Horoscope: ರಾಶಿಭವಿಷ್ಯ; ಹಳೆಯ ಸ್ನೇಹಿತರ ಸಲಹೆ, ನಿಮ್ಮದೇ ಸರಿ ಎಂಬ ಭಾವ ಬದಲಾಯಿಸಿಕೊಳ್ಳುವುದು ಉತ್ತಮ

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 15 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ; ಹಳೆಯ ಸ್ನೇಹಿತರ ಸಲಹೆ, ನಿಮ್ಮದೇ ಸರಿ ಎಂಬ ಭಾವ ಬದಲಾಯಿಸಿಕೊಳ್ಳುವುದು ಉತ್ತಮ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 15, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪಂಚಮಿ/ ಷಷ್ಠಿ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:11 ರಿಂದ ಮಧ್ಯಾಹ್ನ 12:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:11 ರಿಂದ 09:41 ರ ವರೆಗೆ.

ಮೇಷ ರಾಶಿ: ನಿಮ್ಮ ಮುಜುಗರ ಸ್ವಭಾವವು ಇತರರಿಗೆ ಕಷ್ಟವಾಗುವುದು. ಅಪರೂಪದ ವ್ಯಕ್ತಿಗಳಿಗೆ ಅತಿಥಿ ಸತ್ಕಾರವನ್ನು ಮಾಡುವಿರಿ. ನೀವು ಯಾರ ಸಹಕಾರವನ್ನು ಪಡೆಯಲು ಅಪೇಕ್ಷಿಸುವುದಿಲ್ಲ. ನಿರೋದ್ಯೋಗಿಗಳಿಗೆ ಮುಜುಗರದ ಸಂದರ್ಭವು ಬರಬಹುದು. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿಮ್ಮ ಬೆಳವಣಿಗೆಯು ಸಕಾರತ್ಮಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಹತ್ತರ ಜೊತೆ ಹನ್ನೊಂದು ಆಗದಂತೆ ನೀವೇ ನೋಡಿಕೊಳ್ಳಬೇಕು.

ವೃಷಭ ರಾಶಿ: ಕ್ರಿಯಾತ್ಮಕತೆಯಿಂದ‌ ನಿಮಗೆ ಆನಂದವು ಸಿಗಲಿದ್ದು, ಅದನ್ನೇ ಮುಂದುವರಿಸಲು ಇಷ್ಟವಾಗುವುದು. ಕುಟುಂಬದ ವಿರೋಧವನ್ನು ನೀವು ಎದರಿಸಿದರೂ ನಿಮ್ಮ‌ ಧೋರಣೆಯು ಬದಲಾಗದು. ಕಳೆದ ಸಂತೋಷದ ಕಾಲವು ನಿಮಗೆ ಸಿಗದು ಎಂಬ ತೀರ್ಮಾನಕ್ಕೆ ಬರುವಿರಿ. ಚಿಂತಿಸಿ ಪ್ರಯೋಜನವೂ ಇರದು. ಭವಿಷ್ಯದ ಚಿಂತೆಯೂ ಇರಲಿದೆ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ.

ಮಿಥುನ ರಾಶಿ: ಇಂದು ನಿಮ್ಮ ಘನತೆಯನ್ನು ಬಿಟ್ಟು ಕದಲಲಾರಿರಿ. ಹಳೆಯ ಸ್ನೇಹಿತರ ಸಲಹೆಯಿಂದ ನಿಮ್ಮ‌ ಹೂಡಿಕೆ ಇರುಬುದು. ನಿಮ್ಮದೇ ಸರಿ ಎಂಬ ಭಾವವು ಬದಲುಮಾಡಿಕೊಳ್ಳುವುದು ಉತ್ತಮ. ನೌಕರರ ವಿಚಾರದಲ್ಲಿ ನಿಮಗೆ ಅಸಮಾಧಾನ ಇರುವುದು. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಹೂಡಿಕೆಯಿಂದ ನಿಮಗೆ ಲಾಭವು ಸಿಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಜೊತೆ ಹಾರ್ದವಾದ‌ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು.

ಕಟಕ ರಾಶಿ: ಇಂದು ಅಧ್ಯಾತ್ಮದ ಕಡೆ ಚಿಂತನೆ ಇದ್ದರೂ ಅದು ತಾತ್ಕಾಲಿಕವಾದೀತು. ಸಾಮಾಜಿಕ ಕಾರ್ಯದಲ್ಲಿ ಸಿಗುವ ಪ್ರಶಂಸೆಯು ನಿಮಗೆ ಅಲ್ಪ ಬಲವನ್ನು ಕೊಡಿಸುವುದು. ಯಾವುದಾದರೂ ಮುಖ್ಯ ದಾಖಲೆಯನ್ನು ಎತ್ತಿಟ್ಟು, ಅದಕ್ಕಾಗಿ ವಿಪರೀತ ಹುಡುಕುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಅನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಕೊನೆಗೆ ಪರಿಸ್ಥಿತಿ ಗಂಭೀರವಾಗುವುದು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ದ್ವೇಷಭಾವವು ನಿಮ್ಮಲ್ಲಿ ಮೂಡಬಹುದು. ಆಂತರಿಕವಾಗಿ ನೀವು ಗಟ್ಟಿಯಾಗಬೇಕು.