
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಅತಿಗಂಡ, ಕರಣ : ವಣಿಜ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:08 – 10:36, ಯಮಗಂಡ ಕಾಲ 13:33 – 15:02, ಗುಳಿಕ ಕಾಲ 06:11 – 09:40.
ಶರನ್ನವರಾತ್ರದ ಆರನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಕಾತ್ಯಾಯನೀ ದೇವಿಯು ಸಕಲರ ಸಂಕಟವನ್ನೂ ಸಂಹರಿಸಿ.
ಮೇಷ ರಾಶಿ: ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಸಂತೋಷದಿಂದ ಇರುತ್ತಾರೆ. ಉನ್ನತಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು ಮನೆಯಿಂದ ದೂರ ಹೋಗುವಿರಿ. ಶತ್ರುಗಳ ತೊಂದರೆಯನ್ನು ತಡೆಯಲು ಕಾನೂನಿಗೆ ಶರಣಾಗುವಿರಿ. ಬೆಂಬಲವಿದೆ ಎಂದು ಏನನ್ನಾದರೂ ಮಾಡುವುದು ಬೇಡ.
ವೃಷಭ ರಾಶಿ: ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ನಿಮ್ಮ ನೆಮ್ಮದಿಯನ್ನು ಪರರು ಸಹಿಸಲಾರರು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ ರಾಶಿ: ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಮಕ್ಕಳ ಮೇಲೆ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯವಾಗಿ ಬೇಕು. ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಸಜ್ಜನರ ಅಕಸ್ಮಾತ್ ಭೇಟಿಯಾಗುವುದು. ಆರೋಗ್ಯದ ಹೆಚ್ಚು ಗಮನವಿರಲಿ. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ.
ಕರ್ಕಾಟಕ ರಾಶಿ: ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ವೃತ್ತಿಯ ಸ್ಥಳದಲ್ಲಿ ನೀವು ಇಂದು ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿ ಆಗಿರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ನಿಮ್ಮ ವಸ್ತುಗಳನ್ನು ಕಳೆದುಕೊಂಡಿದ್ದು ಗೊತ್ತಾಗದೇಹೋಗುವುದು. ಸಮಾರಂಭಗಳಿಗೆ ಭೇಟಿಯು ಅನಿರೀಕ್ಷಿತವವೂ ಆಗಬಹುದು.
ಸಿಂಹ ರಾಶಿ: ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ಈ ಓಡಾಟದಿಂದ ಆಯಾಸ ಹೆಚ್ಚಾಗುವುದು. ಪರಪುರುಷರಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ಇಂದಿನ ಕೆಲಸವು ಗೊಂದಲದಿಂದ ಕೂಡಿರಲಿದೆ. ಸಂಪತ್ತಿದ್ದರೂ ಅದನ್ನು ಸದುಪಯೋಗ ಮಾಡುವ ಮಾರ್ಗವು ಗೊತ್ತಾಗದೇ ಇರಬಹುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸರಿಯಾಗದು. ಹಿರಿಯರಿಗೆ ಯೋಗ್ಯವಾದ ಗೌರವವನ್ನು ನೀಡಿ. ದುರ್ಬಲ ಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಿರಿ.
ಕನ್ಯಾ ರಾಶಿ: ಕೆಲವರಿಗೆ ನಿಮ್ಮ ಒರಟು ವರ್ತನೆಯು ಇಷ್ಟವಾಗದೇ ಇರಬಹುದು. ಎಂದೋ ಆಡಿದ ಮಾತಿನ ದುಷ್ಪರಿಣಾಮವು ಇಂದು ಹೊತ್ತಾಗುವುದು. ಅಸಮಯದಲ್ಲಿ ಭೋಜನವನ್ನು ಮಾಡುವುದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಲಿದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅತೀವ ಆಸಕ್ತಿಯು ಇರುವುದು. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ವ್ಯವಹಾರದಲ್ಲಿ ಚುರುಕುತನ ಅಗತ್ಯ.
ತುಲಾ ರಾಶಿ: ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ನಿಮಗೆ ಮೊದಲೇ ಸರಿ ಎನಿಸಿದ್ದು ಈಗ ತಪ್ಪು ಎಂದು ಅರಿವಿಗೆ ಬರುವುದು. ನೀವು ಸರಿಯಾದ ಮಾರ್ಗದರ್ಶನವನ್ನು ಪಡೆಯುವುದು ಮುಖ್ಯ. ಜೀರ್ಣವಾಗದ ಆಹಾರದಿಂದ ಸಂಕಟವಾಗುವುದು. ನಿಮ್ಮ ವಿದ್ಯೆಯ ಬಗ್ಗೆ ಅಹಂಕಾರ ಬರಬಹುದು. ಗುಂಪುಗಾರಿಕೆಯಿಂದ ಹೊರಬಂದ ನಿಮಗೆ ನಿಶ್ಚಿಂತೆಯಾಗಬಹುದು. ಆದಷ್ಟು ಸಾಮಾಜಿಕವಾಗಿ ಸಭ್ಯರಂತೆ ವರ್ತಿಸಿ.
ವೃಶ್ಚಿಕ ರಾಶಿ: ಆಯಾಸಕರವಾದ ಕಛೇರಿಯ ಕೆಲಸವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿ ಇರುವುದು. ಒಂದೇ ರೀತಿಯ ದಿನಚರಿಯನ್ನು ಕಂಡು ಸ್ತ್ರೀಯರು ಹೊಸ ಪಾಕದತ್ತ ಹೆಚ್ಚಿನ ಒಲವು ತೋರಿಸುವರು. ದಾಂಪತ್ಯದಲ್ಲಿ ಹೊಂದಾಣಿಕೆಯೇ ಹೆಚ್ಚಾಗಿ ಇರುವುದು. ಯಾರನ್ನೂ ಯಾರೂ ಬಿಟ್ಟುಕೊಡದ ಸ್ಥಿತಿಯು ಬರಬಹುದು. ನಿಮ್ಮ ಕೋಪವು ತಾತ್ಕಾಲಿಕವಾಗಿ ಇರುವುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು.
ಧನು ರಾಶಿ: ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ನಿಮ್ಮ ಸಾಮಾನ್ಯ ಕಾರ್ಯವೂ ಇತರರಿಗೆ ಅಸಮಾನ್ಯ ಎನಿಸುವುದು. ಎಂಥವರನ್ನೂ ನಂಬಿಸುವಂತೆ ಮಾತನಾಡುವಿರಿ. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಮಾತು ಹಿತವಾಗಿ ಇರಲಿ.
ಮಕರ ರಾಶಿ: ತಕ್ಷಣ ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಪ್ರಯಾಣದ ಆಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಪ್ರೀತಿಗಾಗಿ ಕೆಲವನ್ನು ತ್ಯಾಗ ಮಾಡಬೇಕು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿಂದ ಇರುವಿರಿ. ಆಕಸ್ಮಿಕವಾಗಿ ಧನಲಾಭವೂ ಆಗಬಹುದು. ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ.
ಕುಂಭ ರಾಶಿ: ಖರ್ಚಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಶತ್ರುಗಳ ವಿರುದ್ಧ ವಿಜಯ ಸಾಧಿಸುವ ಸಾಧ್ಯತೆ ಇದೆ. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗವು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ಇಂದಿನ ಕೆಲವು ಸಮಯವು ನಿಮಗೆ ನೆಮ್ಮದಿಯನ್ನು ಕೊಡುವುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು.
ಮೀನ ರಾಶಿ: ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೂ ಏನನ್ನೂ ಮಾಡಲಾರಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಇನ್ನೊಬ್ಬರನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಪುತ್ರ ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವೆನಿಸುವುದು.
ಲೋಹಿತ್ ಹೆಬ್ಬಾರ್ – 8762924271 (what’s app only)