AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡುವರು, ನೀವಾಗಿಯೇ ಒತ್ತಡವನ್ನು ತಂದುಕೊಳ್ಳಲಿದ್ದೀರಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡುವರು, ನೀವಾಗಿಯೇ ಒತ್ತಡವನ್ನು ತಂದುಕೊಳ್ಳಲಿದ್ದೀರಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 18, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 18 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ರಿಂದ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:36 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ 05:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ.

ಮೇಷ ರಾಶಿ: ಕಲೆಯನ್ನು ಅಭಿರುಚಿಯು ಹೆಚ್ಚು ಇರಲಿದೆ. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು. ಹಿತಶತ್ರುಗಳ ಪೀಡೆಯು ಉತ್ಸಾಹವು ಕುಗ್ಗಿಸಬಹುದು ಅಥವಾ ಅನ್ಯ ಕೆಲಸಗಳನ್ನು ಮಾಡಲು ಅವಕಾಶಗಳನ್ನು ಕೊಡದೇ ಹೋಗಬಹುದು. ಉತ್ತಮ‌ ಆಹಾರವನ್ನು ನೀವು ಸೇವಿಸಲಿದ್ದೀರಿ. ಬರಹಗಾರರಿಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಬಹುದು. ಯಾವ ವಿಚಾರಗಳಿಗೂ ಅತಿಯಾದ ಚಿಂತೆಯ ಅವಶ್ಯಕತೆ ಇರದು.

ವೃಷಭ ರಾಶಿ: ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ಭವಿಷ್ಯದ ಬಗ್ಗೆ ನಿಮಗೆ ಕೆಲವರು ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮರಿಗೆ ನೀವು ಬೆಲೆಯನ್ನು ಕೊಡುವಿರಿ. ಸಾಧ್ಯವಾದಷ್ಟು ಎಲ್ಲರ ಜೊತೆ ಬೆರೆಯುವ ಮನಃಸ್ಥಿತಿಯನ್ನು ಇಟ್ಟುಕೊಳ್ಳಿ. ನಿಮ್ಮ ಮೂಗಿನ ನೇರಕ್ಕೆ ಆಗಬೇಕು ಎಲ್ಲವು ಎಂಬ ಧೋರಣೆ ಸರಿಯಾಗದು. ಸ್ವೇಚ್ಛೆಯಿಂದ ಇಂದಿನ ದಿನವನ್ನು ಕಳೆಯುವಿರಿ. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ. ಮಕ್ಕಳ ಮಾತುಗಳು ನಿಮಗೆ ಹಾಸ್ಯದಂತೆ ಕಾಣಿಸುವುದು.

ಮಿಥುನ ರಾಶಿ: ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸವನ್ನು ಮಾಡುವಿರಿ. ನಿಮ್ಮ ನೈಜ‌ಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ‌ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಸಮಯವನ್ನು ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು. ಆದಾಯ ಮೂಲದ ಬಗ್ಗೆ ನಿಮಗೆ ಅಸಮಾಧನವು ಇರಲಿದೆ. ಯಾರದೋ ವಿಚಾರಕ್ಕೆ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ನಿದ್ರೆಯಲ್ಲಿ ದುಃಸ್ವಪ್ನಗಳು ನಿಮ್ಮ ಆಲೋಚನೆಯ ದಿಕ್ಕನ್ನು ತಪ್ಪಿಸಬಹುದು. ಸಂಗಾತಿಯ ಜೊತೆ ವಿಹಾರವನ್ನು ಮಾಡುವಿರಿ.

ಕರ್ಕ ರಾಶಿ: ನಿಮ್ಮ ಉದ್ಯೋಗವು ಗೋಡೆಯ ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಆರೋಗ್ಯದ ಸಮಸ್ಯೆಯು ಗಂಭೀರವಾಗಿ ಇರಲಿದೆ. ನಿಮ್ಮ ಇಷ್ಟದವರ ಭೇಟಯಿಂದ ಖುಷಿಯು ಹೆಚ್ಚಾಗಲಿದೆ. ಕಡಿಮೆ ಖರ್ಚಿದ್ದರೂ ದೈಹಿಕ ಶ್ರಮವು ಹೆಚ್ಚಾಗುವುದು. ಸರ್ಕಾರಿ ಉದ್ಯೋಗವನ್ನು ಮಾಡುತ್ತಿದ್ದರೆ ಒತ್ತಡವು ನಿಮಗೆ ಅಧಿಕವಾಗಲಿದೆ. ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಹೆಚ್ಚು ಹಣವನ್ನು ಖರ್ಚುಮಾಡುವಿರಿ. ದುಸ್ಸಾಧ್ಯವಾದ ಕೆಲಸಗಳಿಗೆ ನೀವು ಪ್ರಯತ್ನಶೀಲರಾಗುವುದು ಬೇಡ.

Follow Us
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​