸವಾಲು ಮತ್ತು ಅವಕಾಶಗಳೆರಡೂ ಇವೆ. ಗುರುವಿನಿಂದ ಸಣ್ಣ ಅಡೆತಡೆಗಳಾದರೂ, 5ನೇ ಮನೆಯ ಶುಕ್ರ ಪ್ರೇಮ, ಕಲೆ, ಸಂತಾನಕ್ಕೆ ಶುಭ ತರುತ್ತಾನೆ. 3ನೇ ಮನೆಯ ಶನಿ-ಕುಜ-ಬುಧ ಧೈರ್ಯ, ಅಧಿಕಾರ ಮತ್ತು ವ್ಯಾಪಾರದಲ್ಲಿ ಯಶಸ್ಸು ನೀಡಲಿದೆ. ಹೂಡಿಕೆ ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

ಈ ತಿಂಗಳು ಈ ರಾಶಿಯವರು ಮಹಾತ್ಮರ ಅಥವಾ ದೊಡ್ಡವರ ವಿರೋಧವನ್ನು ಎದುರಿಸಬೇಕಾದೀತು
ರಾಶಿ ಭವಿಷ್ಯImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:May 02, 2026 | 11:56 AM

Share

ಮಕರ ರಾಶಿಗೆ ಉತ್ತರಾಷಾಢ, ಶ್ರವಣ, ಧನಿಷ್ಠಾ ನಕ್ಷತ್ರಗಳು ಇರಲಿದ್ದು ಶ್ರವಣಾ ನಕ್ಷತ್ರಕ್ಕೆ ವಿಶೇಷ ಪರಿಣಾಮ ಬೀರಲಿದೆ. ಮೇ 2026ರಲ್ಲಿ ಮಕರ ರಾಶಿಯವರ ಗೋಚಾರ ಫಲ ಹಾಗೂ ಗ್ರಹಗತಿಗಳ ಪ್ರಭಾವದ ಹೀಗಿರಲಿದೆ.

​ಗ್ರಹಗಳ ಸಂಚಾರ:

ಮಕರ ರಾಶಿಯವರಿಗೆ ಈ ತಿಂಗಳು ಗ್ರಹಗತಿಗಳು ಸವಾಲು ಮತ್ತು ಅವಕಾಶಗಳೆರಡನ್ನೂ ನೀಡುತ್ತಿವೆ. ​ಗುರುವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿರುವುದು ಅಷ್ಟೊಂದು ಶುಭಕರವಲ್ಲ. ಶತ್ರುಗಳ ಕಾಟ ಅಥವಾ ಸಾಲದ ಸುಳಿ ಕಂಡುಬರಬಹುದು.

  • ​ರವಿ ದಶೆ: ನಾಲ್ಕನೇ ಮನೆಯಲ್ಲಿ ರವಿ ಇರುವುದು ಸುಖಸ್ಥಾನಕ್ಕೆ ಕಿರಿಕಿರಿ ಉಂಟುಮಾಡಬಹುದು.
  • ಶುಕ್ರ ದಶೆ: ಐದನೇ ಮನೆಯಲ್ಲಿ ಶುಕ್ರ ಇರುವುದು ಅತ್ಯಂತ ಶುಭ. ಇದು ಪ್ರೇಮ, ಕಲೆ ಮತ್ತು ಸಂತಾನ ಸುಖಕ್ಕೆ ಪೂರಕ.
  • ​ಶನಿ, ಕುಜ, ಬುಧ ದಶೆ: ಮೂರನೇ ಮನೆಯಲ್ಲಿ ಈ ಮೂರು ಗ್ರಹಗಳ ಸಂಯೋಗವು ನಿಮ್ಮ ಶೌರ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.

​ಗ್ರಹಗಳ ಪ್ರಭಾವ:

​ಪರಿಶ್ರಮ ಮತ್ತು ಅಧಿಕಾರ :

ನಿಮ್ಮ ರಾಶ್ಯಾಧಿಪತಿ ಶನಿ ಮೂರನೇ ಮನೆಯಲ್ಲಿ ಬಲಿಷ್ಠನಾಗಿರುವುದರಿಂದ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಚೇರಿಯಲ್ಲಿ ಅಥವಾ ಸಮಾಜದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿ ಹೆಚ್ಚಾಗಲಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು.

​ಕೃಷಿ ಮತ್ತು ಭೂಮಿ:

​ಕೃಷಿಕರಿಗೆ ಈ ತಿಂಗಳು ಲಾಭದಾಯಕವಾಗಿದೆ. ಮೂರನೇ ಮನೆಯಲ್ಲಿರುವ ಕುಜ ಮತ್ತು ಶನಿ ಭೂಮಿಗೆ ಸಂಬಂಧಿಸಿದ ಹಳೆಯ ವಿವಾದಗಳನ್ನು ಬಗೆಹರಿಸುತ್ತಾರೆ. ತೋಟಗಾರಿಕಾ ಬೆಳೆಗಳನ್ನು ವಿಶೇಷವಾಗಿ ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧಪಡಿಸಿಕೊಳ್ಳಬಹುದು. ಆದರೂ, ಶನಿಯ ಪ್ರಭಾವದಿಂದ ಅತಿಯಾದ ದೈಹಿಕ ಶ್ರಮ ಇರಲಿದೆ.

​ಪ್ರೇಮ ಮತ್ತು ವಿವಾಹ:

ಶುಕ್ರನು 5ನೇ ಮನೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅದನ್ನು ಮನೆಯವರಿಗೆ ತಿಳಿಸಲು ಇದು ಸುಸಮಯ. ವಿವಾಹ ಸಂಬಂಧಗಳು ಅಂತಿಮವಾಗಬಹುದು. ಸಣ್ಣಪುಟ್ಟ ವಿಹಾರ ಪ್ರವಾಸಗಳು ಮನಸ್ಸಿಗೆ ಮುದ ನೀಡುತ್ತವೆ.

​ಸ್ವ-ಉದ್ಯೋಗ ಮತ್ತು ವ್ಯಾಪಾರ:

​ವ್ಯಾಪಾರದಲ್ಲಿ ಈ ತಿಂಗಳು ವೇಗ ಕಂಡುಬರುತ್ತದೆ. ವಿಶೇಷವಾಗಿ ತಾಂತ್ರಿಕ ಕ್ಷೇತ್ರ, ಕಬ್ಬಿಣ ಅಥವಾ ಸಿವಿಲ್ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಆದಾಯವಿದೆ. ಸ್ವ-ಉದ್ಯೋಗಿಗಳಿಗೆ ಹೊಸ ಆರ್ಡರ್‌ಗಳು ಕೈ ಸೇರುತ್ತವೆ. ಆದರೆ, ಆರನೇ ಮನೆಯ ಗುರುವಿನ ಕಾರಣದಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ಇರಲಿ. ಯಾರನ್ನೂ ಅತಿಯಾಗಿ ನಂಬಬೇಡಿ.

​ಹವ್ಯಾಸ ಮತ್ತು ಕಲೆ:

​ಕಲಾವಿದರಿಗೆ ಇದು ಸುವರ್ಣ ಕಾಲ. ಪಂಚಮ ಸ್ಥಾನದ ಶುಕ್ರ ನಿಮ್ಮ ಸೃಜನಶೀಲತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅಥವಾ ಪ್ರದರ್ಶನ ನೀಡಲು ಇದು ಯಶಸ್ವಿ ತಿಂಗಳು.

​ಹೂಡಿಕೆ:

ಹೂಡಿಕೆಯ ವಿಷಯದಲ್ಲಿ ಮಿಶ್ರ ಫಲವಿದೆ. ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡಲು ರವಿ ಮತ್ತು ಶನಿಯ ಪ್ರಭಾವ ಪೂರಕವಾಗಿದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡುವ ಮುನ್ನ ಎಚ್ಚರವಿರಲಿ. 6ನೇ ಮನೆಯಲ್ಲಿರುವ ಗುರುವು ಅನಗತ್ಯ ಸಾಲ ಮಾಡದಂತೆ ಎಚ್ಚರಿಸುತ್ತಾನೆ. ಜೀ​ರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು, ಆಹಾರ ಕ್ರಮದ ಮೇಲೆ ನಿಗಾ ಇರಲಿ. ​ ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ. ಗುರುವಾರದಂದು ದಾನ‌ ಮಾಡಿ. ಶನಿವಾರದಂದು ಅನ್ನದಾನ ಮಾಡುವುದು ನಿಮ್ಮ ಕೆಲಸಗಳಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.

– ಲೋಹಿತ ಹೆಬ್ಬಾರ್

Published On - 11:55 am, Sat, 2 May 26

Follow Us
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್