Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ

Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ
ಸಂಖ್ಯಾಶಾಸ್ತ್ರImage Credit source: indianexpress.com
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 28, 2022 | 6:10 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಬುಧವಾರದ ದಿನ ಭವಿಷ್ಯ (Daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Leo Health Horoscope 2023: ಮುಂದಿನ ವರ್ಷ ಸಿಂಹ ರಾಶಿಯವರ ಆರೋಗ್ಯ ಹೇಗಿರಲಿದೆ?

ಜನ್ಮಸಂಖ್ಯೆ 1

ಮನೆಯವರು, ಕುಟುಂಬದವರ ಸಲುವಾಗಿ ಹೂಡಿಕೆ, ಉಳಿತಾಯದ ಬಗ್ಗೆ ಆಲೋಚನೆ ಮಾಡುತ್ತೀರಿ. ಇನ್ನು ನಿಮ್ಮಲ್ಲಿ ಕೆಲವರು ಹೊಸ ವಾಹನ ಖರೀದಿಗೆ ಕೂಡ ಮನಸ್ಸು ಮಾಡಲಿದ್ದೀರಿ. ಯಾರನ್ನಾದರೂ ಭೇಟಿ ಆಗಬೇಕು ಎಂಬ ಉದ್ದೇಶ ನಿಮಗಿದ್ದಲ್ಲಿ ಈ ದಿನ ಅವರೊಂದಿಗೆ ಚರ್ಚೆ ನಡೆಸಬಹುದು. ಭೇಟಿಗೆ ಮೊದಲು ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿ.

ಜನ್ಮಸಂಖ್ಯೆ 2

ವಿದೇಶೀ ಕರೆನ್ಸಿಗಳ ವ್ಯವಹಾರ ನಡೆಸುವಂಥವರಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಕಾನೂನು ಕಟ್ಟಳೆಯನ್ನು ಪಾಲಿಸುವ ಕಡೆಗೆ ಲಕ್ಷ್ಯ ನೀಡಿ. ಪ್ರೇಮ ನಿವೇದನೆ ಮಾಡಬೇಕು ಅಂದುಕೊಳ್ಳುವವರಿಗೆ ಸೂಕ್ತ ವಾತಾವರಣ ನಿರ್ಮಾಣ ಆಗಲಿದೆ. ಕನಿಷ್ಠ ಪಕ್ಷ ನೀವು ಬಯಸುವ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂಬ ಸೂಕ್ಷ್ಯ ಸಿಗಲಿದೆ.

ಜನ್ಮಸಂಖ್ಯೆ 3

ಸಂಗಾತಿ ಮಾತಿಗೆ ಮನ್ನಣೆ ನೀಡಿ. ಸ್ನೇಹಿತರು ನಿಮ್ಮ ಬಗ್ಗೆ ಇರುವ ಪ್ರೀತಿ- ಗೌರವದ ಕಾರಣಕ್ಕೆ ಕೆಲವು ವಿಚಾರಗಳನ್ನು ಎದುರಿಗೆ ಹೇಳದಿರಬಹುದು. ಅದನ್ನು ತಿಳಿದುಕೊಂಡು, ಅವರಿಗೆ ಬೇಸರ ಆಗದಂತೆ ನಡೆದುಕೊಳ್ಳಿ. ಈ ದಿನ ಚಿನ್ನ- ಬೆಳ್ಳಿ ವಸ್ತುಗಳನ್ನು ಖರೀದಿ ಮಾಡದಿರುವುದು ಉತ್ತಮ. ಸ್ವಲ್ಪ ಕಾಲ ಅದನ್ನು ಮುಂದೂಡಿ.

ಜನ್ಮಸಂಖ್ಯೆ 4

ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ.

ಜನ್ಮಸಂಖ್ಯೆ 5

ಎಲ್ಲ ಸಂದರ್ಭದಲ್ಲೂ ನೇರ ಮಾತು ಕೆಲಸಕ್ಕೆ ಬರುವುದಿಲ್ಲ. ಬಹಳ ಡಿಪ್ಲೊಮಾಟಿಕ್ ಆಗಿ ಮಾತನಾಡಿ, ವ್ಯವಹಾರಗಳನ್ನು ಇತ್ಯರ್ಥ ಮಾಡಿಕೊಳ್ಳಿ. ನಿಮ್ಮೆದುರು ಹೇಗೆ ಕಾಣಿಸಿಕೊಳ್ಳುತ್ತಾರೆ ಅದನ್ನೇ ನಿಜ ಅಂದುಕೊಳ್ಳದಿರಿ. ಮದುವೆ, ನಿಶ್ಚಿತಾರ್ಥದ ಮಾತುಕತೆಗಳು ಇದ್ದಲ್ಲಿ ತುಂಬ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ.

ಜನ್ಮಸಂಖ್ಯೆ 6

ನಿಮ್ಮ ಸವಾಲುಗಳನ್ನು ಮೀರಿ ನಿಲ್ಲುತ್ತೀರಿ. ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ಸಾಲ ಇದ್ದಲ್ಲಿ ತೀರಿಸಿಕೊಳ್ಳುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ತರುತ್ತೀರಿ. ಈ ಹಿಂದೆ ನೀವು ನೀಡಿದ್ದ ಮಾತು- ಭರವಸೆಗಳ ಕಡೆಗೆ ಗಮನ ನೀಡಿ. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 7

ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್, ಇಎಂಐ ಪಾವತಿ, ಸರ್ಕಾರಕ್ಕೆ ಬಾಕಿ ಉಳಿಸಿಕೊಂಡ ಯಾವುದೇ ಶುಲ್ಕವನ್ನು ನೀವು ಪಾವತಿ ಮಾಡಿದ್ದೀರಾ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇನ್ನು ಕಟ್ಟಡ ಕಾರ್ಮಿಕರು ಸ್ವಲ್ಪ ಎಚ್ಚರಿಕೆಯಿಂದಲೇ ಕಾರ್ಯ ನಿರ್ವಹಿಸಿ, ಯಾರ ಜತೆಗೂ ಮನಸ್ತಾಪ ಸಲ್ಲದು. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಮುಖ್ಯ.

ಜನ್ಮಸಂಖ್ಯೆ 8

ನಿಮಗೆ ಈ ದಿನ ಮಾರ್ಗದರ್ಶನ ನೀಡುವುದಕ್ಕೆ ಜನರಿರುತ್ತಾರೆ. ಇದನ್ನು ಸದುಪಯೋಗ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ವೈದ್ಯರು, ಡೇ ಕೇರ್ ಅಥವಾ ಶಾಲೆ ನಡೆಸುತ್ತಿರುವಂಥವರಿಗೆ ಭವಿಷ್ಯದ ಬಗ್ಗೆ ಒಂದಿಷ್ಟು ಚಿಂತೆ ಕಾಡಬಹುದು. ದಿನದ ಕೊನೆಗೆ ನಿಮಗಿಂತ ಕಿರಿಯ ವಯಸ್ಸಿನವರ ಜತೆಗಿನ ಮಾತುಕತೆಯಿಂದಾಗಿ ಮನಸ್ಸಿಗೆ ನೆಮ್ಮದಿ.

ಜನ್ಮಸಂಖ್ಯೆ 9

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂಥವರು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವಂಥವರು ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಆಲೋಚನೆ ಮಾಡಿ, ಸದ್ಯದ ಪರಿಸ್ಥಿತಿಯನ್ನು ಮಾತ್ರ ಆಲೋಚನೆ ಮಾಡದಿರಿ. ಅನುಭವಸ್ಥರ ಸಲಹೆ ಅಗತ್ಯ ಎನಿಸಿದಲ್ಲಿ ಖಂಡಿತಾ ಪಡೆದುಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ 

ಇನ್ನಷ್ಟು ಭವಿಷ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ