AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಈ ರಾಶಿಯವರು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲಿದ್ದಾರೆ

ಇಂದಿನ (2023 ಏಪ್ರಿಲ್​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲಿದ್ದಾರೆ
ಪ್ರಾತಿನಿಧಿಕ ಚಿತ್ರ Image Credit source: maharashtratimes.com
ಗಂಗಾಧರ​ ಬ. ಸಾಬೋಜಿ
|

Updated on: Apr 18, 2023 | 5:00 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವನೀ ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ: ಬ್ರಹ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06-18 ಕ್ಕೆ, ಸೂರ್ಯಾಸ್ತ ಸಂಜೆ 06-45 ಕ್ಕೆ, ರಾಹು ಕಾಲ 03:39 – 05:12ರ ವರೆಗೆ, ಯಮಘಂಡ ಕಾಲ 09:25 – 10:58ರ ವರೆಗೆ, ಗುಳಿಕ ಕಾಲ 12:32 – 02:05 ರವರೆಗೆ.

ಮೇಷ: ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವವನ್ನು ನೀಡಿ. ನಿರಂತರವಾಗಿ ನಡೆಸಿಕೊಂಡುಬಂದ ಉದ್ಯಮದಿಂದ ಲಾಭವಾಗುವುದು. ಹಲವು ದಿನಗಳಿಂದ ಚಿಕ್ಕ ಚಿಕ್ಕ ಆರೋಗ್ಯದ ಸಮಸ್ಯೆ ಇದ್ದು ಅನಾರೋಗ್ಯದಿಂದ ಮುಕ್ತರಾಗಿ ಸ್ವಸ್ಥರಾಗುವಿರಿ. ಯೋಗ್ಯವಾದ ಔಷಧೋಪಚಾರವು ಸಿಗುವುದು. ನಿದ್ರಾಹೀನತೆಯಿಂದ ಬಳಲುತ್ತಿದ್ದು ವಾತಾವರಣವು ನಿಮ್ಮ ನಿದ್ರೆಗೆ ಪೂರಕವಾಗಿರದೇ ಇರುವುದು ಕಾರಣವಾಗಿದೆ. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ. ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವರು. ದೇವರಲ್ಲಿ ಭಕ್ತಿಯು ಕಡಿಮೆ ಆಗುವುದು.

ವೃಷಭ: ಮೇಲಧಿಕಾರಿಗಳ ವರ್ತನೆಯಿಂದ ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ಗೊಂದಲ ಇರಬಹುದು. ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಸ್ಪಷ್ಟತೆ ಇರವುದು. ಹಿತಶತ್ರುವೆಂದು ಗೊತ್ತಿದ್ದೂ ಅವರನ್ನು ಇಟ್ಟುಕೊಳ್ಳುವುದು ಮೂರ್ಖತನವೇ. ಮಿತ್ರರ ಸಹಾಯದಿಂದ ಬಂದೊದಗಿದ ಅಪಾಯವನ್ನು ದೂರಮಾಡಿಕೊಳ್ಳುವಿರಿ. ಅವಿಶ್ರಾಂತ ಕೆಲಸವು ನಿಮಗೆ ಆಯಾಸವನ್ನು ನೀಡುವುದು. ಆರೋಗ್ಯದಲ್ಲಿ ವ್ಯತ್ಯವಾಗಬಹುದು. ಬಂಧುಗಳು ನಿಮ್ಮನ್ನು ಆಡಿಕೊಳ್ಳುವರು. ಆಲಸ್ಯದಿಂದ ಕೆಲಸವು ಹಿಂದೆ ಬೀಳುವುದು.

ಮಿಥುನ: ಭೂಮಿಯ ವ್ಯವಹಾರವನ್ನು ಸದ್ಯ ಮುಂದುವರಿಸಬೇಡಿ. ಕೈ ತಪ್ಪಿ ಹೋದೀತು. ನ್ಯಾಯಾಲಯದ ಮೆಟ್ಟಿಲೇರಿದ ದೂರು ಇಂದು ಇತ್ಯರ್ಥವಾದೀತು. ಪ್ರಯಾಣದಲ್ಲಿ ಕೊನೆಯ ಕ್ಷಣವನ್ನು ಬದಲಿಸಿದ ಕಾರಣ ಸಿಟ್ಟಾಗುವಿರಿ. ಲಲಿತಕಲೆಗಳಲ್ಲಿ ಆಸಕ್ತಿ ಇಲ್ಲದೇ ನೀರಸವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಬಹುದು. ದಾಂಪತ್ಯದ ಉತ್ತಮ ಹಾಗೂ ಖುಷಿಯ ದಿನವನ್ನು ಅನುಭವಿಸುವಿರಿ. ಅಪರಿತರು ನಿಮಗೆ ಸಹಾಯವನ್ನು ಮಾಡಲು ಬಂದರೆ ನೀವು ಅದನ್ನು ಸ್ವೀಕರಿಸುವುದಿಲ್ಲ. ಕೆಲಸಗಳು ಕೈಗೂಡುವುದು ಎಂಬ ಆಸೆ ಇರಲಿದೆ. ಕಛೇರಿಯಲ್ಲಿ ಗೌರವ ಸಿಗಲಿದೆ.

ಕರ್ಕ: ಒಳ್ಳೆಯ ಕಾಲ ಬರುವುದೆಂದು ಕಾದು ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಕೆಲಸವನ್ನು ನೀವು ಮಾಡಿ. ಕಾಲ ಬಂದಾಗ ಅದು ಮಾಡಬೇಕಾದುದನ್ನು ಮಾಡುತ್ತದೆ. ಮಕ್ಕಳ ಭವಿಷ್ಯವು ಚನ್ನಾಗಿರಲು ಅವರ ಹೆಸರಿನಲ್ಲಿ ಹೂಡಿಕೆ ಮಾಡುವಿರಿ. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ತೋರಿಸಿ ಅವರ ಬಾಯಿಗೆ ಸಿಗುವಿರಿ. ನಿಮ್ಮ ಯೋಜನೆಗೆ ಕುಟುಂಬ ಹಾಗೂ ಸ್ನೇಹಿತ ಬಳಗ ಸಹಾಯ ಮಾಡುವುದು. ಭೂಮಿಗೆ ಸಂಬಂಧಿಸಿದ ಉದ್ಯೋಗವನ್ನು ಆರಂಭ ಮಾಡಬೇಡಿ ಮತ್ತು ಇರುವ ಉದ್ಯೋಗವು ಯಥಾಸ್ಥಿತಿಯಲ್ಲಿ ಇರಲಿ. ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.

ಸಿಂಹ: ಹುಣ್ಣನ್ನು ಕೆದಕಿದಷ್ಟೂ ಅದು ದೊಡ್ಡ ಗಾಯವಾಗುವುದು. ಅದೇ ರೀತಿ ಸಮಸ್ಯೆಯನ್ನು ಕೆದಕಿದಷ್ಟೂ ದೊಡ್ಡದಾಗುವುದು. ಮಾತನಾಡದೇ ಸುಮ್ಮನಿರಿ. ತಾನಾಗಿಯೇ ತಣ್ಣಗಾಗುವುದು. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದಿಕೆಯಾಗಲಿದೆ. ಖರ್ಚನ್ನು ತಡೆಗಟ್ಟುವ ಸೂತ್ರವನ್ನು ಕಂಡುಕೊಳ್ಳಿ. ಲ ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ನಿಮಗೆ ಅವಶ್ಯಕತೆ ಇರುವ ಮಾಹಿತಿಯನ್ನು ಸರಿಯಾದ ಕಡೆಯಿಂದ ಪಡೆದುಕೊಳ್ಳಿ. ಯಾರ‌ ಮಾತನ್ನೋ ನಂಬಿ ನಿಮ್ಮವರನ್ನು ಕಳೆದುಕೊಳ್ಳಬೇಡಿ.

ಕನ್ಯಾ: ಊರಿಂದ ಊರಿಗೆ ವರ್ಗಾವಣೆಯಾಗುತ್ತಿರುವುದಕ್ಕೆ ಬೇರಸಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಸಮಾಧಾನವನ್ನು ಮಾಡುವುದು ಬಿಟ್ಟು ಸೊಪ್ಪು ಹಾಕುವರು. ದುಶ್ಚಟಕ್ಕೆ ನಿಮ್ಮ ಸ್ನೇಹಿತರು ನಿಮ್ಮನ್ನು ಬೀಳಿಸಿಯಾರು. ದೂರದ ಊರಿಗೆ ಎಷ್ಟೋ ದಿನಗಳ ಅನಂತರ ಪತ್ನಿಯ ಒತ್ತಾಯದ ಮೇರೆಗೆ ದಂಪತಿಸಹಿತ ಪ್ರಯಾಣ ಮಾಡುವಿರಿ. ಎಷ್ಟೋ ದಿನದ ಹಿಂದೆ ಹೊಸ ವಸ್ತುಗಳನ್ನು ಖರೀದಿಸಿದ್ದು ಇಂದು ನಿಮಗೆ ನೆನಪಾಗುವುದು. ಆರೋಗ್ಯದ ಕಡೆ ಹೆಚ್ಚು ಗಮನವಹಿಸುವ ಅಗತ್ಯವಿದೆ. ದಿನಚರಿಯನ್ನು ಸರಿಮಾಡಿಕೊಳ್ಳಿ.

ತುಲಾ: ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ನಿಮಗೆ ಅಪರೂಪದ ಉಡುಗೊರೆಯನ್ನು ಸ್ನೇಹಿತರು ಕಳುಹಿಸಿಕೊಡುವರು. ಇನ್ನೊಬ್ಬರ ವಿಷಯಕ್ಕೆ ಮೂಗು ತೂರಿಸಲು ಹೋಗದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗಿರಿ. ನಾಲಿಗೆಯ ಚಾಪಲ್ಯಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಎಂತಹ ಆಘಾತದ ಸ್ಥಿತಿಯನ್ನೂ ನಿರಾತಂಕವಾಗಿ ಎದುರಿಸುವಿರಿ. ಕಂಡಿದ್ದನ್ನು ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಅರಿವಾಗುವುದು.

ವೃಶ್ಚಿಕ: ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ಇಂದು ಅನಿವಾರ್ಯವೊಂದು ಒದಗಿ ಬಂದಾಗ ಇದನ್ನು ಮೊದಲೇ ಕಲಿಯಬೇಕಿತ್ತು ಎಂದನ್ನಿಸುವುದು. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ. ದಾಂಪತ್ಯವು ನಿಮಗೆ ಒಂದಿಷ್ಟು ಅನುಕೂಲತೆಗಳನ್ನು ಸೃಷ್ಟಿಸುತ್ತದೆ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ.

ಧನು: ಹುಟ್ಟಿನಿಂದ ಬಂದ ಸ್ವಭಾವವನ್ನು ತಿದ್ದಲಾಗದು. ಮನೆಯಲ್ಲಿ ನಿಮ್ಮ ಸ್ವಭಾವವನ್ನು ತಿದ್ದಲು ಪ್ರಯತ್ನಿಸುವರು. ನಿಮ್ಮ ಕಾರ್ಯಕ್ಕೆ ಅಪರಿಚಿತರ ಸಹಾಯ ದೊರೆಯಬಹುದು. ಮಕ್ಕಳು ನಿಮ್ಮನ್ನು ಅತಿಯಾಗಿ ಹಚ್ಚಿಕೊಳ್ಳುವರು. ತುರ್ತು ನಿರ್ಧಾರವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಅನಾರೋಗ್ಯವು ನಿಮಗೆ ಅಭ್ಯಾಸವಾಗಿದ್ದರೂ ಗುಣಪಡಿಸಿಕೊಳ್ಳುವುದು ಉತ್ತಮ. ಓದುವ ಸಮಯವನ್ನು ಓದಲೆಂದೇ ಮೀಸಲಿಡಿ. ಅವಕಾಶಗಳಿಗೆ ಕಾಯಬೇಡಿ. ಮಾಡಬೇಕು ಎಂದು ಅನ್ನಿಸಿದ್ದನ್ನು ಮಾಡಿ‌ಮುಗಿಸಿ. ಧಾರ್ಮಿಕವಿಚಾರದಲ್ಲಿ ಆಸಕ್ತಿ ಇರಲಿದೆ.

ಮಕರ: ಐತಿಹಾಸಿಕ ದೇವಾಲಯವನ್ನು ನೋಡುವ ಹಂಬಲವಿರುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಲಿಸೆ. ಅವುಗಳನ್ನು ಸರಿಮಾಡಿಕೊಳ್ಳಲು ಬಯಸುವಿರಿ. ನೀವು ನಿಮ್ಮ ಬಗ್ಗೆ ಮಾಡಿಕೊಳ್ಳುವ ಸಮರ್ಥನೆಯು ಅಹಂಕಾರವೆನಿಸುವುದು. ಮಂದಗತಿಯಲ್ಲಿ ಸಾಗುವ ಜೀವನ ಎಂದು ಮೂದಲಿಸದೇ ಖುಷಿಯಿಂದ ಮುನ್ನಡೆಯಿರಿ.‌ ಸಂತೋಷವು ಸಿಗಲಿದೆ. ದೇವರಲ್ಲಿ ಭಕ್ತಿ ಕಡಿಮೆಯಾಗಿದೆ. ಅದನ್ನು ಹೆಚ್ವುಮಾಡಿಕೊಳ್ಳಿ.‌ ಕುಟುಂಬವನ್ನೂ ರಕ್ಷಿಸುವ ಹೊಣೆಗಾರಿಕೆ ಇರಲಿದೆ.

ಕುಂಭ: ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ಮನಸ್ಸು ಒಂದು ಕಡೆ ನಿಲ್ಲದೇ ಓಡಾಡುವುದು. ಅದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುವುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಕೆಟ್ಟ ಕನಸು ನಿಮ್ಮ ಚಿಂತಿತರನ್ನಾಗಿ ಮಾಡುವುದು. ನೀವಿಂದು ಕಷ್ಟದ ಕೆಲಸವನ್ನು ಸುಲಭವಾಗಿ ಮಾಡುವ ವಿಧಾನವನ್ನು ಹುಡುಕುವಿರಿ.ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹುಡುಗಾಟ ಬುದ್ಧಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ಅತಿಯಾದ ಆತ್ಮವಿಶ್ವಾಸವು ಅಪಾಯಕಾರಿ.

ಮೀನ: ನಿಮ್ಮ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು.‌ ಸಮಾರಂಭಕ್ಕೆ ಹೋಗುವಾಗ ಉತ್ತಮ‌ ಬಟ್ಟೆಯು ಇರಲಿ. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ತಿಳಿವಳಿಕೆ ಇಲ್ಲದ ಕೆಲಸದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಿ. ವಾಹನವನ್ನು ಖರೀದಿಸುವಾಗ ಅವಶ್ಯಕತೆಯ ಬಗ್ಗೆ ಅರಿವಿರಲಿ. ದೀರ್ಘಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿಟ್ಟುಕೊಳ್ಳಿ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?