Nitya Bhavishya: ಈ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಲಿದೆ
2023 ಜನವರಿ 28 ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 28 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ- ಬೆಳಗ್ಗೆ 07 ಗಂಟೆ 02 ನಿಮಿಷ ಮತ್ತು ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 09:54 ರಿಂದ ಮಧ್ಯಾಹ್ನ 11:20ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:11ರಿಂದ 03: 37ರವರೆಗೆ, ಗುಳಿಕ ಕಾಲ ರಾತ್ರಿ 07:03 ರಿಂದ 08:29ರವರೆಗೆ.
ಮೇಷ: ನಿಮಗೆ ಇಂದು ಅದೃಷ್ಟವು ಫಲಿಸುವ ದಿನ. ಕೆಲಸಕಾರ್ಯಗಳು ಸುಗಮವಾಗಿ ಸಾಗಲಿದೆ. ದೂರದ ಊರಿಗೆ ಕಾರ್ಯದ ಕಾರಣ ಹೋಗಬಹುದು. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಿಗಲಿದೆ. ಕೆಲವು ದಿನಗಳಿಂದ ಅನುಭವಿಸಿರುವವ ಖಾಯಿಲೆಯು ಕಡಿಮೆಯಾಗುವುದು. ದಾಂಪತ್ಯದಲ್ಲಿ ಸುಖಜೀವನವನ್ನು ನಡೆಸುವಿರಿ.
ವೃಷಭ: ನಿಮಗೆ ಇಂದು ಇಷ್ಟು ದಿನ ಕಾಡುತ್ತಿದ್ದ ಚಿಂತೆಯಿಂದ ಬಿಡುವಾಗುವಿರಿ. ಪ್ರಯತ್ನವಿಲ್ಲದೇ ಯಾವುದೂ ಸಿದ್ಧಿಸದು ಎನ್ನುವ ಎಂಬ ಮಾತನ್ನು ಮನನ ಮಾಡಿ. ಒತ್ತಡಗಳಿಗೆ ಸಿಲುಕದೆ ಜಾಗರೂಕತೆಯಿಂದ ಕೆಲಸ ಮಾಡುವುದು ಉತ್ತಮ. ಪಾಲುದಾರಿಕೆ ವಿಚಾರದಲ್ಲಿ ಅರಿವಿರಲಿ. ಕೂಲಂಕಷವಾದ ವಿಚಾರದ ಜೊತೆ ಮುಂದಡಿ ಇಡಿ. ಅವಕಾಶಗನ್ನು ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ.
ಮಿಥುನ: ಇಂದು ನಿಮ್ಮ ದಾಂಪತ್ಯಜೀವನವು ಸುಖದಿಂದ ಇರಲಿದೆ. ಪ್ರೇಮಸಲ್ಲಪವು ನಡೆಯಲಿದೆ. ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದೈವವನ್ನು ನಂಬುವ ನೀವು ಹೆಚ್ಚು ಕಾಲದ ದೈವಸ್ಮರಣೆಯಲ್ಲಿ ಇರುವಿರಿ. ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸವು ಆಗಬಹುದು. ಕೂಡಿಟ್ಟ ಹಣದ ಉಪಯೋಗವು ಇಂದಾಗಲಿದೆ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಯವಿರಿ.
ಕಟಕ: ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಮಕ್ಕಳ ಕಾರ್ಯಕ್ಕೆ ನೀವು ಓಡಾಡಬೇಕಾಗಿ ಬರಬಹುದು. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ಕಾರ್ಯದ ಸ್ಥಳದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ರಾಜಕಾರಣಿಗಳು ಜನರಿಂದ ಗೌರವವನ್ನು ಪಡೆಯುವರು. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಬಂಧುಗಳ ಭೇಟಿಯು ಹರ್ಷವನ್ನು ತರಬಹುದು. ಕಫದೋಷದಿಂದ ಅನಾರೋಗ್ಯವು ಬರಬಹುದು.
ಸಿಂಹ: ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನೋವನ್ನು ಅನುಭವಿಸುವಿರಿ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆಯಾಗಲಿದೆ. ಮಿತ್ರರ ಜೊತೆ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಳ್ಳಲು ಹೋಗಬೇಡಿ. ಸಂಗಾತಿಯ ಮೇಲೆ ಮುನಿಸಿಕೊಳ್ಳಬಹುದು. ನೀವು ಉದ್ಯೋಗಕ್ಷೇತ್ರವನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ.
ಕನ್ಯಾ: ಕೋಪವನ್ನು ಕಡಿಮೆಮಾಡಿಕೊಂಡಷ್ಟು ಒಳ್ಳೆಯದು. ಪಾಲುದಾರಿಕೆಯಲ್ಲಿ ಕಲಹವು ಆರಂಭವಾಗಲಿದೆ. ಕೃಷಿಕರು ಲಾಭವನ್ನು ಗಳಿಸಲಿದ್ದಾರೆ. ಯಾರನ್ನೋ ಮೆಚ್ಚಿಸಲು ಹೋಗಿ ಸಿಕ್ಕಿಹಾಕಿಕೊಳ್ಳಬಹುದು. ತಂದೆಯಿಂದ ನಿಮಗೆ ಧನಸಹಾಯವಾಗಲಿದೆ. ಉನ್ನತಸ್ಥಾನಕ್ಕೆ ಹೋಗಲು ನಿಮ್ಮ ಹೆಸರನ್ನು ಆಯ್ಕೆ ಮಾಡಬಹುದು. ಸಾಮಾಜಿಕ ಸಮ್ಮಾನಗಳು ಸಿಗಲಿವೆ. ಮಾತುಗಳನ್ನು ಅಳೆದು ತೂಗಿ ಆಡುವುದು ಒಳ್ಳೆಯದು. ಸಂತರ ಸಹವಾಸ ಸಿಗಲಿದೆ.
ತುಲಾ: ಭೂಮಿಯ ಗರ್ಭದಲ್ಲಿ ಕಾರ್ಯಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅತ್ಯವಶ್ಯಕ. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಯೋಜನೆಯಿಂದ ಪ್ರಶಂಸಯು ಬರಲಿದೆ. ಭೂಮಿಯ ವ್ಯವಹಾರದಿಂದ ನಿಮಗೆ ನಷ್ಟವಾಗಲಿದೆ. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು.
ವೃಶ್ಚಿಕ: ವಿದ್ಯಾರ್ಥಿಗಳು ಕ್ರಮಬದ್ಧವಾದ ಯೋಜನೆಯಿಂದ ಅಭ್ಯಾಸವನ್ನು ಆರಂಭಿಸಿ. ಸಾಹಸಪ್ರವೃತ್ತಿಯುಳ್ಳವರಿಗೆ ಚಾರಣವನ್ನು ಕಾಡುಗಳನ್ನು ಸುತ್ತುವ ಆಸೆಯಾಗಲಿದೆ. ಆಪ್ತರಿಂದ ವಂಚನೆಗೆ ಒಳಗಗಾಗಬಹುದು. ನರಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ನಿದ್ರಾಹೀನತೆಯಿಂದ ಆಲಸ್ಯ ಉಂಟಾಗಬಹುದು. ದಿನದ ಆರಂಭದಲ್ಲಿರುವ ಅನಾರೋಗ್ಯವು ದಿನಾಂತ್ಯದಲ್ಲಿ ಕಡಿಮೆಯಾಗಲಿದೆ. ತಂದೆಯಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಲಾಭವಾಗಲಿದೆ.
ಧನು: ಸಂಗಾತಿಯ ನಡುವೆ ಕಲಹವು ಇರಲಿದೆ. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳಿಂದ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಿಗಳು ಶುಭವಾರ್ತೆ ನಿರೀಕ್ಷೆಯಲ್ಲಿ ಇರಬಹುದು. ಮಾಧ್ಯಮದಲ್ಲಿ ಇರುವವರು ತಮ್ಮ ಕಾರ್ಯದಿಂದ ಪ್ರಶಂಸೆಯನ್ನು ಪಡೆಯುವರು. ಕಲಾವಿದರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವರು. ಸ್ತ್ರೀಗೆ ಸಂಬಂಧಿಸಿದ ಅಪವಾದಗಳು ಬರಬಹುದು. ಧಾರ್ಮಿಕವೃತ್ತಿಯವರಿಗೆ ಇಂದು ಒತ್ತಡದ ದಿನವಾಗಲಿದೆ.
ಮಕರ: ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ನಿವಾರಣೆಯಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ನಿಮ್ಮ ಸಹಾಯಕ್ಕೆ ಮಿತ್ರರು ಬರಲಿದ್ದಾರೆ. ಮನೆಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಜಾಡ್ಯವಿಂದು ನಿಮ್ಮ ಕೆಲಸಗಳನ್ನು ನಿಧಾನ ಮಾಡಬಹುದು. ಪುತ್ರೋತ್ಸವದ ಸಂತೋಷದಲ್ಲಿ ಇರುವಿರಿ. ಪ್ರಯಾಣ ಮಾಡುವ ಸಂದರ್ಭವಿದ್ದರೆ ಜಾಗರೂಕರಾಗಿ. ವಸ್ಯುಗಳು ಕಳ್ಳತನವಾಗುವಬಹುದು.
ಕುಂಭ: ಸಂಗಾತಿಯ ಮಾತಿನ ಕಾರಣ ಕುಟುಂಬದಿಂದ ದೂರವಿರಲು ಬಯಸುವಿರಿ. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡಬಹುದು. ನಿಮಗೆ ಕಳಂಕವನ್ನು ತರಬಹುದು. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸಮಾಡಬಹುದು.
ಮೀನ: ಹೊಸ ವಾಹನವನ್ನು ಖರೀದಿಸಲಿದ್ದೀರಿ. ಮುಂಜಾಗರೂಕರಾಗಿ ಸಂಪತ್ತನ್ನು ಉಳಿತಾಯ ಮಾಡುವಿರಿ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ಸ್ವಾವಲಂಬಿಯಾಗಿ ಜೀವಿಸುವ ಆಸೆ ನಿಮ್ಮದಾಗಿರುತ್ತದೆ. ಸುಖವನ್ನೂ ಕಷ್ಟವನ್ನೂ ಸಮಾನವಾಗಿ ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ.
ಲೋಹಿತಶರ್ಮಾ ಇಡುವಾಣಿ