Weekly Horoscope in Kannada: ವಾರ ಭವಿಷ್ಯ: ಜು 21 ರಿಂದ 27 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ

ಜುಲೈ ತಿಂಗಳ ನಾಲ್ಕನೇ ವಾರವು 21-07-2024 ರಿಂದ 27 ರವರೆಗೆ ಇದೆ. ಶುಭಾಶುಭಫಲಗಳು ಯಾರ ಪಾಲಾಗಲಿವೆ, ಯಾರಿಗೆಲ್ಲಾ ಅಶುಭವಾಗಲಿದೆ ಎಂದು ಈ ವಾರ ಭವಿಷ್ಯದಲ್ಲಿ ತಿಳಿಯಿರಿ. ಜುಲೈ ತಿಂಗಳ ನಾಲ್ಕನೇ ವಾರದಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ. ಈ ರಾಶಿಯ ಅಧಿಪತಿ ದ್ವಾದಶದಲ್ಲಿದ್ದಾನೆ.

Weekly Horoscope in Kannada: ವಾರ ಭವಿಷ್ಯ: ಜು 21 ರಿಂದ 27 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ
ವಾರ ಭವಿಷ್ಯ: ಜು 21 ರಿಂದ 27 ರವರೆಗೆ ನಿಮ್ಮ ಭವಿಷ್ಯ ಹೀಗಿದೆ ತಿಳಿಯಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2024 | 1:00 AM

ಜುಲೈ ತಿಂಗಳ ನಾಲ್ಕನೇ ವಾರವು 21-07-2024 ರಿಂದ 27 ರವರೆಗೆ ಇದೆ. ಈ ಸಂದರ್ಭದಲ್ಲಿ ಗ್ರಹಗಳು ರಾಶಿಯಿಂದ ರಾಶಿಗೆ ಬದಲಾವಣೆ ಆಗದಿದ್ದರೂ ನಕ್ಷತ್ರದಲ್ಲಿ ಬದಲಾವಣೆ ಅಗಲಿದೆ. ಇದು ರಾಶಿಗಳ‌ ಮೇಲೆ ಸಕಾರಾತ್ಮಕ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ. ದೈವಾನುಗ್ರಹವನ್ನು ಪಡೆದು ಅಶುಭಫಲವನ್ನು ನಿವಾರಿಸಿಕೊಳ್ಳಬೇಕು. ಈ ಜಗತ್ತು ದೈವದಿಂದ ರಕ್ಷಿಸಲ್ಪಟ್ಟಿದೆ. ಹಾಗಾಗಿ ಅಲ್ಲಿಯೇ ಶರಣಾಗಬೇಕು. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಜುಲೈ ತಿಂಗಳ ನಾಲ್ಕನೇ ವಾರ ಶುಭ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವನು. ಕೃಷಿ ಭೂಮಿಯಿಂದ ಲಾಭವಾಗುವುದು. ಮಾತು ಕಠೋರವೆನಿಸುವುದು. ಮನಸ್ಸು ನಿಷ್ಕಲ್ಮಷವಾದ ಕಾರಣ ಅದರಿಂದ‌ ಅಪಾಯವಿರದು. ದ್ವಾದಶದಲ್ಲಿ ರಾಹುವು ನಿಮ್ಮ ಬಲವನ್ನು ಹಿಮ್ಮೆಟ್ಟಿಸಬಹುದು. ಒಮ್ಮೆ ಮುಂದುವರಿಯೋಣ ಅನ್ನಿದರೆ, ಮತ್ತೊಮ್ಮೆ ಭಯ ಕಾಡುವುದು. ಕಾರ್ತಿಕೇಯನನ್ನು ಅನನ್ಯ ಮನಸ್ಸಿನಿಂದ ಧ್ಯಾನಿಸಿ ಮುಂದುರಿಯಿರಿ. ರಮ್ಯವಾದ ಸ್ಥಳಕ್ಕೆ ಪ್ರಯಾಣ ಮಾಡುವಿರಿ. ತಂದೆಯ ತಾಯಿಯರಿಗೆ ಸುಖವಿರಲಿದೆ. ತಾಳ್ಮೆಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕು.

ವೃಷಭ ರಾಶಿ: ಜುಲೈ ತಿಂಗಳ ನಾಲ್ಕನೇ ವಾರದಲ್ಲಿ ಮಿಶ್ರ ಫಲವಿರಲಿದೆ. ಈ ವಾರದಲ್ಲಿ ಅನಿವಾರ್ಯ ಖರ್ಚುಗಳು ಹೆಚ್ಚಾಗುವುದು. ಹಣಕಾಸಿಗೆ ಶಿಸ್ತನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇರಲಿದೆ. ನೀವು ಸೃಷ್ಟಿಸಿಕೊಂಡ ವಲಯದಿಂದ ಹೊರಬನ್ನಿ. ನಿಮ್ಮ ಮಾತೇ ನಿಮಗೆ ಮುಳುವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಮಾತನಾಡಿ. ರಾಶಿಯ ಅಧಿಪತಿಯು ತೃತೀಯದಲ್ಲಿ ಇದ್ದಾನೆ. ಸ್ತ್ರೀಯರ ಒಡನಾಟ ಹೆಚ್ಚಾಗುವುದು. ಕುಟುಂಬದಲ್ಲಿ ಹಿರಿಯರ ಜೊತೆ ಗೌರವದಿಂದ ವರ್ತಿಸಿ. ಈ ವಾರದಲ್ಲಿ ನೀವು ಮಾಡುವ ಕೆಲಸಗಳಲ್ಲಿ ಸಣ್ಣ ಸಣ್ಣ ವಿಘ್ನಗಳು ಬರುವುದು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಮುನ್ನಡೆಯಿರಿ. ಕುಟುಂಬ ಮತ್ತು ಸಹೋದ್ಯೋಗಿಗಳ ಜೊತೆಗಿನ ಗಟ್ಟಿಯಾದ ಸಂಬಂಧವು ನಿಮ್ಮ ಭಾವನಾತ್ಮಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಲವಾದ ಅಡಿಪಾಯ ಎಂಬುದು ನೆನಪಿರಲಿ.

ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ತಿಂಗಳ ನಾಲ್ಕನೇ ವಾರ ಅಶುಭ. ಗುರುವು ದ್ವಾದಶದಲ್ಲಿ ನಿಮ್ಮ ಆತ್ಮಬಲವನ್ನು ಕುಂಠಿಸುವನು. ನಿಮ್ಮ ಮಾನಸಿಕ ತೊಳಲಾಟವನ್ನು ನಿವಾರಿಸಲು ಕಷ್ಟವಾಗುವುದು. ಸ್ಥಳದ ಬದಲಾವಣೆ ಸಾಧ್ಯತೆ ಇದ್ದು ವಿದೇಶ ಪ್ರಯಾಣ ಯೋಗವೂ ಇದೆ. ಈ ಸಮಯದಲ್ಲಿ ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವದ ಕೌಶಲ್ಯವನ್ನು ಕುಜನು ದ್ವಾದಶದಲ್ಲಿ ಇದ್ದು ಪಾಪಪ್ರಜ್ಞೆ ಕಾಡುವುದು. ಪ್ರದರ್ಶಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ಸಲಹೆಯನ್ನು ಪಡೆಯಲು ಮರೆಯಬೇಡಿ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಬಂಧುಗಳ ಸಹಕಾರವು ಸಿಗದು. ದೋಷಸ ನಿವಾರಣೆಗೆ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಪಠಿಸಿ.

ಕರ್ಕಾಟಕ ರಾಶಿ: ಜುಲೈ ತಿಂಗಳ ನಾಲ್ಕನೇ ವಾರ ಬದಲಾಣೆಯ ಶುಭವಾರವಗಿದೆ. ಸ್ವರಾಶಿಯಲ್ಲಿ ಸೂರ್ಯ ಹಾಗೂ ಶುಕ್ರರು ಉಪಸ್ಥಿತರಿದ್ದಾರೆ. ಉತ್ತಮ ಮಾರ್ಗದಲ್ಲಿ ನಡೆಯುವುದರಿಂದ ಒಳ್ಳೆಯ ಫಲಗಳು ದೊರೆಯಲಿವೆ. ಸ್ವಯಂ ಅರಿವಿನ ಕಡೆಗೆ ಗಮನ ಹರಿಸುವುದರಿಂದ ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ನಿಮ್ಮ ಒಟ್ಟಾರೆ ಪ್ರಗತಿಗೂ ಕೊಡುಗೆ ನೀಡುತ್ತದೆ. ದಶಮದ‌ ಕುಜನು ಏಕಾದಶಲ್ಲಿ ಇರುವುದರಿಂದ ಉದ್ಯೋಗದಲ್ಲಿ ಒಳ್ಳೆಯ ವಾರ್ತೆ ಇರಲಿದೆ. ನಿಮ್ಮ ವೃತ್ತಿ ಜೀವನನವನ್ನು ಹೆಚ್ಚು ಸುಲಭ ಮತ್ತು ಪರಿಪೂರ್ಣವಾಗಿಸಲು ಕಠಿಣ ಪರಿಶ್ರಮ ತುಂಬಾ ಅಗತ್ಯ. ಆದಾಗ್ಯೂ, ನಿಮ್ಮ ಆಪ್ತ ವಲಯದಿಂದ ಅಶುಭ ಸುದ್ದಿಗಳನ್ನು ಪಡೆಯುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ಸಿದ್ದರಾಗಿರಿ. ಬಂಧುಗಳಿಂದ ಸಹಕಾರವನ್ನು ನೀವು ನಿರೀಕ್ಷಿಸುತ್ತಿರುವಿರಿ.

ಸಿಂಹ ರಾಶಿ: ಜುಲೈ ತಿಂಗಳ ಈ ವಾರದಲ್ಲಿ ರಾಶಿಯ ಅಧಿಪತಿ ದ್ವಾದಶದಲ್ಲಿದ್ದಾನೆ. ಜೊತೆಗೆ ಶುಕ್ರನೂ ಇರುವನು. ನಷ್ಟವನ್ನು ಮಾಡಿಕೊಳ್ಳಬಾರದೂ ಎಂದರೂ ಅದು ಆಗುತ್ತದೆ. ನಿಮ್ಮ ಪರಾಕ್ರಮದ ಬಗ್ಗೆ ಹುಷಾರಾಗಿರಿ. ನಿಮಗೆ ಸಮಯ ಅಷ್ಟು ಉತ್ತಮವಾಗಿಲ್ಲದ ಕಾರಣ, ಸ್ವಲ್ಪ ಎಚ್ಚರಿಕೆಯಿಂದ ಮುಂದುವರೆಯಿರಿ. ತಂದೆಯ ಕಡೆಯಿಂದ ಪ್ರೀತಿ ಕಡಿಮೆಯಾಗುವುದು. ಹಣಕಾಸಿನ ವಿಷಯದಲ್ಲಿ ಈ ವಾರ ಉತ್ತಮವಾಗಿದ್ದು, ಹಣದ ಹರಿವು ಹೆಚ್ಚಾಗಲಿದೆ. ಆದರೂ ಬೇರೆಯವರ ಮೋಡಿ ಮಾತಿಗೆ ಯಾಮಾರಬೇಡಿ. ಸರ್ಕಾರದ ಉದ್ಯೋಗವು ಈ ವಾರವೂ ಆಗುವುದು ಕಷ್ಟ. ಆರ್ಥಿಕ ಲಾಭದ ಜೊತೆಗೆ ಗೌರವವೂ ಹೆಚ್ಚಾಗಲಿದೆ. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ತಿಂಗಳು ಶುಭ. ಆದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅನವಶ್ಯಕವಾಗಿ ಕೋಪದ ಕೈಗೆ ಬುದ್ದಿಕೊಟ್ಟು ನಿಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳು ಸಂದರ್ಭವು ಬರಲಿದೆ. ದೈಹಿಕವಾದ ಕಸರತ್ತು ಮಾಡುವುದು ಬೇಡ. ವೃತ್ತಿಯಲ್ಲಿ ಮನ್ನಣೆಯನ್ನು ಗಳಿಸಲು ಶಿಸ್ತುಬದ್ಧ ಕ್ರಮವನ್ನು ಕೈಕೊಳ್ಳಿ ಹಣಕಾಸು ವಿಷಯಗಳ ನಿರ್ವಹಣೆಯಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. ವಿದೇಶದ ಪ್ರವಾಸಕ್ಕೆ ಪ್ರಯತ್ನಿಸಬಹುದು. ಶತ್ರುಗಳಿಂದ ಯಾವುದೇ ತೊಂದರೆ ಇಲ್ಲದೇ ನಿರುಮ್ಮಳ ಜೀವನ ಮಾಡುವಿರಿ.

ತುಲಾ ರಾಶಿ: ಜುಲೈ ತಿಂಗಳ ಈ ವಾರ ನಿಮಗೆ ಅಶುಭವೇ ಹೆಚ್ಚಿರುವುದು. ಎಲ್ಲರ ಮಾತನ್ನೂ ನಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ನೀವು ವೃತ್ತಿ ಜೀವನದಲ್ಲಿ ಬಂದ ಹೊಸ ಅವಕಾಶಗಳನ್ನು ಧೈರ್ಯವಿಲ್ಲದೇ ಸ್ವೀಕರಿಸಲಾರಿರಿ. ಆದರೆ ಕಷ್ಟವಾದರೂ ಸ್ವೀಕರಿಸಿ ಅನುಭವ ಪಡೆಯಿರಿ. ಯಾರ ಮೇಲೂ ಅವಲಂಬನೆಯಾಗುವುದು ಬೇಡ. ನಿಮಗೆ ಅಗತ್ಯವಿರುವಾಗ ವಿರಾಮ ತೆಗೆದುಕೊಳ್ಳಿ. ನಿಮ್ಮ ಎಚ್ಚರಿಕೆಯ ಸ್ವಭಾವವು ಬುದ್ಧಿವಂತ ಆರ್ಥಿಕ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಸಂಗಾತಿಯ ವಿಚಾರದಲ್ಲಿ ಹೆಚ್ಚು ಸಿಟ್ಟು ಮಾಡಿಕೊಳ್ಳುವಿರಿ. ತಂದೆ ತಾಯಿಯರು ನಿಮಗೆ ಬೆಂಬಲವಾಗಿ ಇರುವರು.‌ ಯಾವುದನ್ನೂ ಎದುರಿಸುವ ಸಾಮರ್ಥ್ಯ ನಿಮ್ಮದಾಗುವುದು. ನವದುರ್ಗೆಯನ್ನು ಆರಾಧಿಸಿ.

ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿಯು ಸಪ್ತಮದಲ್ಲಿ ಇರುವನು. ಜೊತೆಗೆ ಗುರುವೂ ಇರುವುದು ಸಂಗಾತಿಯ ನಡುವಿನ ವೈಮನಸ್ಸು ದೂರಾಗುವುದು. ನಿಮ್ಮ ವೃತ್ತಿಜೀವನದಲ್ಲಿ, ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ವಿದೇಶಿ ಸಂಸ್ಥೆಯಲ್ಲಿ ಬಂಡವಾಳ ಹಾಕುವಿರಿ. ಪ್ರೇಮಿಗಳು ಬಹಳ ಎಚ್ಚರಿಕೆಯಿಂದ ಮುಂದುವರಿದರೆ ಗುರಿಯನ್ನು ಮುಟ್ಟಲು ಸಾಧ್ಯ. ಮಕ್ಕಳ ಬಗ್ಗೆ ಚಿಂತೆ ಹೆಚ್ಚುವುದು.‌ ವಿದ್ಯಾಭ್ಯಾಸ ಕಡೆ ಗಮನವನ್ನು ಕೊಡಲಾಗದು. ಬರುವ ಹಣವು ಪೂರ್ಣವಾಗಿ ಬರದು. ನಾಗಾರಾಧನೆಯಿಂದ ಮಾನಸಿಕ ಕ್ಲೇಶಗಳು ದೂರಾಗುವುದು.

ಧನು ರಾಶಿ: ಈ ವಾರ ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಮಿಶ್ರ ಫಲ. ಷಷ್ಠದಲ್ಲಿ ಗುರುವಿರುವುದರಿಂದ ಪ್ರಾಜ್ಞರ ದ್ವೇಷ ಕಟ್ಟಿಕೊಳ್ಳುವಿರಿ. ಅವರಿಂದ ಅಪಮಾನವೂ ಆಗುವುದು. ಆದರೆ ಅದನ್ನು ಮನಸ್ಸಿಗೆ ತಂದುಕೊಳ್ಳದೇ ಸಂತೋಷದಿಂದ ಇರಿ. ಎಷ್ಟೇ ಆರಾಮಾಗಿ ಇರಬೇಕು ಎಂದುಕೊಂಡರೂ ಅದು ಆಗದು. ನಿಮ್ಮ ಎಲ್ಲ ಕಾರ್ಯಗಳೂ ದುಃಖದಲ್ಲಿ ಅಂತ್ಯವಾಗುವುದು. ವೃತ್ತಿಜೀವನದಲ್ಲಿ, ನಿಮ್ಮ ಉತ್ಸಾಹವನ್ನು ಕಾಪಾಡಿಕೊಳ್ಳಲು ಗುರಿಯ ಕಡೆ ಗಮನವಿರಲಿ. ನಿಮ್ಮ ಸಾಹಸಮಯ ಮನೋಭಾವವನ್ನು ಎಲ್ಲಿಯೂ ತೋರಿಸುವುದು ಬೇಡ. ಮಕ್ಕಳ ಪ್ರೀತಿಯು ಸಿಗದೇಹೋಗಬಹುದು. ಗುರುಚರಿತ್ರೆಯನ್ನು ಪಠಿಸಿ.

ಮಕರ ರಾಶಿ: ಜುಲೈ ತಿಂಗಳ ನಾಲ್ಕನೇ ವಾರದಲ್ಲಿ ಈ ರಾಶಿಯವರಿಗೆ ಶುಭ. ವೈವಾಹಿಕ ಜೀವನಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವಿರಿ. ಮಕ್ಕಳಿಂದ ನಿಮಗೆ ಸಹಕಾರವು ಸಿಗಲಿದೆ. ವಿದೇಶಕ್ಕೆ ಅಧ್ಯಯನಕ್ಕಾಗಿ ಹೋಗುವ ಮನಸ್ಸು ಮಾಡುವಿರಿ. ವೃತ್ತಿಯಲ್ಲಿ ಉಂಟಾಗುವ ಅಡೆತಡೆಗಳಿಂದ ವಿಚಲಿತರಾಗುವಿರಿ. ಸಾಲವನ್ನು ಮರುಪಾವತಿ ಮಾಡಿ ನಿಶ್ಚಿಂತೆಯಾಗಲಿದೆ. ಬಂಧುಗಳ ಅಸಹಕಾರದಿಂದ ಬೇಸರವಾಗುವುದು. ಯಾವುದನ್ನೂ ಮನಸ್ಸಿಗೆ ತಾಗಿಸಿಕೊಳ್ಳದೇ ಕೆಲಸವನ್ನು ಮಾಡುವಿರಿ. ಹನುಮಾನ್ ಚಾಲೀಸ್ ಪಠಿಸಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರವು ಕೆಲವು ಉತ್ಸಾಹದ ಸಂದರ್ಭವು ಬರಲಿದೆ. ಆಗ ನಿಮ್ಮ ಮನಸ್ಸು ಸಂಯಮದಿಂದ‌ ಇಟ್ಟುಕೊಳ್ಳಿ. ನೀವು ಜೀವನದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಮುಖ್ಯ. ನಿಮ್ಮ ಹಣಕಾಸುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ ಹಾಗೂ ದೀರ್ಘಾವಧಿಯ ಸ್ಥಿರತೆಯನ್ನು ಉಳಿಸಿಕೊಳ್ಳುವಿರಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ತಪ್ಪುಗಳನ್ನು ಸರಿಯಾಗಿಸಿಕೊಂಡು ಮುನ್ನಡೆಯಿರಿ. ಮನೆಯಲ್ಲಿ ಉತ್ಸವದ ವಾತಾವರಣ ಇರಲಿದೆ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಮೀನ ರಾಶಿ: ಜುಲೈ ತಿಂಗಳ ನಾಲ್ಕನೇ ವಾರ ರಾಶಿ ಚಕ್ರದ ಕೊನೆಯ ವಾರದಲ್ಲಿ ಅಶುಭ ಫಲ. ಮಾನಸಿಕ ಒತ್ತಡದಿಂದ ನಿಮಗೆ ಕಷ್ಟವಾಗಬಹುದು. ನಿಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ವೃತ್ತಿ ಜೀವನದಲ್ಲಿ, ನಿಮ್ಮ ಸೃಜನಶೀಲತೆಯನ್ನು ಮುಖ್ಯಸ್ಥ ಬಳಿ‌ ಹೇಳಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಈ ವಾರ ನೀವು ಭಾವನಾತ್ಮಕ ಮಾತುಗಳಿಗೆ ಬೆಲೆ‌ ನೀಡುವಿರಿ. ನಿಮ್ಮ ಅನನ್ಯ ದೃಷ್ಟಿಕೋನವು ಪ್ರಗತಿಗಳು ಮತ್ತು ಪ್ರಗತಿಗೆ ಕಾರಣವಾಗಬಹುದು. ಈ ವಾರ ತಾಳ್ಮೆ ಮತ್ತು ಶಿಸ್ತು ಆರೋಗ್ಯಕರ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಎಲ್ಲರನ್ನೂ ನಂಬುವ ಸ್ಥಿತಿ ನಿರ್ಮಾಣವಾಗುವುದು. ಗುರು ದರ್ಶನವನ್ನು ಮಾಡಿ ಅವರಿಂದ ಆಶೀರ್ವಾದ ಪಡೆಯಿರಿ.

ಲೋಹಿತ ಹೆಬ್ಬಾರ್-8762924271 (what’s app only)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ