ಈ ರಾಶಿಯವರಿಗೆ ತಾತ್ಕಾಲಿಕ ಹುದ್ದೆ ಪ್ರಾಪ್ತವಾಗಲಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ, ಭಾನುವಾರ ವಿದೇಶ ಗಮನ, ಯೋಜನೆಯ ನಿರೀಕ್ಷೆ, ಅಧಿಕಾರಕ್ಕೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ – 06:21 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:12 – 18:45, ಯಮಘಂಡ ಕಾಲ 12:33 – 14:06, ಗುಳಿಕ ಕಾಲ 15:39 – 17:12
ತುಲಾ ರಾಶಿ: ಅಪಮಾನ ಮಾಡಲು ನಿಮ್ಮನ್ನೇ ಗುರಿಯಾಗಿಸಿಕೊಳ್ಳಬಹುದು. ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡುವಿರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಇಂದು ಏನಾದರೂ ಅಪ್ರಯೋಜನ ಎಂದನಿಸಿದ್ದನ್ನು ಮಾಡುವ ಮೊದಲು ಅದರ ಪರಿಣಾಮದ ಬಗ್ಗೆಯೂ ಆಲೋಚಿಸಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಎಲೆಕ್ಟ್ರಾನಿಕ್ ವಿಚಾರದಲ್ಲಿ ನೀವು ಚಾಣಾಕ್ಷರು. ಹಿರಿಯರ ಸಲಹೆಯನ್ನು ಪಡೆಯುವುದು ನಿಮಗೆ ಅಪಮಾನದಂತೆ ಕಂಡೀತು. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಮಹಿಳೆಯರು ವೃತ್ತಿಯನ್ನು ಛಲದಿಂದ ಸ್ವೀಕರಿಸುವರು. ನೀವು ನಿರಾಸೆ ಅನುಭವಿಸುತ್ತೀರಿ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಅಧ್ಯಯನ ಮಾಡುವಿರಿ. ಉಗುರಿನಿಂದ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.
ವೃಶ್ಚಿಕ ರಾಶಿ: ತಾತ್ಕಾಲಿಕ ಹುದ್ದೆಯು ನಿಮಗೆ ಪ್ರಾಪ್ತವಾಗಲಿದೆ. ಸ್ವತಂತ್ರವಾಗಿರಲು ಇಚ್ಛಿಸುವಿರಿ. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ವಾಹನ ಸಂಚಾರದಲ್ಲಿ ವೇಗ. ತೊಂದರೆಯ ಮುನ್ಸೂಚನೆ ಇರುವುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸಂದರ್ಭ ಬರುವುದು. ನಿಮ್ಮ ವೃತ್ತಿಯನ್ನು ಯಾರಾದರೂ ಅವಮಾನಿಸುವ ಸಾಧ್ಯತೆ ಇದೆ. ನಿಮ್ಮ ದುರಭ್ಯಾಸವು ಮಿತಿಮೀರಬಹುದು. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ನಿಮ್ಮ ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವಾಗುವ ಸಾಧ್ಯತೆ ಇದೆ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ.
ಧನು ರಾಶಿ: ಆರ್ಥಿಕ ವ್ಯವಹಾರಕ್ಕೆ ಪ್ರಶಂಸೆ ಸಿಗುವುದು. ಶಿಸ್ತನ್ನು ಕಾಪಾಡಿಕೊಳ್ಳುವುದೂ ಮುಖ್ಯ. ನಿಮ್ಮ ಕಾರ್ಯವನ್ನು ಕೆಲವು ಸಹೋದ್ಯೋಗಿಗಳೇ ಟೀಕಿಸಬಹುದು. ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಸಾಹಿತ್ಯ ಕ್ಷೇತ್ರದ ಕಡೆಗೆ ನಿಮ್ಮ ಗಮನ ಹೆಚ್ಚಾಗುವುದು. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ನಿಮ್ಮನ್ನು ಬೆಂಬಲಸಿಸದವರಿಗೆ ಕೃತಜ್ಞತೆ ಇರಲಿ. ಹಳೆಯ ವಸ್ತುಗಳು ನಿಮಗೆ ಸಾಕೆನಿಸಬಹುದು. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು.
ಮಕರ ರಾಶಿ: ಹೂಡಿಕೆಗೆ ತಪ್ಪಾದ ಮಾಹಿತಿ ಸಿಗವುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ. ಇಂದುನೀವು ದೈಹಿಕ ಸೌಕರ್ಯವನ್ನು ಇಷ್ಟಪಡುವಿರಿ. ಯಾರಮೇಲಾದೂ ಶಂಕೆ ಇದ್ದರೆ, ಸುಮ್ಮನೇ ಕುಳಿತಿರಬೇಡಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ಎಲ್ಲ ಕಡೆಗಳಲ್ಲಿ ನೀವು ಆತ್ಮರಕ್ಷಣೆಯನ್ನು ಮಾಡಿಕೊಳ್ಳುವಿರಿ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದಾಗಿ ಕೆಲವು ಅವಕಾಶಗಳು ತಪ್ಪುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು.
ಕುಂಭ ರಾಶಿ: ಅಧಿಕಾರಿಗಳ ವಿರುದ್ಧ ತಂತ್ರ ನಡೆಯುವುದು. ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯು ಇಂದು ಇರಲಿದೆ. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಬಗ್ಗೆ ಖುಷಿ ಇರಲಿದೆ. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕ್ಕಾಗಿ ತಾಯಿಯನ್ನು ಪೀಡಿಸುವುದು ಬೇಡ. ನಿಮ್ಮದೇ ಸರಿ ಇದ್ದರೂ ಅದನ್ನು ಪ್ರತಿಪಾದಿಸುವ ಕ್ರಮವು ವ್ಯತ್ಯಾಸವಾಗುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಹಣದ ವ್ಯವಹಾರದಲ್ಲಿ ಮೋಸ. ಹೇಳಿಕೊಳ್ಳಲು ಭಯ. ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಹಳೆಯ ರೋಗ ನಿಮ್ಮನ್ನು ಕಾಡಲಿದ್ದು, ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಜೀವನದ ತೊಂದರೆಗಳನ್ನು ಸಂಗಾತಿಯ ಜೊತೆಗೆ ಹಂಚಿಕೊಳ್ಳಲು ಬಯಸುವಿರಿ. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ.
ಮೀನ ರಾಶಿ: ಬಹುನಿರೀಕ್ಷತ ಅವಕಾಶಗಳು ನಿಮ್ಮ ಪಾಲಿಗೆ ಒದಗುವುದು. ನೀವು ಇಂದು ಬಂಧುಗಳಿಂದ ಯಾವುದಾದರೂ ಒಂದು ರೀತಿಯಲ್ಲಿ ಸಹಾಯವನ್ನು ಬಯಸುವಿರಿ. ಅಲ್ಪ ಜಮೀನಿನ ಕೃಷಿಯಲ್ಲಿ ಒಳ್ಳೆಯ ಲಾಭವನ್ನು ಗಳಿಸಲಿದ್ದೀರಿ. ಪ್ರಭಾವಿ ವ್ಯಕ್ತಿಗಳ ಭೇಟಿಗೆ ಇಂದು ಅವಕಾಶ ಸಿಗದೇ ಹೋಗದೆ ಇರಬಹುದು. ಆರ್ಥಿಕ ವ್ಯವಹಾರದಲ್ಲಿ ದಾಖಲೆ ನಷ್ಟ. ಇಂದು ಬಂಧುಗಳ ಆಗಮನವಾದ ಕಾರಣ ಕುಟುಂಬ ಜೊತೆ ಹೆಚ್ವು ಕಾಲ ಕಳೆಯಿರಿ. ನೀವು ಕೆಲಸದಲ್ಲಿ ಇಂದು ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ನಿಮ್ಮ ಯೋಜನೆಗಳು ಭವಿಷ್ಯವನ್ನು ನಿರ್ಮಿಸುವುದು. ಮಾನಸಿಕವಾಗಿ ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅನುಭವಿಸುವಿರಿ. ಒಂಟಿತನವನ್ನು ಇಷ್ಟಪಡುತ್ತೀರಿ. ಗುರುವಿನ ದರ್ಶನವನ್ನು ಪಡೆಯಿರಿ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಓಡಾಟಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು.