AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಗುದ್ದಿ ಪರಾರಿ: ಹಿರಿಯ ನಟನ ಬಂಧನ

Maniyanpilla Raju: ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕರೂ ಆಗಿ ಗುರುತಿಸಿಕೊಂಡಿರುವ ಮಣಿಯನ್‌ಪಿಳ್ಳ ರಾಜು ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಮಣಿಯನ್‌ಪಿಳ್ಳ ರಾಜು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಢಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಾಗಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದಲ್ಲಿ ನಡೆದಿದೆ.

ಕಾರು ಗುದ್ದಿ ಪರಾರಿ: ಹಿರಿಯ ನಟನ ಬಂಧನ
Maniyanpilla Raju
ಮಂಜುನಾಥ ಸಿ.
|

Updated on:Feb 06, 2026 | 11:54 AM

Share

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕರೂ (Producer) ಆಗಿ ಗುರುತಿಸಿಕೊಂಡಿರುವ ಮಣಿಯನ್‌ಪಿಳ್ಳ ರಾಜು ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಮಣಿಯನ್‌ಪಿಳ್ಳ ರಾಜು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಢಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಾಗಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದಲ್ಲಿ ನಡೆದಿದೆ.

ಫೆಬ್ರವರಿ 5ರಂದು ತಿರುವನಂತಪುರದ ವಝುತಕಾಡ್‌ನಲ್ಲಿರುವ ‘ತ್ರಿವೇಂಡ್ರಮ್ ಕ್ಲಬ್’ ಬಳಿ ರಾತ್ರಿ ಸುಮಾರು 9:30ಕ್ಕೆ ಈ ಅಪಘಾತ ಸಂಭವಿಸಿದೆ. ಮಣಿಯನ್‌ಪಿಳ್ಳ ರಾಜು ಅವರು ಚಲಾಯಿಸುತ್ತಿದ್ದ ಕಾರು (KL-01-CJ-0004), ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೋಗುತ್ತಿದ್ದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎಂಬ ಇಬ್ಬರು ಸುಮಾರು 20 ವರ್ಷದ ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕರು ರಸ್ತೆಗೆ ಬಿದ್ದಿದ್ದು, ಒಬ್ಬರಿಗೆ ಕಾಲಿನ ಮೂಳೆ ಮುರಿತ ಹಾಗೂ ಮತ್ತೊಬ್ಬರಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ.

ಅಪಘಾತವಾದ ತಕ್ಷಣ ನಟ ರಾಜು ಅವರು ಗಾಯಾಳುಗಳಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದರು. ಅಪಘಾತದ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಾಥಮಿಕವಾಗಿ ತಲೆಮರೆಸಿಕೊಂಡಿದ್ದ ರಾಜು, ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾದರು. ಪೊಲೀಸರು ಅವರನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಪಘಾತದ ಸಮಯದಲ್ಲಿ ಮಣಿಯನ್‌ಪಿಳ್ಳ ರಾಜು ಅವರು ಕಾರನ್ನು ವೇಗವಾಗಿ ಮತ್ತು ಅಜಾಗರೂಕವಾಗಿ ಓಡಿಸಿದ್ದು ಖಾತ್ರಿ ಆಗಿದೆ ಎನ್ನಲಾಗುತ್ತಿದೆ. ಪೊಲೀಸರು ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದು, ಘಟನೆಯ ಸಮಯದಲ್ಲಿ ನಟ ಮದ್ಯ ಸೇವಿಸಿದ್ದು ಖಚಿತವಾದಲ್ಲಿ ಹೆಚ್ಚುವರಿ ಸೆಕ್ಷನ್​​ಗಳ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು

ಪೊಲೀಸರ ಮುಂದೆ ಹೇಳಿಕೆ ನೀಡಿದ ರಾಜು, “ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ನಂತರ ನಾನು ಗಾಬರಿಗೊಂಡಿದ್ದೆ, ಆ ಕ್ಷಣದಲ್ಲಿ ಏನು ಮಾಡಬೇಕೆಂದು ತಿಳಿಯದೆ ಅಲ್ಲಿಂದ ಹೊರಟುಹೋದೆ” ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಾನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವುದು ಮತ್ತು ಚಿಕನ್ ಗುನ್ಯಾದಿಂದ ಬಳಲುತ್ತಿದ್ದೆ, ಅಲ್ಲದೆ ನನ್ನ ಪತ್ನಿಯೂ ಸಹ ಮನೆಯಲ್ಲಿ ಒಬ್ಬರೇ ಇದ್ದರು. ಹಾಗಾಗಿ ಆ ಸಮಯದಲ್ಲಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ‘ನಾನು ಅಲ್ಲಿಂದ ಆ ಕ್ಷಣದಲ್ಲಿ ಹೊರಟು ಹೋದೆನಾದರೂ ಬೇರೊಬ್ಬರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡಿರೆಂದು ಸೂಚಿಸಿದ್ದೆ’ ಎಂದಿದ್ದಾರೆ.

ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮೋಟಾರು ವಾಹನ ಕಾಯ್ದೆಯಡಿ ನಿರ್ಲಕ್ಷ್ಯದ ಚಾಲನೆ ಮತ್ತು ಅಪಘಾತದ ಬಗ್ಗೆ ಮಾಹಿತಿ ನೀಡದೆ ಪರಾರಿಯಾದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ನಟ ಮದ್ಯ ಸೇವಿಸಿರುವುದು ಖಾತ್ರಿ ಆದಲ್ಲಿ ಹೆಚ್ಚುವರಿ ಪ್ರಕರಣಗಳು ನಟನ ವಿರುದ್ಧ ದಾಖಲಾಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Fri, 6 February 26

Follow Us
Viral Video: ಈ ನಾಯಿ ರೊಟ್ಟಿ ತಗೊಂಡು ಹೋಗ್ತಿರೋದು ಎಲ್ಲಿಗೆ ನೋಡಿ
Viral Video: ಈ ನಾಯಿ ರೊಟ್ಟಿ ತಗೊಂಡು ಹೋಗ್ತಿರೋದು ಎಲ್ಲಿಗೆ ನೋಡಿ
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಗಾಯಾಳುವಿಗೆ ನೆರವಾದ ಹೆಚ್​​ಡಿಕೆ: ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಗಾಯಾಳುವಿಗೆ ನೆರವಾದ ಹೆಚ್​​ಡಿಕೆ: ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ