Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 13ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 13ರ ಮಂಗವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 13ರ ದಿನಭವಿಷ್ಯ
ದಿನಭವಿಷ್ಯ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 13, 2022 | 6:06 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ (Numerology Prediction) ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 13ರ ಮಂಗವಾರದ ದಿನ ಭವಿಷ್ಯ (daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Saturn Transit 2023: ಜನವರಿ 17ರಂದು ಕುಂಭ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿ, ಲಗ್ನದವರು ಎಚ್ಚರಿಕೆಯಿಂದ ಇರಬೇಕು

ಜನ್ಮಸಂಖ್ಯೆ 1

ಈ ದಿನ ನಿಮ್ಮಂತೆ ನೀವಿದ್ದರೆ ಸಾಕು. ಏನೋ ಮಹತ್ತರವಾದದ್ದು ಸಂಭವಿಸಲಿದೆ. ಅದು ಕೂಡ ಸಂಬಂಧದ ವಿಷಯದಲ್ಲಿ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷ ಆಗಲಿದೆ. ಗೊಂದಲಗಳು ಪರಿಹಾರ ಆಗುತ್ತದೆ. ಪ್ರೀತಿ- ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತದೆ. ನೀವು ಮಾಡಬೇಕಾದ್ದೆಲ್ಲ ಇಷ್ಟೇ, ಬಿಗುಮಾನ ಬಿಡಿ, ಮುಕ್ತ ಮನಸ್ಸಿನಿಂದ ಇರಿ.

ಜನ್ಮಸಂಖ್ಯೆ 2

ಹಣದ ವಿಚಾರ ಬಹಳ ಪ್ರಾಮುಖ್ಯ ಪಡೆಯುತ್ತದೆ. ಬಹಳ ದೊಡ್ಡ ದೊಡ್ಡ ಸ್ಕೀಮ್‌ಗಳನ್ನು ಮಾಡುವುದಕ್ಕೆ ಮುಂದಾಗುತ್ತೀರಿ. ಆದರೆ ಇದನ್ನು ಇತರರೊಂದಿಗೆ ಸದ್ಯಕ್ಕೆ ಹಂಚಿಕೊಳ್ಳಬೇಡಿ. ಸಂಜೆ ಹೊತ್ತಿಗೆ ನಿಮ್ಮ ಮನಸಿಗೆ ಪ್ರಶಾಂತತೆ ನೀಡಬಲ್ಲಂಥ ಸ್ಥಳಕ್ಕೆ ಒಬ್ಬರೇ ಹೋಗಿ, ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ.

ಜನ್ಮಸಂಖ್ಯೆ 3

ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ನಿಮ್ಮ ಧರ್ಮಾಚರಣೆ ಬೇರೆ ಆಗಿದ್ದಲ್ಲಿ ಬಿಳಿ ವಸ್ತ್ರವೊಂದನ್ನು ನಿಮ್ಮ ಪರ್ಸ್‌ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 4

ಈ ದಿನ ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಸಂಬಂಧ ವೃದ್ದಿ ಆಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ.

ಜನ್ಮಸಂಖ್ಯೆ 5

ಕ್ರಿಪ್ಟೋಕರೆನ್ಸಿಗಳು, ಬೆಳ್ಳಿಯಲ್ಲಿ ಹೂಡಿಕೆ ಮಾಡಿದವರಿಗೆ ಅದನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ಸೂಕ್ತವಾದ ಸಮಯ ಇದು. ನಿಮ್ಮನ್ನು ತಿರಸ್ಕಾರದಿಂದ, ನಿಕೃಷ್ಟವಾಗಿ ಕಾಣುತ್ತಿದ್ದವರಿಗೆ ಈ ದಿನ ಬೆಲೆ ಗೊತ್ತಾಗುತ್ತದೆ. ಹಾಗಂತ ಏಕಾಏಕಿ ನೀವು ಕರಗಿ ಹೋಗಬೇಡಿ. ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿಕ್ಕಿದೆ; ಆದ್ದರಿಂದ ಗುರಿಯ ಕಡೆಗೆ ಲಕ್ಷ್ಯ ಇಡಿ.

ಜನ್ಮಸಂಖ್ಯೆ 6

ಐವಿಎಫ್ ಮೂಲಕ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತವಾದ ಮಾರ್ಗದರ್ಶನ ದೊರೆಯಲಿದೆ. ಇಷ್ಟು ದಿನ ಮನಸ್ಸಿನಲ್ಲಿ ಕಾಡುತ್ತಿದ್ದ ದುಗುಡಕ್ಕೆ ಉತ್ತರ ದೊರೆಯಲಿದೆ. ಈಶ್ವರನ ಆರಾಧನೆ ಮಾಡಿದಲ್ಲಿ ಮತ್ತಷ್ಟು ಶುಭ ಫಲಗಳು ದೊರೆಯಲಿವೆ.

ಜನ್ಮಸಂಖ್ಯೆ 7

ಕೆಲವು ಅಚಾತುರ್ಯಗಳು ದಿಢೀರನೆ ಸಂಭವಿಸಿ ಬಿಡುತ್ತವೆ. ಎದುರಿಗೆ ಇರುವವರು ಸಲುಗೆ ಕೊಟ್ಟರೂ ಎಂಬ ಕಾರಣಕ್ಕೆ ನಾಲಗೆಯನ್ನು ಹರಿಯ ಬಿಡಬೇಡಿ. ಈ ದಿನ ಸಂಬಂಧಗಳ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಬೇಕಾಗುತ್ತದೆ. ಬಹಳ ಕಾಲದಿಂದ ನೀವು ನಿರೀಕ್ಷೆ ಮಾಡುತ್ತಿದ್ದ ಪ್ರಾಜೆಕ್ಟ್‌ವೊಂದರ ಬಗ್ಗೆ ಅಪ್‌ಡೇಟ್ ದೊರೆಯಲಿದೆ.

ಜನ್ಮಸಂಖ್ಯೆ 8

ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ. ಮಾಡುವ ಕೆಲಸದಲ್ಲಿ ಏಕಾಗ್ರತೆ ಮುಖ್ಯ. ನಿಮ್ಮಿಂದ ಆಗದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಮಾತು ನೀಡದಿರಿ. ದಿನದ ಕೊನೆ ಹೊತ್ತಿಗೆ ಅಚ್ಚರಿಯ ಸುದ್ದಿಯೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆದರೆ ನೀವು ಅದನ್ನು ನಂಬಿದರೆ ಲಾಭ ಮಾಡಿಕೊಳ್ಳುವ ಅವಕಾಶ ಇದೆ.

ಜನ್ಮಸಂಖ್ಯೆ 9

ಸ್ನೇಹಿತರ ಬೆಂಬಲ ಹಾಗೂ ಸಹಕಾರದಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಲಿದೆ. ವೈಯಕ್ತಿಕ ಕೆಲಸಗಳು ಮುಗಿಸಿಕೊಳ್ಳುವುದಕ್ಕೆ ಸಮಯ ದೊರೆಯಲಿದೆ. ನಿಮ್ಮ ಪ್ರತಿಭೆಯನ್ನು ಪರೀಕ್ಷೆಗೆ ಒಳಪಡಿಸುವ ಸಮಯ ಇದು. ನಿಮಗೆ ನೀವೇ ದೊಡ್ಡ ಗುರಿಯನ್ನು ಹಾಕಿಕೊಳ್ಳಲಿಕ್ಕೆ ಹೋಗಬೇಡಿ. ನಿಮಗೆ ವಹಿಸಿದ ಕೆಲಸ ಅಥವಾ ಜವಾಬ್ದಾರಿಯನ್ನು ಖುಷಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರೆ ಸಾಕು.

ಲೇಖನ- ಎನ್‌.ಕೆ.ಸ್ವಾತಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ