Weekly Horoscope: ವಾರ ಭವಿಷ್ಯ, ಏಪ್ರಿಲ್ 27 ರಿಂದ ಮೇ 03 ರವರೆಗೆ ವಾರ ಭವಿಷ್ಯ
ಏಪ್ರಿಲ್ ತಿಂಗಳ ಕೊನೆಯ ಹಾಗೂ ಮೇ ತಿಂಗಳ ಮೊದಲ ವಾರ 27-04-2025ರಿಂದ 03-05-2025ರವರೆಗೆ ಇರಲಿದೆ. ಬುಧನು ಮೀನ ರಾಶಿಯಲ್ಲಿ ನೀಚನಾಗಿ ಕೆಲವೊಮ್ಮೆ ತೊಂದರೆ ಎದುರಿಸಬೇಕಾಗುವುದು. ರಾಮರಕ್ಷಾಸ್ತೋತ್ರದಿಂದ ಭಯ, ಆತಂಕ ದೂರವಾಗಿ ಮಾಡುವ ಕೆಲಸದಲ್ಲಿ ಧೈರ್ಯ, ಸ್ಥೈರ್ಯ, ಶ್ರದ್ಧೆ, ಪ್ರೀತಿ ಕಾಣಿಸುವುದು.

ಏಪ್ರಿಲ್ ತಿಂಗಳ ಕೊನೆಯ ಹಾಗೂ ಮೇ ತಿಂಗಳ ಮೊದಲ ವಾರ 27-04-2025ರಿಂದ 03-05-2025ರವರೆಗೆ ಇರಲಿದೆ. ಬುಧನು ಮೀನ ರಾಶಿಯಲ್ಲಿ ನೀಚನಾಗಿ ಕೆಲವೊಮ್ಮೆ ತೊಂದರೆ ಎದುರಿಸಬೇಕಾಗುವುದು. ರಾಮರಕ್ಷಾಸ್ತೋತ್ರದಿಂದ ಭಯ, ಆತಂಕ ದೂರವಾಗಿ ಮಾಡುವ ಕೆಲಸದಲ್ಲಿ ಧೈರ್ಯ, ಸ್ಥೈರ್ಯ, ಶ್ರದ್ಧೆ, ಪ್ರೀತಿ ಕಾಣಿಸುವುದು.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಬುಧನು ಈ ವಾರದಲ್ಲಿ ನೀಚನೂ ಆಗಿ ವ್ಯಯದಲ್ಲಿ ಇರುವನು. ನಿಮಗೆ ಸೋಲಿನ ಭಯ ಕಾಡಲಿದೆ. ಉದ್ಯೋಗದಲ್ಲಿ ನಿಮಗೆ ಕೊಟ್ಟ ಜವಾಬ್ದಾರಿ ಸ್ಥಾನವವನ್ನು ನೀವಾಗಿಯೇ ಬಿಟ್ಟುಕೊಡಲಿದ್ದೀರಿ. ನಕಾರಾತ್ಮಕ ಅಂಶಗಳೇ ನಿಮ್ಮ ಕಿವಿಗೆ ಬೀಳಲಿದೆ. ಖರ್ಚಿಗೆ ಸ್ವಲ್ಪ ಕಡಿವಾಣ ಹಾಕುವುದು ಉತ್ತಮ. ಕೆಲಸಕಾರ್ಯಗಳು ಆಲಸ್ಯದಿಂದಾಗಿ ನಿಧಾನವಾಗಲಿದೆ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಈ ವಾರ ಭಾಗವಹಿಸುವುದು ಕಡಿಮೆಯಾಗಲಿದೆ. ಅಕಸ್ಮಾತ್ ಆಗಿ ದೊರೆತ ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗು ಸಾಧ್ಯತೆ ಇದೆ. ನಿಮ್ಮ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಉದ್ವೇಗಕ್ಕೆ ಒಳಗಾಗಿ ಮಾತನಾಡುವಿರಿ.
ವೃಷಭ ರಾಶಿ: ಈ ವಾರ ನೀವು ಮಾಡಬೇಕಾದ ಕೆಲಸಕ್ಕೆ ಸಹಕಾರ ಸಿಗಲಿದೆ. ಧೈರ್ಯವನ್ನು ತುಂಬುವವರೂ ಇರುವರು. ಯಾವುದಕ್ಕೂ ಭಯಪಡುವ ಅವಶ್ಯಕತೆ ಇರದು. ಇಷ್ಟು ದಿನದ ರಹಸ್ಯವು ಮನೆಯಲ್ಲಿ ಬಹಿರಂಗವಾದೀತು. ಇದರಿಂದ ಮನೆಯಲ್ಲಿ ಆತಂಕವಾಗಬಹುದು. ನಿಮ್ಮ ಮಾತಿಗೂ ಒಂದು ತೂಕ ಬರಲಿದೆ. ಬಂಧುಗಳು ನಿಮ್ಮನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುವರು. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನ ಇರಲಿದೆ. ನಿಧಾನವಾಗಿ ಮುಂದಿನ ಜೀವನದ ಜೀವನದ ಬಗ್ಗೆ ಗಮನಹರಿಸಬೇಕು. ತಾಯಿಯ ಮೇಲೆ ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ.
ಮಿಥುನ ರಾಶಿ: ಈ ವಾರ ಸುಖದ ವಾರ. ದಶಕದಲ್ಲಿ ಬುಧನಿದ್ದು ಎಲ್ಲ ರೀತಿಯ ಸುಖವನ್ನೂ ಕೊಡಿಸುವನು. ಕುಟುಂಬದ ಜೊತೆ ಬಹಳ ಆಪ್ತವಾಗಿ ಇರುವಿರಿ. ಸಣ್ಣ ಮಾತುಗಳು ಬರಬಹುದು. ಅದನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ನಿಮ್ಮ ಮಾತು ಪ್ರಜೆಗಳ ಮನಸ್ಸಿಗೆ ಮುಟ್ಟಲಿದೆ. ಬಾಡಿಗೆ ಮನೆಯಲ್ಲಿ ಇದ್ದರೆ ಸ್ಥಾನವನ್ನು ಬದಲಾಯಿಶುವಿರಿ. ಸಂಗಾತಿಯಿಂದ ಸಂಪತ್ತು ಸಿಗಲಿದೆ. ಭಕ್ತಿಯ ಕೊರತೆ ಕಾಣಲಿದೆ. ನಿಮ್ಮ ಆಪ್ತರು ನಿಮ್ಮಿಂದ ದೂರಾಗಬಹುದು ಅಥವಾ ಅವರ ನೆನಪು ಇಂದು ಕಾಡಬಹುದು. ನೂತನ ವಸ್ತ್ರಗಳನ್ನು ಖರೀದಿಸುವ ಮನಸ್ಸು ಮಾಡುವಿರಿ. ಹೊರಗಡೆ ಸುತ್ತಾಡಲು ಇಚ್ಛಿಸುವಿರಿ.
ಕರ್ಕಾಟಕ ರಾಶಿ: ಈ ವಾರದಲ್ಲಿ ನಿಮಗೆ ತೊಂದರೆ. ಬುಧನು ನವಮದಲ್ಲಿ ಇರುವ ಕಾರಣ ನಿಮ್ಮ ಯೋಜನೆಯ ಕಾರ್ಯಗಳಿಗೆ ಒಂದಿಲ್ಲೊಂದು ವಿಘ್ನಗಳು ಬರಲಿವೆ. ಇದು ನಿಮಗೆ ಬಹಳ ಮುಜುಗರವನ್ನು ತಂದಿದ್ದು, ಸಹಿಸಿಕೊಳ್ಳುವುದು ಕಷ್ಟವಾಗುವುದು. ತಂದೆಯ ವಿಚಾರದಲ್ಲಿ ನಿಮಗೆ ಸಿಟ್ಟಬರಬಹುದು. ಹೊಸ ಕೆಲಸಕ್ಕೆ ಹೊರಟರೂ ಅರ್ಧಕ್ಕೆ ನಿಲ್ಲಿಸಬೇಕಾಗುವುದು. ಸರಳವಾಗಿ ಸಿಕ್ಕ ಉದ್ಯೋಗವನ್ನು ಬಿಟ್ಟು ನಿಮ್ಮದೇ ಕಲ್ಪನೆಯ ಉದ್ಯಮಕ್ಕೆ ಹುಡುಕಾಟ ನಡೆಸುವಿರಿ. ಮಾಡುವ ಕೆಲಸವನ್ನು ಮುಂದೂಡಬೇಡಿ. ಅದು ಎಂದೂ ಆಗದೇ ಹೋಗಬಹುದು. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುವಿರಿ. ದೇವರನ್ನು ಮರೆತು ಮುಂದುವರಿಯುವ ಕಾಲವಲ್ಲ ನಿಮಗೆ. ಬೇಕಾದಷ್ಟಕ್ಕೆ ಮಾತ್ರ ಹಣ ಖರ್ಚು.
ಸಿಂಹ ರಾಶಿ: ರಾಶಿ ಚಕ್ರದ ಈ ರಾಶಿಗೆ ಈ ವಾರ ಶುಭ. ಬುಧನು ಅಷ್ಟಮದಲ್ಲಿ ನೀಚನಾಗಿದ್ದು ಮಕ್ಕಳ ವಿಚಾರದಲ್ಲಿ ಅಸಮಾಧಾನ. ಅವರ ಅನಾರೋಗ್ಯದಿಂದ ಚಿಂತೆ. ಬರಬೇಕಿದ್ದ ಹಣವು ಬಾರದೇಹೋಗುವುದು. ನೀವು ಕೋಪವನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ. ನಿಮ್ಮನ್ನು ಹತ್ತಾರು ಕಣ್ಣುಗಳು ಗಮನಿಸುತ್ತಿರುತ್ತವೆ. ಮಾತಿನ ವೇಗವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹೆಚ್ಚಿನ ಜವಾಬ್ದಾರಿಗಳು ಬರುವ ಸಾಧ್ಯತೆ ಇದ್ದರೂ ಹಿತಶತ್ರುಗಳು ಅದನ್ನು ತಪ್ಪಿಸಿಬಿಟ್ಟಾರು. ಸಂಪಾದನೆಗೆ ದಾರಿಗಳು ಅನೇಕವಿದ್ದರೂ ನೀವು ಉತ್ತಮವಾದ ಒಂದನ್ನು ಆರಿಸಿಕೊಂಡು ಮುಂದುವರಿಯಿರಿ. ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುತ್ತ ಇರಬೇಡಿ.
ಕನ್ಯಾ ರಾಶಿ: ಈ ರಾಶಿಯ ಅಧಿಪತಿ ನೀಚನಾಗಿದ್ದು ನಿಮಗೆ ಇಷ್ಡವಿಲ್ಲದ ಅನುಭವವನ್ನು ಉಂಟುಮಾಡುವನು. ಹಣವೊಂದೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಎಲ್ಲರ ವಿರೋಧವನ್ನು ಕಟ್ಟಿಕೊಂಡು ಇರಬೇಕಾಗುವುದು. ನಿಮಗೆ ಪ್ರವಾಸ ಮಾಡಬೇಕೆಂಬ ಆಸೆ ಇದ್ದು ಕಾಲವು ಸರಿದುಹೋಗಿರುತ್ತದೆ. ಉದ್ಯೋಗದಲ್ಲಿ ನಿಮಗೆ ಬೆಂಬಲ ಸಿಗದೇ ಒಬ್ಬೊಂಟಿಯಾಗಿರುವಿರಿ. ಮಾತಿನ ಬಗ್ಗೆ ಆದಷ್ಟು ಗಮನವಿರಲಿ. ಏನನ್ನಾದರೂ ಹೇಳಿ ಅಪಮಾನಕ್ಕೆ ಸಿಲುಕಬಹುದು. ಕಾಲಕ್ಕೆಂದು ಕುಳಿತುಕೊಳ್ಳಬೇಡಿ. ಮಾಡಬೇಕಾದುದನ್ನು ಮಾಡಿ ಮುಗಿಸಿ. ಮನೆಯಲ್ಲಿಯೇ ಕುಳಿತು ಬೇಸರವಾದೀತು. ಪ್ರತಿಕಾರ ಬುದ್ಧಿಯನ್ನು ಬಿಡುವುದು ಉತ್ತಮ.
ತುಲಾ ರಾಶಿ: ಇದು ಕೊನೆಯ ವಾರವಾಗಿದ್ದು ಶುಭ. ಶತ್ರುಗಳಿಂದ ವಿಜಯ ಸಿಗಲಿದೆ. ಆಪ್ತರ ಜೊತೆ ಹಣದ ವಿಚಾರವಾಗಿ ಕಲಹವಾಗಲಿದೆ. ಆಭರಣವನ್ನು ಸಂಗಾತಿಗೆ ಖರೀದಿಸುವಿರಿ. ಸ್ಪರ್ಧೆಗಳಲ್ಲಿ ನಿಮಗೆ ಗೆಲವು ಸಿಗುವುದು. ಮೋಸಗಾರರು ನಿಮ್ಮ ಜೊತೆಗೇ ಇರುವರು. ಅನಿವಾರ್ಯವಾಗಿ ಸಾಲಮಾಡಬೇಕಾದ ಸ್ಥಿತಿ ಬರಲಿದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುವರು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ನಿಮ್ಮ ತಪ್ಪಿಗೆ ಯಾರನ್ನೋ ತೋರಿಸುವಿರಿ. ಆರೋಗ್ಯವು ಹದ ತಪ್ಪಿ ಕಷ್ಟವಾಗಲಿದೆ. ಮನೆಯಲ್ಲಿ ಸೂಕ್ತವಾದ ಮದ್ದನ್ನು ಮಾಡಿ. ಧನ್ವಂತರಿಯ ಸ್ತೋತ್ರ ಮಾಡಿ ಔಷಧವನ್ನು ಸ್ವೀಕರಿಸಿ.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಅಶುಭ. ಸಂಗಾತಿಯ ಜೊತೆ ಕಲಹವಾಗುವುದು. ಮಕ್ಕಳ ವಿಚಾರದಲ್ಲಿ ಅಸಮಾಧಾನ ಇರಲಿದೆ. ವಿದ್ಯಾಭ್ಯಾಸದಲ್ಲಿಯೂ ಹಿನ್ನಡೆ. ಮರೆವು ಹೆಚರಚಾಗಲಿದೆ. ನಿಮ್ಮ ಭೂಮಿಯು ಸರ್ಕಾರದ ಪಾಲಾಗಬಹುದು. ಅಧಿಕಾರಿಗಳು ನಿಮ್ಮ ಆದಾಯವನ್ನು, ವೃತ್ತಿಯನ್ನು ವಿಚಾರಿಸಯಾರು. ಇನ್ನೊಬ್ಬರ ಬಗ್ಗೆ ನಿಮ್ಮ ಭಾವನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ಏಕಾಂತವನ್ನು ಬಹಳ ಇಷ್ಟಪಡುವಿರಿ. ಉದ್ಯೋಗದಿಂದ ಬಂದವರೇ ಪ್ರಶಾಂತ ಸ್ಥಳಕ್ಕೆ ಹೋಗಿ ಧ್ಯಾನಸ್ಥರಾಗುವಿರಿ.
ಧನು ರಾಶಿ: ಈ ವಾರ ನಿಮಗೆ ತೊಂದರೆ. ಬುಧನು ಚತುರ್ಥದಲ್ಲಿ ಇದ್ದೂ ನೀಚನಾಗಿದ್ದಾನೆ. ಉದ್ಯೋಗದಲ್ಲಿ ಬರುವ ಹಣವು ವಿಳಂಬವಾಗಲಿದೆ. ಆರ್ಥಿಕ ವ್ಯವಹಾರವಿದ್ದವರಿಗೂ ಸಂಕಷ್ಟ. ನಿಮ್ಮ ಸ್ಪಷ್ಟ ನಿರ್ಧಾರವನ್ನು ಮನೆಯಲ್ಲಿ ಹೇಳಿ. ಗೊಂದಲವನ್ನು ಮಾಡಿಕೊಂಡು ಇರಬೇಡಿ. ಸಂಗಾತಿಯ ಕಡೆಯಿಂದ ಧನಾಗಮನವಾಗದು. ನಿಮ್ಮ ಪ್ರೇಮ ವಿಚಾರವನ್ನು ಕೇಳಿ ಮನೆಯಲ್ಲಿ ಆಶ್ಚರ್ಯವಾಗಬಹುದು. ಅವರು ಇದನ್ನು ಒಪ್ಪದೇ ಇರಬಹುದು. ಅದಕ್ಕಾಗಿ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಾತಾವರಣ ತಿಳಿಯಾದಮೇಲೆ ಆ ಬಗ್ಗೆ ಚರ್ಚಿಸಿ. ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನವನ್ನು ಮಾಡಬೇಡಿ. ಹಾಸ್ಯಕ್ಕೆ ಆಸ್ಪದವಾದೀತು. ನೀವು ಅಪರಿಚಿತರಿಗೆ ಸಹಾಯಮಾಡಲಿದ್ದೀರಿ.
ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಅಶುಭ. ಶತ್ರುಗಳ ಭೀತಿಯನ್ನು ಎದುರಿಸಬೇಕಾಗುವುದು. ಯಾವಾಗ ಹೇಗೆ ದಾಳಿಮಾಡುತ್ತಾರೆ ಎನ್ನುವುದನ್ನು ಊಹಿಸಲಾಗದು. ಕುಟುಂಬದ ಸಮಸ್ಯೆಯನ್ನು ಬಗೆಹರಿಸಲಾಗದೇ ಕೈಚೆಲ್ಲಿ ಕುಳಿತುಕೊಳ್ಳುವಿರಿ. ಹಣದ ವಿಚಾರದಲ್ಲಿ ನಿಮ್ಮನ್ನು ವಂಚಿಸುವರು. ನಿಮ್ಮ ತಪ್ಪೇ ನಿಮಗೆ ಮುಳ್ಳಾದೀತು. ಸ್ತ್ರೀಯರಿಗೆ ವಿನಾಕಾರಣ ಅಪವಾದ ಬಂದೀತು. ಬಾಂಧವರಿಂದ ಹೆಚ್ಚು ಭಯ ನಿಮಗೆ. ಹೊಸ ಕೆಲಸದ ಉತ್ಸಾಹದಲ್ಲಿ ಇರುವಿರಿ. ನೂತನ ವಾಹನವನ್ನು ಖರೀದಿಸಿದ ಖುಷಿ ಇರಲಿದೆ. ಸಂಗಾತಿಯ ಜೊತೆ ಕಛೇರಿಯ ವಿಚಾರವನ್ನು ಹಂಚಿಕೊಳ್ಳುವಿರಿ. ನಿಮಗಿಷ್ಟವಾದ ಖಾದ್ಯವನ್ನು ತಿನ್ನುವ ಮನಸ್ಸಾದೀತು. ಸಹೋದರರ ನಡುವೆ ಮನೆಯ ಬಗ್ಗೆ ಚರ್ಚಿಸುವಿರಿ.
ಕುಂಭ ರಾಶಿ: ಈ ರಾಶಿಯವರಿಗೆ ಈ ವಾರ ಮಿಶ್ರಫಲ. ಬುಧನು ನೀಚನಾಗಿದ್ದು ನೀವು ಪಡೆಯಬೇಕಾದ ಸಂಪತ್ತು ಸರಳವಾಗಿ ಸಿಗದು. ಸ್ನೇಹಿತರ ಜೊತೆ ಸೇರಿ ಖರ್ಚನ್ನು ಮಾಡುವಿರಿ. ಯಾರಾದರೂ ನಿಮ್ಮನ್ನು ಅಳೆಯಬಹುದು. ಅದಕ್ಕೆ ಸರಿಯಾಗಿ ಉತ್ತರಿಸಿ. ಮಕ್ಕಳಿಂದ ಸಿಗುವ ಸಂಪತ್ತೂ ಬಾರದು. ಅಗೌರವ ಸಿಗುವ ಕಡೆ ಸುಮ್ಮನೆ ಹೋಗಬೇಡಿ. ಆಸ್ತಿಯ ವಿಚಾರದಲ್ಲಿ ಯಾರೋ ಮಧ್ಯಸ್ತಿಕೆ ವಹಿಸಿಕೊಳ್ಳಲು ಬರಬಹುದು. ಕಛೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾದೀತು. ಪಿತ್ತಕ್ಕೆ ಸಂಬಧಿಸಿದ ದೋಷವು ಕಾಣಿಸುವುದು. ಇನ್ನೊಬ್ಬರನ್ನು ನೋಡಿ ಕರುಬುವ ಅವಸ್ಥೆ ಒಳ್ಳೆಯದಲ್ಲ. ನಿಮ್ಮ ಸ್ವಂತಿಕೆ ನಿಮ್ಮದಾಗಿರಲಿ. ಹನುಮಾನ್ ಚಾಲೀಸ್ ಪಠಣವು ನಿಮಗೆ ಧೈರ್ಯವನ್ನೂ ಕಾರ್ಯದಲ್ಲಿ ಉತ್ಸಾಹವನ್ನು ತುಂಬುವುದು.
ಮೀನ ರಾಶಿ: ಈ ತಿಂಗಳ ಕೊನೆಯ ವಾರ ಹಾಗೂ ಮುಂದಿನ ತಿಂಗಳ ಮೊದಲ ವಾರದಲ್ಲಿ ನಿಮಗೆ ಅಶುಭ. ಬುಧನು ನೀಚನಾಗಿ ನಿಮ್ಮ ರಾಶಿಯಲ್ಲಿ ಇದ್ದು ಸಂಪತ್ತು ಕ್ಷಯವಾಗುವಂತೆ ಮಾಡುವನು. ವಿಶೇಷವಾಗಿ ದೈಹಿಕ ಅರೋಗ್ಯದ ಬಗ್ಗೆ ಗಮನ ಅಗತ್ಯ. ಸಲ್ಪ ಅಂತರದಲ್ಲಿ ನಿಮಗೆ ಸಿಗಬೇಕಾದ ಆಸ್ತಿಯು ಬೇರೆಯವರ ಕೈ ಸೇರುವುದು. ವಾಹನ ರಿಪೇರಿಗೆ ಹಣವು ಖರ್ಚಾಗುವುದು. ನಿಮ್ಮದಲ್ಲದ ವಸ್ತುಗಳನ್ನು ಇಟ್ಟುಕೊಳ್ಳುವುದು ಬೇಡ. ಅತಿಯಾದ ಬಯಕೆಯೂ ನಿಮ್ಮ ನಿತ್ಯ ಜೀವನಕ್ಕೆ ಒಳ್ಳೆಯದಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳ ನಿಮ್ಮ ಹಣದ ವಿನಿಯೋಗವಾಗಲಿ. ನಿಮಗೆ ಯಾರಾದರೂ ಏನಾದರೂ ಮಾಡಿಸಿದ್ದಾರೇನೋ ಎನ್ನುವ ಅನುಮಾನವೂ ಕಾಡಬಹುದು. ಮೃತ್ಯುಂಜಯನನ್ನು ಆರಾಧಿಸಿ.
-ಲೋಹಿತ ಹೆಬ್ಬಾರ್ – 8762924271 (what’s app only)
