ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 29ರ ಗುರುವಾರದ ದಿನ ಭವಿಷ್ಯ (Daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ಮಹತ್ವ ಅಲ್ಲದ ವಿಚಾರವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತೆ ಪಡುತ್ತೀರಿ. ಧಾರ್ಮಿಕ ನಾಯಕರಿಗೆ ದೇಹಾಲಸ್ಯ ಆಗುತ್ತದೆ. ಆಡುವ ಮಾತು ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ರಹಸ್ಯ ವಿಚಾರವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಹಾಗೊಂದು ವೇಳೆ ಹಂಚಿಕೊಂಡರೆ ಅವಮಾನದ ಪಾಲಾಗುತ್ತೀರಿ.
ಜನ್ಮಸಂಖ್ಯೆ 2
ಒಂದಲ್ಲ ಒಂದು ಕೆಲಸದ ಪ್ರಗತಿ ಬಗ್ಗೆ ನಿಮ್ಮ ಬಳಿ ವಿಚಾರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗಿ ಬರುವ ಅವಕಾಶ ಇದೆ. ಅನಿಸಿದ್ದನ್ನು ಹೇಳುತ್ತೀನಿ ಎಂಬ ಧೋರಣೆಯಿಂದ ಇತರರಿಗೆ ಬೇಸರ ಮಾಡದಿರಿ.
ಜನ್ಮಸಂಖ್ಯೆ 3
ಸ್ವಂತ ವ್ಯವಹಾರ ಮಾಡುವವರಿಗೆ ಉತ್ತಮವಾದ ದಿನ. ಉದ್ಯೋಗಸ್ಥರಿಗೆ ಗೊಂದಲ ಏರ್ಪಡುತ್ತದೆ. ತಾಯಿಯ ಆರೋಗ್ಯದ ಕಡೆಗೆ ಗಮನ ನೀಡಿ. ಗ್ಯಾಸ್ಟ್ರಿಕ್, ಮಧುಮೇಹ ಹಾಗೂ ರಕ್ಯದೊತ್ತಡದಂಥ ಸಮಸ್ಯೆ ಇರುವವರು ಆಹಾರ ಪಥ್ಯವನ್ನು ಸರಿಯಾಗಿ ಪಾಲಿಸಿ. ಇತರರಿಂದ ಸಹಾಯ ಪಡೆಯುವಾಗ ಎಚ್ಚರಿಕೆ.
ಜನ್ಮಸಂಖ್ಯೆ 4
ಸ್ವಾದಿಷ್ಟವಾದ ಊಟ- ತಿಂಡಿ ಮಾಡುವ ಯೋಗ ಈ ದಿನ ನಿಮಗಿದೆ. ಹೊಸ ಬಟ್ಟೆ- ಆಭರಣ ಖರೀದಿ ಬಗ್ಗೆ ಆಲೋಚನೆ ಮಾಡುತ್ತೀರಿ. ಶುಭ ಕಾರ್ಯವೊಂದನ್ನು ನಿಮ್ಮ ನೇತೃತ್ವದಲ್ಲಿ ನಡೆಸಿಕೊಡುವಂತೆ ಕೇಳಿಕೊಳ್ಳಬಹುದು. ವಿದ್ಯಾರ್ಥಿಗಳು ಉತ್ತಮವಾದ ಹೆಸರನ್ನು ಪಡೆದು, ಪ್ರಸಿದ್ಧಿಗೆ ಬರುತ್ತೀರಿ.
ಜನ್ಮಸಂಖ್ಯೆ 5
ಸ್ನೇಹಿತರ ಅಥವಾ ಬಂಧುಗಳ ಜತೆಗೂಡಿ ಸಮಯ ಕಳೆಯುವಂಥ ಯೋಗ ಇದೆ. ಔತಣ ಕೂಟಗಳಿಗೆ ಆಹ್ವಾನ ಬರಬಹುದು. ಪ್ರೇಮಿಗಳಿಗೆ ಸುಮಧುರ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ವಾಹನ ಸೌಖ್ಯವಿದ್ದು, ಸಣ್ಣದೊಂದು ಪ್ರವಾಸ ಮಾಡುವ ಯೋಗ ಕೂಡ ಈ ದಿನ ಇದೆ.
ಜನ್ಮಸಂಖ್ಯೆ 6
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಗೌರವ- ಸನ್ಮಾನ ದೊರೆಯಲಿವೆ. ಈ ಹಿಂದೆ ನೀವು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಭೂ ವ್ಯವಹಾರಗಳಲ್ಲಿ ಅಂದುಕೊಂಡಂತೆ ನಡೆಯುವುದಿಲ್ಲ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗ ಗೋಚರಿಸುತ್ತದೆ.
ಜನ್ಮಸಂಖ್ಯೆ 7
ಕಾಲು, ಮಂಡಿ ಹಾಗೂ ಭುಜದ ನೋವು ಈ ದಿನ ನಿಮ್ಮನ್ನು ಕಾಡಬಹುದು. ಹೆಚ್ಚಿನ ಆಯಾಸದ ಕೆಲಸ ಮಾಡಬೇಡಿ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ. ಹಳೆಯ ಗೆಳೆಯ ಅಥವಾ ಗೆಳತಿಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇನ್ನು ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದೀರಿ.
ಜನ್ಮಸಂಖ್ಯೆ 8
ಅಧ್ಯಾತ್ಮ ಚಿಂತನೆಯತ್ತ ಮನಸ್ಸು ಹೊರಳುತ್ತದೆ. ದಾನ- ಧರ್ಮಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ತಂದೆ- ತಾಯಿಯನ್ನು ತೀರ್ಥ ಕ್ಷೇತ್ರಗಳಿಗೆ ಕರೆದೊಯ್ಯಬಹುದು. ಆ ಮೂಲಕ ಅವರ ಆಶೀರ್ವಾದ ನಿಮಗೆ ಸಿಗುತ್ತದೆ. ಪೀಠೋಪಕರಣಗಳ ವ್ಯಾಪಾರಿಗಳಿಗೆ ಮಿಶ್ರ ಫಲ ಇದೆ.
ಜನ್ಮಸಂಖ್ಯೆ 9
ಏನಾದರೂ ಮಾಡಿ ದುಡಿಮೆ ಹೆಚ್ಚಿಸಿಕೊಳ್ಳಬೇಕು ಎಂಬ ನಿಮ್ಮ ಧೋರಣೆಯಿಂದ ಅವಮಾನಕ್ಕೆ ಗುರಿ ಆಗಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಕೇವಲವಾಗಿ ಮಾತನಾಡುವಂತೆ ಆಗುತ್ತದೆ. ಆದ್ದರಿಂದ ಆತ್ಮಗೌರವ ಕಾಪಾಡಿಕೊಳ್ಳುವತ್ತ ಗಮನ ನೀಡಿ. ಸುಂದರವಾದ ಬದುಕನ್ನು ರೂಪಿಸಿಕೊಳ್ಳುವುದರತ್ತ ಗುರಿ ಇರಲಿ.
ಲೇಖನ- ಎನ್.ಕೆ.ಸ್ವಾತಿ