Horoscope Today 24 March: ಈ ರಾಶಿಯವರಿಗೆ ವರವೇ ಶಾಪದಂತಾಗುವ ಸಂದರ್ಭ ಬರಬಹುದು
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ, ಸೋಮವಾರ ದೂಷಿಸುವವರು ಹುಬ್ಬೇರಿಸುವುದು, ದುರ್ಬಲರಿಗೆ ಬಲ ತುಂಬುವುದು, ಪ್ರಭಾವಿಗಳಂತೆ ತೋರಿಸಿಕೊಳ್ಳುವುದು, ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುರುಡು ಮಾಡೀತು. ಈ ದಿನ ನಡೆಯು ಕ್ರಿಯೆಗಳು.

ಬೆಂಗಳೂರು, ಮಾರ್ಚ್ 24, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 35 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:06 – 09:37, ಯಮಘಂಡ ಕಾಲ 11:08 – 12:39, ಗುಳಿಕ ಕಾಲ 14:10 – 15:41
ಮೇಷ ರಾಶಿ: ವರವೇ ಶಾಪದಂತಾಗುವ ಸಂದರ್ಭ ಇಂದು ನಿಮ್ಮ ಪಾಲಿಗೆ ಅನಿಸಬಹುದು. ಸಂಗಾತಿಯು ಇಂದು ನಿಮ್ಮ ಆಸೆಗೆ ನೀರೆರೆಚಬಹುದು. ಉದ್ಯೋಗದಲ್ಲಿ ಪ್ರೀತಿಯು ಹಲವು ಕಾರಣಗಳಿಂದ ಕಡಿಮೆ ಆಗಬಹುದು. ಪಕ್ಷಪಾತಧೋರಣೆಯಿಂದ ನೀವು ಹೊರಬಂದರೆ ಮುಂದಿನ ಹಾದಿ ಸುಗಮ. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ ಬೇಸರ ತರಿಸಬಹುದು. ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಮನಸ್ಸಿನಿಂದ ಗಟ್ಟಿಯದ ಹೊರತು ಯಾವುದನ್ನೂ ನಿಭಾಯಿಸಲು ಆಗದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗುತ್ತಿದ್ದಂತೆಲ್ಲ ಭಾಸವಾಗಿ, ಏನಾದರೂ ಹೊಸತನ್ನು ಮಾಡುವ ಆಸೆಯಾಗುವುದು ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.
ವೃಷಭ ರಾಶಿ: ದಿಕ್ಕು ಕಾಣದ ಸ್ಥಿತಿಯಲ್ಲಿ ಯಾರೋ ಕೈಹಿಡಿದು ನಡೆಸಬೇಕು ಎನಿಸದೇ ಇರದು. ಅವಶ್ಯಕತೆ ಇದ್ದಲ್ಲಿ ಬೇಕಾದಷ್ಟೇ ನಿಮ್ಮ ಮಾತು ಇರಲಿ. ನಿಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಪರರನ್ನು ದೂಷಿಸುವುದು ಸರಿಯಾಗದು. ನಿಮ್ಮ ಉದ್ಯಮಕ್ಕ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾತಿಗೆ ಸಂಬಂಧಿಸಿದಂತೆ ದೋಷವು ನಿಮಗೆ ಕಾಣಲು ಸಿಗುವುದು. ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುರುಡು ಮಾಡೀತು. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ಅಪರಿತರಾರಿಗೋ ನೀವು ಸಮಯವನ್ನು ಕೊಡಬೇಕಾಗಬಹುದು. ಕರ್ತವ್ಯದಲ್ಲಿ ನಿರಾಸಕ್ತಿ ಇರುವುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.
ಮಿಥುನ ರಾಶಿ: ಮಕ್ಕಳನ್ನು ಬಿಟ್ಟಕೊಡುವುದು ನಿಮಗೆ ಇಂದು ಕಷ್ಟಸಾಧ್ಯವಾಗಬಹುದು. ನೀವೇ ಹಾಕಿಕೊಂಡ ನಿರ್ಬಂಧಗಳನ್ನು ನೀವು ದಾಟುವುದು ಸರಿಕಾಣದು. ಖುಷಿಯ ಕ್ಷಣಗಳನ್ನು ನೀವೇ ಕೈಯಾರೆ ನಾಶ ಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮ ವಿಚಾರವನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲವನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಕಲೆಯಲ್ಲಿ ಉಂಟಾದ ಆಸಕ್ತಿಯು ನಿಮ್ಮ ಮನಸ್ಸನ್ನು ಚೆನ್ನಾಗಿಡಬಹುದು. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಆಪ್ತರ ಅಗಲಿಕೆಯನ್ನು ಸಹಿಸಲಾಗದು.
ಕರ್ಕಾಟಕ ರಾಶಿ: ನಿಮ್ಮ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಯೋಚಿಸುವಿರಿ. ಯೋಜನೆಯ ಸಿದ್ಧತೆಗೆ ಪಾಲುದಾರರ ಜೊತೆ ಮಾತುಕತೆ ನಡೆಯುವುದು. ಬಗ್ಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಪೂರಕವಾಗಿ ಇರುವುದು ಉತ್ತಮ. ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಬೇಕಾದವರನ್ನು ದೂರ ಮಾಡಿಕೊಂಡು ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸದೇ ನಿಮ್ಮ ಕಾರ್ಯವನ್ನು ಮಾಡುವಿರಿ. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಬಹುದು. ಆಕರ್ಷಣೆಯಿಂದ ನಿಮಗೇ ತೊಂದರೆ. ಸಮಾರಂಭಗಳಿಗೆ ಸ್ನೇಹಿತರ ಜೊತೆ ಹೋಗುವಿರಿ. ಅಪರಿಚಿತರು ನಿಮ್ಮ ಬಳಿ ಹಣಕ್ಕಾಗಿ ಪೀಡಿಸಬಹುದು. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ ಉಂಟಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಅಧಿಕ ಲಕ್ಷ್ಯ ಅವಶ್ಯಕ. ನಿಮ್ಮವರಿಂದ ನಿಮಗೆ ಭಯವನ್ನು ಕಾಡಬಹುದು.
ಸಿಂಹ ರಾಶಿ: ನಿಮಗಿಂದು ದುರ್ಬಲರಿಗೆ ಸಾಂತ್ವನ ಹೇಳಿದ ಪುಣ್ಯ ಬರುವುದು. ಇಂದು ಆರ್ಥಿಕ ಸುಭದ್ರತೆಯ ಬಗ್ಗೆ ಯಾರದ್ದಾದರೂ ಸಲಹೆಗಾರ ಪಡೆಯುವುದು ಉತ್ತಮ. ಮನಸೋ ಇಚ್ಛೆ ವ್ಯಕ್ತಪಡಿಸಿ ವ್ಯವಹಾರವನ್ನು ಮಾಡಲು ನಿಮಗೆ ಆಗದು. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ತಪ್ಪಿಸಿ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಹಣವನ್ನು ಅಜಾಗರೂಕತೆಯಿಂದ ಕಳೆದುಕೊಳ್ಳಬೇಕಾಗುವುದು. ಸಿಟ್ಟನ್ನು ಎಲ್ಲರೆದುರು ಹೊರಹಾಕುವುದು ಬೇಡ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ನಿಮಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ರೂಢಿಸಿಕೊಳ್ಳಿ.
ಕನ್ಯಾ ರಾಶಿ: ನೀವು ಇತರರಿಗೆ ಸುಲಭವಾಗಿ ಸಿಗುವುದು ಸಂಗಾತಿಗೆ ಇಷ್ಟವಾಗದು. ದೇಹದ ಯಾವುದೋ ಒಂದು ಭಾಗಕ್ಕೆ ಹೊಕ್ಕ ವಿಷವು ಇಡೀ ದೇಹವನ್ನು ನಾಶ ಮಾಡುವಂತೆ ಕುಟುಂಬಕ್ಕೆ ಹೊಕ್ಕ ಕೆಟ್ಟ ವಿಚಾರಗಳು ಕುಟುಂಬವನ್ನೇ ನಾಶ ಮಾಡಲು ಸಾಕು. ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸಬೇಕಾಗುವುದು. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗುವುದು ಬೇಡ. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ ತಪ್ಪನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವಿರಿ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.
ತುಲಾ ರಾಶಿ: ಕೃಷಿಗೆ ಯೋಗ್ಯವಾದ ಭೂಮಿಯ ಖರೀದಿ ಸಫಲವಾಗುವುದು. ನೀವು ಎಲ್ಲ ರೀತಿಯಿಂದ ಸುರಕ್ಷಿತರಾಗಿದ್ದರೂ ಎಲ್ಲೋ ಒಂದು ಕಡೆ ಅಸಮಾಧಾನ ನಿಮ್ಮ ತಲೆಯೊಳಗೆ ನುಸುಳುವುದು. ಶತ್ರುಗಳ ಬಗೆಗೆ ನಿಮಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಪರರ ಜೀವನಕ್ಕೆ ಸಣ್ಣ ಉಪಕಾರವಾಗಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಹಿರಿಯರ ಮಾರ್ಗದರ್ಶನವನ್ನು ಶಿರಸಾ ಅಲಿಸುವಿರಿ. ಜೀವನವು ಸಪ್ಪೆಯಾಗದಂತೆ ನೋಡಿಕೊಳ್ಳುವ ಕಲೆ ಗೊತ್ತಿದೆ. ಅವ್ಯಕ್ತವಾದ ನೆಮ್ಮದಿಯಿಂದ ಬೀಗಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು.
ವೃಶ್ಚಿಕ ರಾಶಿ: ಭವಿಷ್ಯ ದೃಷ್ಟಿಯಿಂದ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವುದು ಒಳ್ಳೆಯದು. ನಿಮ್ಮಿಂದಾದ ತಪ್ಪಿಗೆ ನೀವೇ ಕ್ಷಮೆ ಯಾಚಿಸಿ ಅದನ್ನು ಸರಿಮಾಡಿಕೊಳ್ಳುವಿರಿ. ಸಮಾಜಿಕ ಕಾರ್ಯಗಳಿಂದ ಪ್ರಶಂಸೆಯು ನಿಮ್ಮತ್ತ ಅನಾಯಾಸವಾಗಿ ಹರಿದುಬರುವುದು. ಸಮಚಿತ್ತವು ನಿಮ್ಮ ದುಃಖದ ನಿವಾರಣೆಗೆ ಕಾರಣವಾಗುತ್ತದೆ. ದೊಡ್ಡ ಕನಸನ್ನು ಸಾಕಾರಗೊಳಿಸಲು ಸಣ್ಣ ಪ್ರಯತ್ನವಾದರೂ ಬೇಕು. ನಕಾರಾತ್ಮಕ ವಿಚಾರಗಳ ಕಡೆ ಗಮನ ಬೇಡ. ಆದಾಯ ಮೂಲದ ಬಗ್ಗೆ ಅಸಮಾಧಾನ ಬರಬಹುದು. ನಿಮ್ಮ ಬಗ್ಗೆ ಇರುವ ಭಾವವು ಬದಲಾಗಲಿದ್ದು ನಕಾರಾತ್ಮಕ ಪ್ರತಿಕ್ರಿಯೆಯು ನಿಮ್ಮಂದ ಬರಲಿದೆ. ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಇದಕ್ಕೆ ಕಾರಣ ಹೊಸ ಉದ್ಯಮದ ಕಡೆ ಸೆಳೆತವು ಅತಿಯಾಗಿರುವುದು. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಬಿರುಸು ನುಡಿಯಿಂದ ನಿಮಗೆ ಆಗಬೇಕಾದ ಕಾರ್ಯವು ಆಗದು.
ಧನು ರಾಶಿ: ಯಾವುದೇ ಲಾಭವಿಲ್ಲದೇ ಪ್ರೇಮವನ್ನೂ ಮಾಡಬಾರದು ಎಂಬ ನಿಶ್ಚಯಕ್ಕೆ ಬರುಬಿರಿ. ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಯೋಚನೆಗಳು ಬರಬಹುದು. ಅದನ್ನು ನಿಲ್ಲಿಸಲು ಪ್ರಯತ್ನಿಸಿ. ಮನಸ್ಸಿಗೆ ಬೇರೆ ಯಾವುದಾದರೂ ಕೆಲಸ ಕೊಡಿ. ಸಹೋದರರ ಬಗ್ಗೆ ನಿಮಗಿರುವ ಭಾವವು ಬದಲಾದೀತು. ಎಲ್ಲರ ಅನುಭವವನ್ನು ಕೇಳಿ ಸ್ವಂತ ನಿರ್ಧಾರಕ್ಕೆ ಬನ್ನಿ. ಕುಟುಂಬದ ಸಮಸ್ಯೆಗಳಿಂದಾಗಿ ನಿಮ್ಮ ಸಂಗಾತಿ ಇಂದು ಅಸಮಾಧಾನಗೊಳ್ಳಬಹುದು. ಎಲ್ಲವನ್ನೂ ವಹಿಸಿಕೊಂಡು ಅನಂತರ ಅತಂತ್ರವಾದೀತು. ಮಾನಸಿಕ ಅಸಮತೋಲನವನ್ನು ಕಾಯ್ದುಕೊಳ್ಳುವುದು ಸವಾಲಾಗಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಲಾರಿರಿ. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಾಯಿಸಿಕೊಳ್ಳಬೇಕಾಗುವುದು.
ಮಕರ ರಾಶಿ: ಹೊಸ ಕೆಲಸದಲ್ಲಿ ಹೊಸ ಗೆಳೆತನವಾಗುವುದು. ಇಂದಿನ ಸಮಾರಂಭದಲ್ಲಿ ನಿಮ್ಮನ್ನು ಹುಡುಕಿಕೊಂಡು ಭೇಟಿಮಾಡಬಹುದು. ಮಕ್ಕಳ ಮೇಲೆ ನಿಮ್ಮ ಪ್ರೀತಿಯು ಕಡಿಮೆಯಾಗುವುದು. ನಿಮ್ಮ ಚುರುಕುತನದಿಂದ ಎಲ್ಲರನ್ನೂ ಎಚ್ಚರಿಸುವಿರಿ. ಶತ್ರುಪಕ್ಷದವರು ನಿಮ್ಮ ಪಕ್ಷಕ್ಕೆ ಬರುವ ಸಾಧ್ಯತೆ ಇದೆ. ಇದ್ದಕಿದ್ದಂತೆ ಅಭ್ಯಾಸದ ಕಡೆ ಸೆಳೆತ ಹೆಚ್ಚಾಗುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ನಿಮಗೆ ಬಂದರೆ ಪೂರ್ಣ ಸಮಾಧಾನ ಸಿಗದು. ಹಳೆಯ ಕಾರ್ಯಗಳನ್ನು ಇಟ್ಟುಕೊಂಡ ಹೊಸತನ್ನು ಮಾಡಲು ಉತ್ಸಾಹವಿರದು. ವಿದ್ಯಾರ್ಥಿಗಳು ಸಹವಾಸದೋಷದಿಂದ ಕೆಡುವ ಸಾಧ್ಯತೆ ಇದೆ. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಕಡಿಮೆ ವೆಚ್ಚವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.
ಕುಂಭ ರಾಶಿ: ಆರಂಭದಲ್ಲಿ ತೋರಿದ ಉತ್ಸಾಹವನ್ನು ಅಂತ್ಯದವರಗೂ ಕಾಡಿಕೊಳ್ಳಲು ಹೊಸ ಯೋಚನೆ ಅವಶ್ಯಕ. ಉತ್ಸಾಹವೂ ಇದಕ್ಕೆ ಪೂರಕ. ಪುಣ್ಯಕ್ಷೇತ್ರಗಳ ದರ್ಶನದಿಂದ ವ್ಯಾವಹಾರಿಕ ಒತ್ತಡಗಳು ಕಡಿಮೆಯಾಗುವುದು. ನೂತನ ಗೃಹನಿರ್ಮಾಣದ ಬಗ್ಗೆ ಆಸಕ್ತಿ ಹೆಚ್ಚುವುದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಅಡ್ಡಗಾಲು ಹಾಕಿಯಾರು. ನಿಮ್ಮ ಇಚ್ಛೆಗಳು ಪೂರ್ಣವಾಗದೇ ಬೇಸರವಾಗಬಹುದು. ಪ್ರಭಾವಿಗಳ ಮನವನ್ನು ಸೋಲಿಸಿ ಅವರ ಬೆಂಬಲವನ್ನು ಪಡೆಯುವಿರಿ. ಉನ್ನತ ಸ್ಥಾನಮಾನದ ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ಬರಲಿದ್ದು, ಆಯಾಸವೂ ಬೇಸರವೂ ನಿಮಗಾಗಲಿದೆ. ನಿಮ್ಮ ಪಿತ್ರಾರ್ಜಿತ ಆಸ್ತಿಯು ನಷ್ಟವಾಗಬಹುದ ಎಂಬ ಆತಂಕವು ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನ ಮಾಡಿದ ಅಪವಾದ ಬರಬಹುದೆಂಬ ಭೀತಿ ನಿಮಗೆ ಕಾಡುವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು.
ಮೀನ ರಾಶಿ: ಇಂದು ನೀವು ಸಮಸ್ಯೆಗಳನ್ನು ಯಾವ ಕ್ಷೇತ್ರದಿಂದಲೂ ಬರಲು ಬಿಡುವುದು ಬೇಡ. ಒಮ್ಮೆ ಬಂದರೂ ಅದು ಬೆಳೆಯದಂತೆ ಅಲ್ಲಿಯೇ ಚಿವುಟಿ ಹಾಕಿ ಅಥವಾ ಪರಿಹಾರವನ್ನು ಕಂಡುಕೊಳ್ಳಿ. ನಾಳೆಗೆಂದು ಮುಂದೂಡುವುದು ಬೇಡ. ನೀವು ಮನೆ ಕೆಲಸವನ್ನು ಬೇಗ ಮುಗಿಸಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹೂಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಕೌಟುಂಬಿಕ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಇರುವುದು. ಎಲ್ಲದಕ್ಕೂ ಇಂದು ತಾಳ್ಮೆ ಅತ್ಯಂತ ಅವಶ್ಯಕ. ಸಂಬಂಧಗಳನ್ನು ಆಪ್ತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು.
– ಲೋಹಿತ ಹೆಬ್ಬಾರ್ – 8762924271 (what’s app only)