AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya- ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಅನಾರೋಗ್ಯ ಬಾಧಿಸಲಿದೆ

Horoscope Today: ಡಿಸೆಂಬರ್ 26, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಬೆಳಗ್ಗೆ 9 ಗಂ॥ 44 ನಿ।। ರಿಂದ ಇಂದು ಬೆಳಗ್ಗೆ 11 ಗಂ॥ 08 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 10 ನಿಮಿಷಕ್ಕೆ.

Nitya Bhavishya- ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಅನಾರೋಗ್ಯ ಬಾಧಿಸಲಿದೆ
ಮಿಥುನ ರಾಶಿ
TV9 Web
| Updated By: Digi Tech Desk|

Updated on:Dec 28, 2022 | 11:20 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 26ರ ಸೋಮವಾರ ನಿಮ್ಮ ರಾಶಿ ಫಲ ( Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚತುರ್ಥೀ ತಿಥಿ, ಶ್ರವಣ ನಕ್ಷತ್ರ, ಸೋಮವಾರ, ಡಿಸೆಂಬರ್ 25, 2022. ರಾಹುಕಾಲ: ಇಂದು ಬೆಳಗ್ಗೆ 9 ಗಂ॥ 44 ನಿ।। ರಿಂದ ಇಂದು ಬೆಳಗ್ಗೆ 11 ಗಂ॥ 08 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 10 ನಿಮಿಷಕ್ಕೆ.

ತಾ. 26-12-2022 ರ ಭಾನುವಾರದ ರಾಶಿ ಭವಿಷ್ಯ ಹೀಗಿದೆ:

  1. ಮೇಷ: ಆರ್ಥಿಕ ಸ್ಥಿತಿ ಏರುಪೇರಾಗಬಹುದು. ನಿಮ್ಮಲ್ಲಿರುವ ಜ್ಞಾನದ ಜೊತೆಗೆ ಬಾಹ್ಯಯತ್ನವೂ ಯಶಸ್ಸಿನ ಮೆಟ್ಟಿಲೇರಲು ಸಹಕಾರಿ. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ನಿಮ್ಮನ್ನು ಹಾಸ್ಯ ಮಾಡಬಹುದು. ಅದಕ್ಕೇ ನೀವೂ ನಕ್ಕು ಬಿಡಿ. ಸಿಟ್ಟು, ಬೇಸರದಿಂದ ಇನ್ನಷ್ಟು ಪರಿಹಾಸ್ಯ ಒಳಗಾಗಬೇಡಿ. ಕೆಲಸ ಮಾಡುತ್ತಿರುವಾಗ ಕಿರಿಕಿರಿ ಎನಿಸದರೆ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮೂಡ್ ಗೆ ಹೋಗಿ ಮನಸೋ ಇಚ್ಛೆ ಸ್ನೇಹಿತರ ಜೊತೆ ಹರಟಿ ಬನ್ನಿ. ಮನೆಯಲ್ಲಿ ಹೆಚ್ಚಿನ ಕೆಲಸಗಳು ನಿಮ್ಮದೇ. ಬೇಸರಗೊಳ್ಳದೇ ಖುಷಿಯಿಂದ ಮಾಡಿ.
  2. ವೃಷಭ: ತುಂಬ ಒತ್ತಡದ ದಿನ.‌ ಹತ್ತಾರು ಕೆಲಸಗಳು ಒಮ್ಮೆ ಬಂದು ಎರಗುತ್ತವೆ. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ಹೂಡಕೆಗಳನ್ನು ಮಾಡುವಾಗ ದೂರದರ್ಶಿಗಳಾಗಿ ಯೋಚಿಸಿ. ಸತಿಯೊಂದಿಗೆ ಪ್ರೇಮಸಲ್ಲಾಪವನ್ನೂ ಮಾಡಬೇಕಿದೆ. ಇಲ್ಲದಿದ್ದರೆ ಮುನಿಸಿಕೊಂಡಾಳು. ಮಕ್ಕಳೊಂದಿಗೆ ಇದ್ದು ಆಯಾಸವನ್ನು ಮರೆಯುವಿರಿ. ಸಹೋದರ-ಸಹೋದರಿಯರೊಂದಿಗೆ ವಾಯುವಿಹಾರಕ್ಕೆಂದು ಹೋಗಿ. ಹಳೆಯ ಮಧುರ ನೆನಪುಗಳು ನಿಮ್ಮನ್ನು ಖುಷಿಯಾಗಿಡುವುವು.
  3. ಮಿಥುನ: ಅನಾರೋಗ್ಯವು ನಿಮ್ಮನ್ನು ಬಾಧಿಸಬಹುದು. ಬೆಳಗ್ಗಿನಿಂದಲೇ ಜಾಗರೂಕರಾಗಿರಿ. ಕೆಟ್ಟ ಆರೋಗ್ಯವನ್ನು ಆ ಕ್ಷಣದಲ್ಲಿ ಸರಿ ಮಾಡುವುದು ಕಷ್ಟ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಅವಕಾಶಗಳನ್ನು ಸೃಷ್ಟಿಕೊಳ್ಳುವ ಸಾಮರ್ಥ್ಯ ನಿಮಲ್ಲಿದೆ. ಮಕ್ಕಳು, ಮೊಮ್ಮಕ್ಕಳು ತಮ್ಮ ಜೊತೆಯಲ್ಲಿ ಕಾಲಕಳೆಯಬೇಕು ಎಂದು ವಿನಂತಿಸಿಕೊಂಡರೆ ನಕಾರಾತ್ಮಕವಾಗಿ ಹೇಳಬೇಡಿ. ಸ್ವಲ್ಪ ಸಮಯ ಅವರಿಗೆ ಕೊಡಿ. ಇಲ್ಲವಾದರೆ ಅವರ ಮನಸ್ಸಿನಲ್ಲಿ ನಕಾರಾತ್ಮಕವಾಗಿಯೇ ಉಳಿಯುತ್ತೀರಿ. ಒತ್ತಾಯ ಪೂರ್ವಕವಾಗಿ ಕೆಲಸಗಳನ್ನು ಮಾಡುವುದು ಬೇಡ.
  4. ಕಟಕ: ಇಷ್ಟಪಟ್ಟವರ ಜೊತೆ ವಾದಕ್ಕೆ ಇಳಿಯಬೇಡಿ. ವೈಮನಸ್ಯ ಉಂಟಾಗಬಹದು. ಆಟೋಟಗಳಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುವಿರಿ. ಮಕ್ಕಳಿಂದ ನಿಮಗೆ ಸಂತೋಷದ ವಾರ್ತೆ ಬರಲಿದೆ. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಸುಂದರರೂಪಕ್ಕೆ ಮರುಳಾಗುತ್ತೀರಿ‌. ಉದ್ಯೋಗದ ನಿಮಿತ್ತ ಪ್ರಯಾಣ ಸಾಧ್ಯತೆಯಿದೆ. ನಿಮ್ಮವರೊಂದಿಗೆ ಕೆಲವು ಸಮಯವನ್ನು ಕಳೆಯಿರಿ. ಉತ್ತಮ ಬಾಂಧವ್ಯವು ಮುಂಬರುವ ಬಾಧೆಯನ್ನು ಕಡಿತಗೊಳಿಸುವುದು. ಇನ್ನೊಬ್ಬರ ಬದುಕನ್ನು ಕೀಳಾಗಿ ನೋಡಲು ಹೋಗಬೇಡಿ. ನಿಮ್ಮ ಮನಃಸ್ಥಿತಿಯು ಪ್ರಕಾಶವಾಗುತ್ತದೆ.
  5. ಸಿಂಹ: ಆಲಸ್ಯದಿಂದಲೇ ದಿನವು ಆರಂಭವಾಗುವುದು. ನಿಮ್ಮ ದಿನದ ಕೆಲಸವನ್ನು ಒಮ್ಮೆ ಅವಲೋಕಿಸಿ. ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಇರುವುದೂ ಇಲ್ಲವಾದೀತು. ಅನಗತ್ಯ ವಿಷಯಗಳ ಚರ್ಚೆಗೆ ಮಾರ್ಗವನ್ನು ತೆರೆಯಬೇಡಿ. ಅದು ಮತ್ತೆಲ್ಲಿಗೋ ನಿಮ್ಮನ್ನು ಕರೆದೊಯ್ಯವುದು. ಹೊಸ ಉದ್ಯೋಗದ ಪ್ರಸ್ತಾಪವೆತ್ತಿದಾಗ ನಕಾರಾತ್ಮಕ ಸಲಹೆಗಳು ಬಂದಾವು. ನಿಮ್ಮ ಯೋಚನೆಗಳನ್ನು ಸರಿಯಾಗಿ ವ್ಯಕ್ತಪಡಿಸಿ. ಆರ್ಥಿಕವಾಗಿ ಸದೃಢರಾಬೇಕು ಎನ್ನುವ ನಿಮ್ಮ ಮಹತ್ತರವಾದ ಸಂಕಲ್ಪಕ್ಕೆ ಇಂದೇ ನಾಂದಿಯನ್ನು ಹಾಡಿ.
  6. ಕನ್ಯಾ: ಸ್ನೇಹಿತರ, ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಬೆಟ್ಟವನ್ನು ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಸರ್ವಥಾ ಮಾಡಬೇಡಿ. ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ಸುಂದರವಾಗಿಯೇ ಇರುವ ನೀವು ಇನ್ನೊಂದಿಷ್ಟು ಪಿಟ್ ನೆಸ್ ಗೆಂದು ಹೋಗಿ ಅನಾಹುತ ಮಾಡಿಕೊಳ್ಳಬೇಡಿ. ಮನೆಗೆ ಸಂಬಂಧಿಸಿದ ಕಾರ್ಯದಿಂದ ಹಣವು ವ್ಯಯವಾಗಬಹುದು. ಇಂದು ನಡೆಯಲಿರುವ ಹಿರಿಯರ ದಿನದಲ್ಲಿ ಶ್ರದ್ಧೆಯಿಂದ ಭಾಗವಹಿಸಿ.
  7. ತುಲಾ: ಹಣ್ಣು ನೋಡಲು ಬಹಳ ಚೆನ್ನಾಗಿದೆ ಎಂದು ತೊಳೆಯದೇ ಪರೀಕ್ಷಿಸದೇ ತಿಂದರೇ ಮೂರ್ಖತನವೆಂದೇ ಹೇಳಬೇಕು. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯ್ಚಪಲಕ್ಕೆ ಬೇರೆಯವರು ನೋವುಣ್ಣುವರು. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ನಾಳೆಯದನ್ನು ಹಂಬಲಿಸಿ ಇಂದು ಹಾಗೂ ನಾಳೆಯನ್ನು ಹಾಳು ಮಾಡಿಕೊಳ್ಳಬೇಡಿ. ಶ್ರಮದಷ್ಟು ಫಲ ಸಿಗುತ್ತದೆ.
  8. ವೃಶ್ಚಿಕ: ನೀವು ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಯನ್ನು ಒಡೆಯಿರಿ. ನೆಮ್ಮದಿ, ಸಂತೋಷಗಳು ತಾನಾಗಿಯೇ ಬರುವವು. ಸಂಗೀತವು ಮುದುಡಿದ ಮನಸ್ಸನ್ನು ಅರಳಿಸುವುದು. ಎಂಜಿನಿಯರ್‌ಗಳಿಗೆ ಅನುಕೂಲಸ್ಥಿತಿ ಇದೆ‌. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಸಮಯ ನೋಡಿ ಪ್ರೇಮವಿವಾಹದ ಪ್ರಸ್ತಾಪ ಮಾಡಿ. ಮನೆಯಲ್ಲಿ ಒಪ್ಪುತ್ತಾರೆ. ಆನಂದದ ಕಡಲಲ್ಲಿ ತೇಲುವಿರಿ.
  9. ಧನು: ಯಾರೋ ಮಾಡಿದ ತಪ್ಪಿಗೆ ನೀವು ತಲೆತಗ್ಗಿಸುವಂತೆ ಆಗುತ್ತದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆತುರದ ನಿರ್ಧಾರಕ್ಕೆ ಹೋಗಬೇಡಿ.‌ ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ಹೊಸ ವಸ್ತ್ರಗಳನ್ನು ಖರೀದಿಸುವಿರಿ.
  10. ಮಕರ: ಸಾಹಿತ್ಯಾಸಕ್ತಿ ಇದ್ದರೆ ಏನನ್ನಾದರೂ ಬರೆಯಿರಿ. ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಬಿಡುವತ್ತ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ಮಂದಗತಿ, ಶೀಘ್ರಗತಿ ಬದುಕಿನಲ್ಲಿ ಸಾಮಾನ್ಯವೆಂದು ತಿಳಿಯಿರಿ.
  11. ಕುಂಭ: ನೀವು ರಚಿಸಿಕೊಂಡ ಯೋಚನೆ ಹಾಗೂ ಯೋಜನೆಗಳು ರಹಸ್ಯವಾಗಿಯೇ ಇರಲಿ. ದೀರ್ಘಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳುವುದು ಒಳ್ಳೆಯದು. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ಹೊಸದಾಗಿ ವಾಹನವನ್ನು ಚಲಾಯಿಸುತ್ತಿದ್ದರೆ ಎಚ್ಚರವಿರಲಿ.
  12. ಮೀನ: ಹಣವು ವ್ಯಯವಾಗುವ ಸಾಧ್ಯತೆ ಇದೆ.‌ ಅದನ್ನು ಯೋಚಿಸಿ ಸತ್ಕಾರ್ಯಕ್ಕೆ ವ್ಯಯವಾಗುವಂತೆ ಮಾಡಿ. ಆರೋಗ್ಯವಾಗಿದ್ದರೆ ಎಂತಹ ಕಾರ್ಯವನ್ನೂ ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಶುಭಕಾರ್ಯಗಳಿಗೆ ಆಹ್ವಾನ ಬರಲಿದೆ. ಯಾರಾದರೂ ಹೊಗಳಿದರೆ ಹಿಗ್ಗಬೇಡಿ.‌ ಹೊಗಳಿ ಹೊನ್ನಶೂಲಕ್ಕೆ ಏರಿಸಿದರು ಎಂಬ ಮಾತನ್ನು ನೆನಪಿಡಿ. ಶಿಕ್ಷಕರಾಗಿದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳಿಂದ ಉಡುಗೊರೆ ಸಿಗಬಹುದು.

ಲೇಖನ: ಲೋಹಿತ ಶರ್ಮಾ, ಇಡುವಾಣಿ

Published On - 6:00 am, Mon, 26 December 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ