Rashi Bhavishya: ಈ ರಾಶಿಯವರಿಗೆ ಸ್ತ್ರೀಯರಿಂದ ಅಪಮಾನವಾಗಬಹುದು-ಎಚ್ಚರ
ನೀವು ಕೈಗೊಳ್ಳುವ ಎಲ್ಲ ಕೆಲಸಗಳು ಚೆನ್ನಾಗಿರಬೇಕು ಅಂದರೆ ನಿಮ್ಮ ರಾಶಿಫಲ ಕೂಡ ಚೆನ್ನಾಗಿರಬೇಕು. ಹೀಗಾಗಿ ಒಂದಷ್ಟು ಜನ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಫೆಬ್ರವರಿ 16ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:09ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:25 ರಿಂದ 09:52ರ ವರೆಗೆ.
ಧನು ರಾಶಿ : ಎಲ್ಲರ ಬೆಂಬಲದಿಂದ ಮನೆಯಲ್ಲಿ ಒಳ್ಳೆಯ ಕೆಲಸಗಳು ನಡೆಯುವುದು. ಓಡಾಟದಿಂದ ನಿಮಗೆ ಆಗಬೇಕಾದ ಕಾರ್ಯಗಳು ಆಗುವುದು. ನಿರುದ್ಯೋಗಿಗಳ ಶ್ರಮಕ್ಕೆ ತಕ್ಕ ಪ್ರತಿಫಲವು ಸಿಕ್ಕಿ ಸಂತೋಷವಾಗುವುದು. ಹೊಸ ಜನರ ಭೇಟಿಯಿಂದ ಸಂತಸವಾಗಲಿದೆ. ಉದ್ಯೋಗದಲ್ಲಿ ನಿಮಗೆ ಉತ್ತೇಜನ ನೀಡಬಹುದು. ಹಲವು ದಿನಗಳಿಂದ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಅವಿವಾಹಿತರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬಿದ್ದುಬಿಡುವಿರಿ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ಅಮೂಲ್ಯ ವಸ್ತುಗಳನ್ನು ಎಲ್ಲಿಯೋ ಇಟ್ಟು ಹುಡುಕುವಿರಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು.
ಮಕರ ರಾಶಿ : ಇಂದು ನೀವು ವ್ಯವಹಾರದಲ್ಲಿ ಒತ್ತಡವನ್ನು ಬಯಸುವಿರಿ. ಇದರಿಂದ ಕೆಲಸಗಳು ಆಗಬಹುದು. ಮಿತ್ರರ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಿ ಬಗೆಹರಿಯಬಹುದು. ಆರ್ಥಿಕ ವಿಷಯಗಳಿಗೆ ಚಿಂತಿತರಾಗುವಿರಿ. ಉದ್ಯೋಗಗಳಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ತುರ್ತು ಪ್ರಯಾಣದ ಸೂಚನೆ ಇರುವುದು. ಹೊಸ ಸಾಲಗಳನ್ನು ಮಾಡಬೇಕಾಗಬಹುದು. ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಮಿತ್ರರಿಂದ ಭೂಮಿಯ ಖರೀದಿಯ ವಾರ್ತೆಯು ಇರುವುದು. ಸ್ತ್ರೀಯರು ತಮ್ಮ ಕಾರ್ಯದಲ್ಲಿ ಮುಳುಗುವರು. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ.
ಕುಂಭ ರಾಶಿ : ಈ ದಿನ ನೀವು ಅನಿರೀಕ್ಷಿತವಾಗಿ ಸಮಾಜದ ಪ್ರಮುಖ ವ್ಯಕ್ತಿಗಳ ಭೇಟಿಯಾಗಲಿದೆ. ಆತ್ಮೀಯರಿಂದ ಆರ್ಥಿಕ ಲಾಭದ ಸಲಹೆಯು ಸಿಗಬಹುದು. ಉದ್ಯೋಗಗಳು ಸುಗಮವಾಗಿ ಸಾಗುವುದು. ಅಪರಿಚಿತರು ನಿಮಗೆ ಒಳ್ಳೆಯ ಸುದ್ದಿಯನ್ನು ನೀಡುವರು. ಹೊಸ ವಾಹನ ಖರೀದಿಯ ಪ್ರಯತ್ನವು ಫಲಪ್ರದವಾಗಲಿದೆ. ಇಂದಿನ ಖರ್ಚನ್ನು ಕಂಡು ಚಿಂತಿತರಾಗುವುದು ಬೇಡ. ಸರಳತೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇರುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಭೂಮಿಯ ಉತ್ಪನ್ನದಿಂದ ಕೆಲವು ಅದಾಯವು ಸಿಗಬಹುದು. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ.
ಮೀನ ರಾಶಿ : ಈ ದಿನದ ಕೆಲಸದಲ್ಲಿ ಅಧಿಕಾರಿಗಳ ಜೊತೆ ಎಚ್ಚರಿಕೆ ಅಗತ್ಯ. ದೂರ ಪ್ರಯಾಣವನ್ನು ಮುಂದೂಡುವುದು ಉಚಿತ. ಕೈಗೆತ್ತಿಕೊಂಡ ಕಾರ್ಯವು ವಿಳಂಬವಾಗಬಹುದು. ವ್ಯಾಪಾರಗಳು ಮಂದಗತಿಯಲ್ಲಿದ್ದು ನಿಮಗೆ ಸಮಾಧಾನವಿರದು. ಹಣಕಾಸಿನ ವಿಷಯಗಳಿಂದ ನಿರಾಶೆಯು ಬರಬಹುದು. ಆರೋಗ್ಯದ ಬಗ್ಗೆ ನಿಗಾ ಅಗತ್ಯ. ತಾಯಿಯ ಕಡೆಯಿಂದ ನಿಮಗೆ ಆಸ್ತಿಯು ಲಭಿಸುವುದು. ಅಂದುಕೊಂಡ ಕಾರ್ಯಕ್ಕೆ ಬೆಂಬಲು ಪೂರ್ಣವಾಗಿ ಸಿಗದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ.
-ಲೋಹಿತ ಹೆಬ್ಬಾರ್ – 8762924271 (what’s app only)




