Daily Horoscope 25 July 2024: ಮೇಷ ರಾಶಿಯವರಿಗೆ ಇಂದು ಗೊಂದಲ ಪರಿಹಾರ; ಇಂದಿನ ದ್ವಾದಶ ರಾಶಿ ಭವಿಷ್ಯ
ಜುಲೈ 25, 2024ರ ನಿಮ್ಮ ರಾಶಿಭವಿಷ್ಯ: ಇಂದು ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಮುಕ್ತವಾಗಿ ಇರಲು ಕಷ್ಟವಾದೀತು. ಹಾಗಾದರೆ ಜುಲೈ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಜ್ಯೋತಿಷ್ಯವು (Horoscope) ವ್ಯಕ್ತಿಯ ಹುಟ್ಟಿನ ಸಮಯ, ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆಯಾಗಿದೆ. ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ಅಥವಾ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ನಿತ್ಯ ಭವಿಷ್ಯವನ್ನು ಓದುತ್ತಾರೆ. ಹಾಗಾದ್ರೆ ಜುಲೈ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:51ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:03ರಿಂದ ಮಧ್ಯಾಹ್ನ 12:39ರ ವರೆಗೆ.
ಮೇಷ ರಾಶಿ : ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ ಮನಸ್ತಾಪಗಳು ಬರಬಹುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಮಾಡಬೇಕು ಎಂದುಕೊಂಡ ಕೆಲಸಗಳು ಆರಂಭವಾಗದೇ ಇರಬಹುದು. ದೈವಜ್ಞರ ಸಲಹೆ ಪಡೆದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ. ಕಲಹಕ್ಕಿಂತ ಮೌನವೇ ಲೇಸು ಎನಿಸಬಹುದು. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ. ಉದ್ಯಮದಲ್ಲಿ ಸವಾಲುಗಳು ಬರಬಹುದು. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾತನ್ನು ಉಳಿಸಿಕೊಳ್ಳುವಿರಿ. ನಿಮ್ಮದಾದ ವಸ್ತುಗಳನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸಿ. ಅಪರಿಚಿತರ ವ್ಯಕ್ತಿಗಳಿಂದ ನೀವು ಸಂತೋಷಗೊಳ್ಳುವಿರಿ.
ವೃಷಭ ರಾಶಿ : ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಮಾನಸಿಕವಾಗಿ ಆಗುವ ನೋವನ್ನು ಶಮನ ಮಾಡಿಕೊಳ್ಳಲು ದೂರಪ್ರಯಾಣ ಮಾಡಬಹುದು. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು. ಸುಮ್ಮನೇ ವಾಗ್ವಾದಗಳು ಬೇಡ. ಹೊಂದಣಿಕೆಯಿಂದ ಇತ್ಯರ್ಥ ಮಾಡಿಕೊಳ್ಳಿ. ನಿಮ್ಮ ಮೂಲ ಉದ್ದೇಶವು ಮರೆಯಾಗಬಹುದು. ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಮನೆಯಲ್ಲಿ ಸಮ್ಮತಿ ಇಲ್ಲದೇ ಇದ್ದರೂ ನಿಮ್ಮ ಹಠವೇ ಮೇಲಾಗುವುದು. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡುವುದು ಉತ್ತಮ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಉದ್ವೇಗದಿಂದ ನಿಮ್ಮ ವರ್ತನೆ ಬದಲಾಗುವುದು.
ಮಿಥುನ ರಾಶಿ : ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೋಪವು ನಿಮ್ಮನ್ನು ದಾರಿ ತಪ್ಪಿಸಬಹುದು. ನಿಮ್ಮ ಫಲಿತಾಂಶವು ನಿನಗೆ ಖುಷಿಕೊಡುವುದು. ಭಿನ್ನಾಭಿಪ್ರಾಯಗಳು ಸಹಜವಿದ್ದರೂ ಅದನ್ನು ಉಳಿಸಿಕೊಳ್ಳುವುದು ಬೇಡ. ನಿಮ್ಮ ಸಮಯವನ್ನು ಯಾರಾದರೂ ಬಳಸಿಕೊಳ್ಳಬಹುದು. ಜಾಣತನದಿಂದ ಜವಾಬ್ದಾರಿಯನ್ನು ಬಿಡುವಿರಿ. ಪಡೆದುಕೊಳ್ಳುವುದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹತ್ತಿರದ ವ್ಯಕ್ತಿಗಳಿಗೆ ನಿಮ್ಮ ಮೇಲೆ ಅಗೌರವವೂ ಬರಬಹುದು. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಉದ್ಯೋಗದಲ್ಲಿ ನಿಶ್ಚಲವಾದ ಮನಸ್ಸು ಇರದು.
ಕಟಕ ರಾಶಿ : ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸ್ನೇಹಿತರ ಸಹಾಯದಿಂದ ಹೊಸ ಉದ್ಯಮವನ್ನು ಆರಂಭಿಸುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ನಿಮ್ಮ ನಿಲುವೂ ಮುಖ್ಯವೇ ಆಗುವುದು. ಅರ್ಥಿಕತೆಯನ್ನು ನೀವು ವೃದ್ಧಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸಮೂಹವನ್ನು ಮುನ್ನಡೆಸುವ ನಾಯಕರಾಗುವಿರಿ. ನಿಮ್ಮ ಸುಕೃತವು ಕಾಪಾಡಲಿದೆ. ನಿಮ್ಮ ದೃಷ್ಟಿಯನ್ನು ಶುದ್ಧ ಮಾಡಿಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳು ನಿಮಗೆ ಯಶಸ್ಸನ್ನು ತಂದು ಕೊಡುವುದು. ದೀರ್ಘಕಾಲದ ಹೂಡಿಕೆಗೆ ನಿಮ್ಮ ಗಟ್ಟಿಯಾದ ನಿಲುವಿರಲಿ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು. ಹೆಚ್ಚು ಸೌಂದರ್ಯಕ್ಕೆ ಮಹತ್ತ್ವ ನೀಡುವಿರಿ.
ಸಿಂಹ ರಾಶಿ : ಯಾರನ್ನೂ ಅಳೆಯುವಲ್ಲಿ ಸೋಲುವಿರಿ. ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ಉದ್ಯೋಗದಲ್ಲಿ ನಿಮ್ಮ ಲಾಭದ ಅಂಶವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವಿರಿ. ಸಂಗಾತಿಯನ್ನು ನೀವು ಸಂತೋಷ ಪಡಿಸುವಿರಿ. ಹರಟೆಯಿಂದ ಇಂದಿನ ದಿನವು ಮುಕ್ತಾಯವಾಗುವುದು. ಒತ್ತಡವು ಕಡಿಮೆಯಾಗಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಜೀವನೋಪಾಯಕ್ಕೆ ಯಾವುದಾದರೂ ಇನ್ನೊಂದು ವೃತ್ತಿಯನ್ನು ಆಶ್ರಯಿಸುವಿರಿ. ಹಳೆಯ ಗೆಳತಿಯರ ಭೇಟಿಯ ಸಾಧ್ಯತೆ ಇದೆ. ಬಂದ ಹಣವನ್ನು ಸದ್ವಿನಿಯೋಗದ ಕಡೆ ಹರಿಸಿ. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ವರ್ತನೆಯು ಬೇರೆಯವರಿಗೆ ಸರಿಯಾಗದು. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಸ್ವತಂತ್ರವಾಗಿ ಉದ್ಯಮದಲ್ಲಿ ತೊಡಗುವಿರಿ.
ಕನ್ಯಾ ರಾಶಿ : ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು. ಆಲಂಕಾರಿಕ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ನೀವು ಅಂದುಕೊಂಡದ್ದು ಮಾತ್ರ ಸತ್ಯ ಎನ್ನುವ ನಿರ್ಧಾರಕ್ಕೆ ಬರುವುದು ಬೇಡ. ಇನ್ನೊಂದು ಮುಖವನ್ನೂ ನೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವವರಿದ್ದೀರಿ. ಕಹಿ ವಾರ್ತೆಯಿಂದ ಕಷ್ಟವಾದೀತು. ನೀವು ಶಿಕ್ಷಕರಾಗಿ ಇದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳ ಸಹಾಯವು ಇಂದು ಸಿಗಲಿದೆ. ಸ್ನೇಹಿತರ ನಿಮ್ಮ ಜೊತೆ ಕಳೆಯಲು ಬಯಸಬಹುದು. ನೆರೆ – ಹೊರೆಯವರು ನಿಮ್ಮನ್ನು ಗಮನಿಸಬಹುದು. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಕಾರ್ಯಭಾರವನ್ನು ವರ್ಗಾಯಿಸಲು ಪ್ರಯತ್ನಿಸುವಿರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.
ತುಲಾ ರಾಶಿ : ಅತಿಥಿಗಳ ಆಗಮನದಿಂದ ನಿಮಗೆ ಕಷ್ಟವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಒಪ್ಪಿಕೊಳ್ಳುವುದು ನಿಮಗೆ ಅನಿವಾರ್ಯವಾದೀತು. ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ನಿಮಗೆ ಸಿಗುವರು. ಸೌಂದರ್ಯಕ್ಕೆ ಆಕರ್ಷಿತರಾಗುವಿರಿ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ. ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದ ಸ್ಥಾನವನ್ನು ಬದಲಿಸುವ ನಿಮ್ಮನ್ನು ಬಿಟ್ಟುಕೊಡಲು ಕಛೇರಿಯು ಸಿದ್ಧವಿರುವುದಿಲ್ಲ. ನಿರ್ಧಾರವಾದ ವಿವಾಹವು ಮುಂದೆ ಹೋದೀತು. ನಿಮ್ಮ ಬಗ್ಗೆಯೇ ನಿಮಗೆ ತಪ್ಪಿತಸ್ಥಭಾವವು ಮೂಡಬಹುದು. ಒಮ್ಮೆ ವೃತ್ತಿಯ ಮೇಲೆ ಅಗೌರವ ಬರಬಹುದು. ಆಪ್ತರ ಬಗ್ಗೆ ಇರುವ ನಿಮ್ಮ ಭಾವವು ಪ್ರಕಟವಾಗಬಹುದು. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ನಿಮ್ಮನ್ನು ಒಳ್ಳೆಯ ಕಾರ್ಯಕ್ಕೆ ಪ್ರೇರಣೆ ಕೊಡಬಹುದು.
ವೃಶ್ಚಿಕ ರಾಶಿ : ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ಸದವಕಾಶಗಳು ಸಿಗಲಿವೆ ಇಂದು ನಿಮಗೆ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ನಿಮ್ಮ ಬಳಿ ಇರುವುದನ್ನು ಇನ್ನೊಬ್ಬರಿಗೆ ಕೊಡುವ ಮನಸ್ಸು ಇರದು. ಅಧಿಕವಾದ ಮಾತುಗಳು ನಿಮ್ಮ ಸ್ವಭಾವವನ್ನು ತಿಳಿಸುವುದು. ದೇಹಪೀಡೆಯಿಂದ ಕಷ್ಟವಾಗುವುದು. ಹೊಸ ತಂತ್ರಜ್ಞಾನವನ್ನು ಕಲಿಯುವ ಮನಸ್ಸಾದೀತು. ಹಿರಿಯರ ಮಾತಿಗೆ ಎದುರಾಡುವುದು ಅಭ್ಯಾಸವಾದೀತು. ಈ ವಿಚಾರದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಬೇಕಾದೀತು. ನಿಮ್ಮ ಉದ್ಯೋಗಕ್ಕೆ ಹೊಸ ದಿಕ್ಕು ಬರಬಹುದು. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆ ಮುಕ್ತವಾಗಿ ಮಾತನಾಡುವಿರಿ. ಸಂಗಾತಿಯಿಂದ ಬೈಗುಳಸಿಗಬಹುದು.
ಧನು ರಾಶಿ : ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ದೂರದಿಂದ ಹೋಗುವಿರಿ. ಮಕ್ಕಳ ಪ್ರೀತಿಯು ನಿಮಗೆ ಸಿಗಲಿದೆ. ಕುಟುಂಬದ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ನಿಮ್ಮ ಪ್ರೇಮವು ಬಹಳ ಅಚ್ಚುಕಟ್ಟಾಗಿ ಇರುವುದು. ವ್ಯವಹಾರದಲ್ಲಿ ತಿಳಿವಳಿಕೆ ಕಡಿಮೆಯಿರುವಂತೆ ತೋರುವುದು. ಯಾರದೋ ಮಾತಿನ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಪೂರ್ಣ ಸರಿಯಲ್ಲ. ನಿಮ್ಮ ಪರೀಕ್ಷೆಯೂ ಬೇಕಾದೀತು. ಶ್ರದ್ಧೆಯಿಂದ ಧಾರ್ಮಿಕ ಕಾರ್ಯದಲ್ಲಿ ತೊಡಗುವಿರಿ. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ.
ಮಕರ ರಾಶಿ : ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ಸಹೋದರರ ಜೊತೆ ಪ್ರೀತಿಯಿಂದ ಇರಲು ಬಯಸುವಿರಿ. ನಿಮ್ಮನ್ನು ಹಳಿದವರೇ ನಿಮ್ಮ ಸಹವಾಸ ಬಯಸಿ ಬರಬಹುದು. ಗುಣಮಟ್ಟದ ಜೀವನಕ್ಕೆ ಹೋಗಲು ಸತತವಾಗಿ ಮಾಡಿದ ಪ್ರಯತ್ನವು ಇಂದು ಫಲ ಕೊಡಬಹುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವುದು ಬೇಡ. ಕಛೇರಿಯಲ್ಲಿ ಕೆಲಸದಲ್ಲಿ ಖುಷಿಯಿದ್ದು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮನ್ನು ಕಂಡು ಇತರರೂ ಖುಷಿಪಟ್ಟಾರು. ಮೇಲಧಿಕಾರಿಗಳ ಹೊಗಳಿಕೆಯು ನಿಮಗೆ ಸಿಕ್ಕೀತು. ಯಾವುದನ್ನೇ ಆದರೂ ಆಮೂಲಾಗ್ರ ಸರಿ ಮಾಡುವುದು ಉತ್ತಮ. ಒತ್ತಾಯ ಪೂರ್ವಕವಾಗಿ ನಿಮ್ಮ ಸಾಲ ಮಾಡಿಸಬಹುದು. ಇದು ನಿಮ್ಮ ಎಲ್ಲ ನೋವನ್ನು ಮರೆಸಬಹುದು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ.
ಕುಂಭ ರಾಶಿ : ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ಅದರ ಪರಿಣಾಮವನ್ನು ಎದುರಿಸಬೇಕಾದೀತು. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ನಿಮ್ಮ ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವಿರಿ. ಮಕ್ಕಳಿಗೆ ನೀವು ತೋರಿಸುವ ಪ್ರೀತಿಯು ಖುಷಿ ಕೊಡುವುದು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿದ್ದೀರಿ. ಆಲಸ್ಯದಿಂದ ಮನೆಯಲ್ಲಿಯೇ ಇರುವಿರಿ. ಅಸಂಬದ್ಧ ಆಲೋಚನೆಗಳು ನಿಮ್ಮನ್ನು ವಿಚಲಿತ ಗೊಳಿಸೀತು. ಅಪಪ್ರಚಾರವು ನಿಮ್ಮ ಸದ್ಗುಣಕ್ಕೆ ಮಾರಕವಾದೀತು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ.
ಮೀನ ರಾಶಿ : ಇಂದು ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಮುಕ್ತವಾಗಿ ಇರಲು ಕಷ್ಟವಾದೀತು. ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು. ಆಪ್ತರಿಗೆಂದು ಉಡುಗೊರೆಯನ್ನು ಸಿದ್ಧಮಾಡಿಕೊಳ್ಳುವಿರಿ. ಅನಗತ್ಯ ಮಾತಿನಿಂದ ನಿಮಗೆ ಸುಸ್ತಾದೀತು. ಮಾತು ಸಾಕೆನಿಸಬಹುದು. ತಾಯಿಯ ಆರೈಕೆಯಲ್ಲಿ ಸಮಯವನ್ನು ಕಳೆಯುವಿರಿ. ಆಕಸ್ಮಿಕವಾಗಿ ದೇವಾಲಯಕ್ಕೆ ಹೋಗಬೇಕಾದೀತು. ಇದು ನಿಮ್ಮ ಶುಭವನ್ನು ಹೇಳುತ್ತದೆ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಸಾಲದ ಬಗ್ಗೆ ಭಯವಿರುವುದು. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ.
-ಲೋಹಿತ ಹೆಬ್ಬಾರ್-8762924271 (what’s app only)