ಲಕ್ಷ್ಮಿ ನಾರಾಯಣ ರಾಜಯೋಗ: ಈ 3 ರಾಶಿಗಳಿಗೆ ಲಾಟರಿ, ಸಾಲಬಾಧೆ ತೀರಿ ಹರಿದು ಬರಲಿದೆ ಅಪಾರ ಧನಸಂಪತ್ತು!
ಅಕ್ಟೋಬರ್‌ನಲ್ಲಿ ಶುಕ್ರ-ಬುಧ ಗ್ರಹಗಳ ಸಂಯೋಗದಿಂದ ಪವಿತ್ರ 'ಲಕ್ಷ್ಮಿ ನಾರಾಯಣ ರಾಜಯೋಗ' ರೂಪುಗೊಳ್ಳಲಿದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಿದರೂ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ಅನಿರೀಕ್ಷಿತ ಅದೃಷ್ಟ ಮತ್ತು ಅಪಾರ ಧನಲಾಭ ತರಲಿದೆ. ಈ ಯೋಗದಿಂದ ಉದ್ಯೋಗ, ವ್ಯಾಪಾರ, ಕುಟುಂಬದಲ್ಲಿ ಸುಖ-ಶಾಂತಿ ಹಾಗೂ ಆರ್ಥಿಕ ಭದ್ರತೆ ಲಭಿಸಿ, ಸಾಲಬಾಧೆ ನಿವಾರಣೆಯಾಗಲಿದೆ. ಇದು ಸುವರ್ಣಾವಕಾಶ.

ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಪವಿತ್ರ ಹಾಗೂ ಫಲಪ್ರದವಾದ ‘ಲಕ್ಷ್ಮಿ ನಾರಾಯಣ ರಾಜಯೋಗ’ ರೂಪುಗೊಳ್ಳಲಿದೆ. ಅಕ್ಟೋಬರ್ 6 ರಂದು ಶುಕ್ರ ಗ್ರಹ ಹಾಗೂ ಅಕ್ಟೋಬರ್ 21 ರಂದು ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಲಿದ್ದು, ಈ ಎರಡೂ ಶುಭ ಗ್ರಹಗಳ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿಯಾಗಲಿದೆ. ಈ ಯೋಗದ ಪ್ರಭಾವವು ಎಲ್ಲಾ 12 ರಾಶಿಗಳ ಮೇಲಿದ್ದರೂ, ವಿಶೇಷವಾಗಿ ಮೂರು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಅನಿರೀಕ್ಷಿತ ಧನಲಾಭ ತರಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಈ ರಾಜಯೋಗವು ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಕೈಹಿಡಿದ ಪ್ರತಿಯೊಂದು ಕೆಲಸದಲ್ಲೂ ಅಭೂತಪೂರ್ವ ಯಶಸ್ಸು ಸಿಗಲಿದೆ. ಅನಿರೀಕ್ಷಿತವಾಗಿ ಹಠಾತ್ ಆರ್ಥಿಕ ಲಾಭವಾಗುವ ಯೋಗವಿದೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ಭಾರಿ ಪ್ರಮಾಣದ ಲಾಭ ಸಿಗಲಿದ್ದು, ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಸುದೀರ್ಘ ಪ್ರಯಾಣ ಹಾಗೂ ವಿದೇಶಿ ಪ್ರಯಾಣದ ಯೋಗವಿದ್ದು, ಅದು ಅತ್ಯಂತ ಲಾಭದಾಯಕವಾಗಿರಲಿದೆ.
ಮಕರ ರಾಶಿ:
ಮಕರ ರಾಶಿಯವರ ಪಾಲಿಗೆ ಇದು ಸುವರ್ಣ ಕಾಲವೆಂದೇ ಹೇಳಬಹುದು. ಇವರ ಆದಾಯ ದ್ವಿಗುಣಗೊಳ್ಳಲಿದ್ದು, ಸಮಾಜದಲ್ಲಿ ಗೌರವ ಹಾಗೂ ವಿಶೇಷ ಮನ್ನಣೆ ಸಿಗಲಿದೆ. ಪೂರ್ಣಗೊಳ್ಳದೆ ಉಳಿದಿದ್ದ ಯೋಜನೆಗಳು ಅತ್ಯಂತ ವೇಗವಾಗಿ ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಂತೋಷದ ವಾತಾವರಣ ನೆಲೆಸಲಿದ್ದು, ಎಲ್ಲಾ ರೀತಿಯಲ್ಲೂ ಈ ಸಮಯವು ಅತ್ಯಂತ ಅನುಕೂಲಕರವಾಗಿದೆ.
ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಕುಂಭ ರಾಶಿ:
ಕುಂಭ ರಾಶಿಯವರಿಗೆ ಆರ್ಥಿಕ ಸ್ಥಿತಿ ಅತ್ಯಂತ ಭದ್ರವಾಗಲಿದೆ. ಸುದೀರ್ಘ ಕಾಲದಿಂದ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದವರಿಗೆ ಅಂತಿಮವಾಗಿ ಮುಕ್ತಿ ಸಿಗಲಿದ್ದು, ಸಾಲಬಾಧೆ ತೀರಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಂಡು ಹಣದ ಹರಿವು ಹೆಚ್ಚಾಗಲಿದೆ. ಈ ರಾಶಿಯವರಿಗೆ ಎಲ್ಲಾ ರಂಗಗಳಲ್ಲೂ ಸಾಲು ಸಾಲು ಅದ್ಭುತ ಪ್ರಯೋಜನಗಳು ಸಿಗಲಿವೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




