ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯ ನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:55 ರಿಂದ 12:26, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:58ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ ಮಧ್ಯಾಹ್ನ 09:24ರ ವರೆಗೆ.
ಸಿಂಹ ರಾಶಿ: ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಬೇಸರವಾವುವುದು. ಇಂದು ನಿಮ್ಮ ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಬಂಧುಗಳ ಆಗಮನವು ನಿಮ್ಮ ಯೋಜನೆಗೆ ಪೂರಕವಾಗಿ ಇರದು. ಮಕ್ಕಳಿಂದ ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆಯನ್ನು ಪಡೆಯುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕೊಡಲಿದೆ. ದೈವಾನುಗ್ರಹದಿಂದ ನೀವು ಆಪತ್ತಿನಿಂದ ದೂರಾಗುವಿರಿ. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆ ಒಳಗಾಗುವುದಿಲ್ಲ. ಹಣದ ಉಳಿತಾಯಕ್ಕೆ ಮಾರ್ಗವನ್ನು ಹುಡುಕುವಿರಿ. ಉದ್ಯೋಗದ ಕೆಲವು ಗೌಪ್ಯ ವಿಚಾರಗಳು ನಿಮಗೆ ಗೊತ್ತಾಗಬಹುದು. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರಲಿದೆ. ನ್ಯಾಯವಲ್ಲದ ಮಾರ್ಗದಲ್ಲಿ ನಿಮ್ಮ ಯೋಚನೆಯು ಸಾಗಬಹುದು. ನಿಮ್ಮ ಇಂದಿನ ಕೆಲಸಗಳು ಬೇಗನೆ ಮುಕ್ತಾಯವಾಗುವುದು.
ಕನ್ಯಾ ರಾಶಿ: ಮಿತ್ರನಿಂದ ಅನಿರೀಕ್ಷಿತ ಸಹಕಾರ ದೊರೆಯುವುದು. ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮಾನಸಿಕ ಕಿರಿಕಿರಿ ಅಧಿಕವಾಗುವುದು. ನಿಮಗೆ ಕೊಟ್ಟ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಪ್ರೇಮವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿ. ಯಾವ ಕೆಲಸದಲ್ಲಿಯೂ ಸಿಕ್ಕಿಹಾಕಿಕೊಳ್ಳದೇ ಇರುವಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ನಿಮಗೆ ಇಷ್ಟವಾಗುವುದು. ಅಧಿಕಾರಿಗಳ ವರ್ಗದಿಂದ ನಿಮಗೆ ಗೌರವ ಸಿಗಲಿದೆ. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗಿಲ್ಲವೆನಿಸುವುದು. ತಂದೆಗೆ ನಿಮ್ಮ ಕಡೆಯಿಂದ ಧನಸಹಾಯ ಸಿಗುವುದು. ವ್ಯಾಪರವು ಒಂದೇ ಹದದಲ್ಲಿ ಹೋಗುವುದು. ಪತ್ನಿಯ ಆರೋಗ್ಯವು ಕೆಡುವ ಸಾಧ್ಯತೆ ಇದೆ. ಆದರೆ ಸ್ನೇಹಿತರ ಮನೆಯಲ್ಲಿ ಉತ್ತಮ ಭೋಜನ ಮಾಡುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.
ತುಲಾ ರಾಶಿ: ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೊಇತು. ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಬಹುದು. ನಿಮ್ಮ ಗಮನವು ಅವರ ಮೇಲಿರಲಿ. ಆಸ್ತಿಯನ್ನು ಪಡೆಯಲು ಎದುರಾಳಿಗಳ ಬಲ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿಯು ಹೆಚ್ಚಾಗಿ ಅಭ್ಯಾಸವನ್ನು ನಿಲ್ಲಿಸುವಿರಿ. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ಮಾತಿನ ಬಿರುಸು ಅತಿಯಾಗಬಹುದು. ಎಷ್ಟೇ ದೂರವಿದ್ದರೂ ಮನೆಯ ನೆನಪು ನಿಮ್ಮನ್ನು ಕಾಡುವುದು. ಕಬ್ಬಿಣದ ವ್ಯಾಪಾರವನ್ನು ಮಾಡಲು ಧನಸಹಾಯವು ಸಿಗಬಹುದು. ನಿಷ್ಟುರದ ಮಾತುಗಳನ್ನು ಆಡಿ ಸಂಬಂಧವನ್ನು ಕಳೆದುಕೊಳ್ಳುವಿರಿ. ಅಪಜಯವು ನಿಮಗೆ ಅಪಮಾನದಂತೆ ಆಗುವುದು. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ: ಉದ್ಯೋಗದ ಒತ್ತಡವು ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡದು. ಇಂದಿನ ನಿಮ್ಮ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ನಿಮ್ಮ ಅಪೇಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಎಂದಿನ ಕೆಲಸದಲ್ಲಿ ಪ್ರವೃತ್ತರಾಗುವಿರಿ. ಆಸ್ತಿಯ ಖರೀದಿಯಲ್ಲಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗಲಿದೆ. ಧೈರ್ಯವನ್ನು ಕಳೆದುಕೊಂಡರೆ ಗೆಲ್ಲುವುದನ್ನೂ ಸೋಲಬೇಕಾಗುತ್ತದೆ. ಗಂಭೀರವಾದ ಚರ್ಚೆಯಲ್ಲಿ ನಿಮ್ಮ ಹಾಸ್ಯೊದರಜ್ಞೆಯು ಎಲ್ಲರನ್ನು ನಗಿಸುವುದು. ಸಂಕೀರ್ಣವಾದ ಕೆಲಸವನ್ನು ಸರಳ ಮಾಡಿಕೊಳ್ಳುವುದು ನಿಮಗೆ ಕರಗತವಾಗಲಿದೆ. ನಿಮ್ಮ ಸಮಯವು ವ್ಯರ್ಥ ಎಂದನಿಸಬಹುದು. ನಿಮಗೆ ಬರಬೇಕಾದ ಹಣವನ್ನು ಬಲವಂತವಾಗಿ ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ನಿರ್ಧಾರಕ್ಕೆ ಬರಲು ಕಷ್ಟವಾದೀತು. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ವಿದೇಶದ ಕಡೆ ನಿಮ್ಮ ಗಮನವಿರಲಿದೆ. ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು.
Published On - 12:10 am, Fri, 20 September 24