AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು?

ಜೂನ್ ತಿಂಗಳಲ್ಲಿ ಮೀನ ರಾಶಿಯಲ್ಲಿರುವ ಶನಿಯು ವಿಶಿಷ್ಟ ಸಂಯೋಜನೆಯಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ವೃಷಭ ರಾಶಿಗೆ ಉನ್ನತ ಸ್ಥಾನ, ಸಂಪತ್ತು ಹಾಗೂ ವಿದೇಶ ಯಾನದ ಅವಕಾಶಗಳು ಲಭಿಸಲಿವೆ. ಉಳಿದ ರಾಶಿಗಳಿಗೆ ವೃತ್ತಿ, ಆರ್ಥಿಕತೆ, ಆರೋಗ್ಯ ಮತ್ತು ಸಂಬಂಧಗಳಲ್ಲಿ ಆಗುವ ಬದಲಾವಣೆಗಳ ಕುರಿತು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಶನಿಯ ಈ ಸಂಚಾರ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅರಿಯಿರಿ.

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು?
ಸಾಂದರ್ಭಿಕ ಚಿತ್ರ Image Credit source: pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 09, 2026 | 9:43 PM

Share

ಜ್ಯೋತಿಷ್ಯದ ಪ್ರಕಾರ ಶನಿಯು ಮೀನ ರಾಶಿಯಲ್ಲಿದ್ದು ಚಂದ್ರನ ದ್ರೇಕ್ಕಾಣ, ರವಿಯ ಹೋರೆ ಹಾಗೂ ಗುರುವಿನ ತ್ರಿಂಶಾಂಶ ಮತ್ತು ದ್ವಾದಶಾಂಶಗಳಲ್ಲಿ ಸ್ಥಿತನಾಗಿರುವುದು ಅತ್ಯಂತ ವಿಶಿಷ್ಟ ಸಂಯೋಜನೆಯಾಗಿದೆ. ಈ ತಿಂಗಳಲ್ಲಿ ಶನಿಯ ಸಂಚಾರ ಏನೆಲ್ಲ ಆಗಲಿದೆ.

​ಮೇಷ ರಾಶಿ

​ಶನಿಯು ಈ ರಾಶಿಯಲ್ಲಿ ಇರುವ ಕಾರಣ ಆರ್ಥಿಕ ವ್ಯಯ ಹೆಚ್ಚಾಗಲಿದೆ. ಆದರೆ ಗುರುವಿನ ದ್ವಾದಶಾಂಶವು ವಿದೇಶ ಪ್ರಯಾಣ ಅಥವಾ ಆಧ್ಯಾತ್ಮಿಕ ಸಾಧನೆಗೆ ದಾರಿ ಮಾಡಿಕೊಡುತ್ತದೆ. ರವಿಯ ಹೋರೆಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು. ಚಂದ್ರನ ದ್ರೇಕ್ಕಾಣವು ಮನಸ್ಸಿನಲ್ಲಿ ಅಸ್ಥಿರತೆ ತರಲಿದ್ದು, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಸಿಗಲಿದೆ.

​ವೃಷಭ ರಾಶಿ

​ಏಕಾದಶದ ಶನಿಯು ಅಪಾರ ಲಾಭ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ನೀಡುತ್ತದೆ. ಗುರುವಿನ ತ್ರಿಂಶಾಂಶದಿಂದಾಗಿ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ಚಂದ್ರನ ದ್ರೇಕ್ಕಾಣವು ಮಿತ್ರರಿಂದ ಮತ್ತು ಒಡಹುಟ್ಟಿದವರಿಂದ ಪ್ರೀತಿ, ಸಹಕಾರವನ್ನು ತಂದುಕೊಡುತ್ತದೆ. ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ​ ಮಿಥುನ ರಾಶಿ

​ದಶಮದ ಶನಿಯು ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮವನ್ನು ಬೇಡುತ್ತಾನೆ. ರವಿಯ ಹೋರೆಯು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ತರಬಹುದು. ಆದರೆ ಗುರುವಿನ ಅಂಶಗಳು ವ್ಯಾಪಾರದಲ್ಲಿ ಸ್ಥಿರತೆ ಮತ್ತು ಗೌರವವನ್ನು ನೀಡುತ್ತವೆ. ಚಂದ್ರನ ದ್ರೇಕ್ಕಾಣದಿಂದಾಗಿ ಕೆಲಸದ ನಡುವೆ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಮಾನಸಿಕ ಸಮತೋಲನ ಅಗತ್ಯವಾಗಿದೆ.

ಕರ್ಕಾ​ಟಕ ರಾಶಿ

ನವಮದ ಶನಿಯು ಭಾಗ್ಯೋದಯವನ್ನು ತರಲಿದ್ದಾನೆ. ರವಿಯ ಹೋರೆಯು ತಂದೆಯ ಆರೋಗ್ಯದ ಕಡೆ ಗಮನಹರಿಸಲು ಸೂಚಿಸುತ್ತದೆ. ಗುರುವಿನ ದ್ವಾದಶಾಂಶ ಮತ್ತು ತ್ರಿಂಶಾಂಶವು ಉನ್ನತ ಶಿಕ್ಷಣ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಉತ್ತಮ ಅವಕಾಶ ನೀಡಲಿದೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕತೆ ತುಂಬಲಿದ್ದು, ದೈವಬಲದಿಂದ ಎಲ್ಲಾ ಕಷ್ಟಗಳು ದೂರಾಗಲಿವೆ. ​ ಸಿಂಹ ರಾಶಿ

​ಈ ರಾಶಿಗೆ ಶನಿಯು ಅಷ್ಟಮ ಶನಿಯ ಪ್ರಭಾವ ನೀಡಲಿದ್ದು, ಆರೋಗ್ಯದ ಬಗ್ಗೆ ಎಚ್ಚರವಿರಲಿ. ರವಿಯ ಹೋರೆಯು ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ವಿವಾದ ತರಬಹುದು. ಆದರೆ ಗುರುವಿನ ತ್ರಿಂಶಾಂಶವು ವಿಮೆ ಅಥವಾ ಹಠಾತ್ ಧನಲಾಭವನ್ನು ನೀಡುತ್ತದೆ. ಚಂದ್ರನ ದ್ರೇಕ್ಕಾಣವು ಮಾನಸಿಕ ಆತಂಕ ತರಲಿದ್ದು, ನಿಯಮಿತ ಪ್ರಾಣಾಯಾಮ ಮತ್ತು ಧ್ಯಾನದಿಂದ ನೆಮ್ಮದಿ ಸಿಗಲಿದೆ. ​ ಕನ್ಯಾ ರಾಶಿ

ಸಪ್ತಮದಲ್ಲಿ ಶನಿಯು ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ರವಿಯ ಹೋರೆಯಿಂದಾಗಿ ಸಂಗಾತಿಯೊಂದಿಗೆ ಸೌಮ್ಯವಾಗಿ ವರ್ತಿಸುವುದು ಒಳಿತು. ಗುರುವಿನ ಅಂಶಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸಲಿವೆ. ಚಂದ್ರನ ದ್ರೇಕ್ಕಾಣವು ಹೊಸ ವ್ಯಾಪಾರ ಒಪ್ಪಂದಗಳಿಗೆ ಪ್ರೇರಣೆ ನೀಡಲಿದ್ದು, ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ. ​ ತುಲಾ ರಾಶಿ

​ಷ ಶನಿಯು ಶತ್ರುನಾಶ ಮತ್ತು ಕೋರ್ಟ್ ಕಲಾಪಗಳಲ್ಲಿ ಜಯ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಲು ಶಕ್ತಿ ನೀಡುತ್ತದೆ. ಗುರುವಿನ ತ್ರಿಂಶಾಂಶವು ಸಾಲಬಾಧೆಯಿಂದ ಮುಕ್ತಿ ನೀಡಲಿದ್ದು, ಆರೋಗ್ಯ ಸುಧಾರಿಸಲಿದೆ. ಚಂದ್ರನ ದ್ರೇಕ್ಕಾಣವು ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ತುಂಬಲಿದ್ದು, ಸಣ್ಣ ಪ್ರವಾಸಗಳು ಲಾಭದಾಯಕವಾಗಲಿವೆ.

​ವೃಶ್ಚಿಕ ರಾಶಿ

​ಪಂಚಮ ಶನಿಯು ಸಂತಾನ ಮತ್ತು ಪ್ರೇಮವಿಷಯಗಳಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ನಿಮ್ಮಲ್ಲಿ ನಾಯಕತ್ವದ ಗುಣವನ್ನು ಹೆಚ್ಚಿಸುತ್ತದೆ. ಗುರುವಿನ ದ್ವಾದಶಾಂಶವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅಪಾರ ಯಶಸ್ಸನ್ನು ನೀಡಲಿದೆ. ಚಂದ್ರನ ದ್ರೇಕ್ಕಾಣವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತದೆ. ​ ಧನು ರಾಶಿ

ಚತುರ್ಥ ರಾಶಿಯಲ್ಲಿ ಶನಿಯು ಅರ್ಧಾಷ್ಟಮ ಸ್ಥಿತಿಯಲ್ಲಿದ್ದು, ತಾಯಿಯ ಆರೋಗ್ಯ ಮತ್ತು ಆಸ್ತಿ ಖರೀದಿ ವಿಷಯದಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ಉದ್ಯೋಗದಲ್ಲಿ ವರ್ಗಾವಣೆಯನ್ನು ಸೂಚಿಸುತ್ತದೆ. ಗುರುವಿನ ತ್ರಿಂಶಾಂಶವು ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲಿದೆ. ಚಂದ್ರನ ದ್ರೇಕ್ಕಾಣವು ಆಂತರಿಕ ಶಾಂತಿ ಮತ್ತು ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಡುತ್ತದೆ. ​ ಮಕರ ರಾಶಿ

ಮೂರನೇ ಶನಿಯು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ದ್ವಿಗುಣಗೊಳಿಸುತ್ತಾನೆ. ರವಿಯ ಹೋರೆಯು ಸರ್ಕಾರದಿಂದ ಅಥವಾ ಉನ್ನತಾಧಿಕಾರಿಗಳಿಂದ ಪ್ರಶಂಸೆಯನ್ನು ತರಲಿದೆ. ಗುರುವಿನ ದ್ವಾದಶಾಂಶವು ಕಿರಿಯ ಸಹೋದರರೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಚಂದ್ರನ ದ್ರೇಕ್ಕಾಣವು ಸಣ್ಣ ಪ್ರಯಾಣಗಳ ಮೂಲಕ ಆರ್ಥಿಕ ಲಾಭ ಮತ್ತು ಹೊಸ ಸಂಪರ್ಕಗಳನ್ನು ತಂದುಕೊಡಲಿದೆ.

ಕುಂಭ ರಾಶಿ

​ದ್ವಿತೀಯ ರಾಶಿಯಲ್ಲಿ ಶನಿಯು ಸಾಡೇಸಾಥ್ ಶನಿಯ ಕೊನೆಯ ಹಂತದಲ್ಲಿದ್ದು, ಹಣಕಾಸಿನ ಶಿಸ್ತನ್ನು ಬೇಡುತ್ತಾನೆ. ರವಿಯ ಹೋರೆಯು ಮಾತಿನಲ್ಲಿ ಕಠಿಣತೆ ತರಬಹುದು, ಎಚ್ಚರವಿರಲಿ. ಆದರೆ ಗುರುವಿನ ಅಂಶಗಳು ಕುಟುಂಬದಲ್ಲಿ ಶಾಂತಿ ಮತ್ತು ಹಠಾತ್ ಧನಲಾಭವನ್ನು ನೀಡಲಿವೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಲು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಚಿಸುತ್ತದೆ.

ಇದನ್ನೂ ಓದಿ: ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ

​ಮೀನ ರಾಶಿ

ಈ ರಾಶಿಯಲ್ಲಿ ಶನಿ ಇರುವುದರಿಂದ ಜನ್ಮ ಶನಿಯ ಪ್ರಭಾವವಿದ್ದು, ದೈಹಿಕ ಆಯಾಸ ಹೆಚ್ಚಾಗಬಹುದು. ರವಿಯ ಹೋರೆಯು ನಿಮಗೆ ಸಮಾಜದಲ್ಲಿ ದೊಡ್ಡ ಜವಾಬ್ದಾರಿಗಳನ್ನು ತರಲಿದೆ. ಗುರುವಿನ ಸ್ವಕ್ಷೇತ್ರದ ಅಂಶಗಳು ನಿಮ್ಮ ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿವೆ. ಚಂದ್ರನ ದ್ರೇಕ್ಕಾಣವು ಮಾನಸಿಕವಾಗಿ ನಿಮ್ಮನ್ನು ಹೆಚ್ಚು ಪರಿಪಕ್ವ ಹಾಗೂ ಶಾಂತಚಿತ್ತರನ್ನಾಗಿ ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More