Horoscope: ನಿತ್ಯಭವಿಷ್ಯ; ಒಂದೇ ವಿಚಾರಕ್ಕೆ ದಾಂಪತ್ಯದಲ್ಲಿ ಭಿನ್ನಮತವಿರುವುದು
Rashi Bhavishya: ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 23 ಮಾರ್ಚ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶನಿ, ತಿಥಿ :ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶೂಲ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:37 ರಿಂದ ಸಂಜೆ 11:08ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:36 ರಿಂದ 08:07 ರ ವರೆಗೆ.
ಮೇಷ ರಾಶಿ : ಇಂದಿನ ಲೆಕ್ಕಾಚಾರವನ್ನು ಸರಿಮಾಡಿಕೊಳ್ಳಲು ನಿಮಗೆ ಸಮಯ ಹಿಡಿಯುವುದು. ನಿಮ್ಮಲ್ಲಿರುವ ಯಾವುದಾದರೂ ವಸ್ತುವನ್ನು ಜನರು ಕೇಳಬಹುದು. ಅನವಶ್ಯಕ ಎಂದಾದರೆ ಅದನ್ನು ನೀಡಿ. ಎಲ್ಲದಕ್ಕೂ ನಿರ್ಭಾವುಕರಾಗಿ ವರ್ತಿಸುವುದು ಬೇಡ. ನಿಮ್ಮ ಮೇಲಿನ ಅರೋಪಕ್ಕೆ ಸಮಜಾಯಿಷಿ ಅಗತ್ಯವಿರುವುದು. ಪೂರ್ವಾಗ್ರಹವಿಲ್ಲದೇ ಎಲ್ಲದನ್ನೂ ಒಪ್ಪಿಕೊಳ್ಳುವುದು ಉತ್ತಮ. ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಇರಲಿ. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಹೂಡಿಕಯನ್ನು ನವೀಕರಣ ಮಾಡಿಕೊಳ್ಳುವಿರಿ.
ವೃಷಭ ರಾಶಿ : ನೀವು ಯಾರಿಗಾದರೂ ತಿಳಿಸಬೇಕಾದ ವಿಚಾರವನ್ನು ತಿಳಿಸದೇ ಸಮಾಧಾನದಿಂದ ಇರಲಾರಿರಿ. ನಿಮ್ಮ ದಿನನಿತ್ಯದ ಕಾರ್ಯಗಳಿಗೆ ಅಡ್ಡಿಗಳು ಬರಬಹುದು. ಆಲಸ್ಯದಿಂದ ನಿಮಗೆ ಯಾವುದನ್ನೂ ಸ್ವೀಕರಿಸುವ ಮಾನಸಿಕತೆಯೂ ಇರದು. ಅನಗತ್ಯ ಸಲಹೆಯನ್ನು ಕೊಡುವುದು ಅತಿಯಾದೀತು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ನಿರೀಕ್ಷಿತ ಪ್ರತಿಸ್ಪಂದವು ನಿಮ್ಮ ಮಾತಿಗೆ ಸಿಗದೇ ಇರುವುದು. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಹೊಸ ವಸ್ತುವಿನ ಖರೀದಿಯಿಂದ ಮೋಸವಾದೀತು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಹಣವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗುವುದು.
ಮಿಥುನ ರಾಶಿ :ಮಂದಹಾಸದ ಮುಖದಿಂದ ಇಂದು ಸುಂದರವಾಗಿ ಕಾಣುವಿರಿ. ಬಂಧುಗಳ ಜೊತೆಗಿನ ಒಡನಾಟವನ್ನು ನೀವು ಅತಿಯಾಗಿ ಅಪೇಕ್ಷಿಸಲಾರಿರಿ. ನಿಮ್ಮ ಚೌಕಟ್ಟನ್ನು ಬಿಟ್ಟು ಹೊರಬರುವುದು ಇಷ್ಟವಾಗದು. ಉದ್ಯೋಗದ ಸ್ಥಳವನ್ನು ಬದಲಿಸಬೇಕು ಎಂಬ ಇಚ್ಛೆ ಇದ್ದರೂ ಸರಿಯಾದ ಉದ್ಯೋಗವು ಪ್ರಾಪ್ತವಾಗದು. ಸಹೋದರರ ಬಾಂಧವ್ಯವು ಸಡಿಲಾಗುವುದು. ಅಸಮಾಧಾನವನ್ನು ಹೊರಹಾಕಲು ಸನ್ನಿವೇಶವು ಸಿಗಬಹುದು. ಇಂದಿನ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅನವಶ್ಯಕ ವಿವಾದವನ್ನು ಹುಟ್ಟುಹಾಕಿಕೊಳ್ಳುವಿರಿ. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮವರಿಗೆ ಸಮಯವನ್ನು ಕೊಡಲಾಗದು.
ಕಟಕ ರಾಶಿ : ಅಪರಿಚಿತ ಸ್ನೇಹಬಳಗವು ನಿಮಗೆ ಸಂತೋಷವನ್ನು ನೀಡುವುದು. ಮನೆಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಸರಿಯಾದ ನಿಖರತೆ ಇರಲಿ. ಹಣಕಾಸಿನ ಅಗತ್ಯತೆಯು ಎಷ್ಟಿದ್ದರೂ ಅದನ್ನು ತಾಳ್ಮೆಯಿಂದ ಸಗವೀಲರಿಸಬೇಕಾಗುವುದು. ಇಂದು ವ್ಯಾಪಾರದಲ್ಲಿ ಆಗುವ ಅಲ್ಪಲಾಭದಿಂದ ತೃಪ್ತಿಯನ್ನು ಕಾಣುವುದು ಅನಿವಾರ್ಯವಾದೀತು. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳಬಹುದು. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು.




