ದಿನ ಭವಿಷ್ಯ: ಬಸವ ಜಯಂತಿ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope, 20 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು ಮಾತಿನಿಂದ ಮಾನಸಿಕ ದುರ್ಬಲತೆ, ಪ್ರೇಮಿಗಳ ನಡುವೆ ಕೋಪ, ವಿದ್ಯಾಭ್ಯಾಸಕ್ಕೆ ತೊಡಕು, ಫಲಪ್ರದವಾಗದ ಶ್ರಮ, ಅನ್ವೇಷಣೆ ಇವು ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:37, ಯಮಗಂಡ ಕಾಲ 12:24 – 13:57, ಗುಳಿಕ ಕಾಲ 15:31- 17:04
ಮೇಷ ರಾಶಿ: ಕರೆಯದೇ ಎಲ್ಲಿಗೂ ಹೋಗುವ ಇಚ್ಛೆ ತೋರಿಸಲಾರಿರಿ. ಅನಿರೀಕ್ಷಿತ ಆಮಂತ್ರಣದಿಂದ ಉತ್ಸಾಹ. ಸಂಗಾತಿಯಿಂದ ಪ್ರೀತಿಯ ಮೆಲುಕು. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನಿಟ್ಟುಕೊಳ್ಳುವುದು ಸೂಕ್ತ.
ವೃಷಭ ರಾಶಿ: ದೈಹಿಕ ಅನಾರೋಗ್ಯದಿಂದ ಕೋಪ ಅಧಿಕವಾಗಲಿದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ಇತರರ ಬಗ್ಗೆ ದ್ವೇಷ ಭಾವನೆ ಬೇಡ, ಅದು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ವ್ಯಾಪಾರದಲ್ಲಿ ಹಾನಿ ಸಾಧ್ಯತೆ, ಜಾಣತನದಿಂದ ಹಣ ವ್ಯಯಿಸಿ. ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಮನಸ್ಸಿನ ಭಾರವು ನಿಮ್ಮ ಕೆಲಸವನ್ನು ನಿಲ್ಲಿಸುವುದು.
ಮಿಥುನ ರಾಶಿ: ಸ್ನೇಹಿತ ಜೊತೆ ಪ್ರವಾಸದ ಯೋಜನೆ ಉತ್ಸಾಹವನ್ನು ತುಂಬುತ್ತದೆ. ಸಂಗಾತಿಯ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ. ಇದರ ಜೊತೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ನಿಮ್ಮ ಏಕಾಗ್ರತೆಗೆ ಭಂಗಬರಬಹುದು.
ಕರ್ಕಾಟಕ ರಾಶಿ: ನಿಮ್ಮ ಮನಸ್ಸಿಗೆ ತೃಪ್ತಿ ಕೊಡುವಂತಹ ಕೆಲಸವನ್ನು ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ವ್ಯರ್ಥ ಖರ್ಚನ್ನು ನಿಯಂತ್ರಿಸಿ. ಕುಟುಂಬದಿಂದ ಬಲವಾದ ಬೆಂಬಲ ಸಿಗುತ್ತದೆ. ಸಂಗಾತಿಯಿಂದ ಅಲ್ಪಮಟ್ಟದ ನಿರಾಶೆ ಬರಬಹುದು. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆ. ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಆದಾಯ ನೋಡಿ ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ.
ಸಿಂಹ ರಾಶಿ: ಹಣವನ್ನು ಉಳಿಸಿ ಹೂಡಿಕೆ ಮಾಡುತ್ತೇನೆ ಎಂದರೆ ಆಗದು. ಮಕ್ಕಳ ಜೊತೆ ಸಮಯವನ್ನು ಸಂತೋಷದಿಂದ ಕಳೆಯಬಹುದು. ಒತ್ತಡದ ದಿನದವನ್ನು ಮರೆಯಲು ಸಂತೋಷಕೂಟ ಮಾಡುವಿರಿ. ಹಣದ ವ್ಯಯವನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಕುಟುಂಬದ ಸಲಹೆ ಅನುಸರಿಸಿ. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇ ಹೋಗಬಹುದು.
ಕನ್ಯಾ ರಾಶಿ: ಸೃಜನಾತ್ಮಕ ಕೆಲಸದಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ಹಿತ. ಭೂಮಿಯ ಹೂಡಿಕೆ ಲಾಭಪ್ರದ. ಸಂಬಂಧಿಕರಿಂದ ಸಂಜೆಯ ಆಮಂತ್ರಣ ಸಿಗಬಹುದು. ಪ್ರೀತಿಯಲ್ಲಿ ಬಲವಂತ ಬೇಡ. ಸಹೋದರರೊಂದಿಗೆ ಸಂತೋಷ ಸಮಯ ಮೀಸಲಾಗುತ್ತದೆ. ಸಂಗಾತಿಯ ವರ್ತನೆ ಒತ್ತಡ ತರಬಹುದು. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು.
ತುಲಾ ರಾಶಿ: ಹೊಸ ಒಪ್ಪಂದಗಳು ಲಾಭದಾಯಕವಾಗಿ ತೋರುತ್ತಿದ್ದರೂ ಆತುರಾತುರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ವ್ಯಕ್ತಿ ನಿಮ್ಮ ಸಂಬಂಧದ ಮಧ್ಯೆ ಬರಬಹುದು. ನೆರೆಹೊರೆಯವರು ಸಂಬಂಧದಲ್ಲಿ ಗೊಂದಲ ಉಂಟುಮಾಡಲು ಯತ್ನಿಸಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು.
ವೃಶ್ಚಿಕ ರಾಶಿ: ನಿಮಗೆ ಮಕ್ಕಳಿಂದ ಸಂತೋಷದ ಸುದ್ದಿ ಬರಬಹುದು. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಳೆ ಸ್ನೇಹಿತರೊಂದಿಗೆ ಇಂದು ಭೇಟಿಯಾಗುವ ಅವಕಾಶವಿದೆ. ವೈವಾಹಿಕ ಜೀವನದ ಬಗ್ಗೆ ಹೊಸ ಹಿತವಚನಗಳು ನಿಮ್ಮ ಮನಸ್ಸನ್ನು ತಂಪು ಮಾಡಬಹುದು. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ.
ಧನು ರಾಶಿ: ಅತ್ಯಂತ ಪ್ರಭಾವಿ ಜನರ ಬೆಂಬಲದಿಂದ ನಿಮ್ಮ ನೈತಿಕ ಸ್ಥೆರ್ಯವನ್ನು ಹೆಚ್ಚಿಸುತ್ತದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಸ್ವಲ್ಪ ಸಮಯವನ್ನು ನಿಮಗಾಗಿ ಇಡುವಿರಿ. ನೀವು ಕೆಟ್ಟ ಸಮಯದಲ್ಲಿರುವವರನ್ನು ದೂರವಿರಿಸುವಿರಿ. ವ್ಯವಹಾರದಲ್ಲಿ ನಿಮಗೆ ವಿಶ್ವಾಸವು ಸಾಲದು. ಯಾರ ಬಳಿಯೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ನಿಮ್ಮ ಎಲ್ಲ ಶ್ರಮದಾಯಕ ಯೋಜನೆ ಅಂತಿಮವಾಗಿ ಫಲವನ್ನು ನೀಡಲಿದೆ.
ಮಕರ ರಾಶಿ: ಸೌಂದರ್ಯವು ನಿಮ್ಮ ಸ್ವಭಾವವನ್ನು ನುಂಗಿ ಹಾಕುವುದು. ವಿಶೇಷವಾಗಿ ಕೋಪವನ್ನು, ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ನೀವು ಪ್ರಾಮುಖ್ಯತೆ ನೀಡುವ ಸಂಬಂಧಗಳಿಗೆ ಸಮತೋಲನ ಅಗತ್ಯ ಹಾಗೂ ಸಣ್ಣ ಬೆಳವಣಿಗೆಯೂ ಭವಿಷ್ಯದ ಬದಲಾವಣೆಗಳಿಗೆ ದಾರಿ. ಕಾರ್ಯವಿಧಾನದ ಬದಲಾವಣೆಯಿಂದ ನಿಮಗೆ ಸಂತೋಷವಾಗಲಿದೆ.
ಕುಂಭ ರಾಶಿ: ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಿ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ತೆಗೆದುಕೊಳ್ಳುವ ನಿರ್ಧಾರವು ತಪ್ಪಾದೀತು ಎಂಬ ಆತಂಕ.. ರೋಗಬಾಧೆಯಿಂದ ನೀವು ಖಿನ್ನರಾಗುವಿರಿ. ಯಾವ ವಿಚಾರಕ್ಕೂ ಗೊಂದಲವಾಗುವಂತೆ ಇರುವುದು ಬೇಡ.
ಮೀನ ರಾಶಿ: ಕೆಲಸದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಮತ್ತು ಮನೆಯಲ್ಲಿ ಬೇಜವಾಬ್ದಾರಿ. ಇದರಿಂದ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಇಂದು ನೀವು ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ದಾಂಪತ್ಯದಲ್ಲಿ ಪ್ರೀತಿಯು ಹೆಚ್ಚಾಗಬಹುದು. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ.
ಲೋಹಿತ ಹೆಬ್ಬಾರ್ – 8762924271 (what’s app only)




