ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಂದ ಕ್ರಮಬದ್ಧವಾದ ಹೂಡಿಕೆಗೆ ಹಣ ಸಂದಾಯ…!!
ನವೆಂಬರ್ 03, 2026 ರ ನಿಮ್ಮ ನಿತ್ಯ ಭವಿಷ್ಯ ಇಲ್ಲಿದೆ. ಮಂಗಳವಾರದಂದು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ದಿನಭವಿಷ್ಯ, ಹಣಕಾಸು, ಆರೋಗ್ಯ ಮತ್ತು ಸಂಬಂಧಗಳ ಕುರಿತು ಮಾಹಿತಿ ಪಡೆಯಿರಿ. ಕೆಲವು ರಾಶಿಗಳಿಗೆ ಇಂದು ಹೂಡಿಕೆಗೆ ಹಣ ಸಂದಾಯವಾಗುವ ಯೋಗವಿದೆ. ನಿಮ್ಮ ಅದೃಷ್ಟದ ಬಣ್ಣ, ಸಂಖ್ಯೆ ಹಾಗೂ ರಾಹುಕಾಲದ ವಿವರಗಳೊಂದಿಗೆ ಇಂದಿನ ಶುಭಾಶುಭಗಳನ್ನು ತಿಳಿಯಿರಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಮಂಗಳವಾರದಂದು ಸತ್ಯವಾದ ಮಾತು, ಮಿತ್ರನಿಗೆ ಸಹಾಯ, ದಿನಸಿ ವ್ಯಾಪಾರ, ಧಾರ್ಮಿಕ ಆಚರಣೆ, ಮೂರ್ಖತನ, ಬಂಧುವಿನಿಂದ ಬಂಧನ, ಹಣಕಾಸಿನ ಚಿಂತೆ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮಘಾ, ಯೋಗ : ಶುಭ, ಕರಣ : ತೈತಿಲ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:57 – 16:24 ಯಮಗಂಡ ಕಾಲ 09:09 – 10:36, ಗುಳಿಕ ಕಾಲ 12:03 – 13:30
ಮೇಷ ರಾಶಿ : ಒಮ್ಮನಸ್ಸಿನಿಂದ ಎಲ್ಲರ ಜೊತೆ ಇದ್ದರೆ ಇಂದು ಕಾರ್ಯ ಅಸಾಧ್ಯ. ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ಕೊಡುವಿರಿ. ಆದರೂ ಕೆಲಸವು ಸಾಧ್ಯವಾಗದು. ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿ ಮಿತ್ರನಿಗೆ ನಿಮ್ಮ ಸಹಾಯವು ಸಿಗಲಿದೆ. ಹೊಸತನ್ನು ವಿಚಾರಗಳತ್ತ ನಿಮ್ಮ ಬುದ್ಧಿಯು ಓಡುವುದು. ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳುವಿರಿ. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಇರಬೇಕಾದೀತು.
ವೃಷಭ ರಾಶಿ : ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಕೃಷಿಯಿಂದ ಲಾಭ ಗಳಿಸಲು ನೀವು ಸಲಹೆಯನ್ನು ಪಡೆಯಿರಿ. ಓದಿನ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲವಿರಬಹುದು. ನಿಮ್ಮ ಬೆಂಬಲವನ್ನು ಹಿಂಪಡೆಯಬಹುದು. ಪುಣ್ಯ ಸ್ಥಳದ ದರ್ಶನವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗುವಂತೆ ನೋಡಿಕೊಳ್ಳಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಮಿಥುನ ರಾಶಿ : ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಸಾಲದಿಂದ ಮುಕ್ತಿ ಒಡೆದು ಮನಸ್ಸು ನಿರಾಳವಾಗುವುದು. ನಿಮ್ಮ ಯಶಸ್ಸಿಗೆ ಕಲ್ಲು ಹಾಕುವವರು ಗೊತ್ತಾಗಲಿದ್ದರೆ. ಹೊಸ ಉದ್ಯೋಗತ್ತ ನಿಮ್ಮ ಮನಸ್ಸು ಇರಲಿದೆ. ಮಕ್ಕಳಿಗೆ ಬೇಕಾದುದನ್ನು ನೀವು ಕೊಡಿಸುವಿರಿ. ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ ಮಾತಿರಲಿ. ನಿಮ್ಮ ಯಾರದರೂ ದೂರು ಸಲ್ಲಿಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು.
ಕರ್ಕಾಟಕ ರಾಶಿ : ಬರಬೇಕಾದ ಹಣವು ನಿಮಗೆ ಸಿಗುಬುದು ಕಷ್ಟವಾಗುವುದು. ಧಾರ್ಮಿಕ ಸಂಭ್ರಮದಲ್ಲಿ ನೀವು ಇರುವಿರಿ. ಯಾರದೋ ಮಾತಿನಿಂದ ನೀವು ಕ್ಲೇಶಕ್ಕೆ ಒಳಗಾಗುವಿರಿ. ಆಪ್ತರನ್ನು ಮನೆಗೆ ಕರೆದು ಸತ್ಕರಿಸಲಿದ್ದೀರಿ. ಎಲ್ಲ ಸಂದರ್ಭದಲ್ಲಿಯೂ ದುಃಖಿಸಬೇಕಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲ ಮಾಡಬಹುದು. ಮೊದಲೇ ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮಂದೆ ಹೋಗಲಿದೆ.
ಸಿಂಹ ರಾಶಿ : ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ. ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಪಾಲುದಾರಿಕೆಯಲ್ಲಿ ಸಂಶಯ ಕಾಣಿಸುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು. ಸ್ವಂತ ವಾಹನವನ್ನು ಖರೀದಿ ಮಾಡಬೇಕಾಗುವುದು. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ.
ಕನ್ಯಾ ರಾಶಿ : ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಸಂಗಾತಿಯ ಸಂಪತ್ತನ್ನು ಇಂದು ಖಾಲಿಮಾಡಲಿದ್ದೀರಿ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಇರಲಿದೆ. ಸಂಬಂಧಗಳಲ್ಲಿ ಅಭದ್ರತೆಯು ಕಾಡುವುದು. ನಿಮ್ಮ ಉದ್ಯೋಗದ ಬಗ್ಗೆ ಅಸೂಯೆ ಬರಬಹುದು. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳುವುದು ಬೇಡ. ನಿಮ್ಮ ಎಲ್ಲ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.
ತುಲಾ ರಾಶಿ : ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವುದು. ಸ್ಪರ್ಧೆಯಲ್ಲಿ ಜಯಗಳಿಸುವ ಬದಲು ಸೋಲಾಗಬಹುದು ಇದರಿಂದ. ತಪ್ಪಾಗಿ ಆಡಿದ ಮಾತಿನಿಂದ ಸಮಸ್ಯೆಯನ್ನು ಎದುರಿಸಬೇಕಾಗುವುದು. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ ಅನುಮಾನವನ್ನು ದೂರಮಾಡುಬುದು. ನಿಮ್ಮ ಶುದ್ಧತೆಯನ್ನು ನೀವು ಅರಿತರೆ ಸಾಕು. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ.
ವೃಶ್ಚಿಕ ರಾಶಿ : ಅಹಂಕಾರದಿಂದ ನಿಮಗೆ ಮಿತ್ರರು ದೂರವಾಗಬಹುದು. ಸುಮ್ಮನೇ ಇದ್ದು ಹತ್ತಾರು ಯೋಚನೆಗಳು ಬರಲಿದೆ. ರಾಜಭೀತಿ ಕಾಡುವುದು. ಬಂಧುಗಳಿಂದ ಉಡುಗೊರೆ ಸಿಗಲಿದೆ. ಮಾತಿನ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಸಭೆ ಸಮಾರಂಭಗಳಿಗೆ ಹೋಗುವಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ. ವ್ಯವಹಾರದಲ್ಲಿ ನಿಮ್ಮ ಮಾನಸಿಕ ಆನುಕೂಲ್ಯವೂ ಮುಖ್ಯವಾಗುವುದು.
ಧನು ರಾಶಿ : ಹಣಕಾಸಿನ ವಿಚಾರದಲ್ಲಿ ನಿಮಗೆ ಮಿತ್ರರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವ ಇರಿ. ಸ್ತ್ರೀಯರಿಗೆ ಸಂತೋಷದ ದಿನವಾಗುವುದು. ಒಂದು ಕಾರ್ಯದ ಮುಕ್ತಾಯದಿಂದ ಇನ್ನೊಂದರ ಆಗಮನವಾಗಲಿದೆ. ನೆರಮನೆಯರ ಜೊತೆ ಕಲಹವಾಗಲಿದೆ. ನಿಮ್ಮ ಮಾತುಗಳು ಸಂತೋಷವನ್ನು ಕೊಡದೇ ಇರಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ.
ಮಕರ ರಾಶಿ : ಹಳೆಯ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವು ಸಿಗುವುದು. ಆಕಸ್ಮಿಕ ಧನಲಾಭದಿಂದ ನಿಮಗೆ ಸಂತೋಷವಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವ ಕಲೆ ಗೊತ್ತಿರಲಿ. ಅನ್ಯ ಆಲೋಚನೆಯಿಂದ ನಿದ್ರೆಗೆ ತೊಂದರೆ ಆಗಬಹುದು. ಧಾರ್ಮಿಕವಾದ ಆಚರಣೆಗಳಲ್ಲಿ ತೊಡಗುವಿರಿ. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ.
ಕುಂಭ ರಾಶಿ : ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ನಿಮ್ಮ ಸಲಹೆಯನ್ನು ಪಡೆಯದೇ ಇರುವುದಕ್ಕೆ ನಿಮಗೆ ಬೇಸರವಾಗುವುದು. ನೌಕರರು ನಿಮ್ಮ ಮೇಲೆ ಮುನಿಸಿಕೊಂಡಾರು. ವ್ಯಾಪಾರದ ಆಧಿಕ್ಯಕ್ಕೆ ಇಂದು ವ್ಯವಸ್ಥೆ ಮಾಡಿಕೊಳ್ಳುವಿರಿ. ನಿಮ್ಮ ಮನೆ ಕೆಲಸವು ಇಂದು ಅರ್ಧಕ್ಕೆ ನಿಲ್ಲಬಹುದು. ಸಾಲವೇ ನಿಮಗೆ ದೊಡ್ಡ ಶತ್ರುವಾಗಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ನವೆಂಬರ್ 1ರಿಂದ 7ರ ವಾರದಲ್ಲಿ ಒಲಿಯಲಿದೆಯಾ ಪ್ರೇಮ ಯೋಗ?
ಮೀನ ರಾಶಿ : ಪ್ರಗತಿಯನ್ನು ನಿಮ್ಮ ಒತ್ತಡಗಳನ್ನು ಎಲ್ಲವನ್ನು ಮರೆತು ನಿಶ್ಚಿಂತೆಯಿಂದ ಇಂದಿನ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ತೊಂದರೆಯಾಗಬಹುದು. ಆಧಿಕಾರಿಗಳಿಂದ ನಿರೀಕ್ಷಿತ ತೊಂದರೆ ಮೊದಲೇ ಗೊತ್ತಾಗಿ, ತಪ್ಪಿಸಿಕೊಳ್ಳಲು ಪ್ರಯತ್ನ. ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಲು ಆಲೋಚಿಸುವಿರಿ. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ.
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




