AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಸ್ವಾರ್ಥದಿಂದ ಮಿತ್ರರು ನಷ್ಟವಾಗುವರು..

ಸೆಪ್ಟೆಂಬರ್ 9, 2026 ರ ನಿತ್ಯ ಭವಿಷ್ಯವು 12 ರಾಶಿಗಳಿಗೂ ದಿನದ ಪ್ರಮುಖ ಘಟನೆಗಳು, ಶುಭ-ಅಶುಭ ಕಾಲಗಳು ಮತ್ತು ಗ್ರಹಗಳ ಪ್ರಭಾವವನ್ನು ವಿವರಿಸುತ್ತದೆ. ಮೇಷದಿಂದ ಮೀನದವರೆಗಿನ ರಾಶಿಗಳಿಗೆ ಹಣಕಾಸು, ಆರೋಗ್ಯ, ಸಂಬಂಧಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಯಾವ ಫಲಿತಾಂಶಗಳಿವೆ ಎಂಬುದನ್ನು ತಿಳಿಯಿರಿ. ಈ ಭವಿಷ್ಯವು ದಿನದ ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ನಿಮಗೆ ಮಾರ್ಗದರ್ಶನ ನೀಡಲಿದೆ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಸ್ವಾರ್ಥದಿಂದ ಮಿತ್ರರು ನಷ್ಟವಾಗುವರು..
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Sep 09, 2026 | 3:46 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಬುಧವಾರದಂದು ಫಲಿತಾಂಶದಿಂದ ತಳಮಳ, ಮಾತಿನ ಬಂಧನ, ಅನವಶ್ಯಕ ಖರೀದಿ, ಏಕಾಂಗಿಯ ಅನುಭವ, ಧಾರ್ಮಿಕದಲ್ಲಿ ಭಾಗಿ, ಶತ್ರುಗಳಿಂದ ಜಯ, ದಾಖಲೆಯ ಸಂಗ್ರಹ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಪರಿಘ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 24 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:17 – 13:59, ಯಮಗಂಡ ಕಾಲ 07:42- 09:13, ಗುಳಿಕ ಕಾಲ 10:45 – 12:17

ಮೇಷ ರಾಶಿ : ಆತುರಾತುರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ಅಧ್ಯಾತ್ಮದ ಬಲವೇ ನಿಮ್ಮ ಸಂತೋಷಕ್ಕೆ ಕಾರಣ. ಸಂಸ್ಥೆಯ ಪಾಲುದಾರಿಕೆಗಾಗಿ ಇಂದು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು.

ವೃಷಭ ರಾಶಿ : ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ನಿಮ್ಮ ಚರಾಸ್ತಿಗಳೇ ನಿಮಗೆ ಆಧಾರವಾಗಬಹುದು. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ : ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಆಲಂಕಾರಿಕ ದ್ರವ್ಯಗಳಿಂದ ನಿಮಗೆ ನಷ್ಟ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಪರೋಪಕರಾದಿಂದ ಸಂತೋಷವಂತೂ ಸಿಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.

ಕರ್ಕಾಟಕ ರಾಶಿ : ಪ್ರಭಾವಿ ವ್ಯಕ್ತಿಗಳ ಒಡನಾಟ ಅನಿರೀಕ್ಷಿತವಾಗಿ ಲಭ್ಯ. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ. ನಿಮಗೆ ಬರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ.

ಸಿಂಹ ರಾಶಿ : ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ನಿಮ್ಮ ಮೇಲಿನ ನಂಬಿಕೆಯು ನಷ್ಟವಾಗಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ಕಾರ್ಮಿಕರಿಂದ ವೇತನ ಅಧಿಕ ಮಾಡಲು ಒತ್ತಡವು ಬರಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನೇ ಸಂದೇಹಪಡುವಂತೆ ಮಾಡುವುದು. ಅಪರಿಚಿತ ಸಂದೇಶಕ್ಕೆ ನೀವು ಗಾಬರಿಯಾಗುವಿರಿ. ಮನೋರಂಜನೆ ಕಡೆ ಹೆಚ್ಚು‌ಗಮನವು ಇರಬಹುದು. ಯಾರ‌ನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ.

ಕನ್ಯಾ ರಾಶಿ : ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಸಾಲಗಾರ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳಿ. ಪರಿಚಿರಿಂದ ಒಂದು ಸಂಸ್ಥೆಯನ್ನು ಸೇರಿ ಕೆಲಸ ಮಾಡುವಿರಿ. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಸಾಮರಸ್ಯಕ್ಕೆ ಯಾವುದೋ ಒಂದು ಕಾರ್ಯವನ್ನು ಮಾಡಿಕೊಂಡು ನಿರುದ್ಯೋಗದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಿಕೊಳ್ಳುವಿರಿ.

ತುಲಾ ರಾಶಿ : ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ಇಷ್ಟ ವಸ್ತುಗಳನ್ನು ಖರೀದಿಸುವ ಸುದಿನ ಇಂದು. ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗುವಿರಿ. ಸಹನೆಯ ಮಿತಿಯು ಬೀರಬಹುದು. ಹದತಪ್ಪಿದ ಮಾತು ನಿಮಗೆ ಕಷ್ಟಕೊಡುವುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾದೀತು. ಅಗೌರವ ಸಿಗುವ ಕಡೆ ನೀವು ಹೋಗಲಾರಿರಿ. ಸಾಲ ತೀರಿಸುವ ನಿಮ್ಮ ಯೋಜನೆ ಪೂರ್ಣ ಸಫಲವಾಗದು. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ಬಾಕಿ ಉಳಿದ ಕೆಲಸಗಳ ಕಡೆ ಇಂದು ಗಮನಕೊಟ್ಟು ಮುಗಿಸಬೇಕಾದ ಒತ್ತಡ ಇರುವುದು.

ವೃಶ್ಚಿಕ ರಾಶಿ : ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೇಳುವ ಸಂದರ್ಭವೂ ಬರಬಹುದು. ರಕ್ತದ ಒತ್ತಡದಲ್ಲಿ ವ್ಯತ್ಯಾಸವಾಗಿ ವೈದ್ಯರನ್ನು ಕಾಣಬೇಕಾಗುವುದು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು. ನಿಯಮವನ್ನು ಮೀರಿ ವರ್ತಿಸುವುದು ಬೇಡ. ನಿಮ್ಮ ಸಂಗಾತಿಯ ಬೆಂಬಲದಿಂದ ಖುಷಿ.

ಧನು ರಾಶಿ : ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು.‌ ಮನೆಯವರ‌ ಮೇಲಿನ ಕೋಪಕ್ಕೆ ಏನೂ ಮಾಡಲಾಗದ ಸ್ಥಿತಿ. ಹಲ್ಲುಕಿತ್ತ ಹಾವಿನಂತಹ ಸ್ಥಿತಿ ಬರುವುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ.

ಮಕರ ರಾಶಿ : ವಿಫಲತೆಯು ನಿಮಗೆ ಛಲವನ್ನು ತರಬಹುದು. ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ವೇಗವನ್ನು ಹೆಚ್ಚಿಸುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ನಿಮ್ಮ ಇಂದಿನ ಅಸಹಾಯಕ‌ ಸ್ಥಿತಿಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದು ಕಷ್ಟ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ.

ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!

ಕುಂಭ ರಾಶಿ : ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಭೂಮಿಯ ವ್ಯವಹಾರವು ಮಕ್ಕಳ ಸಹಾಯದಿಂದ ಕೈಗೂಡುವುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ.

ಮೀನ ರಾಶಿ : ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ಯಾರ ಪ್ರಶಂಸೆಯನ್ನು ನೀವೂ ನಂಬಲಾರಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು.‌ ಬರಬೇಕಾದ ಹಣವು ವಿಳಂಬವಾಗಬಹುದು.‌ ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು.

– ಲೋಹೀತ್ ಹೆಬ್ಬಾರ್ 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​

Published On - 3:45 am, Wed, 9 September 26

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್