AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru-Aditya Yoga: ಕರ್ಕಾಟಕದಲ್ಲಿ ಗುರು-ಆದಿತ್ಯ ಯೋಗ; ಈ 4 ರಾಶಿಗೆ ಅದೃಷ್ಟ, ಅಪಾರ ಧನಲಾಭ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಗುರುಗಳ ಮೈತ್ರಿ ಅತ್ಯಂತ ಶಕ್ತಿಶಾಲಿ. ಕರ್ಕಾಟಕ ರಾಶಿಯಲ್ಲಿ ಜುಲೈ 17 ರಿಂದ ಆಗಸ್ಟ್ 16 ರವರೆಗೆ ನಡೆಯುವ ಗುರು-ಆದಿತ್ಯ ಯೋಗವು ನಾಲ್ಕು ರಾಶಿಗಳಿಗೆ ವಿಶೇಷ ಅದೃಷ್ಟ ತರಲಿದೆ. ಕರ್ಕಾಟಕ, ಮೇಷ, ಕನ್ಯಾ ಮತ್ತು ವೃಶ್ಚಿಕ ರಾಶಿಯವರಿಗೆ ಈ ಸಂಯೋಗವು ಅಪಾರ ಧನಲಾಭ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಸಾಮರಸ್ಯ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಿಸಲಿದೆ. ಇದು ಶುಭ ಫಲಗಳ ಸುವರ್ಣ ಕಾಲ.

Guru-Aditya Yoga: ಕರ್ಕಾಟಕದಲ್ಲಿ ಗುರು-ಆದಿತ್ಯ ಯೋಗ; ಈ 4 ರಾಶಿಗೆ ಅದೃಷ್ಟ, ಅಪಾರ ಧನಲಾಭ!
ರವಿ-ಗುರು ಯೋಗ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 23, 2026 | 10:25 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಸೂರ್ಯ ಮತ್ತು ದೇವಗುರು ಬೃಹಸ್ಪತಿ ಇಬ್ಬರೂ ಮಿತ್ರರು. ಅಷ್ಟೇ ಅಲ್ಲದೇ ಚಂದ್ರನ ರಾಶಿಯಾಗಿದ್ದು ಸೂರ್ಯನು ರಾಜನಾದರೆ, ಚಂದ್ರ ಪತ್ನಿ. ಹಾಗೆಯೇ ಸೂರ್ಯನು ಆತ್ಮಕಾರಕ, ಚಂದ್ರನು ಮನಃಕಾರಕ, ಗುರುವು ಜ್ಞಾನಕಾರಕ. ಇವರಿಬ್ಬರ ಸಂಯೋಗವನ್ನು ಅತ್ಯಂತ ಮಂಗಳಕರ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಜ್ಞಾನ, ಧರ್ಮ ಮತ್ತು ಭಾಗ್ಯದ ಕಾರಕನಾದ ಗುರು ಹಾಗೂ ಆತ್ಮವಿಶ್ವಾಸ, ಕೀರ್ತಿ ಮತ್ತು ಯಶಸ್ಸಿನ ಕಾರಕನಾದ ಸೂರ್ಯ ಈ ಇಬ್ಬರೂ ಸೇರಿ ಕರ್ಕಾಟಕ ರಾಶಿಯಲ್ಲಿ ಸಂಯೋಗ ಹೊಂದಿದಾಗ ಅತ್ಯಂತ ಶುಭಪ್ರದ. ಗುರು-ಆದಿತ್ಯ ಯೋಗ ಎಂದೂ ಕರೆಯುತ್ತಾರೆ.

​ಕರ್ಕಾಟಕ ರಾಶಿಯು ಗುರು ಗ್ರಹದ ಉಚ್ಚ ಸ್ಥಾನವಾಗಿರುವುದರಿಂದ, ಈ ಸಂಯೋಗದ ಶುಭ ಫಲಗಳು ದುಪ್ಪಟ್ಟಾಗುತ್ತವೆ. ಈ ಯೋಗವು ಜುಲೈ ೧೭ರಿಂದ ಆಗಸ್ಟ್ ೧೬ರವರೆಗೆ ಇರಲಿದೆ.

ಈ ಅಪರೂಪದ ಜ್ಯೋತಿಷ್ಯ ವಿದ್ಯಮಾನದಿಂದಾಗಿ ಪ್ರಮುಖವಾಗಿ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಅಪಾರ ಧನಲಾಭ ಹಾಗೂ ಸುಖ-ಸಂಪತ್ತು ಸಿಗಲಿದೆ.

​ಕರ್ಕಾಟಕ ರಾಶಿ:

​ಈ ಸಂಯೋಗವು ಕರ್ಕಾಟಕ ರಾಶಿಯಲ್ಲೇ ಸಂಭವಿಸುವುದರಿಂದ, ಈ ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳವಾಗುವ ಬಲವಾದ ಯೋಗವಿದೆ. ಉದ್ಯಮಿಗಳಿಗೆ ಹೊಸ ಹೂಡಿಕೆಯಿಂದ ಭಾರಿ ಲಾಭ ಸಿಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದ್ದು, ಮಾನಸಿಕ ನೆಮ್ಮದಿ ಹೆಚ್ಚುತ್ತದೆ.

​ಮೇಷ ರಾಶಿ:

​ಮೇಷ ರಾಶಿಯವರಿಗೆ ಸೂರ್ಯ ಮತ್ತು ಗುರುವಿನ ಸಂಯೋಗವು ಚತುರ್ಥ ಭಾವದಲ್ಲಿ ನಡೆಯುವುದರಿಂದ ಸುಖ-ಸಂತೋಷಗಳು ವೃದ್ಧಿಯಾಗಲಿವೆ. ಹೊಸ ಮನೆ, ಭೂಮಿ ಅಥವಾ ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಸಮಯವಿದು. ಕುಟುಂಬದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ, ಶಾಂತಿ ಮತ್ತು ಸಾಮರಸ್ಯ ನೆಲೆಸುತ್ತದೆ. ತಾಯಿಯ ಕಡೆಯಿಂದ ಸಂಪೂರ್ಣ ಸಹಕಾರ ಮತ್ತು ಲಾಭ ಸಿಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಧನಕೋಶ ತುಂಬಲಿದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

​ಕನ್ಯಾ ರಾಶಿ:

​ಕನ್ಯಾ ರಾಶಿಯವರಿಗೆ ಈ ಸಂಯೋಗವು ಆದಾಯ ಭಾವದಲ್ಲಿ ಆಗುವುದರಿಂದ ಆರ್ಥಿಕವಾಗಿ ಇದು ಸುವರ್ಣ ಕಾಲ ಎನ್ನಬಹುದು. ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ. ಲಾಟರಿ, ಹಳೆಯ ಹೂಡಿಕೆಗಳಿಂದ ಉತ್ತಮ ಲಾಭಾಂಶ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ದೊಡ್ಡ ಸಂಸ್ಥೆಗಳಿಂದ ಆಕರ್ಷಕ ಆಫರ್‌ಗಳು ಬರಲಿವೆ. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳ ಪ್ರಶಂಸೆ ಸಿಗುತ್ತದೆ. ನಿಮ್ಮ ದೀರ್ಘಕಾಲದ ಆಸೆಗಳು ಈ ಸಮಯದಲ್ಲಿ ಸುಲಭವಾಗಿ ಈಡೇರಲಿವೆ.

​ವೃಶ್ಚಿಕ ರಾಶಿ:

​ವೃಶ್ಚಿಕ ರಾಶಿಯವರಿಗೆ ಈ ಯುತಿಯು ಭಾಗ್ಯ ಭಾವದಲ್ಲಿ ನಡೆಯುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ತೀರ್ಥಯಾತ್ರೆ ಮಾಡುವ ಯೋಗವಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬಯಸುವವರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ತಂದೆಯೊಂದಿಗಿನ ಬಾಂಧವ್ಯ ಗಟ್ಟಿಯಾಗುತ್ತದೆ.

​ಒಟ್ಟಿನಲ್ಲಿ, ಕರ್ಕಾಟಕದಲ್ಲಿ ಆಗುವ ಸೂರ್ಯ-ಗುರು ಸಂಯೋಗವು ಈ ನಾಲ್ಕು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ, ಆರ್ಥಿಕ ಸ್ಥಿರತೆ ಮತ್ತು ಯಶಸ್ಸನ್ನು ತರಲಿದ್ದು, ಸುವರ್ಣ ಯುಗದಂತೆ ಆಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು