AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರಿಗೆ ಸಂಗಾತಿಯ ಮೇಲೆ‌ ಪ್ರೀತಿ ಹೆಚ್ಚಾಗಲಿದೆ, ಉತ್ತಮ ಸಮಯ ಕಳೆಯುವಿರಿ

14 ಅಕ್ಟೋಬರ್​ 2024: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಹಾಗಾದರೆ ಅಕ್ಟೋಬರ್ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರಿಗೆ ಸಂಗಾತಿಯ ಮೇಲೆ‌ ಪ್ರೀತಿ ಹೆಚ್ಚಾಗಲಿದೆ, ಉತ್ತಮ ಸಮಯ ಕಳೆಯುವಿರಿ
ಈ ರಾಶಿಯವರಿಗೆ ಸಂಗಾತಿಯ ಮೇಲೆ‌ ಪ್ರೀತಿ ಹೆಚ್ಚಾಗಲಿದೆ, ಉತ್ತಮ ಸಮಯ ಕಳೆಯುವಿರಿ
TV9 Web
| Edited By: |

Updated on: Oct 14, 2024 | 12:05 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಗಂಡ​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:22, ಯಮಘಂಡ ಕಾಲ ಬೆಳಿಗ್ಗೆ 10:50ರಿಂದ 12:18ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:47 ರಿಂದ 03:15 ರವರೆಗೆ.

ಮೇಷ ರಾಶಿ: ತಾಯಿಯ ಪ್ರೀತಿಯು ನಿಮಗೆ ಉತ್ಸಾಹವನ್ನು ಕೊಡುವುದು. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಪ್ರಿಯಕರನ‌ ಜೊತೆ ಸುತ್ತಾಟ ಮಾಡುವಿರಿ. ಉದ್ಯೋಗದಲ್ಲಿ ಸಂತಸವಿರುವುದು. ಪ್ರೀತಿಯ ಮಾತಿನಿಂದ ಇಂದಿನ ನಿಮ್ಮ ಕೆಲಸವು ಆಗುವುದು. ಚಿತ್ತಚಾಂಚಲ್ಯವು ನಿಮ್ಮ ಕಾರ್ಯದ ವೇಗವನ್ನು ಕಡಿಮೆ‌ಮಾಡಿಲುವುದು. ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು. ಅನುರೂಪವಾದ ಸಂಗಾತಿಯು ನಿಮಗೆ ಸಿಗುವರು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಎಲ್ಲ ಮೋಡಗಳೂ ನಿಮಗೆ ಮಳೆಯನ್ನು ಸುರಿಸದು.

ವೃಷಭ ರಾಶಿ: ನೇರ ಮಾತು ಕಹಿಯಾಗುವುದು. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ‌ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ. ಧೈರ್ಯದಿಂದ ಇರುವ ನಿಮಗೆ ಹೇಡಿತನ ಆವರಿಸುವುದು. ನಿಮ್ಮದೇ ಆದೇ ಯೋಜನೆಗಳು ಕಾರ್ಯದ ವೇಗವನ್ನು ಹೆಚ್ಚಿಸಲು ಸಾಧ್ಯವಾಗುವುದು. ಆಸ್ತಿಯ ವಿಚಾರವಾಗಿ ವಾಗ್ವಾದಗಳು ಸಲ್ಲದು. ಕಾನೂನನ್ನು ಪಾಲಿಸಿ. ಒಂದೇ ವಿಚಾರದ ಬಗ್ಗೆ ಅಧಿಕ ಚಿಂತನೆಯನ್ನು ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯಿಂದ ವಂಚಿತರಾಗುವಿರಿ. ನಿಮ್ಮ ವಿಶ್ರಾಂತ ಸ್ಥಿತಿಯನ್ನು ಇತರರು ಹಾಸ್ಯ ಮಾಡಬಹುದು. ಸಂಗಾತಿಯ ಮೇಲೆ‌ ಪ್ರೀತಿಯು ಹೆಚ್ಚಾಗಬಹುದು. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು.

ಮಿಥುನ ರಾಶಿ: ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ನಿಮ್ಮ ವಿಶ್ವಾಸಕ್ಕೆ ಸರಿಯಾದ ಫಲಿತಾಂಶವು ಸಿಗುವುದು. ಗೆಳೆತನವು ಕಲಹದಲ್ಲಿ ಮುಕ್ತಾಯವಾಗುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಣಿಸುವುದು. ಇನ್ನೊಬ್ಬರನ್ನು ದೂರುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ನಿಮ್ಮ ಮಾತುಗಳೇ ತಿರುಗಿಬರಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಸಂಕೀರ್ಣತೆಯನ್ನು ನೀವು ಕಡಿಮೆ‌ ಮಾಡಿಕೊಂಡರೆ ಉತ್ತಮ. ನೀವೇ ಮಾಡಿದ ಕಾರ್ಯವಾದರೂ ಪರಿಶೀಲನೆ ಮುಖ್ಯ.

ಕರ್ಕಾಟಕ ರಾಶಿ: ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಕಲಾವಿದರಿಗೆ ವೃತ್ತಿಯಲ್ಲಿ ಗೌರವ ಸಿಗುವುದು. ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಗೆಲುವು ನಿಮ್ಮದಾದರೂ ಗೆಲ್ಲುವ ದಾರಿ ನಿಮ್ಮದಲ್ಲ. ಪ್ರಯಾಣದಲ್ಲಿ ನಿಮ್ಮ ವಸ್ತುಗಳು ಕಾಣೆಯಾಗಬಹುದು. ಹಿತಶತ್ರುಗಳಿಂದ ನಿಮ್ಮ ಮನಸ್ಸು ನೆಮ್ಮದಿಯಿಂದ ಇರದು. ಹೊಸ ವಿಚಾರಗಳು ನಿಮಗೆ ಆಸಕ್ರಿಯನ್ನು ಮೂಡಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯು ಆಗುವುದು. ಅವರ ಪ್ರಭಾವದಿಂದ‌ ನಿಮಗೆ ಉನ್ನತ ಸ್ಥಾನವೂ ಪ್ರಾಪ್ತವಾಗುವುದು. ತಪ್ಪು ಮಾರ್ಗವನ್ನು ನೀವು ಅರಿವಿಲ್ಲದೇ ಪ್ರವೇಶಿಸುವುರಿ. ಪ್ರಯಾಣದ ಅಡೆತಡೆಯು ನಿಮಗೆ ಕೋಪ ತರಿಸಬಹುದು. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ.

Follow Us
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್