AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi bhavishya: ಈ ರಾಶಿಯವರು ಮುಂಗೋಪದಿಂದ ಕೆಲವರನ್ನು ಕಳೆದುಕೊಳ್ಳಬೇಕಾಗಬಹುದು

ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಜನರು ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ​​​​ 16) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Rashi bhavishya: ಈ ರಾಶಿಯವರು ಮುಂಗೋಪದಿಂದ ಕೆಲವರನ್ನು ಕಳೆದುಕೊಳ್ಳಬೇಕಾಗಬಹುದು
ರಾಶಿ ಭವಿಷ್ಯ
TV9 Web
| Edited By: |

Updated on: Feb 16, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:09ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:25 ರಿಂದ 09:52ರ ವರೆಗೆ.

ಸಿಂಹ ರಾಶಿ : ಇಂದು ಆಕಸ್ಮಿಕವಾಗಿ ವಾಹನ ಖರೀದಿಯ ಬಗ್ಗೆ ಆಸಕ್ತಿ ಮೂಡುವುದು. ಆತ್ಮೀಯ ಸ್ನೇಹಿತರ ಜೊತೆ ಮನೋರಂಜನಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶತ್ರುಗಳ ಬಗ್ಗೆ ನಿಮಗೆ ಯಾರಿಂದಲಾದರೂ ಮಾಹಿತಿ ಸಿಗಬಹುದು. ಪ್ರೀತಿಪಾತ್ರರಿಂದ ಆಹ್ವಾನಗಳು ಬರುತ್ತವೆ. ಮುಂಗೋಪದಿಂದ ಕೆಲವರನ್ನು ಕಳೆದುಕೊಳ್ಳಬೇಕಾಗಬಹುದು. ಇನ್ನೊಬ್ಬರಿಗೆ ನಿಮ್ಮಿಂದಾದ ನೋವನ್ನು ಸರಿ‌ ಮಾಡಿಕೊಳ್ಳುವಿರಿ. ಸಾಂತ್ವನದಿಂದ ಸ್ನೇಹವು ಮೊದಲಿನಂತಾಗುವುದು.‌ ನಿಮ್ಮ ಅತಿಯಾದ ನಂಬುಗೆಯು ಇಂದು ಹುಸಿಯಾಗಬಹುದು. ಉದ್ಯಮದ ವಿಷಯದಲ್ಲಿ ಸಲ್ಲದ ಮಾತುಗಳು ಕೇಳಿಬರಬಹುದು.‌ ಸಂಪತ್ತಿನ ಮೇಲೆ ನಿಮಗೆ ಮೋಹವು ಕಡಿಮೆ ಇರುವುದು. ವಂಚಿಸಿದವರಿಗೆ ಪ್ರತಿವಂಚನೆಯನ್ನು ಮಾಡಲು ಸಮಯವನ್ನು ನಿರೀಕ್ಷಿಸುತ್ತಿರುವಿರಿ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು.

ಕನ್ಯಾ ರಾಶಿ : ಸಹೋದರರ ಜೊತೆಗಿನ ಮಾತುಗಳು ನಿಮಗೆ ಅಚ್ಚರಿಯಾದೀತು. ಹೊಸ ಜನರನ್ನು ಭೇಟಿಯಾಗುವುದು ನಿಮ್ಮ ಉದ್ಯಮಕ್ಕೆ ಪೂರಕವಾಗಬಹುದು. ವ್ಯಾಪಾರದ ವೃದ್ದಿಯನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳಲಾಗದು. ಉದ್ಯೋಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಿರುವುದು. ಕೆಲಸವನ್ನು ವೇಗಗೊಳಿಸಬೇಕಾಗುವದು. ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು. ನಿಮ್ಮ ತಾಳ್ಮೆಯು ಇಂದು ಕಡಿಮೆಯಾಗಿ ಏನಾದರೂ ಹೇಳುವಿರಿ. ಹಣದ ಉಳಿತಾಯದಲ್ಲಿ ಜಿಪುಣರಂತೆ ತೋರುವುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಕ್ಕುವ ಸೂಚನೆ ಬರಲಿದೆ. ಸಾಲವು ಮುಗಿಯುತು ಎಂದುಕೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಅಶುಭ ಸೂಚನೆಯಿಂದ ಭಯವಾಗಬಹುದು.‌

ತುಲಾ ರಾಶಿ : ಇಂದು ಉದ್ಯೋಗದಲ್ಲಿ ಯಾವುದೇ ಆತುರವಿಲ್ಲದೇ ಇರುವಿರಿ. ಆಯಾಸವಾಗುವ ಕೆಲಸದಿಂದ ಹಿಂದೇಟು ಹಾಕುವಿರಿ. ನಿಮಗೆ ಸಹೋದ್ಯೋಗಿಗಳ ಸಹಕಾರವು ಸಿಗಲಿದೆ. ಉದ್ಯಮದಲ್ಲಿ ಕುಟುಂಬದವರ ಸಲಹೆಯನ್ನು ತಿರಸ್ಕರಿಸುವಿರಿ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿದೆ ಎಂದು ಅನ್ನಿಸಬಹುದು. ಹತ್ತಿರದ ಸಂಬಂಧದ ಜೊತೆ ವಿವಾದಗಳು ಬೇಡ. ನಿಮ್ಮವರ ಅಶಿಸ್ತಿನ ಕೆಲಸವನ್ನು ನೀವು ಸರಿ ಮಾಡಬೇಕಾಗುವುದು.‌ ಕಾಮಗಾರಿಗಳ ವಿಚಾರದಲ್ಲಿ ದೂರು ಬರಬಹುದು. ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ‌. ಅದನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು.

ವೃಶ್ಚಿಕ ರಾಶಿ : ಕುಟುಂಬದಿಂದ ನಮಗೆ ಅಸಮಾಧಾನವಾಗಬಹುದು. ಎಲ್ಲದಕ್ಕೂ ಕುಹಕವು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಸಂಗಾತಿಯ ಜೊತೆ ವಾಗ್ವಾದ ಆಗಬಹುದು. ವೃತ್ತಿಪರರು ಕೆಲಸಗಳಲ್ಲಿ ಮೇಲುಗೈ ಸಾಧಿಸುವರು. ಗೃಹ ನಿರ್ಮಾಣ ವಿಚಾರಗಳು ಕಾರ್ಯರೂಪಕ್ಕೆ ಬಲವಂತವಾಗಿ ತರುವಿರಿ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಯಿಂದ ಅನೇಕ ಲಾಭವಾಗಲಿದೆ. ಹಣವು ಹೆಚ್ಚಾಗುತ್ತದೆ ಎಂಬ ಸ್ಥೈರ್ಯವು ಇರುವುದು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಯಾರನ್ನೋ ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾದೀತು. ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ಯಾವುದಾದರೂ ವಿಭಾಗಕ್ಕೆ ಮುಖ್ಯಸ್ಥರಾಗಲು ಬಯಸುವಿರಿ.

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?