AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ, ಬುಧವಾರ ಸಾಧಕ‌ ಬಾಧಕಗಳ ಬಗ್ಗೆ ಚಿಂತನೆ, ನಾಮಾಂಕಿತರ ಭೇಟಿ, ಶತ್ರುಗಳಿಗೆ ಕುಮ್ಮಕ್ಕು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 14, 2025 | 1:54 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧವಾರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ – 06 : 06 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:29 – 14:05, ಯಮಘಂಡ ಕಾಲ 07:42 – 09:18, ಗುಳಿಕ ಕಾಲ 10:53 – 12:29

ಮೇಷ ರಾಶಿ: ನಿಧಾನವಾಗಿ ಹೋಗುವವರು ನಿಮಗೆ ಅವಕಾಶ ಕೊಡಬಹುದು, ಆದರೆ ಅಪಾಯವನ್ನು ತಿಳಿಸಲಾರರು. ನಿಮಗೆ ಇಂದು ಅಪರೂಪದ ಸಂದರ್ಭಗಳು ಎದುರಾಗಬಹುದು. ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ಅದರ ಬಗ್ಗೆ ಟೀಕೆಗಳನ್ನು ಮಾಡಿ ಭಾವನೆಗೆ ಹೊಡೆತ ಕೊಡುವುದು ಬೇಡ. ಉದ್ಯೋಗದಲ್ಲಿ ಬದಲಾವಣೆ ಯೋಗವಿದೆ. ಶೀತಲ ಸಮರದಿಂದ ವಿರಾಮ ಸಿಗಲಿದೆ. ಹಣಕಾಸಿನಲ್ಲಿ ಲಾಭದ ಸೂಚನೆಗಳಿವೆ. ಸ್ನೇಹಿತರಿಂದ ಸಾಥಿ ಸಿಗುತ್ತದೆ. ಮನೆಯವರೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಸಹೋದರಿಗೆ ಉದ್ಯಮವನ್ನು ಕೊಡಿಸುವಿರಿ. ನಿಮಗಾಗಿ ಅತ್ಯಂತ ಹೊಂದಾಣಿಕೆಯ ಪಾಲುದಾರ ಎಂದು ಸಾಬೀತುಪಡಿಸುವ ಯಾರಾದರೂ ಈ ನಿಮ್ಮ ಜೀವನವನ್ನು ಪ್ರವೇಶಿಸುತ್ತಾರೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಾಗಲಿದೆ. ಹಿರಿಯರಿಂದ ಆಶೀರ್ವಾದವನ್ನು ಪಡೆಯಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಎಂತಹ ನೋವನ್ನು ಸಹಿಸುವ ಸಾಮರ್ಥ್ಯ ಇದೆ ಎಂದು ದುಸ್ಸಾಹಸಕ್ಕೆ ಹೋಗುವುದು ಬೇಡ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ.

ವೃಷಭ ರಾಶಿ: ನಿಮ್ಮ ಮೇಲೆ ಸಹಾನುಭೂತಿ ಇದ್ದರೂ ಅದನ್ನು ಉಳಿಸಿಕೊಳ್ಳುವುದೂ ನಿಮ್ಮ‌ಮೇಲಿರಲಿದೆ. ನೀವು ಇಂದು ಏಕಾಂತದಲ್ಲಿ ಸಮಯ ಕಳೆಯಲು ಇಚ್ಛಿಸುವಿರಿ. ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಬುದ್ದಿಯ ಚಾತುರ್ಯದಿಂದ ಸಮಸ್ಯೆಗಳನ್ನು ಪರಿಹರಿಸಬಹುದು. ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಸ್ವಲ್ಪ ಎಚ್ಚರತೆ ಅಗತ್ಯವಿದೆ. ಮನಸ್ಸು ಸ್ವಲ್ಪ ಗೊಂದಲದಲ್ಲಿದ್ದರೂ ನಿರ್ಧಾರ ತಾಳ್ಮೆಯಿಂದ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಂತಸದ ಸುದ್ದಿ ಲಭಿಸಬಹುದು. ಜೀವನ ಸಂಗಾತಿಯನ್ನು ಹುಡುಕುತ್ತಿರುವ. ನಕಾರಾತ್ಮಕ ಪರಿಣಾಮಗಳನ್ನು ತರುತ್ತದೆ, ಆದ್ದರಿಂದ ನೀವು ವಾರದ ಕೊನೆಯ ಭಾಗದಲ್ಲಿ ಆರೋಗ್ಯದ ವಿಷಯದಲ್ಲಿ ಹೆಚ್ಚು ಬಳಲುತ್ತೀರಿ. ಕುತೂಹಲದಿಂದ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು.

ಮಿಥುನ ರಾಶಿ: ನೇರವಾಗಿ ಯಾರಿಗೂ ಏನನ್ನೂ ಹೇಳಲಾರಿರಿ. ನೀವು ಎಲ್ಲದಕ್ಕೂ ಆದ್ಯತೆಗಳು ಮತ್ತು ವೇಳಾಪಟ್ಟಿಗಳನ್ನು ಹೊಂದಿಸಿಕೊಂಡು ಕಾರ್ಯವನ್ನು ಮಾಡಿ. ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ವೃತ್ತಿಪರ ಜೀವನದಲ್ಲಿ ಪ್ರಗತಿಯ ಮಾರ್ಗ ತೆರೆಯಲಿದೆ. ಹಣಕಾಸಿನ ಲೆಕ್ಕಾಚಾರ ನಿಖರವಾಗಿರಲಿ. ಸಾಲವನ್ನು ಹಂತವಾಗಿ ತೀರಿಸಲು ಒಪ್ಪಿಗೆ ತೆಗೆದುಕೊಳ್ಳುವಿರಿ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದಾದ್ದರಿಂದ ತಾಳ್ಮೆಯಿಂದ ನಡೆದುಕೊಳ್ಳಿ. ಮಿತ್ರರೊಂದಿಗೆ ಸಂತಸದ ಸಂವಾದವಾಗಬಹುದು. ಸಜ್ಜನರೊಂದಿಗೆ ಮಾತುಕತೆ ನಿರ್ಣಯವನ್ನು ಬಲಪಡಿಸಬಹುದು. ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇರುವಿರಿ. ಸರ್ಕಾರಿ ಕೆಲಸವನ್ನು ಮಾಡಿಸಿಕೊಳ್ಳುವುದು ನಿಧಾನವಾಗಲಿದೆ. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು.

ಕರ್ಕಾಟಕ ರಾಶಿ: ಭರವಸೆಯಿಂದ ಯಾವ ಕೆಲಸವೂ ಆಗದು. ಅದು ನಿಮ್ಮನ್ನು ನಿಮ್ಮ ಕುಟುಂಬಕ್ಕೆ ಹತ್ತಿರ ತರುತ್ತದೆ. ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಾರೆ. ನಿಮ್ಮ ಯಾತ್ರೆಯ ಯೋಜನೆಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ನವೀನ ಅವಕಾಶಗಳು ಲಭ್ಯ. ಕಳೆದ ವಸ್ತುಗಳು ನಿಮ್ಮ ಕೈ ಸೇರಲಿದೆ. ಹಣಕಾಸಿನ ಬಗ್ಗೆ ನಿಯಂತ್ರಣವಹಿಸಿ. ಮನೆಯೊಳಗಿನ ಒತ್ತಡದ ಪರಿಸ್ಥಿತಿಗಳಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಧೈರ್ಯ ಮತ್ತು ಸ್ಪಷ್ಟ ನಡವಳಿಕೆಯು ಪ್ರಶಂಸೆಗೆ ಕಾರಣವಾಗಬಹುದು. ಮನೆಯಿಂದ ದೂರ ಹೋಗುವ ಸಂದರ್ಭ ಬರಬಹುದು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಭೂಮಿಯ ಖರೀದಿಯನ್ನು ಏಕಮುಖವಾಗಿ ಮಾಡುವುದು ಬೇಡ. ಬರಬೇಕಾದ ಧನಾಗಮನದ ನಿರೀಕ್ಷೆಯಲ್ಲಿ ಇಂದು ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ.

ಸಿಂಹ ರಾಶಿ: ಹೊಸ ಉದ್ಯೋಗಕ್ಕೆ ಮನೋಬಲ ಪೂರ್ಣವಾಗಿ ಇರದು. ಇಂದು ನಿಮಗೆ ಪ್ರಮುಖ ಕೆಲಸವನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೊಡಬಹುದು. ಇಂತಹ ವಿಷಯಗಳನ್ನು ನಿಭಾಯಿಸುವಲ್ಲಿ ನೀವು ನಿಜವಾಗಿಯೂ ಪ್ರವೀಣರಾಗಿರುತ್ತೀರಿ. ಬಾಂಧವ್ಯದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನಿರ್ಧಾರಗಳಲ್ಲಿ ಸ್ಪಷ್ಟತೆಯಿರುವುದರಿಂದ ಮುನ್ನಡೆ ಸುಲಭವಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸಿನಲ್ಲಿ ನೆಮ್ಮದಿಯ ಚಲನವಿದೆ. ಬುದ್ದಿವಂತರ ಸಲಹೆ ಒಳ್ಳೆಯ ನಿರ್ಧಾರಕ್ಕೆ ದಾರಿ ತೋರಬಹುದು. ಕೆಲಸದ ಸ್ಥಳದಲ್ಲಿ ಪ್ರಶಂಸೆ ಪಡೆಯುವಿರಿ. ಪ್ರಯತ್ನಿಸುವ ಕಾರ್ಯವು ಯಶಸ್ಸಿನ ಕಡೆಗೆ ಸಾಗುತ್ತಿದೆಯೇ ಎನ್ನುವುದು ಗಮನಿಸಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ.

ಕನ್ಯಾ ರಾಶಿ: ಎಚ್ಚರ ತಪ್ಪಿ ಏನಾದರೂ ಮಾಡಬಹುದು. ಇಂದು ತುಂಬಾ ದಿನದಿಂದ ಮಾಡುತ್ತಿದ್ದ ಕಾರ್ಯ ಯೋಜನೆಗಳನ್ನು ಪೂರ್ಣಮಾಡುವಿರಿ. ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ಇಂದೇ ಆಲೋಚನೆ ಸ್ಥಿರವಾಗಿ ಇರದು. ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಮಿತವ್ಯಯವೂ ಲಾಭವೂ ಸಮಾಮವಾಗಿರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಬಹುದು. ಜವಾಬ್ದಾರಿಗಳಲ್ಲಿ ಕಷ್ಟವಾಗಿದ್ದರೂ ಯಶಸ್ಸು ಖಚಿತ. ವಿದ್ಯಾರ್ಥಿಗಳಿಗೆ ಈ ದಿನ ಗಮನವಿಟ್ಟು ಓದುವ ಅಗತ್ಯವಿದೆ. ಇದರಿಂದ ನಿಮ್ಮ ಪ್ರೇಮ ಸಂಬಂಧಕ್ಕೆ ಸ್ವಲ್ಪ ತೊಂದರೆಯಾಗಲಿದೆ. ಇನ್ನೊಬ್ಬರ ಹೊಟ್ಟೆ ಕಿಚ್ಚಿನಿಂದ ನಿಮ್ಮ ಕಾರ್ಯದಲ್ಲಿ ವ್ಯತ್ಯಾಸವಾಗಬಹುದು. ಅಗತ್ಯವಿರುವುದರಿಂದ ನೀವು ಅವರಿಗೆ ಹೆಚ್ಚು ಭರವಸೆ ನೀಡಬೇಕು. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ.

ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!