AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today May 15, 2024: ದಿನ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ?

2024 ಮೇ 15ರ ದಿನ ಭವಿಷ್ಯ: ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಬುಧವಾರದ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today May 15, 2024: ದಿನ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:May 15, 2024 | 5:15 PM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.

ಮೇಷ ರಾಶಿ :ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆ ಕಾಣಿಸಿ ಸಮಾಧಾನವಾಗುವುದು. ಮನೆಯಲ್ಲಿರುವ ಮಕ್ಕಳಿಂದ ನಿಮಗೆ ಅನುಕೂಲವಾಗಲಿದೆ. ಪ್ರೇಮದಲ್ಲಿ ವಿಜಯಿಯಾಗುವಿರಿ. ವಿದ್ಯಾಭ್ಯಾಸದಲ್ಲಿ ನಿಮಗೆ ಸಮಾಧಾನ ಸಿಗಲಿದೆ. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿಮ್ಮ ಬೆಳವಣಿಗೆಯು ಸಕಾರತ್ಮಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಹತ್ತರ ಜೊತೆ ಹನ್ನೊಂದು ಆಗದಂತೆ ನೀವೇ ನೋಡಿಕೊಳ್ಳಬೇಕು. ಹೆಚ್ಚು ಶ್ರಮ ವಹಿಸಬೇಕಾಗುವುದು. ಸಾಲವಾಗಿ ಯಾರಾದರೂ ಹಣ ಕೇಳಬಹುದು.

ವೃಷಭ ರಾಶಿ :ಇಂದು ನಿಮಗೆ ಬರಬೇಕಾದ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಸರ್ಕಾರದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ನಿಮಗೆ ಸಂಬಂಧವಿಲ್ಲದ ವಸ್ತುಗಳನ್ನು ನೀವು ಇಟ್ಟುಕೊಳ್ಳುವುದು ಬೇಡ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ಅಪ್ರಯೋಜಕ ಮಾತುಗಳಿಗೆ ಕಿವಿಯಾಗುವಿರಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವಾದೀತು.

ಮಿಥುನ ರಾಶಿ :ನೀವು ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುವ ಯೋಜನೆ ಇರಲಿದೆ. ಪ್ರೀತಿಯಲ್ಲಿ ಅಂದುಕೊಂಡಷ್ಟು ಅನುಕೂಲವಾಗದಿದ್ದರೂ ಭರವಸೆ ಇರುವುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ‌. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ಹಣವನ್ನು ಹೊಂದಿಸಲು ಕಷ್ಟವಾಗುವುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಜೊತೆ ಹಾರ್ದವಾದ‌ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು.

ಕಟಕ ರಾಶಿ :ನಿಮ್ಮ ಸಾಮರ್ಥ್ಯಕ್ಕೆ ಶತ್ರುಗಳು ತಾನಾಗಿಯೇ ಕಡಿಮೆಯಾಗುವರು. ತುರ್ತು ಆಗಬೇಕಾದ ಕೆಲಸವು ಆಗದೇ ಒತ್ತಡದಲ್ಲಿ ಇರುವಿರಿ. ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಅನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಕೊನೆಗೆ ಪರಿಸ್ಥಿತಿ ಗಂಭೀರವಾಗುವುದು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಹಿತಶತ್ರುಗಳ ಕಾರಣದಿಂದ ಅವಕಾಶ ವಂಚಿತರಾಗುವಿರಿ. ದೀರ್ಘಕಾಲದ ಸಾಲ ಬಾಧೆಯಿಂದ ಮುಕ್ತರಾಗಿ ನಿಶ್ಚಿಂತರಾಗುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ದ್ವೇಷಭಾವವು ನಿಮ್ಮಲ್ಲಿ ಮೂಡಬಹುದು. ಆಂತರೀವಾಗಿ ನೀವು ಗಟ್ಟಿಯಾಗಬೇಕು.

ಸಿಂಹ ರಾಶಿ :ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಸಾಮಾಜಿಕವಾಗಿ ಬೆಳೆಯುವ ಆಸೆ ಚಿಗುರುವುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯು ಬೇಕೆನಿಸುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ತಂದೆಯಿಂದ ಸ್ಥಾನಮಾನಕ್ಕೆ ಬೇಕಾದ ಸಹಕಾರವನ್ನು ಪಡೆಯುವಿರಿ. ಮಿತಭಾಷಿಯಾಗಿ ನೀವು ಎಲ್ಲರಿಂದ‌ ಅಪಹಾಸ್ಯಕ್ಕೆ ಒಳಗಾಗುವಿರಿ. ಶತ್ರುಗಳ ಪಿತೂರಿಯಿಂದ ನಿಮಗೆ ವ್ಯವಹಾರದಲ್ಲಿ ಹಿನ್ನಡೆಯಾದೀತು. ಎಲ್ಲರನ್ನೂ ದೂರುವುದು ನಿಮಗೆ ಇಷ್ಟವಾಗದು. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ಮನೋರಂಜನೆಗೆ ನಿಮಗೆ ಸಮಯವು ಸಿಗುವುದು. ಇನ್ನೊಬ್ಬರ ಕೆಲಸದ ಹೊರೆಯೂ ನಿಮಗೆ ಬರಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಹೊಸ ವಸ್ತುಗಳ ಬಳಕೆಯನ್ನು ಮಾಡುವಿರಿ.

ಕನ್ಯಾ ರಾಶಿ :ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ಉದ್ಯೋಗದಲ್ಲಿ ಒತ್ತಡ ನಿವಾರಣೆಯನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ನಿಮ್ಮ ಬಗ್ಗೆ ಶತ್ರುಗಳು ಅಪಪ್ರಚಾರ ಮಾಡುವರು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂರುವರು. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳುವ ಭರದಲ್ಲಿ ಕೆಲವು ಕಾರ್ಯಗಳನ್ನು ಮರೆಯಬಹುದು. ಪಾಲುದಾರಿಕೆಯಲ್ಲಿ ಆದ ಮನಸ್ತಾಪವನ್ನು ಮುಂದುವರಿಸದೇ ಸುಮ್ಮನಿರಿ. ಅಥವಾ ಅನ್ಯ ಮಾರ್ಗವೆಂದರೆ ಕಂಡುಕೊಳ್ಳಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು.. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ಕೃಷಿಯನ್ನು ಹೊಸ ರೀತಿಯಲ್ಲಿ ಮಾಡುವ ಉತ್ಸಾಹವಿರುವುದು.

ತುಲಾ ರಾಶಿ :ನಿಮ್ಮ ಬೆಳವಣಿಗೆಗೆ ಪೂರಕವಾದ ಸನ್ನಿವೇಶವು ಬರಬಹುದು. ಕುಟುಂಬ ಜವಾಬ್ದಾರಿಯ ನಿರಗವಹಣೆ ಕಷ್ಟವಾಗುವುದು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಉದ್ಯೋಗದ ಬದಲಾವಣೆಯಿಂದ ಅನಾನುಕೂಲ ಉಂಟಾಗುವುದು. ಮನಸ್ಸಿನಲ್ಲಿರುವ ಸಂಕಟವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ವಾಹನ ಚಾಲನೆಯಲ್ಲಿ ಅವಸರ ಬೇಡ. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರಲು ಯತ್ನಿಸುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು.

ವೃಶ್ಚಿಕ ರಾಶಿ :ನಿಮಗೆ ತಂದೆಯಿಂದ ಬರಬೇಕಾದ ಆಸ್ತಿಯ ಬಗ್ಗೆ ಸಮಾಲೋಚನೆ ಮಾಡುವಿರಿ. ಉದ್ಯೋಗದಲ್ಲಿ ನೀವು ಬಹಳ ಪ್ರಾಮಾಣಿಕವಾಗಿ ಇರುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ಎಲೆಕ್ಟ್ರಾನಿಕ್ ವಸ್ತು ವಸ್ತುಗಳ ದುರಸ್ತಿ ಮಾಡಬೇಕಾಗಬಹುದು. ಉದ್ಯೋದ ಸ್ಥಳದಲ್ಲಿ ನಿಮ್ಮನ್ನು ಸ್ಥಾನಭ್ರಷ್ಟರಾಗುವ ಭೀತಿಯು ಇರಲಿದೆ. ವಿದ್ಯಾರ್ಥಿಗಳು ಓದಿನ ಕಡೆ ವಿಶೇಷ ಗಮನವನ್ನು ಕೊಡುವುದು ಕಷ್ಟವಾದೀತು. ಬಂಧುಗಳ ಕುಹಕಕ್ಕೆ ಸಿಲುಕುವಿರಿ. ಆಸ್ತಿಯಲ್ಲಿ ಪಾಲುದಾರಿಕೆಯು ನಿಮಗೆ ಸಮಾಧಾನ ಕೊಡದು. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು.

ಧನು ರಾಶಿ :ಇಂದು ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಏನೋ ಮಾಡಲು ಹೋದ ಶತ್ರುಗಳಿಂದ ನಿಮಗೆ ಅನುಕೂಲವೇ ಆಗುವುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಲಾಭವಾಗಲಿದೆ. ಆರ್ಥಿಕವಾಗಿ ನಿಮ್ಮ ಬೆಳವಣಿಗೆಯಿಂದ ಕುಟುಂಬದವರಿಗೆ ಖುಷಿಯಾಗುವುದು. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ನೀವೇ ಆರಿಸಿಕೊಂಡ ವೃತ್ತಿಯಲ್ಲಿ ತೃಪ್ತಿಯು ಸಿಗಲಿದೆ. ದೂರದೃಷ್ಟಿಯಿಂದ‌ ಕೆಲಸವನ್ನು ಮಾಡಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಕೆಲವರ‌ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು.

ಮಕರ ರಾಶಿ :ಇಂದು ನಿಮ್ಮ ಹದಗೆಟ್ಟ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ತುರ್ತು ಚಿಕಿತ್ಸೆಯನ್ನು ಪಡೆದು ಮುಂದುವರಿಯಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ ಉಂಟಾಗುವುದು. ಬಂಧುಗಳಿಗೆ ನಿಮ್ಮ ಮೇಲೆ ಅಸಮಾಧಾನ ಬರಬಹುದು. ಹಣದ ಸಹಾಯ ಮಾಡಲು ಸ್ನೇಹಿತರು ಒಪ್ಪದೇ ಮಾತು ಬೆಳೆಯಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗವಾಗುವುದು. ವ್ಯವಹಾರದಲ್ಲಿ ಚುರುಕು ಸಾಲದು. ನಿಮ್ಮ ಸರಳತೆಯು ಜೊತೆಗಾರರಿಗೆ ಇಷ್ಟವಾಗುವುದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.

ಕುಂಭ ರಾಶಿ :ಇಂದು ನಿಮ್ಮ ಪ್ರಯಾಣದಿಂದ ಆಗಬೇಕಾದ ಕೆಲಸವಾಗಿ ಸಂತೋಷವಾಗುವುದು. ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಆದಾಯಕ್ಕಿಂತ ಅಧಿಕ ಖರ್ಚನ್ನು ಮಾಡಬೇಕಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾಗಬಹುದು.

ಮೀನ ರಾಶಿ :ಇಂದು ನಿಮ್ಮ ವ್ಯಾಪಾರದ ಬೆಳವಣಿಗೆಯು ಚೆನ್ನಾಗಿ ಇರಲಿದ್ದು, ಆದಾಯವನ್ನು ಹೂಡಿಕೆ ಮಾಡವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನ್ಯಾಯಾಲಯದ ಬಗ್ಗೆ ನಿಮಗೆ ಬಹಳ ಚಿಂತೆ‌ ಕಾಡುವುದು. ಮಾತಿನಿಂದ ಅಧಿಕಾರಿಗಳ ಜೊತೆ ಸಮಸ್ಯೆ ತಂದುಕೊಳ್ಳುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಸನ್ನಿವೇಶಕ್ಕೆ ಯೋಗ್ಯವಾದ ಮಾತುಗಳನ್ನಾಡಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಅದು ಆಗುವುದಿಲ್ಲ. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಅನುಪಮ ಜ್ಞಾನವು ಸದುಪಯೋಗ ಆಗಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 7:55 pm, Tue, 14 May 24

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?