AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರ ಭವಿಷ್ಯ: ರಾಶಿಯಲ್ಲಿ ಶನಿ, ರಾಹು ಇದ್ದರೂ ಈ ರಾಶಿಯವರಿಗೆ ಮಾತ್ರ ದುಡ್ಡಿನ ಮಳೆ

Weekly Horoscope June: 2026ರ ಜೂನ್ 21-27ರ ವಾರ ಭವಿಷ್ಯದಲ್ಲಿ ಗ್ರಹಗಳ ಸಂಚಾರವು 12 ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯಿರಿ. ಮಂಗಳ, ಸೂರ್ಯ, ಬುಧ, ಗುರುಗಳ ಶುಭ ಸಂಗಮದಿಂದ ಆರ್ಥಿಕ ಪ್ರಗತಿ, ಕೌಟುಂಬಿಕ ನೆಮ್ಮದಿ, ಹೊಸ ಅವಕಾಶಗಳು ಸಿದ್ಧಿಸಲಿವೆ. ಆರೋಗ್ಯ, ವೃತ್ತಿ, ಸಂಬಂಧಗಳಲ್ಲಿನ ಬದಲಾವಣೆಗಳನ್ನು ಅರಿತುಕೊಂಡು ಮುಂದಿನ ಹೆಜ್ಜೆ ಇಡಿ. ಈ ವಾರ ನಿಮ್ಮ ಅದೃಷ್ಟ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿ.

ವಾರ ಭವಿಷ್ಯ: ರಾಶಿಯಲ್ಲಿ ಶನಿ, ರಾಹು ಇದ್ದರೂ ಈ ರಾಶಿಯವರಿಗೆ ಮಾತ್ರ ದುಡ್ಡಿನ ಮಳೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 22, 2026 | 5:46 PM

Share

2026ರ ಜೂನ್ 21ರಿಂದ ಜೂನ್ 27ರವರೆಗೆ ಮೂರನೇ ವಾರವಾಗಿದ್ದು, ಗ್ರಹಗಳ ಸಂಯೋಗದಿಂದ ಹಾಗೂ ವರ್ತಮಾನದ ದಶೆಯ ಪ್ರಭಾವವು ರಾಶಿಗಳ ಮೇಲೆ ಉಂಟಾಗಲಿದ್ದು, ಎಲ್ಲಿಂದೆಲ್ಲಿಗೋ ನಿಮ್ಮನ್ನು ವಿಧಿ ಕರೆದೊಯ್ಯಬಹುದು. ಎಲ್ಲದಕ್ಕೂ ಸಿದ್ಧನಾಗಿರುವುದೇ ಮುಖ್ಯ.

​ಮೇಷ ರಾಶಿ :

ಧನಸ್ಥಾನದ ಮಂಗಳನಿಂದ ಆರ್ಥಿಕ ಪ್ರಗತಿ ಸಿದ್ಧಿಸಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮ ಬಾಗಿಲು ತಟ್ಟಲಿವೆ. ಧೈರ್ಯದಿಂದ ಮುನ್ನಡೆಯಿರಿ, ಕೌಟುಂಬಿಕ ಸುಖ ಹಾಗೂ ನೆಮ್ಮದಿ ಹೆಚ್ಚಾಗಲಿದ್ದು, ಮನಸ್ಸಿಗೆ ಅಪಾರ ಸಂತೋಷ ಸಿಗಲಿದೆ. ​ ವೃಷಭ ರಾಶಿ :

ನಿಮ್ಮದೇ ರಾಶಿಯಲ್ಲಿ ಮಂಗಳನ ಸಂಚಾರದಿಂದ ಕಾರ್ಯೋತ್ಸಾಹ ಇರಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶ ಲಭ್ಯ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಆರೋಗ್ಯದ ಕಡೆಗೆ ಸ್ವಲ್ಪ ಗಮನಹರಿಸುವುದು ಉತ್ತಮ. ​ ಮಿಥುನ ರಾಶಿ :

ರಾಶಿಯಲ್ಲಿ ಸೂರ್ಯನ ಪ್ರಭಾವದಿಂದ ಕೀರ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಬದಲಾವಣೆಗಳು ಕಂಡುಬರುತ್ತವೆ. ಆತ್ಮವಿಶ್ವಾಸದಿಂದ ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಮತ್ತು ಹೊಸ ಉತ್ಸಾಹ ಸಿಗಲಿದೆ.

​ಕರ್ಕಾಟಕ ರಾಶಿ :

ಬುಧ, ಶುಕ್ರ ಮತ್ತು ಗುರುಗಳ ಶುಭ ಸಂಗಮದಿಂದ ಅದೃಷ್ಟ ಒಲಿಯಲಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಲಿದ್ದು, ಬಂಧು-ಮಿತ್ರರಿಂದ ಅಪಾರ ಸಹಕಾರ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ​ ಸಿಂಹ ರಾಶಿ :

ಕೇತುವಿನ ಪ್ರಭಾವದಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಕಠಿಣ ಸವಾಲುಗಳನ್ನು ಚತುರತೆಯಿಂದ ಎದುರಿಸಿ ಜಯಿಸುವಿರಿ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸದ್ಯಕ್ಕೆ ತುಂಬಾ ಒಳ್ಳೆಯದು. ​ ಕನ್ಯಾ ರಾಶಿ :

ಭಾಗ್ಯಸ್ಥಾನದ ಬಲದಿಂದ ಅಡೆತಡೆಗಳು ದೂರಾಗಲಿವೆ. ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ ಶುಭ ವಾರ್ತೆ ಸಿಗಲಿದೆ. ನವೀನ ವಸ್ತುಗಳ ಖರೀದಿಗೆ ಯೋಗವಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ಸೌಹಾರ್ದತೆ ತುಂಬಿ ತುಳುಕಾಡಲಿದೆ. ​ ತುಲಾ ರಾಶಿ :

ಮಿಶ್ರ ಫಲಗಳ ವಾರವಿದು. ಅನಿರೀಕ್ಷಿತ ಧನಲಾಭ ಉಂಟಾಗಲಿದ್ದರೂ, ಖರ್ಚುಗಳ ಮೇಲೆ ನಿಗಾ ಇರಲಿ. ವೃತ್ತಿ ರಂಗದಲ್ಲಿ ತಾಳ್ಮೆಯಿಂದ ಕೆಲಸ ನಿರ್ವಹಿಸಿ. ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಂಕಷ್ಟಗಳು ಸುಲಭವಾಗಿ ಪರಿಹಾರವಾಗಲಿವೆ. ​ ವೃಶ್ಚಿಕ ರಾಶಿ :

ಚಂದ್ರನ ಸಂಚಾರದಿಂದ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಲಿವೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಪಾಲುದಾರರಿಂದ ಉತ್ತಮ ಸಹಕಾರ ದೊರೆಯಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಣ್ಣಪುಟ್ಟ ಪ್ರವಾಸಗಳು ನಿಮ್ಮ ಮನಸ್ಸಿಗೆ ಆನಂದವನ್ನು ನೀಡಲಿವೆ. ​ ಧನು ರಾಶಿ :

ಲಗ್ನದಲ್ಲಿ ಮೂಲ ನಕ್ಷತ್ರದ ಪ್ರಭಾವವಿದ್ದು, ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ ಸಿಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಹಠಾತ್ ಧನಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಕಿರು ಕಾಳಜಿ ವಹಿಸುವುದು ಅವಶ್ಯಕವಾಗಿದೆ. ​ ಮಕರ ರಾಶಿ :

ಬುದ್ಧಿವಂತಿಕೆಯಿಂದ ಕಾರ್ಯಸಾಧನೆ ಮಾಡುವಿರಿ. ಸಂತಾನ ಭಾಗ್ಯದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸಮಾಚಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗುವ ಸಮಯವಿದು. ಪ್ರೀತಿಪಾತ್ರರೊಂದಿಗೆ ಮಧುರ ಕ್ಷಣಗಳನ್ನು ಕಳೆಯುವ ಸುಯೋಗ ನಿಮ್ಮದಾಗಲಿದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿಕುಂಭ ರಾಶಿ :

ರಾಹುವಿನ ಸಂಚಾರದ ನಡುವೆಯೂ ಸುಖ-ಸಂತೋಷ ವೃದ್ಧಿಯಾಗಲಿದೆ. ಭೂಮಿ ಅಥವಾ ವಾಹನ ಖರೀದಿಯ ಯೋಗಗಳು ಪ್ರಬಲವಾಗಿವೆ. ತಾಯಿಯ ಕಡೆಯಿಂದ ಪೂರ್ಣ ಸಹಕಾರ ಸಿಗಲಿದೆ. ಮನೆ-ಮನಗಳಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ. ​ ಮೀನ ರಾಶಿ :

ರಾಶಿಯಲ್ಲಿ ಶನಿಯ ಸಂಚಾರವಿದ್ದರೂ ಸಹೋದರರ ಸಕಾಲಿಕ ಸಹಾಯದಿಂದ ಧೈರ್ಯ ಹೆಚ್ಚಾಗಲಿದೆ. ಸಣ್ಣ ಪ್ರಯಾಣಗಳಿಂದ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಮಾತುಗಳಿಂದ ಸಮಾಜದಲ್ಲಿ ಗೌರವ ವೃದ್ಧಿಸಲಿದೆ. ಹೊಸ ಆಲೋಚನೆಗಳು ಯಶಸ್ಸಿನ ಹಾದಿ ತೋರಿಸಲಿವೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ