Daily Horoscope: ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲೇಬೇಕು ಎಂಬ ಮಹದಾಸೆ ಈ ರಾಶಿಯವರಲ್ಲಿ ಹೆಚ್ಚು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 14: ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ವ್ಯಾಪಾರದಲ್ಲಿ ಮಾಡಿದ ಬದಲಾವಣೆಗಳು ಉತ್ತಮ ಲಾಭವನ್ನು ನೀಡಬಹುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಹಾಗಾದರೆ ಸೆಪ್ಟೆಂಬರ್​ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲೇಬೇಕು ಎಂಬ ಮಹದಾಸೆ ಈ ರಾಶಿಯವರಲ್ಲಿ ಹೆಚ್ಚು
ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲೇಬೇಕು ಎಂಬ ಮಹದಾಸೆ ಈ ರಾಶಿಯವರಲ್ಲಿ ಹೆಚ್ಚು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2024 | 12:10 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶೋಭನ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:33 ಗಂಟೆ, ರಾಹು ಕಾಲ ಬೆಳಿಗ್ಗೆ 09:25 ರಿಂದ 10:56, ಯಮಘಂಡ ಕಾಲ ಮಧ್ಯಾಹ್ನ 01:59 ರಿಂದ 03:30ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:53ರ ವರೆಗೆ.

ಸಿಂಹ ರಾಶಿ: ವಿದೇಶದಲ್ಲಿರುವ ಸಂಬಂಧಿಕರಿಂದ ಶುಭ ಸುದ್ದಿಯು ಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ನೀವು ಸ್ವಲ್ಪ ಸಮಯದಲ್ಲಿ ಭೂ ವ್ಯವಹಾರವನ್ನು ಮಾಡಲು ಉತ್ತಮ ಗ್ರಾಹಕರು ಸಿಗಲಿದ್ದಾರೆ. ಬೇಡದ ಸಂಗತಿಗಳನ್ನು ಹೊರಗೆ ಕಳುಹಿಸಿ. ನೆಮ್ಮದಿ ಅನ್ನಿಸೀತು. ಇಂದು ನಿಮಗೆ ಸಾಕಷ್ಟು ಸಮಯವಿರುವಂತೆ ಭಾಸವಾದೀತು. ನಿಮ್ಮ ಮಾತುಗಳೇ ದ್ವೇಷಕ್ಕೆ ಕಾರಣವಾಗುವುದು. ಅದಕ್ಕೆ ಘಾಸಿಯಾಗಂತೆ ನೋಡಿಕೊಳ್ಳುತ್ತೀರಿ ಕೂಡ. ಈ ದಿನ ತಪ್ಪುಯಿಂದ‌ ಹೊರಬರುವಿರಿ. ವಾಸ್ತವದಲ್ಲಿ ಇರುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ವ್ಯಾಪಾರದಲ್ಲಿ ಮಾಡಿದ ಬದಲಾವಣೆಗಳು ಉತ್ತಮ ಲಾಭವನ್ನು ನೀಡಬಹುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಕನ್ಯಾ ರಾಶಿ: ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಜೀವನ ಸಂಗಾತಿಯ ಸಲಹೆ ನಿಮಗೆ ಬೇಕಾಗುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸೇರಿಸಲು ಕಷ್ಟವಾದೀತು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲೇ ಬೇಕು ಎಂಬ ಮಹದಾಸೆ ನಿಮ್ಮಲ್ಲಿ ಇರಲಿದೆ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು.‌ ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ನೀವು ಸಂಜೆ ನಿಮ್ಮ ಸಂಬಂಧಿಕರ ಮನೆಗೆ ಹೋಗಬಹುದು. ಹಿರಿಯರ ಸಹಕಾರದಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು.

ತುಲಾ ರಾಶಿ: ಇಂದು ವಿದ್ಯಾರ್ಥಿಗಳು ಸ್ಪರ್ಧಾ ಪರೀಕ್ಷೆಯ ತಯಾರಿಯ ಕಡೆ ಗಮನ ಕೊಡಬೇಕು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕಾರ್ಯದ ಒತ್ತಡವಿರಲಿದೆ. ಇಂದು ನಿಮ್ಮ ಕಾರ್ಯವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ಕೆಲಸವು ಮೇಲಧಿಕಾರಿಗಳ ಬೆಂಬಲಕ್ಕೆ ಪೂರಕವಾಗುವುದು‌. ಅಥವಾ ಅನ್ಯ ಮಾರ್ಗವೆಂದರೆ ಕಂಡುಕೊಳ್ಳಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನಿಮ್ಮ ಅನಗತ್ಯ ವ್ಯವಹಾರವನ್ನು ನಿಯಂತ್ರಿಸಬೇಕು. ನಿಮ್ಮ ಸ್ನೇಹಿತರ ಜೊತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೆಲಸದ ಒತ್ತಡದಿಂದ ಪ್ರಮುಖ ಕಾರ್ಯವನ್ನು ಮರೆಯುವ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಆದಾಯದ ದಿನವಾಗಲಿದೆ. ಉದ್ಯಮಿಗಳ ಆರ್ಥಿಕ ಪರಿಸ್ಥಿತಿಯು ಸ್ವಲ್ಪ ದುರ್ಬಲವೆನಿಸುವುದು.

ವೃಶ್ಚಿಕ ರಾಶಿ: ನಿಮ್ಮ ಕೆಲಸದಲ್ಲಿ ಆಗುತ್ತಿದ್ದ ಸಮಸ್ಯೆಗಳು ಇಂದು ಕೊನೆಗೊಳ್ಳಲಿವೆ. ನಿಮ್ಮ ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಮುಖ್ಯ. ಅಪಾಯದ ಮುನ್ಸೂಚನೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಿರಿ. ನಿಮ್ಮ ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಬಿಸಿ ತುಪ್ಪದಂತೆ ಆಗಬಹುದು. ನಿಮಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸಿ. ವಿದೇಶಿ ವ್ಯಾಪಾರದಿಂದ ತೊಂದರೆ ಎದುರಾಗಬಹುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಅದೇ ಕೆಲಸವನ್ನು ಇಂದೇ ಮಾಡಿ. ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಅವಿವಾಹಿತರಿಗೆ ಇಂದು ಸಂಬಂಧ ಕೂಡಿಬರುವುದನ್ನು ಒಪ್ಪಿಕೊಳ್ಳುವಿರಿ.

ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ