Daily Horoscope: ಈ ರಾಶಿಯವರ ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗುವುದು
ಈ ಲೇಖನವು ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮಿ, ನಿತ್ಯನಕ್ಷತ್ರ: ಮಾಘಾ, ಯೋಗ: ವಿಷ್ಕಂಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:06 ರಿಂದ 12:31ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:19 ರಿಂದ 04:43 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 08:18 ರಿಂದ 9:42 ರವರೆಗೆ.
ಮೇಷ ರಾಶಿ: ಯಾರ ಗೆಲುವನ್ನೂ ನೀವು ಸಂಭ್ರಮಿಸಲಾರಿರಿ. ಬಹಳ ದಿನಗಳಿಂದ ಇದ್ದ ಆಸ್ತಿಯ ಮೇಲಿನ ಮೋಹವು ಕಡಿಮೆ ಆಗುವುದು. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ನಿರಂಕುಶದಂತೆ ವರ್ತಿಸುವುದು ಬೇಡ. ಇಂದಾಗುವ ಖರ್ಚನ್ನು ರೂಪಾಯಿಯಲ್ಲಿ ಲೆಕ್ಕವಿಡಲು ಸಾಧ್ಯವಾಗದು. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಗ್ರಾಹಕರಿಂದ ಮೆಚ್ಚುಗೆ ಸಿಗಲಿದೆ. ಅಶಿಸ್ತು ನಿಮ್ಮ ಕಾರ್ಯವನ್ನು ಯೋರಿಸುತ್ತದೆ. ಸ್ವಂತ ಕಾರ್ಯದ ಕಾರಣ ಕಛೇರಿಗೆ ವಿತಾಮ ಹೇಳುವಿರಿ. ನಿಮ್ಮ ಭವಿಷ್ಯದ ಬಗ್ಗೆ ಕುತೂಹಲವಿರಲಿದೆ. ಅಪಮಾನವಾದ ಸ್ಥಳದಲ್ಲಿಯೇ ಗೌರವವು ಸಿಗಲಿದೆ. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ.
ವೃಷಭ ರಾಶಿ: ಮಾತನ್ನು ಪಾಲಿಸುವವರಿಗೆ ಮಾತ್ರ ನಿಮ್ಮ ಉಪದೇಶ ಪ್ರಯೋಜನವಾಗಲಿದೆ. ಇಂದು ನೀವು ರಹಸ್ಯದ ಕಾರ್ಯಾಚರಣೆಯನ್ನು ಮಾಡುವಿರಿ. ನಿಮ್ಮ ಕೈಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿಲ್ಲ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ಸಣ್ಣ ಅಂತರದಲ್ಲಿ ನಿಮ್ಮ ಅಪಘಾತವು ತಪ್ಪಲಿದ್ದು ನಿಮ್ಮ ಅದೃಷ್ಟವು ಕೈ ಹಿಡಿಯಲಿದೆ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಎಂತಹ ಸಂದರ್ಭವನ್ನೂ ಪ್ರತ್ಯಕ್ಷವಾಗಿ ನೋಡದೇ ತೀರ್ಮಾನಿಸಲಾಗದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು. ಓಡಾಟವು ನಿಮಗೆ ಅತಿಯಾದ ಆಯಾಸಪ್ರದವಾಗಲಿದೆ. ಇಂದು ಆಪತ್ತಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವಂತ ಮಾತುಗಳನ್ನು ಆಡುವಿರಿ.
ಮಿಥುನ ರಾಶಿ: ನಿಮ್ಮನ್ನು ಕೆಲಸದಿಂದ ಬಿಡುವ ಸಾಧ್ಯತೆ ಇದೆ. ನಿಮಗೆ ಪ್ರತಿಕೂಲದ ವಿಚಾರಗಳೇ ನೆನಪಾಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು. ಅಧಿಕಾರಿಗಳಿಂದ ನಿಮ್ಮ ಆರ್ಥಿಕತೆಯು ಪರಿಶೀಲನೆಗೊಳ್ಳುವುದು. ದಾಂಪತ್ಯದಲ್ಲಿ ಹಣದ ವಿಚಾರಕ್ಕೆ ಕಹಿ ಮಾತುಗಳು ಬರಬಹುದು. ಕೆಲವು ಬಂಧನದಿಂದ ಬಿಡುಗಡೆ ಸಿಕ್ಕಿ ಹಗುರಾಗುವಿರಿ. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಭೋಜನವನ್ನು ಸಮಯ ಮೀರಿ ಮಾಡುವುದು ಬೇಡ. ಕಲಾವಿದೆಯು ನಿಮ್ಮ ಬಾಳ ಸಂಗಾತಿಯಾಗಿ ಬರುವ ಸಾಧ್ಯತೆ ಇದೆ. ಕಛೇರಿಯಲ್ಲಿ ಇಂದು ಯಾವುದೇ ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಂಡು ಹೋಗುವ ಮನಸ್ಸು ಇರದು. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ.
ಕರ್ಕಾಟಕ ರಾಶಿ: ಅಧಿಕಾರಿದ ಅಸೆ ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳುವರು. ಆರ್ಥಿಕ ಸ್ಥಿತಿಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಸ್ಥಿತಿಯು ಹಾಸ್ಯವೆನಿಸುವುದು. ನಿಮ್ಮ ದೇಹಕ್ಕೆ ವಿರುದ್ಧವಾದ ಕೆಲಸಗಳಿಂದ ತೊಂದರೆಯಾಗಲಿದೆ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಮ್ಮ ಮಾತನ್ನು ದುರುಪಯೋಗ ಮಾಡಬಹುದು. ಸಂಗಾತಿಯು ನಿಮ್ಮ ಯೋಜನೆಯನ್ನು ಪ್ರೋತ್ಸಾಹಿಸಬಹುದು. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಬರಲಿದೆ. ಅಪರಿಚಿತ ಕರೆಗಳಿಗೆ ಸ್ಪಂದನೆ ಬೇಡ. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡುವುದು ಕಷ್ಟವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ. ನಿಮ್ಮಿಂದಲೇ ನೇರ ಸಹಾಯವನ್ನು ಕೇಳಬಹುದು.
ಸಿಂಹ ರಾಶಿ: ಕೆಲವು ನಿಮಿಷವಾದರೂ ನಿಮಗೆ ಉಪಕರಿಸಿದವರನ್ನು ಸ್ಮರಿಸುವಿರಿ. ಹೊಸ ವಿಚಾರವನ್ನು ಕಲಿಯುವ ಉಮೇದು ಮಾಡುವಿರಿ. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಕುಟುಂಬದಿಂದ ವೃತ್ತಿಯ ಬದಲಾವಣೆಗೆ ಒತ್ತಾಯ ಬರಬಹುದು. ಅಧಿಕ ಆದಾಯವನ್ನು ನಿಮ್ಮಿಂದ ನಿರೀಕ್ಷಿಸಬಹುದು. ಕೈ ತಪ್ಪುವ ಕಾರ್ಯವನ್ನು ನೀವೇ ಶ್ರಮದಿಂದ ಪಡೆಯುವಿರಿ. ಮೂರ್ಖರಂತೆ ಬರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ವಿದ್ಯಾರ್ಥಿಗಳು ತಮ್ಮದಾದ ನೂತನ ಪ್ರಯತ್ನಕ್ಕೆ ಸಿದ್ಧರಾಗುವಿರಿ. ಹೊಳೆಯುವುದೆಲ್ಲ ನಕ್ಷತ್ರವಲ್ಲ ಎಂಬುದು ಎಡವಿದ ಮೇಲೆ ಗೊತ್ತಾಗುವುದು. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ವ್ಯವಹಾರದಲ್ಲಿ ಅಪವಾದಗಳು ಬರಬಹುದು.
ಕನ್ಯಾ ರಾಶಿ: ಮೇಲಸಧಿಕರಿಗಳಿಗೆ ನಿಮ್ಮ ಮಾತುಗಳು ಸುಳ್ಳೆನಿಸಬಹುದು. ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಕ್ರೀಡೆಯಲ್ಲಿ ಮುನ್ನಡೆಯುವ ಆಸಕ್ತಿಯನ್ನು ತೋರಿಸುವಿರಿ. ಹತ್ತಾರೂ ಆಲೋಚನೆಗಳು ಒಂದಾದಮೇಲೆ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು. ಜೊತೆಗಿರುವವರನ್ನು ಸಂತೋಷದಲ್ಲಿ ಇಡುವಿರಿ. ದ್ವಿಚಕ್ರವಾಹನದಲ್ಲಿ ಸಚರಿಸುವುದು ಬೇಡ. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಮೂರನೇ ವ್ಯಕ್ತಿಗಳ ಮೂಲಕ ನಿಮ್ಮ ಗೌಪ್ಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಯಾರಿಂದಲೂ ಏನನ್ನೂ ಕಸಿದುಕೊಳ್ಳಲು ಹೋಗುವುದು ಬೇಡ. ಮನಶ್ಚಾಂಚಲ್ಯದಿಂದ ಇಂದು ಅಶಿಸ್ತಿನಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ. ನೆಮ್ಮದಿಗೆ ಅದೇ ದಾರಿ.
ತುಲಾ ರಾಶಿ: ಅಹಂಕಾರದ ಮಾತುಗಳನ್ನು ಆಡುವಾಗ ಎಚ್ಚರಿಕೆ ಇರಲಿ. ನಿಮಗೆ ಇಂದು ಯಾರಾದರೂ ಧೈರ್ಯ ತುಂಬುವವರ ಅವಶ್ಯಕತೆ ಇರಲಿದೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಸಾಲ ಕೊಟ್ಟವರು ನಿಮ್ಮನ್ನು ನಾನಾ ಪ್ರಕಾರವಾಗಿ ಜರಿಯಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಯಾರೋ ಆಡಿದ ನಕಾರಾತ್ಮಕ ಮಾತಿಗೆ ಸತ್ತ್ವವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳ ಮನೋಭಾವವು ಕ್ಷಣಕ್ಕೊಮ್ಮೆ ಬದಲಾಗುತ್ತಿದ್ದು ಸ್ಥಿರಮತಿಯನ್ನು ಪಾಲಕರು ಕೊಡುವುದು ಮುಖ್ಯ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ವಿದೇಶದ ವ್ಯಾಮೋಹವು ನಿಮಗೆ ದೂರಾಗುವುದು.
ವೃಶ್ಚಿಕ ರಾಶಿ: ನೀವು ಯಾವ ಸೋಲನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಸಮಯೋಚಿತ ಕಾರ್ಯದಿಂದ ನಿಮಗೆ ಉನ್ನತ ಅಧಿಕಾರಗಳು ಬರಬಹುದು. ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ನಿಮ್ಮ ನೋವನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳುವಿರಿ. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡುವಿರಿ. ಕುಟುಂಬದಿಂದ ದೂರವಿದ್ದರೂ ಮಾತುಕತೆಗಳ ಮೂಲಕ ಹತ್ತಿರವಾಗುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು. ನೌಕರರ ಜೊತೆ ಸಂಯಮದಿಂದ ಮಾತನಾಡಿ. ನಿಮ್ಮ ಮನಃಸ್ಥಿತಿಗೆ ಹೋಲುವವರ ಗೆಳೆತನ ಲಭ್ಯವಾದೀತು.
ಧನು ರಾಶಿ: ಯಾರು ಏನೇ ಹೇಳಿದರೂ ನಿಮ್ಮ ಇಚ್ಛೆಯಂತೆ ಎಲ್ಲವೂ ನಡೆಯುವುದು. ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬಯಕೆ ಇರುವುದು. ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಕಷ್ಟವಾಗುವುದು. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಕಾನೂನಿನ ತೊಂದರೆಯನ್ನು ಕಾನೂನಾತ್ಮಕವಾಗಿಯೇ ಸರಿ ಮಾಡಿಕೊಳ್ಳುವಿರಿ. ನಿಮ್ಮ ಯೋಜನೆಯು ಅಂಬೆಗಾಲಿಕ್ಕಿತ್ತ ಸಾಗುವುದು ನಿಮಗೆ ಖುಷಿ ಕೊಡಲಿದೆ. ತಾಯಿಯ ಜೊತೆ ಒರಟಾಗಿ ಮಾತನಾಡುವಿರಿ. ಸುಮ್ಮನೇ ಸುತ್ತಾಟ ಇಂದು ಬೇಡ.
ಮಕರ ರಾಶಿ: ಬಂಧುಗಳಿಂದ ನಿಮಗೆ ಮುಜುಗರವಾಗುವುದು. ಆರ್ಥಿಕಮಟ್ಟವನ್ನು ಯಾರಾದರೂ ತುಲನೆ ಮಾಡಬಹುದು. ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಮಾತು ಬೇರೆ ಅರ್ಥವನ್ನು ಕೊಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದೆ. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಕೇಳಲು ನಿಮಗೆ ಇಷ್ಟವಾಗದು. ನೀವು ಸಂಬಂಧವಿಲ್ಲದ ವಿಚಾರಕ್ಕೆ ಗಮನವನ್ನು ಕೊಡುವಿರಿ. ಕಛೇರಿಯಲ್ಲಿ ನಿಮ್ಮ ಸ್ಥಾನಕ್ಕೆ ಇನ್ನೊಬ್ಬರು ಬರಲಿದ್ದು, ಪರಸ್ಪರ ವೈರುಧ್ಯ ಏರ್ಪಡಬಹುದು.
ಕುಂಭ ರಾಶಿ: ಖಾಸಗಿ ಸಂಸ್ಥೆಯ ಜವಾಬ್ದಾರಿಯನ್ನು ನೀವು ನಿರ್ವಹಿಸಲು ಕಷ್ಟವಾಗುವುದು. ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಕೆಲಸವು ಪೂರ್ಣವಾಗದೇ ಹಣವನ್ನು ಪಡೆಯಲಾರಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ಖರ್ಚಿನ ಬಗ್ಗೆ ನಿರ್ದಿಷ್ಟತೆ ಇರಲಿ. ಯಾವ ಸಹಾಯವನ್ನು ಕೇಳಿದರೂ ಇಲ್ಲ ಎನ್ನುವ ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ.
ಮೀನ ರಾಶಿ: ಸಂಬಂಧಕ್ಕಿಂತ ಹಣವೇ ಮುಖ್ಯವಾಗಿ ಕಾಣಿಸುಬುದು. ಅನ್ಯರ ಕಾರಣದಿಂದ ನಿಮಗೆ ಒಂದು ಸಿಟ್ಟು ಬರುವುದು. ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಅನಂತರದ ಹತಾಶೆಯಿಂದ ಕಷ್ಟವಾದೀತು. ಸುಳ್ಳಿನಲ್ಲಿ ಸಿಕ್ಕಿಬೀಳುವ ಸಂದರ್ಭವಿದೆ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ನೀವು ಸ್ವತಂತ್ರವಾಗಿದ್ದರೂ ಬರೆಯಲು ಮನಸ್ಸಾಗದು. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಕಷ್ಟವಾದೀತು. ಕಲಾವಿದರಾಗುವ ದೃಢವಾದ ಮನಸ್ಸಿನಲ್ಲಿ ನೆಲೆಸುವುದು. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.