ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 26ರ ದಿನಭವಿಷ್ಯ
Daily Numerology February 26: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 26ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಕೃಷ್ಣನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ತುಳಸಿ ಹಾರವನ್ನು ಸಮರ್ಪಣೆ ಮಾಡಿ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಇರುವಂಥ ಕೃಷ್ಣನ ವಿಗ್ರಹ, ಚಿತ್ರಪಟಕ್ಕೆ ತುಳಸಿ ದಳ, ತುಳಸಿಹಾರವನ್ನು ಅರ್ಪಿಸಿ. ಯಾವುದೇ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆ ನಿವಾರಣೆ ಆಗುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾದ ಅನಿವಾರ್ಯ ಸೃಷ್ಟಿ ಅಗಲಿದೆ. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಹಾಗೂ ಸಹಕಾರ ಅಗತ್ಯವಿದೆ ಎಂಬುದು ಖಾತ್ರಿ ಆಗಲಿದೆ. ಉಪನ್ಯಾಸಕರು- ಮನೆಯಲ್ಲಿಯೇ ಟ್ಯೂಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಪೂಜಾ ಸಾಮಗ್ರಿಗಳು ಮಾಡಿಸುವುದಕ್ಕೆ- ಖರೀದಿ ಮಾಡುವುದಕ್ಕೆ ಅಥವಾ ದೇವರಮನೆ ರಿನೋವೇಷನ್ ಇಂಥವುಗಳ ಬಗ್ಗೆ ಈ ದಿನ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಮತ್ತೆ ನಿಮ್ಮಲ್ಲಿ ಕೆಲವರು ಮನೆಯ ವಾಸ್ತುವಿನಲ್ಲಿ ಆಗಬೇಕಾದ ಬದಲಾವಣೆಗಳು ಇದ್ದಲ್ಲಿ ಅದನ್ನು ಮಾಡಿಸಲು ಬೇಕಾದಂಥ ವ್ಯಕ್ತಿಗಳನ್ನು ಕರೆಸಿ, ಕೆಲಸದ ಬಗ್ಗೆ ಮಾತುಕತೆ ನಡೆಸಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಕೃಷಿ ವಿಜ್ಞಾನಿಗಳಿಗೆ ತಮ್ಮ ಈಗಿನ ಪ್ರಾಜೆಕ್ಟ್ ಜೊತೆಗೆ ಮಹತ್ವಾಕಾಂಕ್ಷೆಯ- ದೊಟ್ಟ ಮಟ್ಟದ- ಪ್ರತಿಷ್ಠಿತ ಸಂಸ್ಥೆಯ ಅನುದಾನದ ಯೋಜನೆಗಳನ್ನು ಮುನ್ನಡೆಸುವಂತೆ ಸೂಚನೆ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಪ್ರಾಜೆಕ್ಟ್ ಇದಾಗಿರಲಿದೆ ಎಂಬ ಖಾತ್ರಿ ಸಹ ನಿಮಗೆ ಸಿಗಲಿದೆ. ಡೇರಿ ಉತ್ಪನ್ನಗಳ ಮಾರಾಟ- ವಿತರಣೆ- ಉತ್ಪಾದನೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾನಾ ಅವಕಾಶಗಳು ತೆರೆದುಕೊಳ್ಳಲಿವೆ.
ಲೇಖನ- ಸ್ವಾತಿ ಎನ್.ಕೆ.
