Weekly horoscope September: ಸೆಪ್ಟೆಂಬರ್ ಎರಡನೇ ವಾರದಲ್ಲಿ ಸೂರ್ಯನು ಸ್ವಕ್ಷೇತ್ರದಿಂದ ನೀಚಸ್ಥಾನಕ್ಕೆ ಹೋಗುವನು, 12 ರಾಶಿಗಳ ಭವಿಷ್ಯ ಇಲ್ಲಿದೆ

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರ. 5-9-2024ರಿಂದ 21-9-2024ರವರೆಗೆ ಇರಲಿದೆ. ಸೂರ್ಯನು ಸ್ವಕ್ಷೇತ್ರದಿಂದ ಬದಲಾಗಿ ನೀಚಸ್ಥಾನದತ್ತ ಹೋಗುವನು. ಶುಕ್ರನು ನೀಚಸ್ಥಾನದಿಂದ ಸ್ವಕ್ಷೇತ್ರಕ್ಕೆ ಹೋಗುವನು. ಈ ಎರಡೂ ರಾಶಿಗಳಲ್ಲಿ ವಿರುದ್ಧ ಬದಲಾವಣೆ ಕಾಣಿಸುವುದು. ಹಾಗಾಗಿ ತೊಂದೆಯಾಗುವ ಸಂದರ್ಭದಲ್ಲಿ ದೈವಾನುಕೂಲವನ್ನು ಪ್ರಾರ್ಥಿಸಿ ಮುನ್ನಡೆದರೆ ಸುಖವಿದೆ. ಎಲ್ಲರಿಗೂ ಈ ವಾರ ಶುಭವಾಗಲಿ.

Weekly horoscope September: ಸೆಪ್ಟೆಂಬರ್ ಎರಡನೇ ವಾರದಲ್ಲಿ ಸೂರ್ಯನು ಸ್ವಕ್ಷೇತ್ರದಿಂದ ನೀಚಸ್ಥಾನಕ್ಕೆ ಹೋಗುವನು, 12 ರಾಶಿಗಳ ಭವಿಷ್ಯ ಇಲ್ಲಿದೆ
ವಾರ ಭವಿಷ್ಯ
Follow us
| Updated By: ವಿವೇಕ ಬಿರಾದಾರ

Updated on:Sep 14, 2024 | 6:39 AM

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರ. 5-9-2024ರಿಂದ 21-9-2024ರವರೆಗೆ ಇರಲಿದೆ. ಸೂರ್ಯನು ಸ್ವಕ್ಷೇತ್ರದಿಂದ ಬದಲಾಗಿ ನೀಚಸ್ಥಾನದತ್ತ ಹೋಗುವನು. ಶುಕ್ರನು ನೀಚಸ್ಥಾನದಿಂದ ಸ್ವಕ್ಷೇತ್ರಕ್ಕೆ ಹೋಗುವನು. ಈ ಎರಡೂ ರಾಶಿಗಳಲ್ಲಿ ವಿರುದ್ಧ ಬದಲಾವಣೆ ಕಾಣಿಸುವುದು. ಹಾಗಾಗಿ ತೊಂದೆಯಾಗುವ ಸಂದರ್ಭದಲ್ಲಿ ದೈವಾನುಕೂಲವನ್ನು ಪ್ರಾರ್ಥಿಸಿ ಮುನ್ನಡೆದರೆ ಸುಖವಿದೆ. ಎಲ್ಲರಿಗೂ ಈ ವಾರ ಶುಭವಾಗಲಿ.

ಮೇಷ ರಾಶಿ: ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭ. ವೈವಾಹಿಕ ಸಂಬಂಧಗಳು ಗಟ್ಟಿಯಾಗುವುದು. ಹಿರಿಯರಿಂದ ಅವಿವಾಹಿತರ ವಿವಾಹವು ನಿಶ್ಚಯವಾಗುವುದು. ತಂದೆಯ ವಿಚಾರದಲ್ಲಿ ಹುಡುಕುವುದು ಬೇಡ. ಉದ್ಯೋಗವನ್ನು ಚೆನ್ನಾಗಿ ಮಾಡುವ ಪ್ರಯತ್ನವನ್ನು ಮಾಡುವಿರಿ. ಬಂಧುಗಳಿಂದ ಸಂತೋಷಪಡುವಿರಿ. ಸುಬ್ರಹ್ಮಣ್ಯ ಸ್ತೋತ್ರವನ್ನು ಮಾಡಿ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಶುಭಾಶುಭ ಫಲವಿರಲಿದೆ. ರಾಶಿಯ ಅಧಿಪತಿಯ ಷಷ್ಠದಲ್ಲಿ ಇರುವುದರಿಂದ ನಿಮ್ಮ ಮಾತನ್ನೇ ನೀವು ಕೇಳಲಾರಿರಿ.‌‌ ಮಾತು ತಪ್ಪಿ ಅಪಮಾನವಗುವುದು.‌‌ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗದು. ನಿಮ್ಮ ಮನೆಗೆ ಬಂಧುಗಳ ಆಗಮನವು ಆಗಲಿದೆ. ವಿದೇಶದ ಕನಸು ಸುಲಭಕ್ಕೆ ನನಸಾಗದು ಎಂಬ ತಿಳಿವಳಿಕೆ ಬರುವುದು. ಇರುವುದರಲ್ಲಿ ಸುಖಪಡುವುದನ್ನು ಕಲಿಯುವುದು ಉತ್ತಮ. ದುರ್ಗಾದೇವಿಯನ್ನು ಆರಾಧಿಸಿ.

ಮಿಥುನ ರಾಶಿ: ಸಪ್ಟೆಂಬರ್ ತಿಂಗಲ ಮೂರನೇ ವಾರದಲ್ಲಿ ನಿಮಗೆ ಅಶುಭ. ಕೌಟುಂಬಿಕ ಸಹಕಾರ ಅಷ್ಟು ಇರದು. ಎಲ್ಲದಕ್ಕೂ ಮನೆಯವರ ಮೇಲೆ ಕೋಪವಿರುವುದು. ಕಚೇರಿಯಲ್ಲಿ ಕಷ್ಟಕರ ಸಂದರ್ಭಗಳು ಎದುರಾಗಲಿವೆ. ನೀವು ಕೂಡ ಪರಿಸ್ಥಿತಿಯ ಋಣಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಬಹುದು. ಔದ್ಯೋಗಿಕ ದೃಷ್ಟಿಯಿಂದ ಪೂರ್ಣವಾದ ಮನಸ್ಸು ಇರದು. ಎಲ್ಲವನ್ನೂ ಹೇಳಬೇಕು ಎಂದಿದ್ದರೂ ಹೇಳಲಾಗದು. ತಾಳ್ಮಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕು. ಲಕ್ಷ್ಮೀನರಸಿಂಹನನ್ನು ಭಕ್ತಿಯಿಂದ ಆರಾಧಿಸಿ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ತಾಯಿಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವಿರಿ. ವಾಹನದಿಂದ ನಿಮಗೆ ಸುಖ. ಹಿಂದಿನ ವಿಷಯಕ್ಕೆ ಸಂಬಂಧಿಸಿದ ಕೆಲವು ಕಾಳಜಿಗಳನ್ನು ಅನುಭವಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಅನಗತ್ಯ ಅಡೆತಡೆಗಳನ್ನು ಉಂಟುಮಾಡಬಹುದು. ನಿಮ್ಮ ಸಂತೋಷಕ್ಕಾಗಿ ಕಾರಣಗಳನ್ನು ಹುಡುಕುವಿರಿ. ನಿಮ್ಮ ತಿಳಿವಳಿಕೆಯನ್ನು ತೋರಿಸಲು ಹೋಗುವುದು ಬೇಡ. ಅನಾರೋಗ್ಯವು ನಿಧಾ‌ನವಾಗಿ ಕಡಿಮೆಯಾಗುವುದು. ಲಲಿತಾದೇವಿಯನ್ನು ಉಪಾಸನೆ ಮಾಡಿ.

ಸಿಂಹ ರಾಶಿ: ಈ ವಾರ ನಿಮಗೆ ಶುಭಫಲ. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ತಂದೆಯು ಏನೇ ಹೇಳಿದರೂ ಅವರ ಮೇಲೆ‌ ಸಿಟ್ಟಾಗುವಿರಿ. ವ್ಯಾಪಾರಸ್ಥರು ತಮ್ಮ ಗೆಳೆಯರ ಸಲಹೆಯನ್ನು ಆಲಿಸಬೇಕು. ತಮ್ಮ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ಮಾಡಲು ಶ್ರಮಿಸಬೇಕು. ಕಾರ್ಯದ ಸ್ಥಳದಲ್ಲಿ ಅಪಮಾನವಾಗುವುದು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯಗಳು ಬಂದರು ಅದು ಅಸ್ಥಿರವಾಗಲಿದೆ. ಪರಿಶ್ರಮದಿಂದ‌ ಮಾಡುವ ಕೆಲಸವು ಆದಾಯವನ್ನು ತರುವುದು. ಯಾರ ಜೊತೆಯೂ ಮಾತನಾಡಬೇಕು ಎಂದು‌ ಅನ್ನಿಸದು. ಆದಿತ್ಯಹೃದಯವನ್ನು ಪಠಿಸಿ.

ಕನ್ಯಾ ರಾಶಿ: ಈ ವಾರ ರಾಶಿ ಚಕ್ರದ ಆರನೇ ರಾಶಿಯವರಿಗೆ ಶುಭ. ಕಲಾವಿದರಿಗೆ ಮಾತುಗಾರರಿಗೆ ಶುಭವು ಹೆಚ್ಚಾಗುವುದು. ಕೋಪವನ್ನು ಸಣ್ಣ ವಿಚಾರಕ್ಕೂ ಮಾಡಿಕೊಳ್ಳುವಿರಿ. ಬಂಧುಗಳ ವಿಚಾರದಲ್ಲಿ ಓಡಾಟ ಹೆಚ್ಚಾಗುವುದು. ಔದ್ಯೋಗಿಕವಾಗಿ ಉನ್ನತ ಸ್ಥಾನಮಾನಗಳು ಕಂಡುಬರುವುದು. ಸಂಗಾತಿಯ ಮಾನಸಿಕತೆನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುವುದು. ಸುಮ್ಮನಿರುವ ಶತ್ರುಗಳನ್ನು ಕೆಣಕುವುದು ಬೇಡ. ವಿಷ್ಣುಸಹಸ್ರನಾಮವನ್ನು ಪಠಿಸಿ.

ತುಲಾ ರಾಶಿ: ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಅಶುಭ ಫಲ. ಶುಕ್ರನು ಸ್ವಕ್ಷೇತ್ರಕ್ಕೆ ಬಂದರೂ ಪೂರ್ಣ ನೆಮ್ಮದಿ ಇರದು. ದ್ವಾದಶದಲ್ಲಿ ಸೂರ್ಯನು ನಿಮ್ಮ ಆರೋಗ್ಯವನ್ನು ನಷಗಟಮಾಡುವನು. ಉದ್ಯಮದ ವಿಚಾರದಲ್ಲಿ ಮನಸ್ಸು ಚಂವಲವಾಗುವುದು. ಪ್ರೇಮವಿವಾಹಕ್ಕೆ ಒಪ್ಪಿಗೆ ಸಿಗುವುದು ಕಷ್ಟವಾದೀತು. ಬಂಧುಗಳ ಬಗ್ಗೆ ಸದ್ಭಾವ ಬೇಕು. ಶತ್ರುಗಳನ್ನು ಗೆಲ್ಲುವ ತಂತ್ರವನ್ನು ಮಾಡುವಿರಿ. ಆದರೆ ಸಫಲವಾಗುವುದು ಕಷ್ಟ. ಶುಭಫಲಕ್ಕಾಗಿ ಮಹಾಲಕ್ಷ್ಮಿಯನ್ನು ಆರಾಧಿಸಿ.

ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಮಿಶ್ರಫಲ. ಸೂರ್ಯನು ಏಕಾದಶದಲ್ಲಿ ಇರುವುದು ಉತ್ತಮವಾದರೂ ಸರ್ಕಾರದಿಂದ ಬರುವ ಲಾಭಕ್ಕೆ ತೊಂದರೆ ಆಗುವುದು. ಓಡಾಟದಿಂದ ಹಣವು ವ್ಯರ್ಥವಾಗಬಹುದು. ಶುಕ್ರನು ನೀಚ ಸ್ಥಾನದಿಂದ ಹೊರಬಂದಿದ್ದರೂ ದ್ವಾದಶದಲ್ಲಿ ಇರುವ ಕಾರಣ ನಷ್ಟವೇ ಆಗುವುದು. ನಿಮ್ಮ ಸ್ನೇಹಿತರ ಜೊತೆ ಲವಲವಿಕೆಯಿಂದ ಇರಿ. ವೈವಾಹಿಕ ಸಂಬಂಧದಲ್ಲಿ ನಿಧಾನವಾಗುವುದು. ಕೌಟುಂಬಿಕವಾದ ನೆಮ್ಮದಿಯು ಮೇಲ್ನೋಟಕ್ಕೆ ಮಾತ್ರ ಕಾಣಿಸುವುದು. ಆಯುಧದಿಂದ ನೋವಾಗುವುದು. ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ.

ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಶುಭಾಶುಭ‌ ಫಲ. ಸರ್ಕಾರಿ‌ ಕಾರ್ಯದಲ್ಲಿ ಇದ್ದವರಿಗೆ ಕಿರಿಕಿರಿ ಆಗುವುದು. ಯಾವ ಕೆಲಸವು ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಎಂಬ ಕೊರಗು. ಶುಕ್ರನು ಏಕಾದಶಕ್ಕೆ ಸ್ವಕ್ಷೇತ್ರಕ್ಕೆ ಬಂದ ಕಾರಣ ಭೋಗ ವಸ್ತುಗಳಿಂದ ಸಂತೋಷ ಇರುವುದು. ಅಜಾಗರೂಕರಾಗಿದ್ದರೆ ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ ಇದೆ. ವಾರ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಆದರೆ ನೀವು ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯಬಹುದು. ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗುರುಬಲವು ಇಲ್ಲದ ಕಾರಣ ಎಲ್ಲವೂ ನಿಮ್ಮ ಬುಡಕ್ಕೇ ಬರಬಹುದು. ಗುರು ಚರಿತ್ರೆಯನ್ನು ಪಠಿಸಿ.

ಮಕರ ರಾಶಿ: ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ. ಶುಕ್ರನು ಸ್ವಕ್ಷೇತ್ರಕ್ಕೆ ಬರಲಿದ್ದಾನೆ. ವೃತ್ತಿಯಲ್ಲಿ ಒಳ್ಳೆಯ ಬೆಳವಣಿಗೆ ಇರಲಿದೆ. ನಿಮ್ಮ ಪ್ರೇಮಿಯ ಜೊತೆ ಉತ್ತಮ ಸಮಯವನ್ನು ಕಳೆಯಲು ಅವಕಾಶವಿದೆ. ಬದ್ಧ ಸಂಬಂಧದಲ್ಲಿರುವ ಮಹತ್ವವನ್ನು ನೀವು ಗುರುತಿಸಬಹುದು. ಸೂರ್ಯನು ನವಮ ಸ್ಥಾನಕ್ಕೆ ಪ್ರವೇಶಿಸಿದ್ದು ತಂದೆಯಿಂದ ನಿಮಗೆ ಸಹಕಾರ ಸಾಧ್ಯ. ಅತಿಯಾದ ಸಲುಗೆ ಇಲ್ಲದೆ, ಅಂತರವನ್ನು ಕಾಪಾಡಿಕೊಳ್ಳಿ. ರುದ್ರಾಭಿಷೇಕದಿಂದ ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ಶುಕ್ರನು ನವಮ ಸ್ಥಾನಕ್ಕೆ ಬರುವ ಕಾರಣ ನಿಮ್ಮ ಸಂಗಾತಿಯು ನಿಮಗೆ ಸ್ಫೂರ್ತಿಯಾಗಬಹದು. ಭೋಗದ ವಸ್ತುಗಳನ್ನು ಉಡುಗೊರೆಯಾಗಿ ಅಥವಾ ಭೋಗ್ಯಕ್ಕೆ ಪಡೆಯುವಿರಿ. ನೀವು ಹೊಟ್ಟೆಯ ಅಥವಾ ಸೊಂಟದ ಭಾಗದಲ್ಲಿ ನೋವನ್ನು ಅನುಭವಿಸಬೇಕಸದೀತು. ನಿಮ್ಮ ಆರೋಗ್ಯವೂ ಕೆಡುವ ಸಾಧ್ಯತೆ ಇದೆ. ವೈದ್ಯರ ಸಲಹೆಯನ್ನು ಪಡೆದು ವ್ಯಾಯಾಮವನ್ನು ರೂಢಿಸಿಕೊಂಡರೆ ಆರ್ಥಿಕ ನಷ್ಟವಿಲ್ಲದೇ ಆರೋಗ್ಯವಾಗಿ ಇರಬಹುದು. ಹನೂಮಂತನಿಗೆ ಪ್ರಿಯವಾದ ಕದಳೀಫಲವನ್ನು ಸಮರ್ಪಿಸಿ.

ಮೀನ ರಾಶಿ: ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಮಿಶ್ರಫಲವಿದೆ. ಶುಕ್ರನು ನೀಚ ಸ್ಥಾನದಿಂದ ಸ್ವಸ್ಥಾನಕ್ಕೆ ಬಂದಿದ್ದಾನೆ. ಆದರೆ ಈ ರಾಶಿಯವರಿಗೆ ಅಷ್ಟಮ ಸ್ಥಾನವಾದ ಕಾರಣ ಅಷ್ಟು ಶುಭಕರವಲ್ಲ. ನಿಮ್ಮ ಪ್ರಣಯ ಜೀವನ ನಿಮಗೆ ಸಂತೋಷ ಕೊಡದು. ಈ ವಾರ ನಿಮ್ಮ ಒಡನಾಡಿಗಳ ಜೊತೆ ಬಾಂಧವ್ಯವನ್ನು ರೂಪಿಸುವ ಅವಕಾಶವನ್ನು ನೀವು ಹೊಂದಬಹುದು.

ನವ ದಾಂಪತ್ಯದಲ್ಲಿ ಕಲಹವು ಇರುವುದು. ಅದನ್ನು ಮೊದಲೇ ಸರಿಮಾಡಿಕೊಂಡರೆ ಮುಂದಿನದ್ದು ಸರಿಯಾಗುವುದು. ತಂದೆಯ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇರದು. ನಾಗಾರಾಧನೆಯನ್ನು ಮನೆಯಲ್ಲಿ ಮಾಡಿಸುವುದು ಸೂಕ್ತ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 6:31 am, Sat, 14 September 24