AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಹೋದ್ಯೋಗಿಗಳಿಂದ ಆಪತ್ತು, ಆತಂಕ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಗುರುವಾರದಂದು ಪಾಲನೆ, ಶತ್ರುಬಾಧೆ, ಪೈಪೋಟಿಗೆ ಸಹಕಾರ, ದೇಹ ಪೀಡೆ, ವಿಶ್ವಾಸ ಘಾಸಿ, ವಸ್ತುನಷ್ಟ, ಆದಾಯ, ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಹೋದ್ಯೋಗಿಗಳಿಂದ ಆಪತ್ತು, ಆತಂಕ
ದಿನ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 15, 2026 | 1:02 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:34 – 15:02, ಯಮಗಂಡ ಕಾಲ 06:11 – 07:40, ಗುಳಿಕ ಕಾಲ 09:08 – 10:37.

ಶರನ್ನವರಾತ್ರದ ಐದನೆಯ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಸ್ಕಂದಮಾತೆಯು ಸಕಲರ ಸಂಕಟವನ್ನೂ ಸಂಹರಿಸಿ, ತಾಯಿಯಂತೆ ಎಲ್ಲರಿಲನ್ನೂ ವಾತ್ಸಲ್ಯದಿಂದ ಕಾಪಾಡಲಿ.

ಮೇಷ ರಾಶಿ: ನಿಮ್ಮ ಆತ್ಮೀಯವಾದ ಮಾತುಕತೆಗಳಿಂದ ಅಪರಿಚಿತರು ಆಪ್ತರಾಗುವರು. ಆಕಸ್ಮಿಕ ದ್ರವ್ಯಪ್ರಾಪ್ತಿಯು ಆಗಲಿದೆ. ಸುಲಭವಾಗಿ ಸಿಗುವುದನ್ನು ಶ್ರಮದಿಂದ ಪಡೆಯುವ ಸ್ಥಿತಿ ಬರಬಹುದು. ದಾಂಪತ್ಯದಲ್ಲಿ ಪರಸ್ಪರ ನಂಬಿಕೆಗಳು ದೃಢವಾಗುವುದು. ನಿಮ್ಮ ಕಾರ್ಯಕ್ಕೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಶತ್ರುಗಳ ನಡುವೆ ಮೌನವಾಗಿ ಬದುಕಬೇಕಾದೀತು. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು.

ವೃಷಭ ರಾಶಿ: ಯಾರ ಮೇಲೇ ಇಡುವ ವಿಶ್ವಾಸವೂ ನಿಮಗೆ ಸಮಾಧಾನವಾಗದು. ನಿಮ್ಮ ಪಾಲುದಾರಿಕೆಯ ಒಪ್ಪಂದವನ್ನು ಪುನಃ ಮಾಡಿಕೊಳ್ಳುವ ಸನ್ನಿವೇಶಗಳು ಬರಲಿದ್ದು ಆಲೋಚಿಸಿ ಒಪ್ಪಿಗೆ ನೀಡಿ. ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗಿದೆ. ಬರಬೇಕಾದ ಹಣದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಇಂದಿನ ನಿಮ್ಮ ವೈಯಕ್ತಿಕ ಕೆಲಸ ನಡುವೆ ಕಛೇರಿಯ ಕೆಲಸಗಳು ಹಿಂದೆ ಉಳಿಯುವುದು. ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗಬಹುದು.

ಮಿಥುನ ರಾಶಿ: ಅಪ್ರಸಿದ್ಧ ಸಂಸ್ಥೆಗೆ ಹಣ ಹೂಡಿಕೆ ಮಾಡಿ ನಿಮ್ಮ ಹಣವನ್ನು ಕಳೆದುಕೊಳ್ಳುವಿರಿ. ಕರಕುಶವ್ಯಾಪಾರಿಗಳು ಅಧಿಕ ಲಾಭವನ್ನು ಪಡೆಯುವರು. ಸರ್ಕಾರಿ‌ ಕೆಲಸಕ್ಕೆ ಪ್ರಯತ್ನಿಸಿದರೂ ಸುಲಭವಾಗಿ ಸಿಗದು. ನಿಮ್ಮ ಆಸ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡಲು ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ‌ ಇರುವುದು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು.

ಕರ್ಕಾಟಕ ರಾಶಿ: ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಂಡು ಇರಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿಯು ಇಂದು ಸಿಗಲಿದೆ. ನಿಮ್ಮ ಧಾರ್ಮಿಕ ಶ್ರದ್ಧೆಗೆ ಫಲ ದೊರೆತಂತಾಗುವುದು. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹಿಂದೇಟು ಹಾಕುವಿರಿ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಳ್ಳುವಿರಿ. ಒಂದು ಕ್ಷಣವೂ ಒಂದು ಕಡೆ ಕುಳಿತಿರಲಾರಿರಿ. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.

ಸಿಂಹ ರಾಶಿ: ನಿರಂತರ ಪ್ರಯತ್ನಕ್ಕೆ ಫಲವು ಸಿಗುವುದು. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಸಹೋದ್ಯೋಗಿಗಳ ಕಿರಿಕಿರಿಯಿಂದ ನಿಮ್ಮ‌ ಸ್ಥಾನವನ್ನು ಬಿಟ್ಟಕೊಡಬೇಕಾಗಿ ಬರಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆಗಬಹುದು. ದೇವತಾ ಕಾರ್ಯಕ್ಕೆ ಸಮಯವನ್ನು ಮಾಡಿಕೊಳ್ಳುವುದು ಉತ್ತಮ. ಪಿತೃಕಾರ್ಯದಿಂದ ಮಹತ್ಕಾರ್ಯದ ವಿಘ್ನಕ್ಕೆ ತೆರೆ. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮ್ಮನ್ನು ಕಾಡಬಹುದು. ಮಕ್ಕಳಿಂದ ಅನಾದರವಾಗಬಹುದು.

ಕನ್ಯಾ ರಾಶಿ: ಹಣಕಾಸಿನ ವ್ಯವಹಾರದಿಂದ ನಿಮಗೆ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರಬಹುದು. ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳಿ. ಸುಮ್ನೇ ಸುತ್ತಿ ಬಳಸಿ ಮಾತನಾಡಿ ಎದುರಿನವರ ಮತ್ತು ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವುದು ಬೇಡ. ನಿಮ್ಮ ಮೇಲೆ ಯಾವುದೋ ಶಕ್ತಿಯ ಪ್ರಭಾವವಿದೆ ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಬರಬಹುದು.

ತುಲಾ ರಾಶಿ: ಕಾರ್ಯದಲ್ಲಿ ಉಂಟಾದ ಅಡೆತಡೆಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ಕೊಡುವಿರಿ. ನಿಮ್ಮ ಒಳ್ಳೆತನದಿಂದ ನಿಮಗೆ ತೊಂದರೆಯಾಗಬಹುದು. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡಬೇಕಾಗಿಬರಬಹುದು. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಒಡನಾಡಬೇಕಾಗಿಬರಬಹುದು. ಬಹಳ ಕಷ್ಟಪಟ್ಟು ನಿಮ್ಮ ಈ ಜವಾಬ್ದಾರಿಯನ್ನು ಮುಗಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ನಿಮ್ಮ ವಿವಾಹಕ್ಕೆ‌ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಅವರ ಸ್ವಭಾವವು ಮುಂದುವರಿಯಬಹುದು. ಅಧ್ಯಾತ್ಮದಲ್ಲಿ ಇರಬೇಕಾಗಿ ಮನಸ್ಸು ತುಡಿಯಬಹುದು. ನಿಮ್ಮ ಬಗ್ಗೆ ನಿಮಗೇ ಹಿಂಜರಿಕೆಯ ಭಾವನೆ ಉಂಟಾಗಬಹುದು. ಇನ್ನೊಬ್ಬರ ಬುದ್ಧಿಮಾತನ್ನು ಒಂದನ್ನೇ ನಂಬಿ ನೀವು ಕಾರ್ಯಪ್ರವೃತ್ತರಾದರೆ ಅಪಮಾನವನ್ನು ಎದುರಿಸಬೇಕಾದೀತು. ಇಂದು ನೀವು ಅಂದುಕೊಂಡಷ್ಟು ಸುಲಭದಲ್ಲಿ ಯಾವುದೂ ದಕ್ಕದು.

ಧನು ರಾಶಿ: ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ಸಾಮಾಜಿಕ ಗೌರವವನ್ನು ಪಡೆಯುವ ಅವಕಾಶಗಳು ಇದ್ದರೂ ಕಾರಾಣಾಂತರಗಳಿಂದ ಅದು ಸಾಧ್ಯವಾಗದು. ಅಜೀರ್ಣವೇನಿಸಿದರೂ ಆಹಾರವನ್ನು ತಿಂದು ಆರೋಗ್ಯವನ್ನು ಪೂರ್ಣವಾಗಿ ಕೆಡಿಸಿಕೊಳ್ಳುವಿರಿ. ಸಂಗಾತಿಯ ಸಂತೋಷಕ್ಕೆ ಏನಾದರೂ ಉಡುಗೊರೆಯನ್ನು ನೀಡುವಿರಿ. ಜವಾಬ್ದಾರಿಯುತ ಸ್ಥಾನವು ನಿಮಗೆ ಸಿಗಲಿದೆ. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡಿ.

ಮಕರ ರಾಶಿ: ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ಕಛೇರಿಯಲ್ಲಿ ಇಂದು ಮೇಲಿನವರು ಹೇಳಿದ್ದಷ್ಟನ್ನೇ ಮಾಡುವುದು ಒಳ್ಳೆಯದು. ನಿಮ್ಮ ಯೋಚನೆಯನ್ನೂ ಸೇರಿಸುವುದರಿಂದ ವ್ಯತ್ಯಾಸವಾಗಿ ನಿಮ್ಮ ಮೇಲೆ ಅಪವಾದವು ಬರಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.

ಕುಂಭ ರಾಶಿ: ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ದೀರ್ಘಕಾಲದ ಸ್ನೇಹವು ಇಂದು ಮಾತಿನಿಂದ ಒಡೆದುಹೋಗುವುದು. ಅದಕ್ಕಾಗಿ ನೀವು ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೋಗುವುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟವಾದೀತು. ವಿದೇಶದಲ್ಲಿ ಇರುವವರಿಗೆ ಉನ್ಮತ್ತತೆ ಲಕ್ಷಣ ಕಾಣಿಸಬಹುದು. ಆರೋಗ್ಯದ ಸ್ಥಿತಿಯು ಯಥಾಪ್ರಕಾರವಾಗಿ ಬಲಿಷ್ಠವಾಗಿಯೇ ಇರುವುದು. ಮೇಲಧಿಕಾರಿಗಳನ್ನು ತೃಪ್ತಿಪಡಿಸುವಿರಿ.

ಮೀನ ರಾಶಿ: ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ಇರುವ ಸಂಪತ್ತನ್ನು ಉಳಿಸಿಕೊಳ್ಳಲು ಯೋಜನೆಯನ್ನು ರೂಪಿಸಿ. ಅನಿರೀಕ್ಷಿತ ಹಣದ ಕಲ್ಪನೆಯನ್ನು ನೀವು ಬಿಡುವುದು ಉತ್ತಮ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಕಲಹವಾಗಬಹುದು. ನಿಮ್ಮ ವಿವೇಚನಾ ಶಕ್ತಿಯಿಂದ ಅದನ್ನು ಸರಿಯಾಗಿ ತೀರ್ಮಾನಿಸಿ. ಗೊಂದಲವನ್ನು ಇಟ್ಟುಕೊಂಡು ಮುಂದುವರಿಯುವುದು ಬೇಡ.

ಲೋಹಿತ್ ಹೆಬ್ಬಾರ್ – 8762924271 (what’s app only)

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ