
ನೀವು ಪರಿಚಿತರನ್ನು ಅತಿಯಾಗಿ ನಂಬುವುದೂ ಮಾರಕವಾಗಬಹುದು. ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಮೇಲಧಿಕಾರಿಯಿಂದ ಟೀಕೆಗೆ ಒಳಗಾಗಬಹುದು. ಪ್ರೇಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿ. ಸಣ್ಣಪುಟ್ಟ ಸಮಸ್ಯೆಗಳತ್ತ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಯಾರಿಗಾದರೂ ಬಾಗುವುದು ಶರಣಾಗತಿಯಲ್ಲ. ನಿಮ್ಮ ಮೇಲೆ ಬಲವಾದ ಒತ್ತಡ ಬಂದಾಗ ಮಾತ್ರ ಒಳಗಿರುವುದನ್ನು ಹೊರಹಾಕುವಿರಿ.
ಹಣದ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಬಳಸಿ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರು ಗಮನಾರ್ಹ ಯಶಸ್ಸು ಕಾಣುವರು. ಪ್ರೀತಿಯ ವಿಚಾರದಲ್ಲಿ ಪ್ರಾಮಾಣಿಕವಾಗಿರುವುದು ಮುಖ್ಯ. ಬೀಳಿಸಿದವರ ಮುಂದೆಯೇ ಎದ್ದು ನಿಲ್ಲುವುದು ಸ್ವಾಭಿಮಾನ. ಇಂದು ಅನುಪಯುಕ್ತ ವಿಷಯಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ. ಕುಟುಂಬದಲ್ಲಿ ಕಲಹದ ಕಾರಣ ಕೆಲಸ ಕಾರ್ಯವು ವಿಳಂಬವಾಗುವುದು. ತಾಳ್ಮೆಯಿಂದ ಎಲ್ಲವನ್ನೂ ಮಾಡುವ ಅನಿವಾರ್ಯತೆಯೂ ಇರುವುದು.
ಸರ್ಕಾರದಿಂದ ಆಗುವ ಕಾರ್ಯವು ಅಪೂರ್ಣವಾಗಿಯೇ ಇರುವುದು. ಕಳೆದು ಹೋದ ಬಗ್ಗೆ ಹೆಚ್ಚು ಯೋಚಿಸಿ ಮಾತನಾಡಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನೋವಾಗಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ಷರತ್ತುಗಳಿಲ್ಲದೇ ನೋಡಿಕೊಳ್ಳಿ. ಉದ್ಯೋಗಕ್ಕಾಗಿ ಅಲೆದಾಡುವ ಜನರಿಗೆ ಇಂದು ಉದ್ಯೋಗ ದೊರೆಯಲಿದೆ. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಅಲಂಕಾರದ ಬಗ್ಗೆ ಹೆಚ್ಚಿನ ಗಮನವಿರಲಿದೆ.
ವ್ಯಾಪಾರದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕಾಯುವಿರಿ. ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದು ಅಪಮಾನವೆನಿಸಬಹುದು. ನಿಮ್ಮ ಒಳ್ಳೆಯ ಮತ್ತು ಕೆಟ್ಟ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಇಂದು ನಿಮ್ಮ ಸಂಬಂಧವು ಪೋಷಕರ ಬೆಂಬಲವನ್ನು ಪಡೆಯಬಹುದು. ನೀವು ರಾಜಕೀಯದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯಬೇಕಾಗಬಹುದು.
ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಕೆಲವು ಕೆಲಸಗಳಲ್ಲಿ ನೀವು ಅಂದಿಕೊಂಡಷ್ಟು ವೇಗದಲ್ಲಿ ಮುಗಿಯದೇ ಅಡಚಣೆ ಉಂಟಾಗುತ್ತದೆ. ಹಳೆಯ ಪ್ರೇಮಿಗಳ ವಿವಾಹ ನಿಶ್ಚಯವಾಗಬಹುದು. ಹೊಸ ಸಂಬಂಧಗಳು ಪೋಷಕರಿಂದ ಬೆಂಬಲವನ್ನು ಪಡೆಯುತ್ತದೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೆಲವು ಬೆಲೆಬಾಳುವ ವಸ್ತು ಕಳ್ಳತನವಾಗಬಹುದು. ಪ್ರಯಾಣಿಸುವಾಗ ಯಾವುದೇ ಅಪರಿಚಿತ ವ್ಯಕ್ತಿಯಿಂದ ದೂರವಿರಿ.
ಸಿಕ್ಕ ಉದ್ಯೋಗವನ್ನು ಸರಿಯಾಗಿ ಮಾಡುವುದನ್ನು ಕಲಿಯಬೇಕಿದೆ. ನಿಮ್ಮ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಜೊತೆ ನಿಮ್ಮ ಸಂಪರ್ಕಗಳು ಹೆಚ್ಚಾಗುತ್ತವೆ. ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ. ಕಣ್ಣೆದುರಿಗಾಗುವ ದುರ್ಘಟನೆಯನ್ನು ತಡೆಯಲು ಶಕ್ತರಾಗುವುದಿಲ್ಲ. ವ್ಯಾಪಾರದಲ್ಲಿ ಮಾಡಿದ ಹೊಸ ಬದಲಾವಣೆಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ.
ನಿರೋದ್ಯೋಗದ ಕೊರಗಿಗೆ ಬಂಧುಗಳ ಕಡೆಯಿಂದ ಉದ್ಯೋಗ ದೊರೆಯಲಿದೆ. ಉನ್ನತ ಅಧಿಕಾರಿಗಳ ಜೊತೆಗೆ ನಿಕಟ ಸಂಪರ್ಕ ಇರುವುದು. ತುರ್ತು ಪ್ರಯಾಣವನ್ನು ಮಾಡಲಿದ್ದು ಎಲ್ಲವನ್ನೂ ಮರೆತುಬಿಡುವಿರಿ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗದು. ನೀವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಬಹುದು. ಅನಿರೀಕ್ಷಿತ ವಾರ್ತೆಗಳಿಂದ ಉದ್ವೇಗವಾಗುವುದು ಸಹಜ.
ಪ್ರಮುಖ ಕೆಲಸಗಳಿಗೆ ಹಣದ ಅವಶ್ಯಕತೆ ಕಾಣಿಸುತ್ತದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ನಿಮ್ಮ ರಾಜಕೀಯದ ಮಹತ್ವಾಕಾಂಕ್ಷೆಗಳು ಈಡೇರಲಿವೆ. ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆಯುವಿರಿ. ಸಹಜವಾಗಿ ಮಾತನಾಡಿದರೂ ಅದು ನಿಮಗೆ ವಿಪರೀತಾರ್ಥವನ್ನು ಕೊಡುವುದು. ರಾಜಕೀಯದಲ್ಲಿ ನಿಮ್ಮ ವಿರೋಧಿಗಳನ್ನು ಸೋಲಿಸುವ ಮೂಲಕ ನೀವು ಪ್ರಮುಖ ಸ್ಥಾನ ಅಥವಾ ಜವಾಬ್ದಾರಿಯನ್ನು ಸಿಗಬಹುದು.
ಕೆಲಸದ ಪ್ರದೇಶದಲ್ಲಿ ವಿಪರೀತ ಕಾರ್ಯದ ಒತ್ತಡವಿರುವುದು. ಯಾವುದೇ ಪ್ರಮುಖ ಕಾರ್ಯದಲ್ಲಿ ಅಡಚಣೆ ಆಗುವ ಸಾಧ್ಯತೆ ಇದೆ. ಕೆಲವರಿಗೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಮಾತಿನ ಪ್ರಹಾರವು ನಿಮಗೆ ತಡೆದುಕೊಳ್ಳಲಾಗದು. ಯಾರದೋ ತಂತ್ರಕ್ಕೆ ನೀವು ಬಲಿಯಾಗುವಿರಿ. ನಿಮಗೆ ಯಾವುದಾದರೂ ಕೆಟ್ಟದ್ದು ಎಂದು ಎನಿಸಿದರೆ ಅದರಿಂದ ದೂರವಿರಬೇಕು. ತಪ್ಪು ತಿಳುವಳಿಕೆಯನ್ನು ಪರಿಹರಿಸಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ.
ವಿದೇಶದಿಂದ ಬಂದ ಬಂಧುಗಳಿಂದ ಉಡುಗೊರೆ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆಪ್ತತೆ ಹೆಚ್ಚಾಗುತ್ತದೆ. ಕೆಲವರು ತಮ್ಮ ಕಠಿಣ ಪರಿಶ್ರಮಕ್ಕಾಗಿ ಪ್ರಶಂಸೆಯನ್ನು ಪಡೆಯಬಹುದು. ನಿಮ್ಮ ಸಂಬಂಧವನ್ನು ಬಲಪಡಿಸಲು ಇಂದು ಕ್ರಮಗಳನ್ನು ತೆಗೆದುಕೊಳ್ಳಿ. ಉದ್ಯಮದಲ್ಲಿ ಸರ್ಕಾರದ ಸಹಾಯಕ್ಕೆ ಪ್ರಯತ್ನಿಸುವಿರಿ. ಕೆಲವು ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು. ರಾಜಕೀಯದ ನಾಯಕರಿಗೆ ಸಾರ್ವಜನಿಕ ಸಹಕಾರ ಮತ್ತು ಬೆಂಬಲ ಸಿಗುವುದು.
ನಿಮ್ಮ ಸ್ಥಾನ ಸಮಯ ಇವುಗಳನ್ನು ಯೋಚಿಸಿ ನಿಮ್ಮ ಕಾರ್ಯವನ್ನು ಮುಂದುವರಿಸಿ. ಮಧ್ಯವರ್ತಿಗಳ ಜೊತೆ ಎಚ್ಚರಿಕೆಯಿಂದ ವ್ಯಾಪಾರ ಮಾಡಿ. ನೀವು ಇಂದು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯಬಹುದು. ಪ್ರಯಾಣ ಮಾಡುವವರಿಗೆ ಇಂದು ಉತ್ತಮ ದಿನ. ವೃತ್ತಿಯಲ್ಲಿ ನಿಮಗೆ ಗೊಂದಲ ಮತ್ತು ಆತಂಕದ ಸ್ಥಿತಿ ಬರುತ್ತದೆ. ಮಹಿಳೆಯರ ಸಮಯ ಹಾಸ್ಯದಲ್ಲಿ ಕಳೆಯಲಿದೆ. ಸ್ಪರ್ಧೆಯಲ್ಲಿ ಯಶಸ್ಸಿನ ಪೂರ್ಣ ಭರವಸೆ ಇದೆ. ಆದರೆ ಸಣ್ಣ ದೋಷವನ್ನೂ ಗಂಭೀರವಾಗಿ ಪಡೆದರೆ ಮಾತ್ರ ಸಾಧ್ಯವಾಗುವುದು.
ಇಂದು ಕೆಲಸದ ಸ್ಥಳದಲ್ಲಿ ಅನಗತ್ಯ ಓಡಾಟವನ್ನು ಮಾಡಬೇಕಾದೀತು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಯಾವುದನ್ನೂ ನಿಮಗೆ ಗೊತ್ತಿಲ್ಲವೆಂದು ತೋರಿಸಿಕೊಳ್ಳಲಾರಿರಿ. ನಿಮ್ಮ ಸುಪರ್ದಿಯಲ್ಲಿರುವ ಬೆಲೆಬಾಳುವ ವಸ್ತು ಕಳ್ಳತನವಾಗುವ ಭಯವಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ತೊಡಗುವ ಆಸಕ್ತಿ ತೋರುವಿರಿ. ಪ್ರಯಾಣದಲ್ಲಿ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸಾಧ್ಯ, ಕರಣ : ನಾಗವಾನ್, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 22 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:16, ಯಮಗಂಡ ಕಾಲ 15:19 – 16:51, ಗುಳಿಕ ಕಾಲ 07:41 – 09:13
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 am, Fri, 11 September 26