Horoscope Today 29 January 2025: ಈ ರಾಶಿಯವರಿಗೆ ಇಂದು ಪ್ರೇಮವು ಬಂಧನದಂತೆ ಕಾಣಿಸುವುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಪ್ರತಿಪತ್ ತಿಥಿಯಲ್ಲಿ ಗೃಹನಿರ್ಮಾಣದಲ್ಲಿ ತೊಂದರೆ, ವಿದ್ಯಾರ್ಥಿಗಳಿಗೆ ಒತ್ತಡ, ಉದ್ಯೋಗದಲ್ಲಿ ಬಡ್ತಿಯ ಹೆಚ್ಚಿಸಿಕೊಳ್ಳುವ ಬಗ್ಗೆ ಯಾವ ರಾಶಿಗೆ ಏನು ಫಲ ಎನ್ನುವುದು ಈ ದಿನ ಭವಿಷ್ಯದ ವಿಶೇಷ. ಶುಭಮಸ್ತು ನಿತ್ಯಮ್.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ: ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಘಾ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸಿದ್ಧಿ, ಕರಣ : ನಾಗವಾನ್ , ಸೂರ್ಯೋದಯ – 07 – 02 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:46 – 14:12, ಯಮಘಂಡ ಕಾಲ 08:28 – 09:54, ಗುಳಿಕ ಕಾಲ 11:20 – 12:46
ಮೇಷ ರಾಶಿ: ವಿವಾಹಿತರಿಗೆ ಸಣ್ಣ ವಿಚಾರಕ್ಕೆ ಸಂಗಾತಿಯ ನಡುವೆ ಕಲಹ ಘಟಿಸಬಹುದು. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ನಿಮ್ಮ ಸಾಧನೆಗೆ ಸಣ್ಣ ಪ್ರೋತ್ಸಾಹವೂ ದೊಡ್ಡದೇ. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಬಾಗುವಿಕೆಯಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಆ ಭಾವ ನಿಮ್ಮಲ್ಲಿದ್ದರೆ ತೆಗೆದುಹಾಕಿ. ಹಿರಿಯರ ಭೇಟಿಯಿಂದ ಜೀವನಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ. ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಅಪರಿಚಿತರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲವು ಬರಬಹುದು.
ವೃಷಭ ರಾಶಿ: ನಿಮ್ಮಿಂದ ಮರ್ಗದರ್ಶನವನ್ನು ಪಡೆಯಲು ಬರಬಹುದು. ನಿಮ್ಮ ಜವಾಬ್ದಾರಿಯ ಬಗ್ಗೆ ತಾತ್ಸಾರಭಾವವು ಬರಬಹುದು. ಕೆಲವನ್ನು ನೀವು ದೂರ ಇಟ್ಟುಕೊಳ್ಳುವುದೇ ಉತ್ತಮ. ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ಪುಣ್ಯ ಸ್ಥಳದ ದರ್ಶನದಿಂದ ಶಕ್ತಿಸಂಚಯವಾಗಲಿದೆ. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ವ್ಯಾಪಾರಸ್ಥರ ವಿತ್ತಕೋಶ ಭರ್ತಿಯಾಗಿ ಸಂತಸವಾಗಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ. ಇಬ್ಬಗೆಯ ಮಾನಸಿಕತೆಯು ಬೇಡ.
ಮಿಥುನ ರಾಶಿ; ಯಾರ ಜೊತೆಯೂ ಬೆರೆಯುವ ಮನಸ್ಸಿರದು. ನಿಮ್ಮ ವೈಯಕ್ತಿಕ ವಿಚಾರಗಳನ್ನು ಅಗತ್ಯವಿರುವವರಿಗೆ ತಿಳಿಸಿ. ನಿಮ್ಮ ಕಾರ್ಯನಿರ್ವಹಣೆಯಿಂದ ಉತ್ತಮ ಫಲಿತಾಂಶವು ಸಿಗಬಹುದು. ಪ್ರೀತಿ ಕೊಟ್ಟವರ ನೋವಿಗೆ ಸ್ಪಂದಿಸುವಿರಿ. ಕೈಲಾಗದ ಕಾರ್ಯಕ್ಕೆ ಸೈ ಎನಿಸಿಕೊಳ್ಳುವ ಅಸೆ ನಿಮ್ಮದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು. ಪ್ರೇಮವು ಸ್ಥಾಯಿಯಾಗಿರಲು ಒಂದಿಷ್ಟು ಪೌಷ್ಟಿಕಾಂಶ ಬೇಕು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಬಂಧುಗಳು ನಿಷ್ಠುರದ ಮಾತುಗಳನ್ನಾಡುವರು. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಮಾತಗಳಲ್ಲಿ ವಕ್ರತೆಯನ್ನು ಕಡಿಮೆ ಮಾಡಿ. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ.
ಕರ್ಕಾಟಕ ರಾಶಿ: ನೂತನ ಗೃಹದ ಮೇಲೆ ಇತರರ ದೃಷ್ಟಿ ಬೀಳಬಹುದು. ವಿವಾದವಿಲ್ಲದೇ ಇರಲಾರದಷ್ಟು ನಿಮ್ಮ ಮಾನಸಿಕ ಸ್ಥಿತಿ ಬದಲಾಗಿದೆ. ನಿಮ್ಮ ಸಕಾರಾತ್ಮಕ ಆಲೋಚನೆಗಳೂ ನಿಮಗೆ ಸಹಕಾರವನ್ನು ಕೊಡದು. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಮೇಲಧಿಕಾರಿಗಳ ಮನವೊಲಿಸಿ ನಿಮ್ಮ ಭಡ್ತಿಯನ್ನು ಮಾಡಿಸಿಕೊಳ್ಳುವಿರಿ. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಉದ್ವೇಗದಿಂದ ಸೂಕ್ಷ್ಮ ಕಾರ್ಯಗಳು ಹಾಳಾಗುವುದು. ಯಂತ್ರಗಳ ಜೊತೆ ಕೆಲಸ ಮಾಡುವುದು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗಿ ಯಶಸ್ಸು ಸಾಧಿಸುವಿರಿ.
ಸಿಂಹ ರಾಶಿ: ನಿಮಗೆ ಬರಬೇಕಾದ ವ್ಯಾಪಾರದ ಸರಕಿನಲ್ಲಿ ವ್ಯತ್ಯಯ. ಸ್ವಲ್ಪ ಆತಂಕವೂ ಇರಲಿದೆ. ನಿಮ್ಮ ಆದಾಯವು ಇತರರಿಗೆ ಸಮಾನವಾಗಿದ್ದರೂ ಖರ್ಚು ಹಾಗಿರುವುದಿಲ್ಲ. ಏನಾದರೊಂದು ಹುಟ್ಟಿಕೊಳ್ಳುತ್ತದೆ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು. ಪ್ರೇಮಪಾಶದಿಂದ ಬಿಡಿಸಿಕೊಳ್ಳುವ ಪ್ರಯತ್ನ ಇರಲಿದೆ. ಉನ್ನತ ವಿದ್ಯಾಭ್ಯಾಸದ ಕನಸು ಬಂಧುಗಳ ಸಹಕಾರದಿಂದ ಆಗಲಿದೆ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಬೌದ್ಧಿಕ ಆಕ್ರಮಣವನ್ನು ಮೇಲಧಿಕಾರಿಗಳು ಮಾಡಬಹುದು. ಅವಸರವಸರವಾಗಿ ಇಂದಿನ ಕಾರ್ಯಗಳನ್ನು ಮಾಡುವಿರಿ. ಆದರೂ ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡು ಕೈಸುಟ್ಟುಕೊಳ್ಳುವುದು ಬೇಡ.
ಕನ್ಯಾ ರಾಶಿ: ಧಾರ್ಮಿಕ ನಾಯಕರ ಜೊತೆ ವಾಗ್ವಾದ ಮಾಡುವಿರಿ. ಸ್ಪರ್ಧಾತ್ಮಕ ವಿಚಾರಕ್ಕೆ ಸೋಲುಕಂಡು ಹತಾಶ ಭಾವ ನಿಮ್ಮಲ್ಲಿ ಜಾಗರೂಕವಾಗುವುದು. ನಿಮ್ಮ ವ್ಯಕ್ತಿತ್ವವು ಸಕಾರಾತ್ಮಕವಾಗಿ ಬೆಳೆಯುತ್ತಿರುವುದು ನಿಮಗೂ ಇತರರಿಗೂ ಸಂತೋಷದ ಸಂಗತಿಯಾಗಿದೆ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ. ಕಳೆದುಕೊಳ್ಳಬೇಕಿದ್ದ ಭೂಭಾಗವನ್ನು ನೀವು ಪಡೆಯುವಿರಿ. ಇಂದು ಮಾಡುವ ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ಉದ್ಯಮ ನಿಮಿತ್ತ ಪರ ಊರಿಗೆ ಪ್ರಯಾಣ. ನೌಕರರ ಅಪೇಕ್ಷೆಯನ್ನು ಪೂರೈಸುವುದು ನಿಮಗೆ ಅನಿವಾರ್ಯವಾದೀತು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಮನೆಯ ಬಗ್ಗೆ ನಿಮಗೆ ಕಾಳಜಿ ಹೆಚ್ಚು. ಹಿರಿಯರ ಅಸೆಯನ್ನು ಪೂರೈಸುವಿರಿ.
ತುಲಾ ರಾಶಿ: ಯಾರ ಮಾತಿಗೂ ಬಗ್ಗದ ಒರಟು ತನ ಇಂದು ಇರುವುದು. ನಿಮ್ಮ ಭವಿಷ್ಯದ ಗುರಿಯನ್ನು ನಿರ್ಧಾರ ಮಾಡಿಕೊಳ್ಳುವುದು ಉತ್ತಮ. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ಪ್ರಾಯೋಗಿಕ ವಿಭಾಗದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಹಳೆಯ ಮನೆಯಲ್ಲಿ ವಾಸ ಮಾಡುವಿರಿ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಚಾಲಕ ವೃತ್ತಿಯವರಿಗೆ ಹೆಚ್ಚು ಪ್ರಯಾಣ ಹಾಗೂ ಆಯಾಸದ ದಿನ. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಕಟು ವಚನದಿಂದ ಬೇಸರವಾಗಲಿದೆ. ಅವಕಾಶಗಳನ್ನು ಕಳೆದುಕೊಂಡು ಮನಸ್ಸಿನಲ್ಲಿಯೇ ದುಃಖಿಸುವಿರಿ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದು ಬೇಡ.
ವೃಶ್ಚಿಕ ರಾಶಿ; ನಾಯಕತ್ವದ ಗುಣದಿಂದ ಸ್ಥಾನವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಯೋಜನೆಗಳು ದಾರಿ ತಪ್ಪಿ ಹೋಗಬಹುದು. ಕುಟುಂಬದ ಜೊತೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮನಸ್ಸಾಗುವುದು. ಪರದೇಶದಲ್ಲಿ ಇರುವವರಿಗೆ ಅರಾಜಕತೆ ಬರುವ ಸಾಧ್ಯತೆ ಇದೆ. ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಇಂದಿನ ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ನೂತನ ಗೃಹದ ವಿನ್ಯಾಸ ಪೂರ್ಣವಾಗುವುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಕಲಹವಾಗುವುದು. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದು. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಇಂದು ಸಾಧ್ಯವಾಗದು.
ಧನು ರಾಶಿ: ನಿಮ್ಮ ಸಂಪತ್ತಿಗೆ ಸರಿಯಾದ ಸ್ಥಾನವನ್ನು ಕೊಡಿ. ನಿಮ್ಮವರು ನಿಮ್ಮ ಗೌರವ ಮತ್ತು ವ್ಯಕ್ತಿತ್ವವನ್ನು ಕಂಡು ಹುಬ್ಬೇರಿಸಿಯಾರು. ಉದ್ಯೋಗಕ್ಕೆ ಸೇರಲು ಬಹಳ ಶ್ರಮಪಡಬೇಕಾದೀತು. ಅನವಶ್ಯಕ ಕರೆಗಳು ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗ ತರುವುವು. ವಿದ್ಯಾಭ್ಯಾಸಕ್ಕೆ ಅತಿಯಾದ ಹಣಕಾಸಿನ ಖರ್ಚು ಬರಲಿದ್ದು, ನಿಮಗೆ ಕಷ್ಟವಾಗುವುದು. ನಿರೀಕ್ಷಿತ ಸಂದರ್ಭವು ಇಂದು ಬರಲಿದ್ದು ಅದನ್ನು ಬಳಸಿಕೊಳ್ಳುವಿರಿ. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಮನೆಯ ನಿರ್ಮಾಣದ ಖರ್ಚು ಅಧಿಕವಾಗುವುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಜಾಣ್ಮಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ಇಂದು ನೀವಾಡವ ಮಾತು ತೂಕದ್ದಾಗಿರಲಿದೆ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ಪರಿಶೀಲಿಸುವರು.
ಮಕರ ರಾಶಿ: ನಿಮ್ಮ ದಾಂಪತ್ಯದಲ್ಲಿ ಹಲವು ತಿರುವುಗಳಿಗೆ ಅವಕಾಶವಿದೆ. ನೀವು ಹೇಗೆ ಎನ್ನುವುದು ಇಲ್ಲಿರುವ ಪ್ರಶ್ನೆ. ಮೃದುವಾಗಿದ್ದರೆ ಹೊಂದಾಣಿಕೆ ಸಾಧ್ಯ. ನಿಮ್ಮ ಸಾರ್ವಜನಿಕ ಸಂಪರ್ಕದ ವ್ಯಾಪ್ತಿಯೂ ವಿಶಾಲವಾಗುವುದು. ಮಾರುಕಟ್ಟೆಗೆ ಸಂಬಂಧಿತ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಕೆಲವು ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಪ್ರಯೋಜನವಾದೀತು. ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ಪಾಲುದಾರಿಕೆಯಲ್ಲಿ ಬೇರ್ಪಡುವ ಸಾಧ್ಯತೆ ಇದೆ. ತಂದೆಯ ಮಾತನ್ನು ಉಳಿಸಿಕೊಳ್ಳಲು ನಿಮ್ಮ ಶ್ರಮವು ಬಳಕೆಯಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ನಿಮ್ಮವರೇ ಆದರೂ ನಿಯಮ ಮೀರದಂತೆ ನೋಡಿಕೊಳ್ಳಬೇಕು. ಮಾಡಬೇಕೆಂದುಕೊಂಡ ಕಾರ್ಯನ್ನು ತೊಂದರೆ ಬಂದರೂ ಬಿಡದೇ ಮುಂದುವರಿಯಿರಿ. ಆದಾಯದ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ನೀವು ಬಹಳ ಹಿಂದೆ.
ಕುಂಭ ರಾಶಿ: ಸಾಮೂಹಿಮ ಖರೀದಿದಾರರಿಗೆ ಉತ್ತಮ ವಸ್ತುಗಳು ಲಭ್ಯವಾಗಲಿವೆ. ಇಂದು ನೀವು ಕೈ ಹಾಕುವ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುವಿರಿ. ಉತ್ಪಾದನೆಯ ಕ್ಷೇತ್ರದಲ್ಲಿರುವವರು ಬಹಳ ಎಚ್ಚರಿಕೆಯಿಂದ ಇರುಬುದು ಅಗತ್ಯ. ಏನಾದರೂ ಅನಾಹುತಗಳು ನಡೆಯಬಹುದು. ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯವು ಇರಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಪ್ರಯೋಗಾತ್ಮಕ ವಿಚಾರಕಗಕೆ ನಿಮ್ಮ ಆಸಕ್ತಿ ಹೆಚ್ಚು. ಕಾರ್ಯದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ಕೋಪಿಸಿಕೊಂಡು ಎಲ್ಲವನ್ನೂ ಶಪಿಸಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹಕ್ಕೆ ಭಂಗವನ್ನು ತಂದೀತು.
ಮೀನ ರಾಶಿ; ರಕ್ಷಣಾತ್ಮಕ ವಿಚಾರದಲ್ಲಿ ನಿಮಗೆ ಸೋಲಾಗಬಹುದು. ಮೇಲಿನವರಿಂದ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮ್ಮ ಪೂರ್ಣ ಶಕ್ತಿಯ ಜೊತೆ ನೀವು ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರಿಯಿರಿ. ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಕಛೇರಿಯಲ್ಲಿ ಹೆಚ್ಚಿನ ಕೆಲಸದ ಕಾರಣ ಹೆಚ್ಚುವರಿ ಸಮಯವನ್ನು ನೀಡಬೇಕಾಗಬಹುದು. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸರ್ಕಾರದ ಉದ್ಯೋಗಿಗಳಿಗೆ ಇಷ್ಟವಿಲ್ಲದ ಕಡೆ ವರ್ಗಾವಣೆ ಸಂಭವ. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡುತ್ತಾನೆ. ನಿಮ್ಮ ಮೇಲೆ ಹಿತಶತ್ರುಗಳು ಇಲ್ಲದ ಆರೋಪವನ್ನು ಮಾಡಬಹುದು. ನಿಮ್ಮ ತಿಳಿವಳಿಕೆಯನ್ನು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳಲಾರಿರಿ.
ಲೋಹಿತ ಹೆಬ್ಬಾರ್ – 8762924271 (what’s app only)