Daily Horoscope: ಈ ರಾಶಿಯವರು ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್​ 25: ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಆಸ್ತಿಯ ವಿಚಾರವಾಗಿ ನೆರೆ ಹೊರೆಯಲ್ಲಿ‌‌ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಅನಿವಾರ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಿ. ಹಾಗಾದರೆ ಆಗಸ್ಟ್​ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ
ಈ ರಾಶಿಯವರು ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2024 | 12:15 AM

ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ ಸಂಜೆ 05:15 ರಿಂದ 18:48, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:15ರ ವರೆಗೆ.

ಸಿಂಹ ರಾಶಿ: ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ನಿಮಗೆ ನೀವೇ ಉತ್ತೇಜನವನ್ನು ಕೊಟ್ಟುಕೊಳ್ಳಬೇಕಾಗುವುದು. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಸ್ನೇಹಿತರ ಜೊತೆ ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ಭೂ ವ್ಯವಹಾರದಲ್ಲಿ ಲಾಭವಿದ್ದರೂ ಅದನ್ನು ನಿರ್ವಹಿಸುವುದರಲ್ಲಿ ಇರಲಿದೆ.‌ನಿಮ್ಮದು ರಾಜಕೀಯ ಪ್ರೇರಿತ ಮನಸ್ಸಾಗಿದ್ದು ಎಲ್ಲದರಲ್ಲಿಯೂ ಅದನ್ನೇ ಕಾಣುವಿರಿ. ಸಹಾಯ ಮಾಡುವ ಮನಸ್ಸು ಇಂದು ನಿಮ್ಮಲ್ಲಿ ಇಲ್ಲವಾದೀತು. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ‌ ಕೆಲಸವು ಸಾಗದು. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಇಂದು ಸ್ವಲ್ಪ ಆಲಸ್ಯವೂ ಇರಬಹುದು. ಆರೋಗ್ಯವನ್ನು ದೈವಾನುಗ್ರಹ ಪಡೆದೂ ಸರಿಮಾಡಿಕೊಳ್ಳಬಹುದು‌. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.

ಕನ್ಯಾ ರಾಶಿ: ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ನಿಮಗೆ ಹಿರಿಯರಿಂದ ಪ್ರಶಂಸೆ ಸಿಗುವುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಯಾವುದನ್ನೂ ಗೊತ್ತಿಲ್ಲ ಎಂದು ಹೇಳುವುದನ್ನು ಬಿಡಬೇಕು. ಆರ್ಥಿಕ‌ವ್ಯವಹಾರಗಳನ್ನು ಇಂದು ಸರಿಯಾಗಿ‌ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ಬೈಗುಳ ಪಡೆಯುವಿರಿ. ಹೊಸ ಆದಾಯದ ಮೂಲವನ್ನು ಸಿದ್ಧಪಡಿಸಿಕೊಳ್ಳುವಿರಿ. ಸಭೆಗಳಿಗೆ ಭಾಗವಹಿಸಲು ಹೋಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ವಿಶ್ವಾದದಿಂದ ಮಾತ್ರ ನಿಮ್ಮ ಕಾರ್ಯವನ್ನು ಸಾಧಿಸಲು ಆಗುವುದು. ನಿಮ್ಮ ವ್ಯಕ್ತಿತ್ವವನ್ನು ಸರಿಮಾಡಿಕೊಳ್ಳಲು ಬಯಸುವಿರಿ. ಆಪ್ತರ ಜೊತೆ ಹರಟೆ ಹೊಡೆಯುವಿರಿ. ಸಾಹಿತ್ಯ ಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಇಂದು ಉಪಯೋಗಕ್ಕೆ ಬರುವುದು.

ತುಲಾ ರಾಶಿ: ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಹರಿತವಾದ ಕತ್ತಿ ಇದೆ ಎಂದು ಮೂಗನ್ನು ಕತ್ತರಿಸಲಾಗದು. ಅದರ ಉಪಯೋಗವನ್ನು ತಿಳಿದಿಕೊಂಡು ಅದನ್ನು ಮಾಡಬೇಕು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಆಸ್ತಿಯ ವಿಚಾರವಾಗಿ ನೆರೆ ಹೊರೆಯಲ್ಲಿ‌‌ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಅನಿವಾರ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಿ. ವ್ಯವಹಾರದಲ್ಲಿ ಶುದ್ಧಹಸ್ತರಾದಷ್ಟು ಬೇಡಿಕೆ ಹೆಚ್ಚು. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದು‌ಕಡೆ ಕುಳಿತು ಚಿಂತಾಮಗ್ನರಾಗುವಿರಿ. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಒಂಟಿಯಾಗಿ ಎಲ್ಲಿಗಾದರೂ ಹೋಗಿ ಸುತ್ತಾಡಿ ಬರುವಿರಿ.

ವೃಶ್ಚಿಕ ರಾಶಿ: ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ. ಸ್ನೇಹಪರವಾಗಿ ಇದ್ದಷ್ಟು ನಿಮಗೆ ಅನುಕೂಲತೆಗಳು ಜಾಸ್ತಿ. ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ನಿಮ್ಮ ಮಾತು ತಪ್ಪಾಗಿ ಅರ್ಥವಾಗಬಹುದು. ನೂತನ ವಸ್ತುಗಳನ್ನು ಧರಿಸಿ ಸಂತೋಷ ಪಡುವಿರಿ.‌ ದಾಂಪತ್ಯದಲ್ಲಿ ಸುಖವಾಗಿರಬೇಕೆಂಬ ವಿಷಯವನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ಕೊರತೆಯಿಂದ ನಿಮಗೆ ನೆಮ್ಮದಿ ಕಡಿಮೆಯಾದೀತು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ.